ರಂಗೇರಿದ ಚಿತ್ರೋತ್ಸವ
ಅದ್ಭುತ ಚಿತ್ರ ಕಣ್ತುಂಬಿಕೊಳ್ಳಲು ಸಾಲುಗಟ್ಟಿದ ಸಿನಿ ಪ್ರೇಮಿಗಳು
Team Udayavani, Mar 1, 2020, 7:01 AM IST
ಬೆಂಗಳೂರಲ್ಲಿ ಸಿನಿಮಾ ಜಗತ್ತು..! ಹೌದು, 12ನೇ ಬೆಂಗಳೂರು ಚಿತ್ರೋತ್ಸವ ಯಶಸ್ವಿ ಮೂರು ದಿನಗಳನ್ನು ಪೂರೈಸಿದೆ. ನಾಲ್ಕನೇ ದಿನಕ್ಕೆ ಕಾಲಿಟ್ಟಿರುವ ಚಿತ್ರೋತ್ಸವದಲ್ಲಿ ಎಂದಿಗಿಂತಲೂ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಪ್ರಿಯರು ತುಂಬಿಕೊಂಡಿದ್ದಾರೆ. ಹಾಗೆ ನೋಡಿದರೆ, ಮೊದಲೆರೆಡು ದಿನಗಳಲ್ಲಿ ಅಷ್ಟಾಗಿ ಸಿನಿಮಾಸಕ್ತರು ಕಾಣಿಸಿಕೊಂಡಿರಲಿಲ್ಲ. ಮೂರನೇ ದಿನದಲ್ಲಿ ನೋಡುಗರ ಸಂಖ್ಯೆ ದುಪ್ಪಟ್ಟಾಗಿದ್ದು ನಿಜ.
ಶನಿವಾರ ಸಿನಿಮಾ ನೋಡುಗರ ಸಂಖ್ಯೆ ಮತ್ತಷ್ಟು ಹೆಚ್ಚಿದ್ದು ನಿಜ. ಅದಕ್ಕೆ ಕಾರಣ, ವಾರಾಂತ್ಯ. ಇನ್ನು, ಒರಾಯನ್ ಮಾಲ್‌ನಲ್ಲಂತೂ ಪ್ರಪಂಚದ ಅದ್ಭುತ ಸಿನಿಮಾಗಳನ್ನು ನೋಡಲು ಸಿನಿಮಾ ಪ್ರೇಮಿಗಳು ಸಾಲುಗಟ್ಟಿ ನಿಂತಿದ್ದು ಸಾಮಾನ್ಯವಾಗಿತ್ತು. ಅಂತೆಯೇ, ಚಿತ್ರಮಂದಿರಗಳಲ್ಲಿ ಕಾಣದ ಕನ್ನಡದ ಅಪರೂಪ ಸಿನಿಮಾಗಳನ್ನೂ ನೋಡಿ ಕಣ್ತುಂಬಿಕೊಳ್ಳಬೇಕೆಂಬ ಧಾವಂತ ಕೂಡ ಕನ್ನಡಿಗರಲ್ಲಿ ಮನೆಮಾಡಿತ್ತು.
ಕೇವಲ, ಕನ್ನಡಿಗರು ಮಾತ್ರವಲ್ಲ, ಹೊರ ರಾಜ್ಯ, ದೇಶಗಳಿಂದ ಬಂದಿದ್ದ ಸಿನಿಮಾ ಪ್ರೇಮಿಗಳು ಕೂಡ ಕನ್ನಡ ಸಿನಿಮಾಗಳನ್ನು ನೋಡಲು ಸಾಲುಗಟ್ಟಿ ನಿಂತಿದ್ದರು. ಇನ್ನು, ಚಿತ್ರೋತ್ಸವ ಅಂದಮೇಲೆ, ಸಣ್ಣಪುಟ್ಟ ಸಮಸ್ಯೆಗಳು ಇದ್ದೇ ಇರುತ್ತೆ. ಈ ಬಾರಿ ನಡೆಯುತ್ತಿರುವ ಚಿತ್ರೋತ್ಸವದಲ್ಲೂ ಆ ಸಮಸ್ಯೆಗಳಿಗೇನೂ ಕಡಿಮೆ ಇರಲಿಲ್ಲ. ಕೆಲವು ಪ್ರದರ್ಶನಗಳು ತಡವಾಗಿ ಶುರುವಾದವು ಎಂಬ ದೂರು ಕೇಳಿಬಂದರೆ, ಇನ್ನು ಕೆಲವರು, ಸಂಘಟಕರ ಆಯೋಜನೆ ಕುರಿತು ಆರೋಪ ಮಾಡುತ್ತಿದ್ದದ್ದು ಸಾಮಾನ್ಯವಾಗಿತ್ತು.
