ಶಂಕರನಾರಾಯಣ: ರಿಕ್ಷಾ ಚಾಲಕರಿಗಿಲ್ಲ ಸೂರು

ಬಿಸಿಲು, ಮಳೆಗೆ ದೇಹದಂಡನೆ: ಕೇಳುವವರಿಲ್ಲ ಇವರ ಗೋಳು

Team Udayavani, Mar 2, 2020, 5:23 AM IST

Rickshaw-Stand

ಕುಂದಾಪುರ: ಶಂಕರನಾರಾಯಣ ಬಸ್‌ ನಿಲ್ದಾಣ ಸುಸಜ್ಜಿತವಾಗಿ ನಿರ್ಮಾಣ ಗೊಂಡಿದ್ದರೂ ರಿಕ್ಷಾ ಸ್ಟ್ಯಾಂಡ್‌ ನಿಲ್ದಾಣದ ಸಮೀಪ ಇಲ್ಲದೆ ಚಾಲಕರು ಹಾಗೂ ಪ್ರಯಾಣಿಕರು ಪರದಾಡುವಂತೆ ಆಗಿದೆ. ದೂರದ ಊರಿಂದ ಸಾಮಾನು ಸರಂಜಾಮುಗಳೊಂದಿಗೆ ಇಳಿವ ಪ್ರಯಾಣಿಕರು, ಅಶಕ್ತರನ್ನು ಬಸ್‌ ನಿಲ್ದಾಣದಿಂದ ಹೊರಗಡೆ ಕೈ ಹಿಡಿದು ಲಗೇಜುಗಳನ್ನು ತಾವೇ ಎತ್ತಿಕೊಂಡು ರಿಕ್ಷಾಕ್ಕೆ ಹಾಕಿ ಮುಂದಕ್ಕೆ ಹೋಗಬೇಕಾದ ಪ್ರಮೇಯ ಶಂಕರನಾರಾಯಣ ರಿಕ್ಷಾ ಚಾಲಕರದ್ದು. ಕಾರಣ ಬಸ್‌ ನಿಲ್ದಾಣದ ಒಳಗೆ ರಿಕ್ಷಾಗಳಿಗೆ ಪ್ರವೇಶ ನಿರ್ಬಂಧ.

ರಿಕ್ಷಾಗಳೇ ವರದಾನ
ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ತಮ್ಮ ಮನೆಮಠಗಳನ್ನು ಬಿಟ್ಟು ದುಡಿಮೆಯ ಜತೆಗೆ ಮಾನವೀಯ ಮೌಲ್ಯಗಳೊಂದಿಗೆ ಜನಸೇವೆಯಲ್ಲಿ ತೊಡಗಿರುವವರು ರಿಕ್ಷಾ ಚಾಲಕರು. ಹಳ್ಳಿ ಹಳ್ಳಿಗಳಲ್ಲೂ ತಮ್ಮ ದುಡಿಮೆ ಬಾಡಿಗೆ ಜತೆಗೆ ಸ್ನೇಹ ಹಸ್ತವನ್ನು ಚಾಚುತ್ತಾ ಆಬಾಲ ವೃದ್ಧರು, ಶಾಲಾ ಮಕ್ಕಳು, ರೋಗಿಗಳು, ಅಂಗವಿಕಲರು, ಮಧ್ಯಮ ವರ್ಗ ದವರಿಗೆ ಇಂದು ರಿಕ್ಷಾಗಳೇ ವರದಾನ.

ರಿಕ್ಷಾ ತಂಗುದಾಣ ಇಲ್ಲ
ಜಿಲ್ಲೆಯ ಎಲ್ಲಾ ಕಡೆಯೂ ಜನಪ್ರತಿನಿಧಿಗಳ ಅನುದಾನದೊಂದಿಗೆ ಸುಸಜ್ಜಿತ ರಿಕ್ಷಾ ನಿಲ್ದಾಣವನ್ನು ಅಲ್ಲಲ್ಲಿ ನೋಡಿದರೆ, ಶಂಕರನಾರಾಯಣ ರಿಕ್ಷಾ ಚಾಲಕರಿಗೆ ಇನ್ನೂ ರಿಕ್ಷಾ ನಿಲ್ದಾಣದ ಭಾಗ್ಯ ಸಿಕ್ಕಿಲ್ಲ. ಬಿಸಿಲು, ಮಳೆ, ಸಿಡಿಲು ಬಂದಾಗ ಎಲ್ಲಾದರೂ ಮರಗಳ ನೆರಳು, ಮರದ ಗೆಲ್ಲಿನ ಅಡಿಯಲ್ಲಿ ನಿಂತು ಅಪಾಯದೊಂದಿಗೆ ಜೀವ ಹಾಗೂ ರಿಕ್ಷಾದ ರಕ್ಷಣೆ ಮಾಡಿಕೊಳ್ಳಬೇಕು ಎಂಬ ಪರಿಸ್ಥಿತಿಯಲ್ಲಿದ್ದಾರೆ.

