ರಾಮನ ಹಾದಿಯ ಲಂಕಾ ಸಫಾರಿ


Team Udayavani, Feb 29, 2020, 6:09 AM IST

RAMAYANA–Dolukanda

ಶ್ರೀಲಂಕೆಯ ದೋಲುಕಂಡ ಪ್ರದೇಶ, ಆಯುರ್ವೇದ ಗಿಡಮೂಲಿಕೆಗಳಿಗೆ ಪ್ರಸಿದ್ಧವಾದ ತಾಣ. ಈ ಕುರಿತು ಸ್ಥಳೀಯರು ಹೇಳುವ ಕಥೆಯೇ ಬೇರೆ. ಸೈನ್ಯದಲ್ಲಿ ಆಘಾತಕ್ಕೊಳಗಾದ ರಾಮನ ಸೇನೆಯ ಶುಶ್ರೂಷೆಗಾಗಿ ಹನುಮಂತ, ಸಂಜೀವಿನಿ ಪರ್ವತವನ್ನು ಹೊತ್ತು ತಂದ. ಹಾಗೆ ತರುವಾಗ ಪರ್ವತದ ತುಂಡುಗಳು ಲಂಕೆಯಲ್ಲಿ ಐದು ಕಡೆ ಬಿದ್ದವು…

ಮಾಯಾಮೃಗದ ಆಮಿಷಕ್ಕೊಳಗಾಗಿ ಹಠ ಹಿಡಿದ ಸೀತೆಯನ್ನು, ವೇಷ ಬದಲಿಸಿ ಬಂದ ರಾವಣಾಸುರ ಅಪಹರಿಸಿ ಲಂಕೆಗೆ ಕರೆತಂದಿದ್ದ. ರಾವಣನ ಸೆರೆಯಿಂದ ತನ್ನ ಪ್ರಿಯಪತ್ನಿಯನ್ನು ಬಿಡಿಸುವ ಸಲುವಾಗಿ ರಾಮಸೇತುವಿನ ಮೂಲಕ ಶ್ರೀಲಂಕೆಗೆ ಕಾಲಿಟ್ಟ ರಾಮನ ಜತೆಯಲ್ಲಿ ಅಪಾರ ಸಂಖ್ಯೆಯ ನರ ಮತ್ತು ವಾನರ ಸೇನೆಯಿತ್ತು. ಪುಟ್ಟ ದ್ವೀಪ ರಾಷ್ಟ್ರದ ತುಂಬೆಲ್ಲಾ ಸೈನಿಕರು ಅಲ್ಲಲ್ಲಿ ಗುಂಪುಗುಂಪಾಗಿ ನೆಲೆಸಿದರು.

ನೀಲಾವರಿ: ಲಂಕೆಯ ಉತ್ತರ ಭಾಗದಲ್ಲಿ ಒಣ ಭೂಮಿಯಿದ್ದು, ಅಲ್ಲಿ ನೆಲೆನಿಂತ ಸೈನ್ಯಕ್ಕೆ ಕುಡಿವ ನೀರಿನ ತೀವ್ರ ಅಭಾವ ಉಂಟಾಗಿತ್ತು. ಇದನ್ನರಿತ ರಾಮ, ಮಾಯಾ ಬಾಣವನ್ನು ನೆಲಕ್ಕೆ ಹೂಡಿ ನೀರು ಚಿಮ್ಮಿಸಿದನಂತೆ. ಈಗಲೂ ಇಲ್ಲೊಂದು ಬೃಹತ್‌ ಪ್ರಾಕೃತಿಕ ನೀರಿನ ಬಾವಿ ಇದ್ದು, ಎಂಥ ಬರಗಾಲದಲ್ಲೂ ಬತ್ತಿಲ್ಲ. ಜನರು ಈ ನೀರನ್ನು ಪವಿತ್ರ ಎಂದೇ ಭಾವಿಸುತ್ತಾರೆ. ಜಾಫಾ°ದಿಂದ 14 ಕಿ.ಮೀ. ದೂರದಲ್ಲಿರುವ ಪುಟ್ಟುರ್‌ನಲ್ಲಿ ಈ ಬಾವಿ ಇದೆ.

ಯುದಗನವ: ರಾಮ- ರಾವಣರ ನಡುವಿನ ಭೀಕರ ಕದನ ನಡೆದ ಸ್ಥಳವಿದು. ಈಗಿನ ವಸಮುವ ರಾಷ್ಟ್ರೀಯ ಉದ್ಯಾನವನದಲ್ಲಿರುವ ಈ ಭೂಮಿ ಬರಡಾಗಿದೆ. ಇಲ್ಲಿನ ಮಣ್ಣಿನಲ್ಲಿ ವಿಷಕಾರಿ ಭಾರಲೋಹಗಳ ಅಂಶ ಅಧಿಕವಿದ್ದು, ಯಾವುದೇ ರೀತಿಯ ಸಸ್ಯ ಬೆಳೆಯುವುದಿಲ್ಲ. ಇಲ್ಲಿಂದ ಸ್ವಲ್ಪ ದೂರದಲ್ಲಿರುವ ದುನುವಿಲಾದಿಂದ ರಾಮನು ರಾವಣನ ಮೇಲೆ ಶಕ್ತಿಶಾಲಿ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದ ಎನ್ನಲಾಗುತ್ತದೆ.

