ದಾಸೋಹದ ಮಹಾಮನೆ
ಶರಣ ಬಸವೇಶ್ವರ ಸಂಸ್ಥಾನದ ಜವಾರಿ ರುಚಿ
Team Udayavani, Feb 29, 2020, 6:07 AM IST
ಮಳೆ ಎಡೆಬಿಡದೆ ಸುರಿಯುತ್ತಿತ್ತು. ಹಾಗೆ ಸುರಿಯುತ್ತಾ ಸುಮಾರು ದಿನಗಳೇ ಆಗಿದ್ದವು. ಅಡುಗೆಮನೆಯಲ್ಲಿ ಒಲೆ ಉರಿಸಲೂ ಕಟ್ಟಿಗೆ ಇರಲಿಲ್ಲ. ಇಂಥ ಸಂದರ್ಭದಲ್ಲಿ ಮನೆಯ ಚಾವಣಿಯನ್ನು ಬೀಳಿಸಿ, ಕಟ್ಟಿಗೆಗಳನ್ನು ಒಲೆ ಉರಿಸಲು ಬಳಿಸಿ, ಹಸಿವು ನೀಗಿಸಿದ ಪುಣ್ಯಕ್ಷೇತ್ರ ಕಲಬುರಗಿಯ ಶರಣ ಬಸವೇಶ್ವರ ಮಹಾಸಂಸ್ಥಾನ. 1746ರಿಂದ ಅಂದರೆ, ಶರಣಬಸವೇಶ್ವರರ ಜೀವಿತ ಕಾಲದಿಂದ ಇಂದಿನವರೆಗೆ ದಾಸೋಹ ನಡೆದುಬಂದಿದೆ.
ದೇಶವು ಪರಕೀಯರ ದಾಸ್ಯದಲ್ಲಿದ್ದಾಗಲೂ, ದಾಸೋಹ ಕಾಯಕ ಮಾಡಿಕೊಂಡು ಬಂದ ಶರಣಬಸವೇಶ್ವರರ ದಾಸೋಹ ಮಹಾಮನೆ ಇದು. ಸಾಲ ಮಾಡಿಯೂ ದಾಸೋಹ ಬಡಿಸಿದ ಕ್ಷೇತ್ರ ಇದು. ತಾವೇ ಕೃಷಿ ಕಾಯಕ ಮಾಡಿ, ದಾಸೋಹಕ್ಕೆ ದವಸಧಾನ್ಯಗಳನ್ನು ಸಂಗ್ರಹಿಸಿದ ಶರಣ ಬಸವೇಶ್ವರರ ಸಂಸ್ಥಾನದ ದಾಸೋಹದ ಕತೆಗಳು ಮುಗಿಯುವಂಥದ್ದೇ ಅಲ್ಲ.
ಭಕ್ತರು ಮಾತ್ರವಲ್ಲ. ಈ ದಾಸೋಹದಲ್ಲಿ ಊಟ ಮಾಡಿ, ವಿದ್ಯಾಭ್ಯಾಸ ಕಲಿತು, ಪದವಿ ಪಡೆದವರು ಇಂದು ದೇಶದ ಅತ್ಯುನ್ನತ ಸ್ಥಾನಗಳಲ್ಲಿದ್ದಾರೆ. ಇಲ್ಲಿನ ತ್ರಿವಿಧ ದಾಸೋಹ ಹಲವರಿಗೆ ಬದುಕನ್ನು ಕಟ್ಟಿಕೊಟ್ಟಿದೆ. ಮಾಜಿ ಸಚಿವ ಬಾಬುರಾವ ಚಿಂಚನಸೂರ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ. ಶಿವರಾಜ ಪಾಟೀಲ ಹಾಗೂ ನಿವೃತ್ತ ಎಸ್.ಪಿ. ಎಸ್. ಬಸವರಾಜ ಅವರು ಇಲ್ಲಿಯೇ ದಾಸೋಹ ಸ್ವೀಕರಿಸಿ, ಬದುಕಿನಲ್ಲಿ ಸಾಧನೆಗೈದವರು.
