ಪೌರಾಡಳಿತ ಸಚಿವರ ವಿರುದ್ಧ ಪ್ರತಿಭಟನೆ
Team Udayavani, Feb 29, 2020, 6:31 PM IST
ರಾಮನಗರ: ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿರುವ ಪೌರಾಡಳಿತ ಸಚಿವ ಕೆ.ಸಿ.ನಾರಾಯಣಗೌಡರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಕರಾವೇ ಜಿಲ್ಲಾಧ್ಯಕ್ಷ ಕಬ್ಟಾಳೇಗೌಡ ಡಿ, ಪೌರಾಡಳಿತ ಸಚಿವ ಕೆ.ಸಿ.ನಾರಾಯಣಗೌಡ ಅವರು ಅಪ್ಪಟ ಕನ್ನಡದ ನೆಲ ಮಂಡ್ಯ ಜಿಲ್ಲೆಯಿಂದ ಜನಪ್ರತಿನಿಧಿಯಾಗಿ ಆಯ್ಕೆಯಾಗಿ, ರಾಜ್ಯದ ಸಚಿವರಾಗಿದ್ದುಕೊಂಡು ಮಹಾರಾಷ್ಟ್ರ ಪರ ಘೋಷಣೆ ಕೂಗುವುದು ನಾಚಿಕೆಗೇಡಿನ ಎಂದು ಕಿಡಿ ಕಾರಿದರು.
ಮಂಡ್ಯದಲ್ಲಿ ನಡೆದ ಕಾರ್ಯ ಕ್ರಮವೊಂದರಲ್ಲಿ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿರುವ ಸಚಿವ ಕೆ.ಸಿ.ನಾರಾಯಣಗೌಡ ಅವರ ನಾಡದ್ರೋಹಿ ಹೇಳಿಕೆಗಾಗಿ ಕೂಡಲೆ ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿ. ಜಿಲ್ಲಾ ಡಳಿತದ ಮೂಲಕ ಸಿಎಂಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಇಲ್ಲಿಂದ ಮುಂಬೈಗೆ ತೆರಳಿ ಅಲ್ಲಿ 35 ವರ್ಷದಿಂದ ಉದ್ಯಮ ನಡೆಸುತ್ತಿದ್ದೇನೆ. ಇಂದು ನಾನು ಇಷ್ಟು ಶಕ್ತಿವಂತನಾಗಲು ಮಹಾರಾಷ್ಟ್ರವೇ ಕಾರಣವಾಗಿದೆ ಎಂದು ಹೇಳಿದ್ದಾರೆ. ಹಾಗಿದ್ದರೆ ಅವರು ರಾಜ್ಯ ರಾಜಕಾರಣದಿಂದ ದೂರವಾಗಿ, ಮಹಾ ರಾಷ್ಟ್ರದಲ್ಲೇ ಗೆದ್ದು ಮಹಾರಾಷ್ಟ್ರ ಜನರ ಋಣ ತೀರಿಸಲಿ ಎಂದು ಕಿಡಿಕಾರಿದರು.
ಸಚಿವ ಸ್ಥಾನದಿಂದ ವಜಾಗೊಳಿಸಿ: ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವೆ ಗಡಿ ವಿವಾದ ಪ್ರಕರಣವು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಜಲ ವಿವಾದವೂ ಕೂಡ ಇದೆ. ಇಂತಹ ವೇಳೆಯಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ನಾರಾಯಣಗೌಡ ಮಹಾ ರಾಷ್ಟ್ರ ಪರ ಘೋಷಣೆ ಕೂಗಿ ಕನ್ನಡ ನಾಡಿಗೆ ದ್ರೋಹ ಎಸಗಿದ್ದಾರೆ. ಕನ್ನಡಿಗರ ಭಾವನೆಗಳನ್ನು ಕೆಣಕಿದ್ದಾರೆ. ಇದು ಕ್ಷಮಿಸಲಾಗದ ಅಪರಾಧವಾಗಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಅವರಿಗೆ ಕನ್ನಡ ನಾಡಿನ ಬಗ್ಗೆ ಸ್ವಲ್ಪವಾದರೂ ಗೌರವ ಇದ್ದರೆ ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ನಾಡದ್ರೋಹಿ ಹೇಳಿಕೆ ನೀಡಿರುವ ನಾರಾಯಣಗೌಡ ಅವರನ್ನು ಸಚಿವಸ್ಥಾನದಲ್ಲಿ ಮುಂದುವರಿಸಿದ್ದೇ, ಆದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಿರಂತರ ಪ್ರತಿ ಭಟನೆ ಹಮ್ಮಿಕೊಳ್ಳಲಾಗುವುದು. ಅವರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಅವರಿಗೆ ವಿರುದ್ಧವಾದ ಘೋಷಣೆಗಳನ್ನು ಕೂಗಿ ಅಡ್ಡಿಪಡಿಸಲಾಗುವುದು. ನಾಡದ್ರೋಹಿ ಸಂಭಾಜಿ ಪಾಟೀಲ್‌ಗಾದ ಗತಿಯೇ ಇವರಿಗೂ ಕಾದಿದೆ ಎಂದು ಎಚ್ಚರಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎನ್.ಸತ್ಯನಾರಾಯಣ, ರಾಮನಗರ ತಾಲೂಕು ಅಧ್ಯಕ್ಷ ಟಿ.ಆರ್‌ದೇವರಾಜು, ಚನ್ನ ಪಟ್ಟಣ ಅಧ್ಯಕ್ಷ ಸಾಗರ್, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ರಘುರಾಮ್, ಜಿಲ್ಲಾಉಪಾಧ್ಯಕ್ಷ ಪುಟ್ಟಸ್ವಾಮಿ, ಪದಾಧಿಕಾರಿಗಳಾದ ರಮಾ ನಂದಗೌಡ, ಬಸವರಾಜು, ಪ್ರಶಾಂತ್, ಮಹ ದೇವ, ಗುರುಗೌಡ, ದೊರೆ ಸ್ವಾಮಿ, ಗೌತಮ್, ಪ್ರಭು, ಮಾದೇಗೌಡ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nikhil Kumarswamy: ಸೋತ ನಿಖಿಲ್‌ಗೆ ಜಿಲ್ಲೆಯ ಪಕ್ಷ ಸಂಘಟನೆ ಹೊಣೆ
Ramanagara: ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ!
Channapatna: ಸ್ಮಶಾನಕ್ಕೆ ಜಾಗ ಬೇಕೆಂದು ತಾಲೂಕು ಕಚೇರಿಯೆದುರು ಶವವಿಟ್ಟು ಪ್ರತಿಭಟನೆ
Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Road Mishap: ಬಸ್-ಕಾರು ನಡುವೆ ಡಿಕ್ಕಿ; ಮೂವರ ಸಾವು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.