ಚಿಕ್ಕಮ್ಮನೊಂದಿಗೆ ಅಕ್ರಮ ಸಂಬಂಧ: ಆಸ್ತಿಗಾಗಿ ತಂದೆಯನ್ನೇ ಹತ್ಯೆ ಮಾಡಿದ ಮಗ
Team Udayavani, Mar 1, 2020, 5:32 PM IST
ವಿಜಯಪುರ: ಬಸವನಬಾಗೇವಾಡಿ ಪಟ್ಟಣದ ಶಿಕ್ಷಣ ಸಂಸ್ಥೆಯ ಮುಖ್ಯಸ್ಥನ ಹತ್ಯೆ ವಿಚಿತ್ರ ತಿರುವು ಪಡೆದಿದೆ. ವಿಲಕ್ಷಣ ಸಂಬಂವೊಂದು ಹೆತ್ತ ತನ್ನ ತಂದೆಯನ್ನೇ ಹತ್ಯೆ ಮಾಡುವ ಮಟ್ಟಕ್ಕೆ ಹೋಗಿದೆ.
ಅಪ್ಪನ ಎರಡನೇ ಪತ್ನಿ (ಚಿಕ್ಕಮ್ಮ) ಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಗ, ಆಸ್ತಿಗಾಗಿ ಚಿಕ್ಕಮ್ಮ, ಶಾಲೆಯ ಇಬ್ಬರು ಶಿಕ್ಷಕರು ಸೇರಿ ಐವರೊಂದಿಗೆ ತಂದೆಯನ್ನೇ ಹತ್ಯೆ ಮಾಡಿದ ಪ್ರಕರಣದಲ್ಲಿ ಇದೀಗ ಐವರು ಜೈಲುಪಾಲಾಗಿದ್ದಾರೆ.
ಬಸವನಬಾಗೇವಾಡಿ ಹೊರವಲಯದಲ್ಲಿ ಮಡಿವಾಳೇಶ್ವರ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದ ದಾಮು ನಾಯಕ ಫೆ.25 ರಂದು ಶಾಲೆಯಲ್ಲೇ ಹತ್ಯೆಯಾಗಿದ್ದ.
ತನ್ನ ಗಂಡನೊಂದಿಗೆ ಆಸ್ತಿಗಾಗಿ ಕಾನೂನು ಹೋರಾಟ ನಡೆಸಿರುವ ಎರಡನೇ ಪತ್ನಿ ಪ್ರೇಮಾ ಎಂಬವಳೇ ಈ ಹತ್ಯೆ ಮಾಡಿದ್ದಾಳೆ ಎಂದು ಮೊದಲ ಪತ್ನಿ ತಾರಾಬಾಯಿ ಪೊಲೀಸರಿಗೆ ದೂರು ನೀಡಿದ್ದಳು.
ಪ್ರಕರಣದ ತನಿಖೆಗೆ ಇಳಿದ ಪೊಲೀಸರಿಗೆ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿತ್ತು. ಹತ್ಯೆಯಾದ ದಾಮುನ ಮೊದಲ ಪತ್ನಿಯ ಮಗ ಹಾಗೂ ಎರಡನೇ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿಲಕ್ಷಣ ಸಂಬಂಧ ಹಾಗೂ ಆಸ್ತಿವಿವಾದದಿಂದ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ.
ಹತ್ಯೆಯಾದ ದಾಮು ಜೊತೆ ಆಸ್ತಿಗಾಗಿ ಜಗಳವಾಡಿದ್ದ ಎರಡನೇ ಪತ್ನಿ ಪ್ರೇಮಾ, ದಾಮು ನಾಯಕನ ಮೊದಲ ಪತ್ನಿಯ ಮಗ ಶುಭಾಶ್ ನೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದಳು. ಪರಿಣಾಮ ಚಿಕ್ಕಮ್ಮ ಪ್ರೇಮಾ ಜೊತೆ ಅಕ್ರಮ ಸಂಬಂಧವನ್ನೂ ಹೊಂದಿದ್ದ. ಇದಲ್ಲದೇ ವ್ಯಾಪಾರಕ್ಕಾಗಿ 50 ಲಕ್ಷ ರೂ. ಸಾಲ ಮಾಡಿಕೊಂಡು ಆಸ್ತಿಗಾಗಿ ತಂದೆಯೊಂದಿಗೆ ತಗಾದೆ ತೆಗೆದಿದ್ದ. ಅಂತಿಮವಾಗಿ ತಾನು ಅಕ್ರಮ ಸಂಬಂಧ ಹೊಂದಿದ್ದ ಚಿಕ್ಕಮ್ಮ, ತಮ್ಮ ಶಾಲೆಯಲ್ಲೇ ಕೆಲಸ ಮಾಡುತ್ತಿದ್ದ ಅವ್ವಣ್ಣ ಗ್ವಾತಗಿ, ಶಿವಣ್ಣ ಕೊಣ್ಣೂರ ಹಾಗೂ ಅಶೋಕ ಎಂಬ ಇನ್ನೊಬ್ಬನ ಜೊತೆ ಸೇರಿಕೊಂಡು ಮಗನೇ ತಂದೆಯನ್ನು ಹತ್ಯೆ ಮಾಡಿದ್ದ ಎಂಬುದನ್ನು ಬಂಧಿತ ಆರೋಪಿಗಳು ಬಾಯಿ ಬಿಟ್ಡಿದ್ದಾರೆ.
ಇಡೀ ಪ್ರಕರಣವನ್ನು ಕೂಲಂಕುಶವಾಗಿ ತನಿಖೆ ನಡೆಸಿ ಆರೋಪಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸುವಲ್ಲಿ ಯಶಸ್ವಿಯಾಗಿರುವ ಬಸವನಬಾಗೇವಾಡಿ ಸಿಪಿಐ ನೇತೃತ್ವ ಸೋಮಶೇಖರ ಜುಟ್ಟಲ ನೇತೃತ್ವದ ತಂಡಕ್ಕೆ ಎಸ್ಪಿ ಅನುಪಮ ಅಗರವಾಲ ಬಹುಮಾನ ಘೋಷಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.