ಬಾಲಾದೇವಿ, ಬೆಂಬೆಮ್ ದೇವಿ: ಭಾರತೀಯ ಮಹಿಳಾ ಫುಟ್ಬಾಲ್ ಗೆ ಬಲ ತುಂಬಿದ ನಾರಿಯರು
ಒಬ್ಬರಿಗೆ ವಿದೇಶಿ ಕ್ಲಬ್ ಪ್ರತಿನಿಧಿಸುವ ಅವಕಾಶ ; ಇನ್ನೊಬ್ಬರಿಗೆ ಪದ್ಮ ಪ್ರಶಸ್ತಿಯ ಗರಿ
Team Udayavani, Feb 28, 2020, 5:20 PM IST
ಭಾರತದ ಮಹಿಳಾ ಫುಟ್ ಬಾಲ್ ಗೆ ಸಂಬಂಧಿಸಿ ಇತ್ತೀಚೆಗಷ್ಟೆ ಒಂದು ಮಹತ್ವದ ತಿರುವೊಂದು ಸಿಕ್ಕಿದೆ. ಅದು ಯಾವ ರೀತಿಯೆಂದರೆ ಭಾರತ ತಂಡದ ಫಾರ್ವರ್ಡ್ ಆಟಗಾರ್ತಿ, ಮಣಿಪುರದ ಬಾಲಾದೇವಿ ಸ್ಕಾಟ್ಲೆಂಡ್ ಪ್ರತಿಷ್ಠಿತ ರೇಂಜರ್ಸ್ ಫುಟ್ಬಾಲ್ ಕ್ಲಬ್ ನೊಂದಿಗೆ ಸಹಿ ಮಾಡುವುದರ ಮೂಲಕ ವಿದೇಶಿ ಕ್ಲಬ್ ಒಂದರ ಜತೆ ಒಪ್ಪಂದ ಮಾಡಿಕೊಂಡ ಭಾರತದ ಮೊದಲ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾದರು.
ಈ ಮಹತ್ವದ ಬೆಳವಣಿಗೆಯನ್ನು ರೇಂಜರ್ಸ್ ಮತ್ತು ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ಘೋಷಿಸಿದ್ದು ಬೆಂಗಳೂರಿನಲ್ಲಿ. ಕಾರ್ಯಕ್ರಮದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಬಾಲಾದೇವಿ ಸತತವಾಗಿ ಹೇಳಿದ್ದು ಒಂದೇ ಮಾತು- ಇದು ಭಾರತದ ಮಹಿಳಾ ಫುಟ್‌ಬಾಲ್‌ಗೆ ಸಂದ ಗೌರವ, ಇದರಿಂದ ಇಲ್ಲಿ ಮಹಿಳೆಯರ ಫುಟ್ಬಾಲ್ ಇನ್ನಷ್ಟು ಬೆಳೆಯುವ ಸಾಧ್ಯತೆ ಇದೆ’ ಎಂದು ತುಂಬಾ ಖುಷಿಯಿಂದ ಹೇಳಿದರು.
ಬಾಲಾದೇವಿ ಸ್ಕಾಟ್ಲೆಂಡ್ ಕ್ಲಬ್ ಸೇರುವುದರ ಹಿಂದಿನ ವಾರ ಬೆಂಬೆಮ್ ದೇವಿಯೂ ಸುದ್ದಿಯಾದರು. ಅವರು ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದ ಮೊತ್ತ ಮೊದಲ ಫುಟ್ಬಾಲ್ ಆಟಗಾರ್ತಿ ಎಂದೆಣಿಸಿಕೊಂಡು ಗಮನ ಸೆಳೆದಿದ್ದರು. ಈ ಎರಡೂ ಬೆಳವಣಿಗೆಗಳು ಭಾರತದಲ್ಲಿ ಮಹಿಳಾ ಫುಟ್ ಬಾಲ್ ಪ್ರಗತಿಯನ್ನು ಸಾರಿ ಹೇಳಿದವು. ಸದ್ದಿಲ್ಲದೆ ನಡೆಯುತ್ತಿದ್ದ ಮಹಿಳೆಯರ ಕಾಲ್ಚಳಕದ ಆಟಕ್ಕೆ ಹೊಸ ಆಯಾಮ ಕೊಟ್ಟಿದ್ದವು.
