ಅಧಿಕ ವರ್ಷದ ಅಧಿಕ ಪ್ರಸಂಗವು !

ಫೆಬ್ರವರಿ 29 ನಡೆದು ಬಂದ ಹಾದಿ

Team Udayavani, Mar 1, 2020, 5:38 AM IST

february-29

ಈ ವರ್ಷದ ಫೆಬ್ರವರಿ ತಿಂಗಳ 29 ಎಂದರೆ ಅನೇಕರಿಗೆ ಒಂದು ರೀತಿಯ ಮಜಾ. ಆ ದಿನ ಹುಟ್ಟಿದವರಿಗಂತೂ ನಾಲ್ಕು ವರುಷಕ್ಕೊಮ್ಮೆ ತಮ್ಮ ಜನ್ಮದಿನ ಬಂತಲ್ಲ ಎನ್ನುವ ಸಂಭ್ರಮ. ಈ ದಿವಸ ಹುಟ್ಟಿದವರನ್ನು ಇಂಗ್ಲಿಷಿನಲ್ಲಿLeapling ಅಥವಾ Leaper ಎಂದು ಕರೆಯಲಾಗುತ್ತದೆ. ಪ್ರತೀ ನಾಲ್ಕು ವರ್ಷಕ್ಕೊಮ್ಮೆ ಬರುವ ಈ ದಿನವನ್ನು ತಿಂಗಳ ಸಂಬಳವನ್ನು ಪಡೆದುಕೊಳ್ಳುವವರು ಒಂದು ದಿನ ಪುಕ್ಕಟೆ ದುಡಿಯಬೇಕಲ್ಲ ಎನ್ನುವ ಲೊಚಗುಟ್ಟುವಿಕೆಯ ಮಧ್ಯದಲ್ಲಿ, ಈ ದಿನಕ್ಕಿರುವ ರೋಚಕ ಇತಿಹಾಸವನ್ನು ಹುಡುಕುವ ಪ್ರಯತ್ನವನ್ನು ಮಾಡುವವರು ತುಂಬಾ ಕಡಿಮೆಯೇ ಎನ್ನಬಹುದು.

ಪಂಚಾಂಗವೇ ಇರಲಿ, ಕ್ಯಾಲೆಂಡರೇ ಇರಲಿ ಇವೆಲ್ಲ ಕಾಲವನ್ನು ಎಣಿಸುವ ಸಾಧನಗಳು. ಭಾರತೀಯರಲ್ಲಿ ಹಬ್ಬ ಹರಿದಿನಕ್ಕೆ ಚಾಂದ್ರಮಾನ ಪದ್ಧತಿ, ಗ್ರಹಣಗಳ ನಿಖರತೆಗೆ ಸೌರಮಾನ ಪದ್ಧತಿ ಇರುವುದನ್ನು ಗಮನಿಸಿದರೆ ಈ ಕಾಲವನ್ನು ಅಳೆಯುವ ಮಾಪನಗಳು; ಅದು ಗ್ರೆಗೋರಿಯನ್‌ ಆಗಿರಲಿ, ಹಿಂದೂ ಪಂಚಾಂಗ ಆಗಿರಲಿ- ಸೂರ್ಯ, ಚಂದ್ರ ಮತ್ತು ಭೂಮಿಯ ಚಲನೆಗೆ ಅನುಗುಣವಾಗಿರುತ್ತದೆ. ಈ ದಿನಗಳಷ್ಟೇ ಅಲ್ಲ, ಸೆಕೆಂಡಿನ ಸಾವಿರದ ಒಂದು ಭಾಗವೂ ಕೂಡ ವೈಜ್ಞಾನಿಕವಾಗಿ ತುಂಬಾ ಮಹತ್ವದ್ದು. ಈ ದಿಸೆಯಲ್ಲಿ ವ್ಯವಹಾರಕ್ಕಾಗಿ ನಾವೆಲ್ಲ ಅನುಸರಿಸಿಕೊಂಡು ಬಂದಿರುವ ಗ್ರೆಗೋರಿಯನ್‌ ಕ್ಯಾಲೆಂಡರಿನ ಅಧಿಕ ವರ್ಷದ ಅಧಿಕ ದಿನವಾದ ಫೆಬ್ರವರಿ 29 ಇತಿಹಾಸವನ್ನು ಅವಲೋಕಿಸೋಣ.

