ಮಹಿಳಾ ಸ್ವಾವಲಂಬನೆಗೆ ಒತ್ತು ನೀಡಲು ಆರಂಭವಾದ ಸಂಸ್ಥೆ
ಅಚಾÉಡಿ ಹಾಲು ಉತ್ಪಾದಕರ ಸಹಕಾರಿ ಸಂಘ
Team Udayavani, Mar 2, 2020, 5:00 AM IST
ಊರಿನ ರೈತರು ಅದರಲ್ಲೂ ಮಹಿಳೆಯರ ಸ್ವಾವಲಂಬನೆ, ಉಪ ಉದ್ಯೋಗ ಸೃಷ್ಟಿಯ ಉದ್ದೇಶದೊಂದಿಗೆ ಹುಟ್ಟಿಕೊಂಡ ಸಂಸ್ಥೆ. ಇದರಿಂದಾಗಿ ಅನೇಕ ಹೈನುಗಾರರು ರೂಪುಗೊಂಡಿದ್ದು ಸಂಘವೂ ಸಾಧನೆಯ ಹಾದಿಯಲ್ಲಿದೆ.
ಕೋಟ: ಊರಿನ ರೈತ ಮಹಿಳೆಯರು ಸೇರಿದಂತೆ ಒಂದಷ್ಟು ಮಂದಿ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು ಎನ್ನುವ ಆಶಯದೊಂದಿಗೆ ಹುಟ್ಟಿಕೊಂಡ ಅಚ್ಲಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ ವರ್ಷಗಳ ಬಳಿಕ ಅತ್ಯುತ್ತಮ ಸಂಘವಾಗಿ ರೂಪು ಪಡೆದಿದೆ.
1991ರಲ್ಲಿ ಸ್ಥಾಪನೆ
1990ಕ್ಕೆ ಮೊದಲು ಊರಿನ ಐದಾರು ಕಿ.ಮೀ. ವ್ಯಾಪ್ತಿಯಲ್ಲಿ ಸಾೖಬ್ರಕಟ್ಟೆ, ಬನ್ನಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ ಹೊರತುಪಡಿಸಿ ಬೇರೆ ಹಾಲು ಸಂಘಗಳು ಇರಲಿಲ್ಲ ಮತ್ತು ಜನರಿಗೂ ಹೈನುಗಾರಿಕೆಯ ಕುರಿತು ಹೆಚ್ಚಿನ ಮಾಹಿತಿ ಇರಲಿಲ್ಲ. ಆಗ ಊರಿನ ಒಂದಷ್ಟು ಮಂದಿ ಯುವಕರು ಜತೆಯಾಗಿ ಹಾಲು ಉತ್ಪಾದಕರ ಸಂಘ ಸ್ಥಾಪಿಸುವ ನಿರ್ಧಾರ ಮಾಡಿದರು. ಅನಂತರ ಸಾೖಬ್ರಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಕೇಂದ್ರವೊಂದನ್ನು ಮಧುವನದಲ್ಲಿ ಸ್ಥಾಪಿಸಿದರು. ಒಂದು ವರ್ಷದ ಅನಂತರ ತಮ್ಮದೇ ಸ್ವಂತ ಡೈರಿಯೊಂದನ್ನು ಸ್ಥಾಪಿಸಬೇಕು ಎನ್ನುವ ಆಸೆಯೊಂದಿಗೆ 1991 ಜೂ.7ರಂದು ಕೆನರಾ ಮಿಲ್ಕ್ ಯೂನಿಯನ್ ಅಧೀನದಲ್ಲಿ 35 ಸದಸ್ಯರು ಹಾಗೂ 40 ಲೀ. ಹಾಲಿನೊಂದಿಗೆ ಅಚಾÉಡಿ ಹಾಲು ಉತ್ಪಾದಕರ ಸಹಕಾರಿ ಸಂಘ ಉದಯವಾಯಿತು.
