ಐಸಿಸಿ ವನಿತಾ ಟಿ20 ವಿಶ್ವಕಪ್: ಅಜೇಯ ಭಾರತಕ್ಕೆ ಲಂಕಾ ಸವಾಲು
Team Udayavani, Feb 29, 2020, 5:59 AM IST
ಮೆಲ್ಬರ್ನ್: ಸತತ ಮೂರು ಪಂದ್ಯಗಳನ್ನು ಗೆದ್ದು ಅಧಿಕೃತವಾಗಿ ಐಸಿಸಿ ವನಿತಾ ಟಿ20 ವಿಶ್ವಕಪ್‌ನ ಸೆಮಿಫೈನಲ್ ತಲುಪಿದ ಅಜೇಯ ಭಾರತೀಯ ವನಿತಾ ತಂಡವು ಶನಿವಾರ ಲೀಗ್‌ನ ಅಂತಿಮ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡಳಿದೆ.
ಗೆಲುವಿನೊಂದಿಗೆ ಲೀಗ್ ಹಂತ ಮುಗಿಸುವುದು ಹರ್ಮನ್‌ಪ್ರೀತ್ ಕೌರ್ ಪಡೆಯ ಯೋಜನೆಯಾಗಿದೆ. ಸತತ ಎರಡು ಪಂದ್ಯಗಳಲ್ಲಿ ಸೋತಿರುವ ಶ್ರೀಲಂಕಾ ತಂಡ ಬಹುತೇಕ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದೆ. ಆದರೂ ಅಜೇಯ ಭಾರತಕ್ಕೆ ತಿರುಗೇಟು ನೀಡಲು ಶ್ರೀಲಂಕಾ ಹಾತೊರೆಯುತ್ತಿದೆ.
ಬ್ಯಾಟಿಂಗ್ ಫಾರ್ಮ್ ಚಿಂತೆ
ಭಾರತವು ಇಷ್ಟರವರೆಗೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯ, ಬಾಂಗ್ಲಾದೇಶ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಗೆದ್ದು ಸಂಭ್ರಮಿಸಿದೆ. ಆದರೆ ಈ ಮೂರು ಪಂದ್ಯಗಳಲ್ಲಿ ಶಿಸ್ತಿನ ಬೌಲಿಂಗ್‌ನಿಂದಾಗಿ ಭಾರತ ಮೇಲುಗೈ ಸಾಧಿಸಿತ್ತು. ಬ್ಯಾಟಿಂಗ್‌ನಲ್ಲಿ ಭಾರತೀಯ ತಂಡ ವೈಫಲ್ಯ ಅನುಭವಿಸಿದೆ. ಬೃಹತ್ ಮೊತ್ತ ಪೇರಿಸಲು ಒಮ್ಮೆಯೂ ತಂಡಕ್ಕೆ ಸಾಧ್ಯವಾಗಲಿಲ್ಲ. ಶಫಾಲಿ ವರ್ಮ ಹೊರತುಪಡಿಸಿ ಬೇರೆ ಯಾವುದೇ ಆಟಗಾರ್ತಿ ನಿರೀಕ್ಷಿತ ಮಟ್ಟದಲ್ಲಿ ಬ್ಯಾಟಿಂಗ್ ಪ್ರದರ್ಶನ ತೋರಿಲ್ಲ. ಬ್ಯಾಟಿಂಗ್ ಫಾರ್ಮ್ ಬಗ್ಗೆ ಭಾರತ ಚಿಂತೆ ಪಡುವಂತಾಗಿದೆ. ಇದನ್ನು ಸ್ವತಃ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಒಪ್ಪಿಕೊಂಡಿದ್ದಾರೆ. ಶಫಾಲಿ ವರ್ಮ ಆಡಿದ ಮೂರು ಪಂದ್ಯಗಳಲ್ಲಿ ಒಟ್ಟಾರೆ 114 ರನ್ ಪೇರಿಸಿದ್ದಾರೆ.
ಭಾರತೀಯ ತಂಡವು ಉತ್ತಮ ಆರಂಭ ಪಡೆದರೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಕುಸಿತದಿಂದಾಗಿ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಗುತ್ತಿಲ್ಲ. ಮಧ್ಯಮ ಕ್ರಮಾಂಕದ ಆಟಗಾರ್ತಿಯರು ಕ್ರೀಸ್ ನಲ್ಲಿ ನಿಂತು ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವ ಅಗತ್ಯವಿದೆ. ಹರ್ಮನ್‌ಪ್ರೀತ್ ಮತ್ತು ವೇದಾ ಕೃಷ್ಣಮೂರ್ತಿ ಅವರು ಜವಾಬ್ದಾರಿ ವಹಿಸಿ ತಂಡದ ಬ್ಯಾಟಿಂಗ್ ಶಕ್ತಿಯನ್ನು ಬಲಪಡಿಸಬೇಕಾಗಿದೆ.
