ಕೊರೊನಾ ವೈರಸ್ : ಚೀನಾದಲ್ಲಿ ಇಳಿಮುಖ, ಇತರೆಡೆ ವ್ಯಾಪಕ
ದಕ್ಷಿಣ ಕೊರಿಯಾದಲ್ಲಿ ಒಂದೇ ದಿನ 813 ಮಂದಿಗೆ ಕೊರೊನಾ
Team Udayavani, Feb 29, 2020, 8:27 PM IST
ಬೀಜಿಂಗ್: ಕೊರೊನಾವೈರಸ್‌ನ ಕೇಂದ್ರಸ್ಥಾನವಾದ ಚೀನಾದಲ್ಲಿ ಸಾವಿನ ಸಂಖ್ಯೆ ಇಳಿಮುಖವಾಗುತ್ತಿದ್ದರೆ, ಇತರೆ ರಾಷ್ಟ್ರಗಳಲ್ಲಿ ಕೊರೊನಾ ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿದೆ. ಪ್ರತಿ ದಿನವೂ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಹೊಸ ಹೊಸ ದೇಶಗಳಿಗೆ ಸೋಂಕು ಹರಡಲಾರಂಭಿಸಿದೆ.
ದಕ್ಷಿಣ ಕೊರಿಯಾದಲ್ಲಂತೂ, ವೈರಸ್ ಎಗ್ಗಿಲ್ಲದಂತೆ ಸಾಗಿದ್ದು, ಶನಿವಾರ ಒಂದೇ ದಿನ 813 ಮಂದಿಗೆ ಸೋಂಕು ತಗುಲಿದೆ. ಇಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 3,150 ಆಗಿದ್ದು, ಕೊರೊನಾ ವ್ಯಾಪಿಸುವಿಕೆ ನಿಯಂತ್ರಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಇರಾನ್‌ನಲ್ಲಿ 43 ಸಾವು:
ಇರಾನ್‌ನಲ್ಲೂ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಈವರೆಗೆ 43 ಮಂದಿ ಮೃತಪಟ್ಟು, 593 ಮಂದಿಗೆ ಸೋಂಕು ದೃಢಪಟ್ಟಿದೆ. ಕೊರೊನಾ ವ್ಯಾಪಿಸುವುದನ್ನು ನಿಯಂತ್ರಿಸಲು ಚೀನಾವು ತಜ್ಞರ ತಂಡವನ್ನು ಇರಾನ್‌ಗೆ ಕಳುಹಿಸಿದೆ. ಅಮೆರಿಕದಲ್ಲಿ 4ನೇ ಪ್ರಕರಣ ಪತ್ತೆಯಾಗಿದ್ದು, ಅದರ ಮೂಲ ಯಾವುದು ಎಂದು ತಿಳಿದುಬಂದಿಲ್ಲ. ಚೀನಾದಲ್ಲಿ ಶನಿವಾರ 47 ಮಂದಿ ಮೃತಪಟ್ಟು, ಒಟ್ಟಾರೆ 2,835 ಮಂದಿ ಸಾವಿಗೀಡಾದಂತಾಗಿದೆ.
ವುಹಾನ್‌ನಿಂದ ಇತ್ತೀಚೆಗೆ ಸ್ವದೇಶಕ್ಕೆ ಆಗಮಿಸಿದ ಎಲ್ಲ 112 ಭಾರತೀಯರ ರಕ್ತದ ಮಾದರಿಯನ್ನು ಪರೀಕ್ಷಿಸಲಾಗಿದ್ದು, ನೆಗೆಟಿವ್ ಎಂದು ವರದಿ ಬಂದಿದೆ.
ಥೀಮ್ ಪಾರ್ಕ್‌ಗೆ ಬೀಗ:
ಜಪಾನ್‌ನಲ್ಲಿ 935 ಪ್ರಕರಣಗಳು ಪತ್ತೆಯಾಗಿದ್ದು, ವೈರಸ್ ವ್ಯಾಪಿಸದಂತೆ ತಡೆಯಲು ಇಲ್ಲಿನ ಎಲ್ಲ ಥೀಮ್ ಪಾರ್ಕ್‌ಗಳು ಹಾಗೂ ಕ್ರೀಡಾ ಮೈದಾನಗಳನ್ನು ಮುಚ್ಚಲಾಗಿದೆ. ಟೋಕಿಯೋ ಮತ್ತು ಒಸಾಕಾದಲ್ಲಿ ನಡೆಯುವ ವಾರ್ಷಿಕ ಸಾಂಪ್ರದಾಯಿಕ ಚೆರ್ರಿ ಬ್ಲಾಸಮ್ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.
ಮೊದಲ ಸೋಂಕಿತನ ಗುಂಡಿಕ್ಕಿ ಕೊಂದರು!
(ಉತ್ತರಕೊರಿಯಾ ಸರ್ವಾಧಿಕಾರಿ ಕಿಮ್ ಆದೇಶದಂತೆ ಈ ಕ್ರಮ)
ಉತ್ತರ ಕೊರಿಯಾದಲ್ಲಿ ಶನಿವಾರ ಮೊದಲ ಕೊರೊನಾವೈರಸ್ ಪ್ರಕರಣ ಪತ್ತೆಯಾಗಿದ್ದು, ಪತ್ತೆಯಾದ ಕೆಲವೇ ಗಂಟೆಗಳಲ್ಲಿ ಸೋಂಕಿತನನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ! ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆದೇಶದಂತೆ ಈ ಅಮಾನವೀಯ ಕೃತ್ಯ ಎಸಗಲಾಗಿದೆ. ಸೋಂಕಿತನನ್ನು ಕೊಲ್ಲುವುದಕ್ಕೂ ಮುಂಚೆ, ಈ ಕುರಿತು ಮಾತನಾಡಿದ್ದ ಕಿಮ್, ಕೊರೊನಾವೈರಸ್ ಏನಾದರೂ ನಮ್ಮ ದೇಶಕ್ಕೆ ಹಬ್ಬಿದರೆ, ಪರಿಣಾಮ ಗಂಭೀರವಾದೀತು ಎಂದು ಎಚ್ಚರಿಸಿದ್ದರು. ಜತೆಗೆ, ಯಾವ ಯಾವ ದಾರಿಯಿಂದ ಸೋಂಕು ನಮ್ಮ ದೇಶವನ್ನು ಪ್ರವೇಶಿಸಲು ಸಾಧ್ಯವೋ, ಅವೆಲ್ಲ ದಾರಿಗಳನ್ನೂ ಮುಚ್ಚಬೇಕು ಹಾಗೂ ತಪಾಸಣೆಯನ್ನು ಬಲಿಷ್ಠಗೊಳಿಸಬೇಕು. ಯಾವ ಕಾರಣಕ್ಕೂ ಸೋಂಕು ಉ.ಕೊರಿಯಾ ಪ್ರವೇಶಿಸಲು ಬಿಡಬಾರದು ಎಂದು ರೋಗ ನಿಗ್ರಹ ಇಲಾಖೆಗೆ ಕಿಮ್ ಖಡಕ್ ಸೂಚನೆ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.