ಭಾರತದಲ್ಲಿ ಮಹಿಳೆಯರ ಫುಟ್‌ಬಾಲ್ ಹೆಜ್ಜೆ ಗುರುತುಗಳು ಬೀಳತೊಡಗಿದ್ದು 1975ರಲ್ಲಿ, ಅಖಿಲ ಭಾರತ ಮಹಿಳಾ ಫುಟ್ ಬಾಲ್ ಫೆಡರೇಷನ್ ಆರಂಭಗೊಂಡಾಗ. ಆದರೆ 1990ರಲ್ಲಿ ಅಖಿಲ ಭಾರತ ಫುಟ್ ಬಾಲ್ ಫೆಡರೇಷನ್ ಮಾನ್ಯತೆ ನೀಡುವವರೆಗೆ ಮಹಿಳಾ ಫುಟ್ ಬಾಲ್ ಬೆಳಕಿಗೆ ಬರಲಿಲ್ಲ.
ಕೆಲವು ರಾಜ್ಯಗಳು ಲೀಗ್ ಪಂದ್ಯಗಳನ್ನು ಮಾತ್ರ ನಡೆಸುತ್ತಿದ್ದುದು ಬಿಟ್ಟರೆ, ಆರಂಭದಲ್ಲಿ ಮಹಿಳೆಯರ ಕಾಳ್ಚಳಕಕ್ಕೆ ವೇದಿಕೆಗಳೂ ಕಡಿಮೆ ಇದ್ದವು. ಆದರೆ ಬೆಳೆಯುತ್ತ ಬೆಳೆಯುತ್ತ ದಕ್ಷಿಣ ಏಷ್ಯಾ, ಏಷ್ಯಾ ಚಾಂಪಿಯನ್‌ಶಿಪ್, ಫಿಫಾ ಮಹಿಳೆಯರ ವಿಶ್ವಕಪ್, ಒಲಿಂಪಿಕ್ಸ್ ಅರ್ಹತಾ ಟೂರ್ನಿ ಮುಂತಾದವುಗಳಲ್ಲಿ ಪಾಲ್ಗೊಳ್ಳಲು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಂತೆ ಸ್ತ್ರೀ ಶಕ್ತಿ ಪ್ರಕಾಶಿಸಿತು.
ಬಲ ತುಂಬಿದ ಲೀಗ್
ದೇಶದಲ್ಲಿ ಫುಟ್‌ಬಾಲ್ ಅಂಗಣಕ್ಕೆ ಮಹಿಳೆಯರನ್ನು ಕರೆತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಲೀಗ್‌ಗಳು. ಮಹಿಳೆಯರಿಗಾಗಿ ದೇಶಿ ಟೂರ್ನಿ ಮೊದಲು ಆರಂಭಗೊಂಡದ್ದು 1991ರಲ್ಲಿ. ಮಹಿಳೆಯರ ಫುಟ್ಬಾಲ್ ಚಾಂಪಿಯನ್‌ಶಿಪ್ ಹೆಸರಿನಲ್ಲಿ ನಡೆಯುತ್ತಿದ್ದ ಟೂರ್ನಿ ಪುರುಷರ ಸಂತೋಷ್ ಟ್ರೋಫಿಗೆ ಸಮಾನವಾಗಿತ್ತು.