ಶಂಕರನಾರಾಯಣದಲ್ಲಿ 32ಕ್ಕೂ ಹೆಚ್ಚು ಮಂದಿ ರಿಕ್ಷಾ ಚಾಲಕರಿದ್ದೇವೆ. ಇದರಲ್ಲಿ ಹೆಚ್ಚಿನವರು ಸಾಲ ಮಾಡಿ ಸ್ವಂತ ರಿಕ್ಷಾ ಹೊಂದಿದ್ದೇವೆ. ಇಲ್ಲಿಯವರೆಗೆ ನಮಗೆ ಯಾವುದೇ ಸೂರು (ನಿಲ್ದಾಣ) ಅನುದಾನ ಸರಕಾರದಿಂದ ಬಂದಿಲ್ಲ. ಪ್ರತಿ ರಿಕ್ಷಾದಿಂದ 15 ರೂ. ಶುಲ್ಕ ಗ್ರಾಮ ಪಂಚಾಯತ್‌ಗೆ ಸಲ್ಲಿಕೆ ಆಗು ತ್ತದೆ. ಚುನಾವಣೆ ಹತ್ತಿರ ಬಂದಾಗ ರಾಜಕೀಯ ಸೋಗಿನ ಕೆಲವು ಮಂದಿ ಮೀಟರ್‌ ಟೇಪ್‌ ತೆಗೆದು ಬಂದು ಅನು
ದಾನ ಬಂದಿದೆ, ಕೂಡಲೇ ರಿಕ್ಷಾನಿಲ್ದಾಣ ಆಗುತ್ತದೆ ಎಂದು ವಿವಿಧ ಕಡೆಗಳಲ್ಲಿ ಅಳತೆ ಮಾಡಿ ಮುಂದೆ ಮಾಯ ವಾಗುತ್ತಾರೆ ಎನ್ನುತ್ತಾರೆ ಇಲ್ಲಿನ ಚಾಲಕರು.

ಶಾಸಕರ ಗಮನಕ್ಕೆ ತರಲಾಗುವುದು
ಜಿಲ್ಲೆಯ ಎಲ್ಲ ಕಡೆ ಜನಪ್ರತಿನಿಧಿ ಗಳ ಅನುದಾನದೊಂದಿಗೆ ಜನಸೇವೆ ಮಾಡುವ “ಆಟೋ ರಾಜ’ ರಿಕ್ಷಾ ಚಾಲಕರಿಗೆ ನಿಲ್ದಾಣದ ಭಾಗ್ಯ ಇದೆ. ಶಂಕರನಾರಾಯಣಕ್ಕೆ ಅನುದಾನ ಯಾಕೆ ಬಂದಿಲ್ಲವೆಂದು ತಿಳಿದು ಬಂದಿಲ್ಲ. ಜಿಲ್ಲಾಡಳಿತ ಹಾಗೂ ಶಾಸಕರ ಗಮನಕ್ಕೆ ಶೀಘ್ರ ತರಲಾಗುವುದು ಎನ್ನುತ್ತಾರೆ ಶಂಕರನಾರಾಯಣ ತಾಲೂಕು ರಚನಾ ಹೋರಾಟ ಸಮಿತಿ ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ ಅವರು.

ನಮ್ಮ ಗೋಳು ಕೇಳುವವರಿಲ್ಲ
ಹಲವು ವರ್ಷಗಳಿಂದ 32 ಮಂದಿ ರಿಕ್ಷಾ ಚಾಲಕ – ಮಾಲಕರು ಶಂಕರನಾರಾಯಣ ಬಸ್‌ ನಿಲ್ದಾಣದ ಸಮೀಪ ಜೀವನೋಪಾಯಕ್ಕಾಗಿ ರಿಕ್ಷಾ ಇಟ್ಟು ಕೊಂಡಿದ್ದೇವೆ. ಪರ ಊರಿಗೆ ಹೋಗುವ , ಬರುವ ಪ್ರಯಾಣಿಕರ ಹಿತಾಸಕ್ತಿ ಎಷ್ಟೇ ರಾತ್ರಿಯಾದರೂ ಗಮನಿಸಲೇ ಬೇಕು. ಬಸ್‌ ನಿಲ್ದಾಣದ ಒಳಗೆ ನಮಗೆ ಪ್ರವೇಶವಿಲ್ಲ, ಹೊರಗಡೆ ಸೂಕ್ತ ಸೂರು ಇಲ್ಲ, ಬಸ್‌ ನಿಲ್ದಾಣದ ಹತ್ತಿರ ನಮಗೆ ಸೂರಿನ ವ್ಯವಸ್ಥೆ ಮಾಡಬೇಕು. ನಮ್ಮ ಗೋಳು ಕೇಳುವವರಿಲ್ಲವಾಗಿದೆ-ಶಂಕರ ಶೆಟ್ಟಿಗಾರ, ಅಧ್ಯಕ್ಷ, ರಿಕ್ಷಾ ಚಾಲಕ – ಮಾಲಕರ ಸಂಘ, ಶಂಕರನಾರಾಯಣ.