ದೋಲುಕಂಡ: ರಾವಣನ ಸೈನ್ಯದ ಅಸಾಮಾನ್ಯ ಶಕ್ತಿಯ ಬಗ್ಗೆ ರಾಮಾಯಣದಲ್ಲಿ ಬಹಳ ಚೆಂದದ ವರ್ಣನೆಗಳಿವೆ. ಯುದ್ಧ ನಡೆಯುತ್ತಿದ್ದಾಗ ಲಕ್ಷ್ಮಣನು ಗಾಯಗೊಂಡು ಪ್ರಜ್ಞಾಹೀನನಾದ. ಸೈನ್ಯದಲ್ಲಿ ಹಾಹಾಕಾರವೆದ್ದಿತು. ಅಲ್ಲಿನವರ ಶುಶ್ರೂಷೆಗೆ ಹಿಮಾಲಯದಿಂದ ಸಂಜೀವಿನಿವನ್ನು ತರುವುದು ಅನಿವಾರ್ಯವಾಗಿತ್ತು. ಹನುಮ, ಕೂಡಲೇ ಹಿಮಾಲಯ­ದತ್ತ ಹಾರಿದ. ಆದರೆ, ಸಮಯದ ಅಭಾವದಿಂದ ನಿಖರವಾಗಿ ಸೂಕ್ತ ಮೂಲಿಕೆ ಗುರುತಿಸಲು ಸಾಧ್ಯ ಆಗಲಿಲ್ಲ.

ಸಂಶಯವೇ ಬೇಡ ವೆಂದು ಇಡೀ ಪರ್ವತವನ್ನೇ ಹೊತ್ತು ಲಂಕೆಗೆ ಹಾರಿದ. ಪರ್ವತದ ತುಂಡುಗಳು ಲಂಕೆಯಲ್ಲಿ ಐದು ಕಡೆ ಬಿದ್ದವು. ಅವುಗಳಲ್ಲೊಂದು ದೋಲುಕಂಡ. ಇಲ್ಲಿ ಆಯು­ರ್ವೇದದ ಔಷಧೀಯ ಸಸ್ಯಗಳು ಹೇರಳವಾಗಿರಲು ಇದೇ ಕಾರಣ ಎನ್ನಲಾಗುತ್ತದೆ. ದೋಲುಕಂಡ, ಕುರುನೆಗಲ ಜಿಲ್ಲೆಯಿಂದ 20 ಕಿ.ಮೀ. ದೂರದಲ್ಲಿದೆ.

ದಿವುರುಂಪೊಲ: ರಾವಣ ಅಳಿದ, ರಾಮ ವಿಜಯಿಯಾದ. ಸೀತೆ ಬಂಧಮುಕ್ತೆಯಾದಳು. ಆದರೆ, ರಾಮ ಆಕೆಯನ್ನು ಸ್ವೀಕರಿಸುವ ಮೊದಲು ಅಗ್ನಿಪರೀಕ್ಷೆಗೆ ಒಳಗಾಗಿ ಪಾವಿತ್ರತೆ ನಿರೂಪಿಸಬೇಕೆಂದ. ಸೀತೆ ಅಗ್ನಿಯೊಳಗೆ ಪ್ರವೇಶಿಸುತ್ತಿದ್ದಂತೆ ಅಗ್ನಿದೇವ ಪ್ರತ್ಯಕ್ಷನಾಗಿ, ಈಕೆ ಪರಿಶುದ್ಧಳು ಎಂದು ರಾಮನಿಗೆ ಒಪ್ಪಿಸಿದ.

ಇದು ತನ್ನ ಸಲುವಾಗಿ ಅಲ್ಲ, ಜಗತ್ತಿಗೇ ಆಕೆಯ ಮಹಿಮೆ ಅರಿವಾಗುವ ಸಲುವಾಗಿ ಎಂದು ರಾಮ ಸ್ಪಷ್ಟನೆ ನೀಡಿದ. ರಾಮಾಯಣದ ಈ ಪ್ರಸಂಗ ನಡೆದಿದ್ದು, ದಿವುರುಂಪೊಲದಲ್ಲಿ (ಪ್ರಮಾಣದ ಕಟ್ಟೆ). ಇಂದಿಗೂ ಪ್ರಮಾಣಗಳನ್ನು ಪರಿಶೀಲಿಸುವ ನ್ಯಾಯ ಸ್ಥಾನವಾಗಿ ಈ ಸ್ಥಳ ಪ್ರಸಿದ್ಧಿ ಹೊಂದಿದೆ. ಈ ಸ್ಥಳ, ಸೀತೆಯಿದ್ದ ಅಶೋಕವಾಟಿಕಾದಿಂದ 15 ಕಿ.ಮೀ. ದೂರದಲ್ಲಿದೆ.

* ಡಾ.ಕೆ.ಎಸ್‌. ಚೈತ್ರಾ

ಟಾಪ್ ನ್ಯೂಸ್

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

4-siruguppa

Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್‌; ಎತ್ತು ಸಾವು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.