ನಿತ್ಯ ದಾಸೋಹ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿದಿನ ದಾಸೋಹ ನೀಡುವ ಧಾರ್ಮಿಕ ಕೇಂದ್ರಗಳೇ ಕಡಿಮೆ. ಈ ನಿಟ್ಟಿನಲ್ಲಿ ನಿತ್ಯ ದಾಸೋಹಕ್ಕೆ ಪ್ರಸಿದ್ಧಿ ಪಡೆದಿರುವ ಶರಣ ಬಸವೇಶ್ವರ ಸಂಸ್ಥಾನದಲ್ಲಿ ಕನಿಷ್ಠ 1200 ಸದ್ಭಕ್ತರು ಊಟಕ್ಕೆ ಸಾಕ್ಷಿಯಾಗುತ್ತಾರೆ. ಹೊಟ್ಟೆ ತುಂಬುವಷ್ಟು ಸಂತೃಪ್ತ ಭೋಜನ ನೀಡುವುದು ಇಲ್ಲಿನ ವಿಶೇಷ.
ಭಕ್ಷ್ಯ ಸಮಾಚಾರ: ಇಲ್ಲಿ ಅನ್ನ- ಸಾಂಬಾರ್ ಜತೆಗೆ ಕೆಲವೊಮ್ಮೆ ಜೋಳದ ರೊಟ್ಟಿಯನ್ನೂ ಬಡಿಸಲಾಗುತ್ತದೆ. ಇದರೊಂದಿಗೆ ಭಕ್ತರು ನೀಡಿದ ನೈವೇದ್ಯವೂ ಊಟದ ರುಚಿಯನ್ನು ಹೆಚ್ಚಿಸುತ್ತದೆ.
ಅಡುಗೆಮನೆ ಒಳಗೆ…: ಎರಡು ಬೃಹತ್ ಸ್ಟೀಮ್‌ಗಳನ್ನು ಬಳಸಿ ಅನ್ನ- ಸಾಂಬಾರು ತಯಾರಿಸುತ್ತಾರೆ. ಹಾಗೆಯೇ ಸಾಂಪ್ರದಾಯಿಕವಾಗಿ ಕಟ್ಟಿಗೆ ಒಲೆಯಲ್ಲಿ ಅಡುಗೆ ತಯಾರಿಸುವ ವ್ಯವಸ್ಥೆಯೂ ಇಲ್ಲಿದೆ. ಸಾವಿರಾರು ಮಂದಿಗೆ ಊಟ ತಯಾರಿಸುವಾಗ ಪಾಕಶಾಲೆಯ ಶುಚಿತ್ವ ಕಾಪಾಡುವುದೇ ದೊಡ್ಡ ಸಮಸ್ಯೆ. ಆದರೆ, ಇಲ್ಲಿನ ಅಡುಗೆಮನೆ ಸ್ವತ್ಛ, ಸುಂದರ.
ದಾಸೋಹದ ಹಿಂದಿನ ಶಕ್ತಿ: ಸುಸಜ್ಜಿತ ಅಡುಗೆಮನೆ ಜತೆಗೆ ನಿಪುಣ ಬಾಣಸಿಗರು ಇಲ್ಲಿನ ದಾಸೋಹದ ಹಿಂದಿನ ಶಕ್ತಿ ಅಂತಲೇ ಹೇಳಬಹುದು. 10 ಮಂದಿ ಬಾಣಸಿಗರು, ಜವಾರಿ ಶೈಲಿಯ ಅಡುಗೆಯನ್ನು ತಯಾರಿಸುತ್ತಾರೆ. ಇವರಿಗೆ ಸಹಾಯಕರಾಗಿ ನಾಲ್ಕೈದು ಸಿಬ್ಬಂದಿಗಳಿದ್ದಾರೆ.
ಊಟದ ಸಮಯ: ಬೆಳಗ್ಗೆ 9ರಿಂದ ರಾತ್ರಿ 10ರವರೆಗೆ
ಸಂಖ್ಯಾಸೋಜಿಗ
5- ಸಹಾಯಕ ಸಿಬ್ಬಂದಿ
10- ಬಾಣಸಿಗರಿಂದ ಅಡುಗೆ ತಯಾರಿ
1200- ಭಕ್ತರಿಗೆ ನಿತ್ಯ ದಾಸೋಹ
30- ನಿಮಿಷಗಳಲ್ಲಿ ಅಡುಗೆ ತಯಾರಿ
50- ಕಿಲೋ ತರಕಾರಿ ಬಳಕೆ
4,50,000- ವಾರ್ಷಿಕ ಇಷ್ಟು ಮಂದಿಗೆ ದಾಸೋಹ (ಅಂದಾಜು)
* ಡಾ. ಸುರೇಶ ನಂದಗಾಂವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.