ವೀಕೆಂಡ್ with ಸಿನಿಮಾ
ಯಾವ ಫಿಲ್ಮ್ ನೋಡೋಣ?
Team Udayavani, Feb 29, 2020, 6:07 AM IST
12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಅದ್ಧೂರಿಯಾಗಿ ಚಾಲನೆಗೊಂಡಿದೆ. ಜಗತ್ತಿನ ನೂರಾರು ಸಿನಿಮಾಗಳನ್ನು ಒಂದೆಡೆ ನೋಡುವಂಥ ಅವಕಾಶ ಸಿನಿಪ್ರಿಯರಿಗೆ. ಶನಿವಾರ, ಭಾನುವಾರದಂದು ಫಿಲಂ ಫೆಸ್ಟಿವಲ್‌ನಲ್ಲಿ ನೋಡಬಹುದಾದ ಪ್ರಮುಖ ಸಿನಿಮಾಗಳ ಬಗ್ಗೆ ಇಲ್ಲಿ ಪುಟ್ಟ ಟಿಪ್ಪಣಿಯನ್ನು ನೀಡಲಾಗಿದೆ…
ಸಿಸ್ಟರ್
ನಿರ್ದೇಶಕ: ಸ್ವೆಟ್ಲಾ ಸೊತ್ಸೋರ್ಕೋವಾ
ದೇಶ: ಬಲ್ಗೇರಿಯಾ
ನಿಮಿಷ: 97 ನಿಮಿಷ
ಬಲ್ಗೇರಿಯಾದ ಒಂದು ಪುಟ್ಟ ಹಳ್ಳಿಯ, ತಾಯಿ ಮತ್ತು ಇಬ್ಬರು ಹೆಣ್ಣುಮಕ್ಕಳ ಕಡುಬಡತನದ ಚಿತ್ರಣವುಳ್ಳ ಕಥೆ. ಕಾಲಾಂತರದಲ್ಲಿ ಕಿರಿಯ ಮಗಳಿಗೆ ತಾನು, ಈ ತಾಯಿಯ ಮಗಳಲ್ಲ ಎನ್ನುವ ಸತ್ಯದ ಅರಿವಾಗುತ್ತದೆ. ಸೋದರಿಯ ಕೈಯಲ್ಲಿ ಅರಳಿದ ಗೊಂಬೆಗಳೇ ಆ ವಾಸ್ತವ ಹೇಳುತ್ತಿರುತ್ತವೆ.
ಪ್ರದರ್ಶನ: ಫೆ.29, ಶನಿವಾರ, ಬೆ.9.30, ಒರಾಯನ್ ಮಾಲ್
ಎ ಕಾಲೋನಿ
ನಿರ್ದೇಶಕ: ಜೆನೆವೀವ್ ಡಿ ಸೆಲ್ಸ್
ದೇಶ: ಕೆನಡಾ
ನಿಮಿಷ: 102 ನಿಮಿಷ
12 ವರ್ಷದ ಮಿಲಿಯಾಳ ತಾರುಣ್ಯದ ತೊಳಲಾಟವನ್ನು ಫೋಕಸ್ ಮಾಡಿರುವ ಚಿತ್ರ. ಆಕೆ ಹೊಸ ಪ್ರೌಢಶಾಲೆಗೆ ಸೇರಿದಾಗ, ವಯೋಸಹಜ ಆಕರ್ಷಣೆಗಳಿಗೆ ಮುಜುಗರ ಪಟ್ಟು, ಒಂಟಿತನವನ್ನು ಅಪ್ಪುತ್ತಾಳೆ. ಕೊನೆಗೆ ಗೆಳೆಯನೊಬ್ಬನ ಸಖ್ಯದಿಂದ ಹೊಸದೊಂದು ಲೈಫ್ಸ್ಟೈಲ್‌ಗೆ ಹಾತೊರೆದು, ಸ್ವತಂತ್ರಳಾಗುತ್ತಾಳೆ.