ನಿಲ್ದಾಣ ಕಲ್ಪಿಸಲಿ
ಬಿಸಿಲಿಗೆ ಮೈಯೊಡ್ಡಿ ಮಳೆಗಾಲದಲ್ಲಿ ಹಲವು ವರ್ಷಗಳಿಂದ ನೆನೆಯುತ್ತಿದ್ದೇವೆ. ಬಸ್‌ ನಿಲ್ದಾಣದ ಪಕ್ಕ ಶ್ರೀಕೃಷ್ಣ ಕಾಂಪ್ಲೆಕ್ಸ್‌ , ಸದಾಶಿವ ನಾಯಕ್‌ ಅಂಗಡಿ ಮಧ್ಯ 6 – 7 ರಿಕ್ಷಾ ನಿಲ್ಲಲು ಅನುಕೂಲವಿದೆ. ಸ್ಥಳೀಯ ಆಡಳಿತ ಪ್ರಯಾಣಿಕರ ಅನುಕೂಲ ಕೋಸ್ಕರ ನಮಗೆ ಸೂರು ಕಲ್ಪಿಸಿದರೆ ಬಸ್ಸಿನಿಂದ ಇಳಿಯುವ ಪ್ರಯಾಣಿಕರಿಗೆ ಅನುಕೂಲ ಆಗುತ್ತದೆ.ಈ ಬಗ್ಗೆ ಸ್ಥಳೀಯಾಡಳಿತ ಗಮನ ಹರಿಸಬೇಕು.
– ಮಹಾಬಲ ಕುಲಾಲ, ಗೌರವ ಅಧ್ಯಕ್ಷ
ರಿಕ್ಷಾ ಚಾಲಕ – ಮಾಲಕರ ಸಂಘ, ಶಂಕರನಾರಾಯಣ

ಜಿಲ್ಲೆಯ ಎಲ್ಲಾ ಕಡೆ ಜನಪ್ರತಿನಿಧಿಗಳ ಸಹಾಯದಿಂದ ಸುಸಜ್ಜಿತ ರಿಕ್ಷಾ ನಿಲ್ದಾಣ ಸ್ಥಾಪನೆಯಾಗಿದೆ. ಆದರೆ ಶಂಕರನಾರಾಯಣ ರಿಕ್ಷಾ ಚಾಲಕರಿಗೆ ಮಾತ್ರ ಈ ಭಾಗ್ಯವಿಲ್ಲ. ಇವರು ಮಳೆ, ಬಿಸಿಲಿಗೆ ಮರಗಳ ನೆರಳು, ಮರದ ಗೆಲ್ಲಿನ ಅಡಿಯಲ್ಲಿ ನಿಂತು ಅಪಾಯಕಾರಿಯಾಗಿ ತಮ್ಮ ಜೀವ ಮತ್ತು ರಿಕ್ಷಾವನ್ನು ರಕ್ಷಣೆ ಮಾಡಿಕೊಳ್ಳಬೇಕಾಗಿದೆ. ಆದ್ದರಿಂದ ಇಲ್ಲಿಯ ರಿಕ್ಷಾ ಚಾಲಕರಿಗೆ ಒಂದು ಸುಸಜ್ಜಿತ ರಿಕ್ಷಾ ನಿಲ್ದಾಣ ಕಲ್ಪಿಸಿಕೊಡುವುದು ಅಗತ್ಯ.

ಟಾಪ್ ನ್ಯೂಸ್

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್‌; ತಪ್ಪಿದ ಅನಾಹುತ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

sand

Bramavara: ಬೆಣ್ಣೆಕುದ್ರು; ಮರಳು ಅಕ್ರಮ ಸಾಗಾಟ

crime

Brahmavara: ಯಡ್ತಾಡಿ; ಬೈಕ್‌ ಅಪಘಾತ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

15

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್‌; ತಪ್ಪಿದ ಅನಾಹುತ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.