ಜೂಲಿಯನ್‌ ಪೂರ್ವದ ಕ್ಯಾಲೆಂಡರ್‌
ಕಾಲ ಎಂದ ಕೂಡಲೇ ನಮ್ಮ ಗಣನೆಗೆ ಬರುವುದು ದಿನ, ತಿಂಗಳು ಮತ್ತು ವರ್ಷ. ಪ್ರಾಚೀನರಿಗೆ ದಿನವೆಂದರೆ ಎರಡು ಇರುಳಿನ ನಡುವಿನ ಕಾಲ, ತಿಂಗಳೆಂದರೆ ಎರಡು ಅಮಾವಾಸ್ಯೆಯ ನಡುವಿನ ಕಾಲವಾಗಿತ್ತು. ಈ ಕಾಲ ಗಣನೆಗೆ ಈಜಿಪ್ಷಿಯನ್‌, ಗ್ರೀಕ್‌, ಬೆಬಿಲೋನಿಯನ್‌, ಮಾಯನ್‌, ಇಸ್ಲಾಮಿಕ್‌, ರೋಮನ್‌ ಮತ್ತು ಭಾರತೀಯ ಪದ್ಧತಿಗಳಿದ್ದವು. ಇಂದು ಜಗತ್ತು ವ್ಯವಹಾರಕ್ಕಾಗಿ ಒಪ್ಪಿಕೊಂಡಿರುವದು 1582ರಲ್ಲಿ ಪೋಪ್‌ 8ನೇ ಗ್ರೆಗೋರಿ ರೂಢಿಗೆ ತಂದ ಗ್ರೆಗೋರಿಯನ್‌ ಕ್ಯಾಲೆಂಡರ್‌. ಆದರೆ, ಈ ಅಧಿಕ ವರ್ಷ ಅಥವಾ ದಿನಗಳ ಕಲ್ಪನೆ ಗ್ರೆಗೋರಿಗಿಂತ ಹಿಂದಿನಿಂದಲೂ ಇದ್ದವು. ಪ್ರಾಚೀನ ರೋಮನ್ನರ ಕ್ಯಾಲೆಂಡರಿನಲ್ಲಿ ವರ್ಷವೆಂದರೆ ಹತ್ತು ತಿಂಗಳನ್ನು ಹೊಂದಿತ್ತು. ರೋಮನ್ನರು ಕ್ಯಾಲೆಂಡರಿನ ಕಲ್ಪನೆಯನ್ನು ಗ್ರೀಕರಿಂದ ಸ್ವೀಕರಿಸಿದ್ದರು. ಹಾಗಾಗಿ, ಅವರ ವರ್ಷದ ಮೊದಲನೆಯ ತಿಂಗಳು ಮಾರ್ಚ್‌ ನಿಂದ ಪ್ರಾರಂಭವಾಗುತ್ತಿತ್ತು. Martius, Aprilis, Maius, June, Quintilis, Sextilis, September, October, November, and December. (ಕೊನೆಯ ಆರು ತಿಂಗಳು ಅಂಕೆಗಳಾದ ಐದು, ಆರು. ಏಳು, ಎಂಟು, ಒಂಬತ್ತು ಮತ್ತು ಹತ್ತು ಎನ್ನುವುದನ್ನು ಸೂಚಿಸುವುದನ್ನು ಗಮನಿಸಬಹುದು.) ಇವುಗಳಲ್ಲಿ ಮಾರ್ಚ್‌ (Martius), ಮೇ (Maius), ಜುಲೈ (Quintilis) ಮತ್ತು ಅಕ್ಟೋಬರ್‌ ತಿಂಗಳುಗಳು 31 ದಿವಸವನ್ನು ಉಳಿದ ಆರು ತಿಂಗಳುಗಳಲ್ಲಿ 29 ದಿವಸಗಳಾಗಿದ್ದವು. ಚಳಿಗಾಲದ ಇನ್ನೆರಡು ತಿಂಗಳಿಗೆ ಹೆಸರಿರಲಿಲ್ಲ. ಸುಮಾರು ಕ್ರಿ. ಪೂ. 713 ರೋಮ್‌ನ್ನು ಆಳಿದ ದೊರೆ ನ್ಯೂಮಾ ಪೊಂಪುಲಿಸ್‌ ಎನ್ನುವಾತ ಫೆಬ್ರವರಿ ಮತ್ತು ಜನವರಿ ಎನ್ನುವ ಎರಡು ತಿಂಗಳನ್ನು ಸೇರಿಸಿ ವರ್ಷವನ್ನು 355 ದಿನಗಳನ್ನಾಗಿಸಿದ. ಈ ಕ್ರಿ. ಪೂ. 713 ಇತಿಹಾಸದಲ್ಲಿ ದಾಖಲಾದ ಮೊತ್ತ ಮೊದಲ ಅಧಿಕ ವರ್ಷ.