ಭಾರತೀಯ ತಂಡದ ಬೌಲಿಂಗ್ ಪಡೆ ಬಲಿಷ್ಠವಾಗಿದೆ. ಲೆಗ್ ಸ್ಪಿನ್ನರ್ ಪೂನಂ ಯಾದವ್ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಆಸ್ಟ್ರೇಲಿಯ ವಿರುದ್ಧ 19ಕ್ಕೆ 4 ಸಹಿತ ಒಟ್ಟು 8 ವಿಕೆಟ್ ಉರುಳಿಸಿದ್ದಾರೆ. ಅವರಿಗೆ ರಾಜೇಶ್ವರಿ ಗಾಯಕ್ವಾಡ್, ದೀಪ್ತಿ ಶರ್ಮ ಮತ್ತು ಶಿಖಾ ಪಾಂಡೆ ಉತ್ತಮ ನೆರವು ನೀಡಿದ್ದಾರೆ. ಬೌಲರ್‌ಗಳ ಬಲದಿಂದಲೇ ತಂಡ ಈವರೆಗಿನ ಮೂರು ಪಂದ್ಯಗಳಲ್ಲಿ ಜಯಭೇರಿ ಬಾರಿಸಿತ್ತು.
ಸಂಕಷ್ಟದಲ್ಲಿ ಲಂಕಾ
ಸತತ ಎರಡು ಪಂದ್ಯ ಸೋತಿರುವ ಶ್ರೀಲಂಕಾ ಒಂದು ವೇಳೆ ಈ ಪಂದ್ಯವನ್ನು ಸೋತರೆ ಸೆಮಿಫೈನಲ್ ರೇಸ್‌ನಿಂದ ಹೊರಬೀಳಲಿದೆ. ಒಂದು ವೇಳೆ ಶ್ರೀಲಂಕಾ ಮುಂದಿನೆರಡು ಪಂದ್ಯ ಗೆದ್ದರೂ ಸೆಮಿಫೈನಲ್ ಟಿಕೆಟ್ ಖಾತ್ರಿ ಎನ್ನುವಂತಿಲ್ಲ. ಯಾಕೆಂದರೆ ಇದೇ ವೇಳೆ ಕಿವೀಸ್ ಮತ್ತು ಆಸೀಸ್ ಉಳಿದೆರಡು ಪಂದ್ಯಗಳಲ್ಲಿ ಸೋಲಬೇಕು ಮತ್ತು ಶ್ರೀಲಂಕಾ ಉತ್ತಮ ರನ್‌ರೇಟ್‌ನೊಂದಿಗೆ ಗೆಲ್ಲಬೇಕಾಗಿದೆ. ಈ ಎಲ್ಲ ಲೆಕ್ಕಾಚಾರದೊಂದಿಗೆ ಲಂಕಾ ತಂಡವು ಭಾರತದೆದುರು ಕಣಕ್ಕಿಳಿಯಲಿದೆ.
ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಗೆಲುವು ಸಾಧಿಸಿದ ಶ್ರೀಲಂಕಾ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿದೆ. ಗೆದ್ದರಷ್ಟೇ ತಂಡ ಮುನ್ನಡೆಯುವ ಬಗ್ಗೆ ಯೋಚಿಸಬಹುದಾಗಿದೆ.
ದಕ್ಷಿಣ ಆಫ್ರಿಕಾಕ್ಕೆ ಥಾçಲಂಡ್ ವಿರುದ್ಧ ದಾಖಲೆ ಗೆಲುವು
ಕ್ಯಾನ್‌ಬೆರ: ಲಿಝೆಲ್ ಲೀ ಅವರ ಭರ್ಜರಿ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ವನಿತೆಯರು ಐಸಿಸಿ ವನಿತಾ ಟಿ20 ವಿಶ್ವಕಪ್‌ನ ಪಂದ್ಯದಲ್ಲಿ ಥಾçಲಂಡ್ ತಂಡದ ವಿರುದ್ಧ ದಾಖಲೆ 113 ರನ್ನುಗಳಿಂದ ಗೆಲುವು ದಾಖಲಿಸಿತಲ್ಲದೇ ಸೆಮಿಫೈನಲ್ ತಲುಪುವ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದೆ.
ಲೀ ಅವರು 60 ಎಸೆತಗಳಿಂದ 101 ರನ್ ಸಿಡಿಸಿದರಲ್ಲದೇ ಸನ್ ಲುಸ್ (ಅಜೇಯ 61) ಅವರೊಂದಿಗೆ 131 ರನ್ನುಗಳ ಜತೆಯಾಟ ನಡೆಸಿದ್ದರಿಂದ ದಕ್ಷಿಣ ಆಫ್ರಿಕಾ 3 ವಿಕೆಟಿಗೆ 195 ರನ್ನುಗಳ ಬೃಹತ್ ಮೊತ್ತ ಪೇರಿಸಿತು. ಇದು ವನಿತಾ ಟಿ20 ವಿಶ್ವಕಪ್ ಇತಿಹಾಸದ ಬೃಹತ್ ಮೊತ್ತವಾಗಿದೆ.
ಇದಕ್ಕುತ್ತರವಾಗಿ ಬ್ಯಾಟಿಂಗ್ ಕುಸಿತಕ್ಕೆ ಒಳಗಾದ ಥಾçಲಂಡ್ ತಂಡವು ಇನ್ನೂ 5 ಎಸೆತ ಬಾಕಿ ಇರುವಾಗಲೇ 82 ರನ್ನಿಗೆ ಆಲೌಟಾಯಿತು. ರನ್ನುಗಳ ಅಂತರದಲ್ಲಿ ಇದು ಥಾçಲಂಡಿನ ಎರಡನೇ ದೊಡ್ಡ ಸೋಲು ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
PCB; ಚಾಂಪಿಯನ್ಸ್ ಟ್ರೋಫಿಗೆ ಅಧಿಕಾರಿಯ ನೇಮಕ
MUST WATCH
ಹೊಸ ಸೇರ್ಪಡೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.