ಪೆರಿಯಾ ಸಿ.ಎಚ್.ಸಿ.ಗೆ “ಕಾಯಕಲ್ಪ’ ಪುರಸ್ಕಾರ
Team Udayavani, Mar 2, 2020, 5:16 AM IST
ಕಾಸರಗೋಡು: 2019-20 ನೇ ಸಾಲಿನ “ಕಾಯಕಲ್ಪ’ ಪುರಸ್ಕಾರಗಳನ್ನು ಪ್ರಕಟಿಸಿದಾಗ ಜಿಲ್ಲೆಗೆ ಅಭಿಮಾನದ ನಿಮಿಷಗಳು. ಸಿ.ಎಚ್.ಸಿ. ವಿಭಾಗದಲ್ಲಿ ಪೆರಿಯ ಸಿ.ಎಚ್.ಸಿ. ಶೇ. 89.2 ಅಂಕ ಪಡೆದು ತೃತೀಯ ಸ್ಥಾನವನ್ನು ಪಡೆದು ಕೊಂಡಿದೆ. ಜಿಲ್ಲಾ ಮಟ್ಟದಲ್ಲಿ ಕರಿಂದಳಂ ಎಫ್.ಎಚ್.ಸಿ. ಶೇ. 97 ಅಂಕ ಪಡೆದು ಪ್ರಥಮ ಸ್ಥಾನ ಪಡೆಯಿತು.
ಪೆರಿಯ ಸಿ.ಎಚ್.ಸಿ. ಗೆ ಒಂದು ಲಕ್ಷ ರೂ., ಕರಿಂದಳಂ ಎಫ್.ಎಚ್.ಸಿ.ಗೆ ಎರಡು ಲಕ್ಷ ರೂ. ಪುರಸ್ಕಾರವಾಗಿ ಲಭಿಸಲಿದೆ. ಸರಕಾರಿ ಆಸ್ಪತ್ರೆಗಳ ಶುಚಿತ್ವ ಪಾಲನೆ, ಅನುಬಂಧ ನಿಯಂತ್ರಣ ಮೊದಲಾದವುಗಳನ್ನು ತಜ್ಞರ ತಂಡ ಪರಿಶೀಲಿಸಿ ಪುರಸ್ಕಾರಗಳನ್ನು ಘೋಷಿಸಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗಾಗಿ ಸ್ಪರ್ಧಿಸಿದ ಮುಳ್ಳೇರಿಯ ಎಫ್.ಎಚ್.ಸಿ. ಗೆ ದ್ವಿತೀಯ ಸ್ಥಾನ ಲಭಿಸಿದೆ. ಉದುಮ ಎಫ್.ಎಚ್.ಸಿ.ಗೆ ತೃತೀಯ ಸ್ಥಾನ ಲಭಿಸಿತು.
ಜಿಲ್ಲಾ ಮಟ್ಟದಲ್ಲಿ ನೇತೃತ್ವ ನೀಡುವ ಆರೋಗ್ಯ ಇಲಾಖೆ ಮತ್ತು ಆರೋಗ್ಯ ಕೇರಳ ಯೋಜನೆಯ ನೌಕರರು, ಪಂಚಾಯತ್ ಪ್ರತಿನಿಧಿಗಳು, ಮೆಡಿಕಲ್ ಆಫೀಸರ್‌ಗಳು, ನೌಕರರ ಒಗ್ಗಟ್ಟಿನ ಪರಿಶ್ರಮದಿಂದ ಜಿಲ್ಲೆಗೆ ಈ ಪುರಸ್ಕಾರಗಳು ಬಂದಿವೆ.
ಪೆರಿಯ ಸಿ.ಎಚ್.ಸಿ. ವಿಶೇಷ ಆಸ್ಪತ್ರೆಗೆ ಬರುವಾಗಲೇ ಉತ್ತಮ ಸುತ್ತು ಗೋಡೆ ಕಂಡು ಬರುತ್ತದೆ, ಸುತ್ತು ಗೋಡೆಗಳಲ್ಲಿ ರಚಿಸಿದ ಚಿತ್ರಗಳು, ಆಸ್ಪತ್ರೆಗೆ ಬರುವ ರೋಗಿಗಳಿಗೂ, ಅವರೊಂದಿಗೆ ಬರುವವರಿಗೆ ಕುಡಿಯಲು ಶುದ್ಧ ನೀರು ವ್ಯವಸ್ಥೆ, ಮಕ್ಕಳಿಗೆ ಪಾರ್ಕ್, ಹೂದೋಟ, ಟೈಲ್ಸ್ ಅಳವಡಿಸಿದ ಅತ್ಯಾಧುನಿಕ ಶೌಚಾ ಲಯ ಕೊಠಡಿಗಳು, ಮಕ್ಕಳಿಗೆ ಸ್ತನ್ಯಪಾನ ನೀಡಲು ಪ್ರತ್ಯೇಕ ಕೊಠಡಿ, ಅತ್ಯಾಧುನಿಕ ರೀತಿಯ ಪೀಠೊಪಕರಣಗಳ ವ್ಯವಸ್ಥೆ, ಟೋಕನ್ ವ್ಯವಸ್ಥೆ, ಲೈಬ್ರೆರಿ, ಟಿ.ವಿ. ವ್ಯವಸ್ಥೆ, ಎಕ್ಸ್‌ರೇ, ಇ.ಸಿ.ಜಿ, ದಂತ ಕ್ಲಿನಿಕ್ ಹೀಗೆ ವಿವಿಧ ಸೌಲಭ್ಯಗಳನ್ನು ಇಲ್ಲಿ ವ್ಯವಸ್ಥೆಗೊಳಿಸಲಾಗಿದೆ.
ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಆಸ್ಪತ್ರೆಯನ್ನು ನವೀಕರಿಸಲಾಗಿದೆ. ಈ ಆಸ್ಪತ್ರೆಗೆ ಹೊರ ರೋಗಿಗಳಾಗಿ ಪ್ರತಿದಿನ 600ಕ್ಕೂ ಅಧಿಕ ಮಂದಿ ತಲುಪುತ್ತಿದ್ದಾರೆ. 108 ನಂಬ್ರದ ಆ್ಯಂಬುಲೆನ್ಸ್ ಸೌಕರ್ಯವೂ ಇದೆ. ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ಫಿಸಿಯೋ ಥೆರಫಿ ಕೇಂದ್ರವೂ ಇಲ್ಲಿ ಕಾರ್ಯಾಚರಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.