ಪ್ರಾಚೀನ ಗ್ರೀಕ್‌ ಮತ್ತು ರೋಮನ್ನರಿಗೆ ಇಷ್ಟಾದರೂ ಇದು ಸೌರಮಾನ ಕಾಲಗಣನೆಗೆ ಅನುಗುಣವಾಗಿಲ್ಲ ಎಂಬ ಅರಿವಿತ್ತು. ಅದಾಗಲೇ ಗ್ರೀಕ್‌ ಖಗೋಳಶಾಸ್ತ್ರಜ್ಞ ಹಿಪ್ಪಾರ್ಕಸ್‌ ಎನ್ನುವಾತ ಸೌರ ವರ್ಷವೆನ್ನುವುದು 365.25 ದಿವಸ ಎನ್ನುವುದನ್ನು ಊಹಿಸಿದ್ದ. ಈಗ ಜನವರಿ, ಎಪ್ರಿಲ್, ಜೂನ್‌, ಸಿಕ್ಸಟೈಲಿಸ್‌ (ಕ್ರಿ.ಪೂ. 8ನೆಯ ಶತಮಾನದಲ್ಲಿ ಈ ತಿಂಗಳನ್ನು ರೋಮನ್ನು ಆಳಿದ ಅಗಷ್ಟಸ್‌ನ ನೆನಪಿಗೆ ಅಗಸ್ಟ್‌ ಎಂದು ಬದಲಾಯಿಸಲಾಯಿತು.) ಸೆಪ್ಟಂಬರ್‌, ನವಂಬರ್‌ ಮತ್ತು ಡಿಸೆಂಬರ್‌ 29 ದಿನಗಳನ್ನೂ ಮಾರ್ಚ್‌, ಮೇ, ಕ್ವಾಂಟಿಲಿಸ್‌ (ಅಧಿಕ ವರ್ಷಕ್ಕೆ ಜ್ಯೂಲಿಯಸ್‌ ಸೀಸರನ ಕೊಡುಗೆಯ ನೆನಪಿಗೆ ಕ್ರಿ.ಪೂ. 44ರಲ್ಲಿ ಜ್ಯೂಲಿಯಸ್‌ ಇಂದಿನ ಜುಲೈ ಎಂದು ಹೆಸರಿಸಲಾಯಿತು) ಮತ್ತು ಅಕ್ಟೋಬರ್‌ ತಿಂಗಳು 31 ದಿನಗಳನ್ನೂ ಇನ್ನುಳಿದ ಫೆಬ್ರವರಿ ತಿಂಗಳು 28 ದಿನಗಳನ್ನು ಸೇರಿಸಿ ಒಂದು ವರ್ಷಕ್ಕೆ 355 ದಿನಗಳೆಂದು ನಿಗದಿಮಾಡಲಾಯಿತು. ರೋಮನ್ನರು ಸಮಸಂಖ್ಯೆಗಳನ್ನು ಶುಭವೆಂದು ಪರಿಗಣಿಸುತ್ತಿರಲಿಲ್ಲ. ಹಾಗಾಗಿ, ಅವರ ಕ್ಯಾಲೆಂಡರಿನ ತಿಂಗಳಲ್ಲಿ 31 ಅಥವಾ 29 ದಿನಗಳಿರುತ್ತಿದ್ದವು. ಆದರೆ, ಫೆಬ್ರವರಿ ತಿಂಗಳ ಹುಣ್ಣಿಮೆಯಂದು ಶುದ್ಧೀಕರಣದ ಆಚಾರದ Februa ಎನ್ನುವ ಹಬ್ಬ ನಡೆಯುತ್ತಿತ್ತು. Februum ಎಂದರೆ ಲ್ಯಾಟಿನ್‌ ಭಾಷೆಯಲ್ಲಿ “ಶುದ್ಧಗೊಳಿಸು’ ಎನ್ನುವ ಅರ್ಥವಿದೆ. ಹಾಗಾಗಿ, ಈ ತಿಂಗಳಿಗೆ 28 ದಿನಗಳಿರಲಿ ಎಂದು ಅವರ ಪಂಡಿತರ (Decemvirs) ಪರಿಷತ್ತು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ನ್ಯೂಮಾ ಪೊಂಪಲಿಸ್‌ ಈ ಎರಡು ಹೊಸ ತಿಂಗಳನ್ನು ಸೇರಿಸಲು ಆದೇಶಿಸಿದ. ಈ ಹೊತ್ತಿನಲ್ಲಿಯೇ ರೋಮನ್ನರು ನಾಲ್ಕು ವರ್ಷಗಳ ಆವರ್ತನವನ್ನು ಅಧಿಕ ವರ್ಷಕ್ಕಾಗಿ ಬಳಕೆಗೆ ತಂದರು. ಈ ಪ್ರಕಾರ ನಡುವಿನ ಎರಡನೇ ವರ್ಷದಲ್ಲಿ ಫೆಬ್ರವರಿ ತಿಂಗಳಿಗೆ 23 ದಿನಗಳೆಂದು ನಿಗದಿ ಮಾಡಲಾಯಿತು ಹಾಗೂ ನಾಲ್ಕನೆಯ ವರ್ಷದ ಫೆಬ್ರವರಿ ತಿಂಗಳಿಗೆ 24ದಿನಗಳೆಂದು ನಿಗದಿ ಮಾಡಲಾಯಿತು. ಮತ್ತು ಪ್ರತಿ ಎರಡು ವರ್ಷಗಳಿಗೊಂದರಂತೆ ಒಂದು 22 ದಿನಗಳ ಮಧ್ಯಂತರ ತಿಂಗಳನ್ನು ರೂಢಿಯಲ್ಲಿ ತಂದರು. ಈಗ ರೋಮಿನಲ್ಲಿ ವರ್ಷವೊಂದಕ್ಕೆ 355 ದಿನಗಳೆಂದು ನಿಗದಿಯಾದರೂ ಪ್ರತೀ ಎರಡು ವರುಷಗಳಿಗೊಮ್ಮೆ 22 ಅಥವಾ 23 ದಿನಗಳ ಹೆಚ್ಚುವರಿಯಿಂದಾಗಿ ಅವರ ವರ್ಷದ ಕಾಲಮಾನ ಹಿಪ್ಪಾರ್ಕಸನ್‌ ಲೆಕ್ಕಾಚಾರದ 365.25ರ ಬದಲು ನಾಲ್ಕು ವರುಷಗಳಲ್ಲಿ ಸರಾಸರಿ 366.25 ದಿನಗಳಾಯಿತು.