ದೂರು, ಆರೋಪ, ಮನಸ್ತಾಪ, ಬೇಸರ ಇವೆಲ್ಲದರ ಜೊತೆಯಲ್ಲೂ ಒರಾಯಿನ್ ಮಾಲ್‌ನ ಒಂದು ಪರದೆಯಲ್ಲಿ ಸಿನಿಮಾ ವಿಷಯಕ್ಕೆ ಸಂಬಂಧಿಸಿದ ಸಂವಾದ, ಕಾರ್ಯಗಾರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಒರಾಯನ್ ಮಾಲ್ ಜೊತೆಯಲ್ಲಿ ಈ ಬಾರಿ, ಆಯೋಜಕರು, ನವರಂಗ್ ಚಿತ್ರಮಂದಿರ, ಕಲಾವಿದರ ಸಂಘ ಹಾಗೂ ಸುಚಿತ್ರ ಫಿಲಂ ಸೊಸೈಟಿಯಲ್ಲೂ ಸಿನಿಮಾಗಳ ಪ್ರದರ್ಶಕ್ಕೆ ವ್ಯವಸ್ಥೆ ಮಾಡಿರುವುದರಿಂದ, ಹೆಚ್ಚಿನ ಮಂದಿ ತಮಗೆ ಹತ್ತಿರ ಆಗುವ ಸ್ಥಳದಲ್ಲೇ ಹೋಗಿ ಚಿತ್ರ ವೀಕ್ಷಿಸಿದ್ದು ವಿಶೇಷವಾಗಿತ್ತು.
ಇಂದು 40 ಸಿನ್ಮಾ ಪ್ರದರ್ಶನ: ಮಾ.1 (ಇಂದು) ಜಗತ್ತಿನ 40ಕ್ಕೂ ಹೆಚ್ಚು ಅದ್ಭುತ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ರಷ್ಯನ್, ಫ್ರೆಂಚ್, ಇಂಗ್ಲೀಷ್, ಸ್ಪ್ಯಾನಿಷ್, ಜರ್ಮನ್ ಭಾಷೆಯ ಚಿತ್ರಗಳ ಜೊತೆಯಲ್ಲಿ ಕನ್ನಡ, ಹಿಂದಿ, ಬೆಂಗಾಲಿ, ಮಲಯಾಳಂ ಚಿತ್ರಗಳೂ ಕೂಡ ಪ್ರದರ್ಶನ ಕಾಣುತ್ತಿವೆ. ಅಮೊಲ್ ಪಾಲೇಕರ್ ನಿರ್ದೇಶನದ “ಅನಾಹತ್’, ಲೆನಿನ್ ರಾಜೇಂದ್ರನ್ ನಿರ್ದೇಶನವಿರುವ ಸೂಪರ್ ಹಿಟ್ ಸಿನಿಮಾ
“ಸ್ವಾತಿ ತಿರುನಾಳ್’, ವಿಜಯ್ ಭಟ್ ಅವರ “ಬೈಜು ಬಾವ್ರಾ’, ಜೀನ್ ಲುಕ್‌ರ “ಬ್ರೆಥ್‌ಲೆಸ್’, ಆ್ಯಂಡಿ ನಿರ್ದೇಶನದ ಯಶಸ್ವಿ ಸಿನಿಮಾ “ದಿ ಸ್ಯಾಕ್ರಿಫೈಸ್’, “ಪಾನಿ’, “ಲಿಲ್ಲಿಯಾನ್’, “ಇಟ್ ಮಸ್ಟ್ ಬಿ ಹೆವನ್’, “ಲಾರಾ’, “ಮಾರ್ಕೆಟ್’, “ಆಲ್ ಫಾರ್ ಮೈ ಮದರ್’, “ಅಂಕಲ್’, “ಸಿಂಪಥಿ ಫಾರ್ ದಿ ಡೆವಿಲ್’, “ಜಲ್ಲಿಕಟ್ಟು’, “ದಿ ಐರನ್ ಬ್ರಿಡ್ಜ್’, “ಎಕೋ’, “ವರ್ಡಿಕ್ಟ್’ ಹೀಗೆ ಇನ್ನೂ ಅನೇಕ ಅದ್ಭುತ ಚಿತ್ರಗಳು ಚಿತ್ರೋತ್ಸವದ ಹೈಲೈಟ್ ಆಗಿವೆ.
ಇನ್ನು, ನಮ್ಮ ಕನ್ನಡದ “ಯಜಮಾನ’, “ಪ್ರೀಮಿಯರ್ ಪದ್ಮಿನಿ’, “ಅವನೇ ಶ್ರೀಮನ್ನಾರಾಯಣ’, “ಒಂದು ಶಿಕಾರಿಯ ಕಥೆ’, “ರಂಗನಾಯಕಿ’ ಚಿತ್ರಗಳೂ ಕೂಡ ಸಿನಿಪ್ರೇಮಿಗಳ ಮುಂದೆ ಬರಲಿವೆ. ವಿಶೇಷವೆಂದರೆ ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ಪಡೆದ ಕೊರಿಯನ್‌ನ “ಪ್ಯಾರಾಸೈಟ್’ ಭಾನುವಾರ ಕೂಡ ಪ್ರದರ್ಶನವಾಗುತ್ತಿದೆ. ಇವುಗಳ ಜೊತೆಯಲ್ಲಿ ಹಾಲಿವುಡ್‌ನ ಬ್ಲಾಕ್‌ಬಸ್ಟರ್ ಸಿನಿಮಾ “ದಿ ಲಯನ್ ಕಿಂಗ್’ ಚಿತ್ರದ ಮೇಕಿಂಗ್ ವೀಡಿ ಯೋ ಪ್ರದರ್ಶನವಿದೆ. ಡಿಜಿಟಲ್ ಸ್ಟ್ರೀಮಿಂಗ್, ಫಿಲಂ ಮೇಕಿಂಗ್ ಹಾಗೂ ಸೆನ್ಸಾರ್ ಅನಿಮಲ್ಸ್ ಸೇರಿದಂತೆ ಇನ್ನೂ ಅನೇಕ ವಿಷಯಗಳ ಬಗ್ಗೆ ಕಾರ್ಯಗಾರ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.