ಪ್ರದರ್ಶನ: ಫೆ.29, ಶನಿವಾರ, ಮ.12.20, ಒರಾಯನ್ ಮಾಲ್
ದಿ ವಿಸ್ಲರ್
ನಿರ್ದೇಶಕ: ಕೊರ್ನೆಲ್ಯು ಪೊರಂಬ್ಯು
ದೇಶ: ರೊಮೇನಿಯಾ
ನಿಮಿಷ: 97 ನಿಮಿಷ
ವಿವಾದಿತ ಉದ್ಯಮಿಯ ಬಂಧನ ವಿಚಾರವಾಗಿ ಪೊಲೀಸ್ ಆಫೀಸರ್ ಕ್ರಿಸ್ಟಿ, ಲಾ ಗೊಮೆರಾ ದ್ವೀಪಕ್ಕೆ ಬರುತ್ತಾನೆ. ಅಲ್ಲಿನ ಶಿಳ್ಳೆ ಭಾಷೆ “ಎಲ್ ಸಿಲ್ಬೊ’ವನ್ನು ಕಲಿತು, ಪ್ರಕರಣದ ಆಳಕ್ಕಿಳಿದಾಗ, ಅಲ್ಲಿ ಗೋಚರಿಸುವ ವಾಸ್ತವ ಪ್ರಪಂಚವೇ ಬೇರೆ. ಕ್ರೈಂ ಥ್ರಿಲ್ಲರ್‌ಪ್ರಿಯರಿಗೆ ಇಷ್ಟವಾಗುವಂಥ ಸಿನಿಮಾ.
ಪ್ರದರ್ಶನ: ಫೆ.29, ಶನಿವಾರ, ಮ.2.30, ಒರಾಯನ್ ಮಾಲ್
ಬಿರಿಯಾನಿ
ನಿರ್ದೇಶಕ: ಸಾಜಿನ್ ಬಾಬು
ದೇಶ: ಭಾರತ (ಮಲಯಾಳಂ)
ನಿಮಿಷ: 96 ನಿಮಿಷ
ನಾಲ್ಕು ಗೋಡೆಗಳ ನಡುವೆ ಕಳೆದುಹೋದ, ಖದೀಜಾ ಎಂಬ ಗೃಹಿಣಿಯ ಬದುಕಿನ ತಿರುವುಗಳನ್ನು ತೋರಿಸಿರುವ ಸಿನಿಮಾ. ಧರ್ಮ ಮತ್ತು ಸಾಮಾಜಿಕ ಕಟ್ಟುಪಾಡುಗಳನ್ನು ದಾಟಿ, ಹೊಸ ಬದುಕನ್ನು ಕಟ್ಟಿಕೊಳ್ಳುವಾಗ ಎದುರಾಗುವ ಸವಾಲುಗಳನ್ನು ಇಲ್ಲಿ ಚಿತ್ರಿಸಲಾಗಿದೆ.
ಪ್ರದರ್ಶನ: ಫೆ.29, ಶನಿವಾರ, ರಾ.7.45, ಒರಾಯನ್ ಮಾಲ್
ಮುಂದಿನ ನಿಲ್ದಾಣ
ನಿರ್ದೇಶಕ: ವಿನಯ್ ಭಾರದ್ವಾಜ್
ದೇಶ: ಭಾರತ (ಕನ್ನಡ)
ನಿಮಿಷ: 106 ನಿಮಿಷ
ಟೆಕ್ಕಿ ಕಂ ಫೋಟೊಗ್ರಾಫರ್ ಆದ ಪಾರ್ಥ, ಹೊಸ ತಲೆಮಾರಿನ ಪ್ರತಿನಿಧಿ. ಅವನ ಬದುಕಿನಲ್ಲಿ ಸುಳಿಯುವರು ಮೀರಾ ಮತ್ತು ಅಹನಾ. ಇಷ್ಟಬಂದಂತೆ ಬದುಕಿದರಾಯಿತು ಎಂದುಕೊಂಡು ಜಾಲಿ ಆಗಿದ್ದವರಿಗೆ, ಕಾಣದ ಸಂಬಂಧಗಳು ಕಟ್ಟಿಹಾಕುತ್ತವೆ. ಬದುಕು ಬೇರೆಯದ್ದೇ ನಿಲ್ದಾಣಕ್ಕೆ ಬಂದು ನಿಂತಿರುತ್ತದೆ.