ಜೂಲಿಯನ್‌ ಕ್ಯಾಲೆಂಡರ್‌
ಇಷ್ಟಾದರೂ ಗೊಂದಲ ನಿವಾರಣೆಯಾಗಿರಲಿಲ್ಲ. ಕಾಲದ ಗಣನೆ ತುಂಬಾ ಸಂಕೀರ್ಣವಾಗಿದ್ದು ಜನಸಾಮಾನ್ಯರಿಗೆ ಅರ್ಥವೇ ಆಗುತ್ತಿರಲಿಲ್ಲ. ಕಾಲಮಾನ ಎನ್ನುವುದು ಋತುಗಳ ಸಮಯಕ್ಕೆ ನಿಗದಿತವಾಗಿ ಬರುತ್ತಿರಲಿಲ್ಲ. ಜ್ಯೂಲಿಯಸ್‌ ಸೀಸರ್‌ (ಕ್ರಿ. ಪೂ. 100- 44) ರೋಮಿನ ಸರ್ವೋತ್ಛ ಅಧಿಕಾರಿಯಾಗುವ (Pontifex Maximus) ಹೊತ್ತಿನಲ್ಲಿ ಶರತ್ಕಾಲ ಜನವರಿಯಲ್ಲಿ ಬಂದಿತ್ತು. ಈ ಹೊತ್ತಿನಲ್ಲಿ ಕ್ಯಾಲೆಂಡರ್‌ ಮತ್ತು ಋತುಗಳ ನಡುವೆ ಕಾಲಗಳೆಲ್ಲ ಅಯೋಮಯವಾಗಿಬಿಟ್ಟಿತ್ತು. ಈ ಗೊಂದಲಗಳ ಪಾರಿಹಾರಕ್ಕಾಗಿ ಸೀಸರ್‌ ಅಲೆಕ್ಸಾಂಡ್ರಿಯಾದ ಖಗೋಳ ಶಾಸ್ತ್ರಜ್ಞ ಸೊಸಿಜೆನ್ಸ್‌ ಎನ್ನುವಾತನ ನೆರವನ್ನು ಕೋರಿದ. ಆತ ಈಜಿಪ್ತ್ ದೇಶದಲ್ಲಿ ಬಳಕೆಯಿರುವ ಗಣಿತವನ್ನು ಆಧಾರವಾಗಿರಿಸಿಕೊಂಡು ಸೌರ ಮಾನಕ್ಕೆ ಅನುಗುಣವುಂಟಾಗುವಂತೆ ಮಾಡಲು 355 ದಿನಗಳ ಬದಲಾಗಿ 365 ದಿನಗಳನ್ನು ಬಳಕೆಗೆ ತರಲು ನಿರ್ಧರಿಸಿದ. ಬದಲಾದ ತಿಂಗಳು ಮತ್ತು ವರ್ಷಗಳನ್ನು ಆಯಾ ಋತುಗಳಿಗೆ ಸರಿಹೊಂದುವಂತೆ ಮಾಡಲು ಹಿಂದಿನ ತಲೆಮಾರುಗಳ ಕಾಲದಲ್ಲಾದ ಗಣಿತದ ಹೆಚ್ಚುವರಿ ಕಾಲದ ಗಣನೆಯ ತಪ್ಪುಗಳನ್ನು ಸರಿಮಾಡಬೇಕಾಗಿತ್ತು.