ಇದಕ್ಕೂ ಮೊದಲು 1976ರಲ್ಲಿ ಮಣಿಪುರದಲ್ಲಿ ಮಹಿಳೆಯರ ರಾಜ್ಯ ಮಟ್ಟದ ಲೀಗ್ ಆರಂಭಗೊಂಡಿತ್ತು. ನೆನಪಿರಲಿ, ಭಾರತ ಮಹಿಳಾ ಫುಟ್ಬಾಲ್ನಲ್ಲಿ ಹೆಚ್ಚು ಹೆಸರು ಮಾಡಿರುವುದು ಮಣಿಪುರದ ಆಟಗಾರ್ತಿಯರು. 1993ರಲ್ಲಿ ಕೋಲ್ಕತ್ತದಲ್ಲೂ 1998ರಲ್ಲಿ ಮುಂಬೈಯಲ್ಲೂ 1999ರಲ್ಲಿ ಗೋವಾದಲ್ಲೂ ಲೀಗ್ ಆರಂಭಗೊಂಡಿತು.
ಡಬ್ಲ್ಯು ಎಫ್ ಪ್ರಭಾವ
2017ರಲ್ಲಿ ಮಹಿಳೆಯರ ಅಖಿಲ ಭಾರತ ಫುಟ್ಬಾಲ್ ಲೀಗ್ ಆರಂಭಗೊಂಡದ್ದು ಹೊಸ ಶಕೆಗೆ ನಾಂದಿಯಾಯಿತು. ಮೊದಲ ಆವೃತ್ತಿಯಲ್ಲಿ ಹರಿಯಾಣದ ಅಲಕಾಪುರ, ಪುದುಚೇರಿಯ ಜೆಐಟಿ, ಮಿಜೋರಾಂನ ಐಜ್ವಾಲ್, ಮಹಾರಾಷ್ಟ್ರದ ಎಫ್ ಸಿ ಪುಣೆ ಸಿಟಿ, ಒಡಿಶಾದ ರೈಸಿಂಗ್ ಸ್ಟೂಡೆಂಟ್ಸ್ ಕ್ಲಬ್, ಮಣಿಪುರದ ಈಸ್ಟರ್ನ್ ನ್ಪೋರ್ಟಿಂಗ್ ಯೂನಿಯನ್ ಕ್ಲಬ್ ಗಳು ಪಾಲ್ಗೊಂಡಿದ್ದವು. ದೆಹಲಿಯಲ್ಲಿ ಟೂರ್ನಿ ನಡೆದಿತ್ತು. ಮುಂದಿನ ಎರಡು ಆವೃತ್ತಿಗಳು ಕ್ರಮವಾಗಿ ಶಿಲ್ಲಾಂಗ್ ಮತ್ತು ಲುಧಿಯಾನದಲ್ಲಿ ನಡೆದಿದ್ದವು. ಕಳೆದ ಬಾರಿ 12 ತಂಡಗಳು ಪಾಲ್ಗೊಂಡಿದ್ದರೆ ಈ ಬಾರಿ 13 ತಂಡಗಳಿವೆ.
17 ವರ್ಷದ ಒಳಗಿನ ಮಹಿಳೆಯರ ವಿಶ್ವಕಪ್ ಟೂರ್ನಿ ಈ ಬಾರಿ ಭಾರತದಲ್ಲಿ ನಡೆಯಲಿದೆ. ಇದರಿಂದ ದೇಶದ ಮಹಿಳಾ ಫುಟ್ಬಾಲ್ ಕ್ಷೇತ್ರ ಇನ್ನಷ್ಟು ಬಲ ಪಡೆದುಕೊಳ್ಳಲಿದೆ ಎಂಬ ವಿಶ್ವಾಸ ಕ್ರೀಡಾಪ್ರೀಯರಲ್ಲಿ ಮೂಡಿದೆ.
– ಅಭಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ
JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?
“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…
ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!
ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್
MUST WATCH
ಹೊಸ ಸೇರ್ಪಡೆ
T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್ ಟಿ20: ಆಸ್ಟ್ರೇಲಿಯ 3-0 ಜಯಭೇರಿ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ
Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.