“ಹುಲಿಯಾ-2’ಗೆ ದೇವರಾಜ್ ಕಥೆ
ಅಪ್ಪನ ಕಥೆಗೆ ಮಗ ಹೀರೋ
Team Udayavani, Mar 2, 2020, 7:04 AM IST
ಹುಲಿಯಾ – ದೇವರಾಜ್ ಅವರ ಕೆರಿಯರ್ನಲ್ಲಿ ಒಂದು ಹೊಸ ಬಗೆಯ ಸಿನಿಮಾವಾಗಿ ಗುರುತಿಸಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಯಾವುದೇ ನಟನಿಗಿರಲಿ, ಹೊಸ ಬಗೆಯ ಪಾತ್ರಗಳು ಆಗಾಗ ಕಾಡುತ್ತಲೇ ಇರುತ್ತದೆ. ಈಗ ದೇವರಾಜ್ ಅವರಿಗೂ ತಮ್ಮ “ಹುಲಿಯಾ’ ಚಿತ್ರ ಕಾಡಿದೆ. ಹಾಗಾಗಿಯೇ “ಹುಲಿಯಾ-2′ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹೌದು, ದೇವರಾಜ್ ಈಗ “ಹುಲಿಯಾ-2′ ಕನಸು ಕಂಡಿದ್ದಾರೆ. “ಹುಲಿಯಾ-2′ ಗಾಗಿ ಕಥೆ ಬರೆಯುತ್ತಿದ್ದಾರೆ.
ಈಗಾಗಲೇ ಕಥೆ ಅಂತಿಮ ಹಂತಕ್ಕೆ ಬಂದಿದೆ ಎನ್ನಲಾಗಿದೆ. ಎಲ್ಲಾ ಓಕೆ, “ಹುಲಿಯಾ-2′ ಚಿತ್ರದಲ್ಲಿ ದೇವರಾಜ್ ನಟಿಸುತ್ತಾರಾ ಅಥವಾ ನಿರ್ದೇಶನ ಮಾಡುತ್ತಾರಾ ಎಂದರೆ ಅದಕ್ಕೆ ಉತ್ತರ ಪ್ರಜ್ವಲ್ ದೇವರಾಜ್. ಹೌದು, ಪ್ರಜ್ವಲ್ ದೇವರಾಜ್ ಅವರನ್ನು ಗಮನದಲ್ಲಿಟ್ಟುಕೊಂಡು ದೇವರಾಜ್ “ಹುಲಿಯಾ-2′ ಕಥೆ ಬರೆಯುತ್ತಿದ್ದಾರೆ. ಈ ಮೂಲಕ ತನ್ನ ಕನಸನ್ನು ಮಗನ ಮೂಲಕ ನನಸು ಮಾಡಲು ಹೊರಟಿದ್ದಾರೆ. ಈ ಬಗ್ಗೆ ಮಾತನಾಡುವ ಪ್ರಜ್ವಲ್ ದೇವರಾಜ್, “ಅಪ್ಪ “ಹುಲಿಯಾ-2′ ಗಮನದಲ್ಲಿಟ್ಟುಕೊಂಡು ಕಥೆ ಬರೆಯುತ್ತಿದ್ದಾರೆ.
ಈಗಾಗಲೇ ಕಥೆ ಅಂತಿಮ ಹಂತಕ್ಕೂ ಬಂದಂತಿದೆ’ ಎನ್ನುವ ಪ್ರಜ್ವಲ್, ದೇವರಾಜ್ ಅವರೇ ನಿರ್ದೇಶನ ಮಾಡುವ ಸಾಧ್ಯತೆಯ ಬಗ್ಗೆಯೂ ಹೇಳಿದ್ದಾರೆ. “ಸದ್ಯಕ್ಕೆ ಕಥೆ ಬಿಟ್ಟರೆ ಬೇರೆ ಯಾವುದೂ ಅಂತಿಮವಾಗಿಲ್ಲ. ಅವರಿಗೆ ನಾನು ನಟಿಸಬೇಕೆಂಬ ಆಸೆ ಇರೋದು ನಿಜ. ನಿರ್ದೇಶನದ ಬಗ್ಗೆ ಇನ್ನೂ ಗೊತ್ತಿಲ್ಲ. ಅವರು ಮಾಡಿದರೂ ಮಾಡಬಹುದು’ ಎಂದಷ್ಟೇ ಹೇಳುತ್ತಾರೆ. ಸದ್ಯ ಪ್ರಜ್ವಲ್ ದೇವರಾಜ್ ಅವರ “ಇನ್ಸ್ಪೆಕ್ಟರ್ ವಿಕ್ರಂ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಈಗಾಗಲೇ ಆಡಿಯೋ ಬಿಡುಗಡೆಯಾಗಿದೆ.
ಈ ಚಿತ್ರದ ಬೆನ್ನಲ್ಲೇ “ಅರ್ಜುನ್ ಗೌಡ’ ಬರಲಿದೆ. ಈಗಾಗಲೇ ಬಿಡುಗಡೆಯಾಗಿರುವ “ಜಂಟಲ್ವುನ್’ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾದ ಬಗ್ಗೆ ಪ್ರಜ್ವಲ್ಗೆ ಖುಷಿ ಇದೆ. “ಜಂಟಲ್ವುನ್ ನನ್ನ ಕೆರಿಯರ್ನಲ್ಲಿ ಒಂದು ಹೊಸ ಬಗೆಯ ಪಾತ್ರ. ಜನ ಕೂಡಾ ಇಷ್ಟಪಟ್ಟು, ಮೆಚ್ಚುಗೆ ವ್ಯಕ್ತಪಡಿಸಿದರು’ ಎನ್ನುತ್ತಾರೆ ಪ್ರಜ್ವಲ್. ಸದ್ಯ ಪ್ರಜ್ವಲ್ ಕೈಯಲ್ಲಿ “ವೀರಂ’, ಪಿ.ಸಿ.ಶೇಖರ್ ಹಾಗೂ ರಾಮ್ ನಾರಾಯಣ್ ನಿರ್ದೇಶನದ ತಲಾ ಒಂದೊಂದು ಚಿತ್ರಗಳಿವೆ. ಈ ನಡುವೆಯೇ ಒಂದಷ್ಟು ಕಥೆಗಳು ಕೂಡಾ ಸರತಿಯಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.