ಹಳೆಯ ರೋಮನ್‌ ಕ್ಯಾಲೆಂಡರಿನಲ್ಲಿ ಎರಡು ವರ್ಷಗಳ ಅಧಿಕಮಾಸದ ಲೆಕ್ಕಾಚಾರದಂತೆ ಕ್ರಿ. ಪೂ. 46ನೆಯ ಇಸವಿಯಲ್ಲಿ 377 ದಿನ ಬರಬೇಕಾಗಿತ್ತು. ಆದರೆ, ಇದು ಆ ವರ್ಷದಲ್ಲಿ ಬರುವ ವಸಂತಕಾಲಕ್ಕೆ ಸರಿಹೊಂದುತ್ತಿರಲಿಲ್ಲ. ಹೀಗೆ ಬರಬೇಕಾದರೆ ಮುಂದೆ ಬರಲಿರುವ ವಸಂತಕಾಲ ಮಾರ್ಚ್‌ ತಿಂಗಳಿಗೆ ಸರಿಯಾಗಿ ಹೊಂದುವಂತೆ ಬರಬೇಕಾಗಿತ್ತು. ಇದೇ ಪರಿಹಾರವೆಂದು ಅವರೆಲ್ಲ ಸೇರಿ ಆಲೋಚಿಸಿದರು. ಕ್ರಿ. ಪೂ. 45 ಜನವರಿ 1 ರಿಂದ ಹೊಸ ಕಾಲಮಾನವನ್ನು ಬಳಕೆಗೆ ತರುವುದೆಂದು ಆತ ತೀರ್ಮಾನಿಸಿದ. ಹೀಗೆ ಮಾಡಬೇಕಾದರೆ ಆಗ ಬಳಕೆಯಲ್ಲಿರುವ ಕ್ಯಾಲೆಂಡರಿನ ತಿಂಗಳನ್ನು ಮತ್ತೂಂದಿಷ್ಟು ವಿಸ್ತರಿಸಬೇಕಾಗಿತ್ತು. ಈ ಸಲಹೆಯ ಮೇರೆಗೆ ಸೀಸರ್‌ ಕ್ರಿ. ಪೂ. 46ನೇ ಇಸವಿಯನ್ನು 445 ದಿನಗಳಷ್ಟು ದೀರ್ಘ‌ಮಾಡಿಬಿಟ್ಟ. ಇಡೀ ಇತಿಹಾಸದಲ್ಲಿನ ಅತ್ಯಂತ ದೀರ್ಘ‌ವಾದ ಅಧಿಕ ವರ್ಷ ಕ್ರಿ. ಪೂ. 46 ಎಂದು ದಾಖಲಾಗಿದೆ. ಈ ಕ್ರಮದಿಂದಾಗಿ ನವೀಕೃತ ರೋಮನ್‌ ಕ್ಯಾಲೆಂಡೆರಿನ ಅವಧಿಯನ್ನು ಸೌರಮಾನಕ್ಕೆ ಅನುಗುಣವಾಗಿ ಪ್ರಮಾಣೀಕರಿಸಲು ಸಾಧ್ಯವಾಯಿತು. ಇಷ್ಟೇ ಅಲ್ಲ, ಕ್ರಿ. ಪೂ. 45 ನೆಯ ಇಸ್ವಿಯಿಂದ ಹಳೆಯ ವರ್ಷದ 355 ದಿನಗಳ ಬದಲು ಹೊಸ ವರ್ಷವನ್ನು 365 ದಿನಗಳನ್ನಾಗಿಸಿದ. ತಿಂಗಳುಗಳ ಲೆಕ್ಕಾಚಾರದಲ್ಲಿ ಕೈಬೆರಳನ್ನು ಮಡಚಿದಾಗಿನ ಹಸ್ತದ ಉಬ್ಬು ತಗ್ಗುಗಳ ಮೂಲಕ 30 ಮತ್ತು 31 ದಿನಗಳನ್ನು ರೂಢಿಗೆ ತಂದ.