ಪ್ರದರ್ಶನ: ಫೆ.29, ಶನಿವಾರ, ರಾ.1.30, ನವರಂಗ್ ಚಿತ್ರಮಂದಿರ
ಇಟ್ ಮಸ್ಟ್ ಬಿ ಹೆವನ್
ನಿರ್ದೇಶಕ: ಎಲಿಯಾ ಸುಲೈಮಾನ್
ದೇಶ: ಪ್ಯಾಲೆಸ್ತೀನ್/ ಫ್ರಾನ್ಸ್
ನಿಮಿಷ: 97 ನಿಮಿಷ
ಪ್ಯಾಲೆಸ್ತೀನ್‌ನಲ್ಲಿ ಬದುಕಲಾಗದೇ, ಎಸ್ಕೇಪ್ ಆಗುವ ಕಥಾನಾಯಕ. ಪರ್ಯಾಯ ಮಾತೃಭೂಮಿಗಾಗಿ ಪ್ಯಾರಿಸ್, ನ್ಯೂಯಾರ್ಕ್ ಎನ್ನುತ್ತಾ ಅಲೆಯುತ್ತಾನೆ. ಎಲ್ಲಿ ಹೋದರೂ, ತಾಯ್ನಾಡಿನಲ್ಲಿ ಕಾಡಿದಂಥ ಮುಖಗಳೇ ಎದುರಾಗುತ್ತವೆ. ಈಗ ತನ್ನ ತಾಯ್ನಾಡು ಯಾವುದು ಎನ್ನುವುದೇ ಆತನ ಮುಂದಿರುವ ಪ್ರಶ್ನೆ.
ಪ್ರದರ್ಶನ: ಮಾ.1, ಭಾನುವಾರ, ಮ.12, ಒರಾಯನ್ ಮಾಲ್
ರಂಗನಾಯಕಿ
ನಿರ್ದೇಶಕ: ದಯಾಳ್ ಪದ್ಮನಾಭನ್
ದೇಶ: ಭಾರತ (ಕನ್ನಡ)
ನಿಮಿಷ: 105
ಆಕೆ ಅನಾಥೆ. ಸಂಗೀತ ಶಿಕ್ಷಕಿ. ಪ್ರೇಮಿಸಿದ ಹುಡುಗನ ಕೈಹಿಡಿದು, ಇನ್ನು ಚೆಂದದ ಬದುಕು ಕಟ್ಟಿಕೊಳ್ಳಬೇಕು ಎನ್ನುವಷ್ಟರಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆಯುತ್ತದೆ. ತನಗೆ ಅನ್ಯಾಯ ಎಸಗಿದ ದುಷ್ಟರ ವಿರುದ್ಧ ಹೋರಾಡುವ ಕಥೆ ಈ ಚಿತ್ರದ್ದು.
ಪ್ರದರ್ಶನ: ಮಾ.1, ಭಾನುವಾರ, ಸಂ.4.30, ಒರಾಯನ್ ಮಾಲ್
ಸ್ಟಾಕರ್
ನಿರ್ದೇಶಕ: ಅಂದ್ರೆ ಟಾರ್ಕೊವ್‌ಸ್ಕಿ
ದೇಶ: ರಷ್ಯಾ
ನಿಮಿಷ: 161
ನಂಬಿಕೆ ಮತ್ತು ಅಪನಂಬಿಕೆಗಳ ನಡುವಿನ ದ್ವಂದ್ವವನ್ನು ಚಿತ್ರಿಸಿದ ಕಥೆ. ನಂಬಿಕೆ ಎಂಬ ಜಗತ್ತೂಂದು ಇದೆ ಎನ್ನುವ ಒಂದು ಮನಸ್ಸು. ಆದರೆ, ಆ ಝೋನ್ ಒಳಗೆ ಪ್ರವೇಶಿಸಿದ ಲೇಖಕ ಮತ್ತು ಪ್ರೊಫೆಸರ್‌ಗೆ ಇಲ್ಲೇನೂ ಇಲ್ಲ ಎಂದೆನ್ನಿಸುವ ಸ್ಥಿತಿ. ರೂಪಕ, ಪ್ರತಿಮೆಗಳ ಮೂಲಕವೇ ಆಪ್ತಗೊಳ್ಳುವ ಸಿನಿಮಾ.
ಪ್ರದರ್ಶನ: ಮಾ.1, ಭಾನುವಾರ, ಮ.1.30, ಸುಚಿತ್ರಾ ಫಿಲಂ ಸೊಸೈಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.