ಇಷ್ಟೆಲ್ಲಾ ಪ್ರಯತ್ನಗಳಿಂದಾಗಿ ಈ ಕ್ಯಾಲೆಂಡರ್‌ ಭೂಮಿಯ ಚಲನೆಯಾದ 365.25 ದಿನಗಳಿಗೆ ಹತ್ತಿರವಾಗಿತ್ತು. ದೀರ್ಘ‌ಕಾಲದ ಸಮಸ್ಯೆಯ ನಿವಾರಣೆಗಾಗಿ ಪ್ರತೀ ಎರಡುವರ್ಷಗಳ ಮಧ್ಯಂತರ ತಿಂಗಳುಗಳ ಬದಲಾಗಿ ಪ್ರತೀ ನಾಲ್ಕು ವರುಷಕ್ಕೊಮ್ಮೆ ಒಂದು ದಿನವನ್ನು ಅಧಿಕ ದಿನವನ್ನಾಗಿ ರೂಢಿಗತಗೊಳಿಸಿದ. ಅದು ತನಕ ಫೆಬ್ರವರಿ ತಿಂಗಳು ವರ್ಷದ ಕೊನೆಯ ತಿಂಗಳಾಗಿರುತ್ತಿತ್ತು ಮತ್ತು ವರ್ಷ ಬಿಟ್ಟು ವರ್ಷಕ್ಕೊಮ್ಮೆ ಇದೇ ತಿಂಗಳಲ್ಲಿ ಹೆಚ್ಚುವರಿ ತಿಂಗಳನ್ನು ಸೇರಿಸಲಾಗುತ್ತಿತ್ತು. ಅದನ್ನು ಬದಲಾವಣೆ ಮಾಡಿ 23 ಅಥವಾ 24 ದಿನಗಳ ದಿನಗಳ ಫೆಬ್ರವರಿ ತಿಂಗಳನ್ನೇ 28 ದಿನಗಳಾಗಿ ಬದಲಾಯಿಸಿದ ಮತ್ತು ನಾಲ್ಕು ವರ್ಷಗಳಿಗೊಮ್ಮೆ ಅಧಿಕದಿನ ಬರುವಂತೆ ಬದಲಾಯಿಸಿದ.

ಅಧಿಕ ವರ್ಷಗಳನ್ನು ಆಯ್ಕೆ ಮಾಡಿಕೊಳ್ಳುವ ಸಲುವಾಗಿ ನಾಲ್ಕರಿಂದ ಭಾಗಿಸಲ್ಪಡುವ ಇಸವಿಯ ಫೆಬ್ರುವರಿ ತಿಂಗಳನ್ನು ಹೆಚ್ಚುವರಿ (Leap Day) ಅಧಿಕ ದಿನಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಯಿತು. ಹಾಗಾಗಿ, ಖಗೋಳ ಶಾಸ್ತ್ರಜ್ಞರು ಕ್ರಿ. ಪೂ. 46 ನೆಯ ಇಸ್ವಿಯನ್ನು ಗೊಂದಲಗಳ ಅಂತಿಮ ವರ್ಷ (Last year of Cofusion) ಎಂದು ಕರೆದಿದ್ದಾರೆ. ಇದಕ್ಕೆಲ್ಲ ಆಗಿನ ರೋಮಿನ ಸರ್ವೋಚ್ಛ ಧಾರ್ಮಿಕ ಅಧಿಕಾರಿಯೂ (Pontifex Maximus) ಆಗಿರುವ ಜ್ಯೂಲಿಯಸ್‌ ಸೀಸರ್‌ ಆಗಿರುವುದರಿಂದ ಈ ಹೊಸ ಕ್ಯಾಲೆಂಡರ್‌ಗೆ ಜ್ಯೂಲಿಯನ್‌ ಕ್ಯಾಲೆಂಡರ್‌ ಎನ್ನುವ ಹೆಸರು ಬಳಕೆಗೆ ಬಂತು. ಈ ಎಲ್ಲಾ ಪರಿಕಲ್ಪನೆಯ ಹಿಂದೆ ಸೀಸರ್‌ ಆಸಕ್ತಿ ಇರುವ ಕಾರಣ ಆತನನ್ನು ಅಧಿಕ ವರ್ಷದ ಪರಿಕಲ್ಪನೆಯ ಪಿತಾಮಹ ಎಂದೂ ಕರೆಯುತ್ತಾರೆ.

ನಾರಾಯಣ ಯಾಜಿ

ಟಾಪ್ ನ್ಯೂಸ್

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.