ಸಂಘ ಸ್ಥಾಪನೆಗೆ ಶ್ರಮ
ಸ್ಥಳೀಯರಾದ ಕೆ.ಕುಶಲ ಶೆಟ್ಟಿ ಇದರ ಸ್ಥಾಪಕಾಧ್ಯಕರು ಹಾಗೂ ಮಂಜು ಮರಕಾಲ ಸ್ಥಾಪಕ ಕಾರ್ಯದರ್ಶಿ. ಸ್ಥಳೀಯರಾದ ಸತ್ಯನಾರಾಯಣ ಅಡಿಗ, ಮಧುವನ ಮಾಧವ ಹೆಗ್ಡೆ, ರಂಗನಾಥ ಅಡಿಗ, ರಾಮ ದಾಸ ಕಿಣಿ, ಬಿ.ಭೋಜ ಶೆಟ್ಟಿ, ಸುರೇಂದ್ರ ಶೆಟ್ಟಿ, ಸಂಸ್ಥೆಯ ಸ್ಥಾಪನೆಗೆ ಶ್ರಮಿಸಿದ್ದರು. 2006ರಲ್ಲಿ ಸ್ವಂತ ಕಟ್ಟಡ ನಿರ್ಮಿಸಲಾಯಿತು.
ಕೆಲವೇ ವರ್ಷದಲ್ಲಿ ಗ್ರಾಮೀಣ ಮಹಿಳೆಯರ ಸ್ವಾವಲಂಬನೆ ಹಾಗೂ ಉಪವೃತ್ತಿ ಸೃಷ್ಟಿಸಲು ಸಂಘಟನೆ ಯಶಸ್ವಿಯಾಗಿತ್ತು. ಸಂಘದ ಸದಸ್ಯರ ಸಂಖ್ಯೆ, ಹಾಲಿನ ಪ್ರಮಾಣದಲ್ಲೂ ಏರಿಕೆಯಾಗಿತ್ತು. ಮಹಿಳಾ ಸದಸ್ಯರೇ ಹೆಚ್ಚಿದ್ದು, ಹಣ ನೇರವಾಗಿ ಕೈ ಸೇರುತ್ತಿತ್ತು. ಈ ಮೂಲಕ ಇಲ್ಲಿನ ಮಹಿಳೆಯರಿಗೆ ಸ್ವಾವಲಂಬನೆಯ ದಾರಿ ತೋರಿತ್ತು.
ಸದ್ಯ 264ಮಂದಿ ಸದಸ್ಯರಿದ್ದು ದಿನಂಪ್ರತಿ 750 ಲೀ. ಹಾಲು ಸಂಗ್ರಹವಾಗುತ್ತಿದೆ. ಸಂಘದ ಪ್ರಸ್ತುತ ಅಧ್ಯಕ್ಷರಾಗಿ ಕೆ. ಸುರೇಂದ್ರ ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ಸಂತೋಷ ಪೂಜಾರಿ ಸೇವೆ ಸಲ್ಲಿಸುತ್ತಿದ್ದಾರೆ.
ಯೋಜನೆಗಳು
ಹಾಲು ಕರೆಯುವ ರಾಸು ಮರಣ ಹೊಂದಿದಾಗ ಸಾಂತ್ವನ ನಿಧಿಯಾಗಿ ಧಪನ ಸಂದರ್ಭ 2 ಸಾವಿರ ರೂ. ಸಂಘದ ವತಿಯಿಂದ ನೀಡಲಾಗುತ್ತಿದೆ. ಶೇ. 70ರಷ್ಟು ರಾಸುಗಳಿಗೆ ಜೀವವಿಮೆ ಮಾಡಿಸುವ ಮೂಲಕ ಉಡುಪಿ ತಾಲೂಕಿನಲ್ಲೇ ಅತೀ ಹೆಚ್ಚು ಜೀವ ವಿಮೆ ಹೊಂದಿದ ಸಂಘ ಎಂಬ ಕೀರ್ತಿಗೆ ಪಾತ್ರವಾಗಿದೆ. ಸರಕಾರದಿಂದ ಸಿಗುವ ಸಬ್ಸಿಡಿ ಹಣ ಶೇ.100ರಷ್ಟು ಹೈನುಗಾರರಿಗೆ ಕರಾರುವಕ್ಕಾಗಿ ಸೇರುವ ವ್ಯವಸ್ಥೆ ಮಾಡಲಾಗಿದೆ. ಮಕ್ಕಳಿಗೆ ವಿದ್ಯಾರ್ಥಿ ವೇತನ, ಶೈಕ್ಷಣಿಕ ಪ್ರೋತ್ಸಾಹ ಬಹುಮಾನಗಳನ್ನು ನೀಡಲಾಗುತ್ತಿದೆ.
ಪ್ರಶಸ್ತಿ
2015ನೇ ಸಾಲಿನಲ್ಲಿ ತಾಲೂಕು ಮಟ್ಟದ ಉತ್ತಮ ಸಂಘ ಎಂಬ ಪ್ರಶಸ್ತಿ, 2016ನೇ ಸಾಲಿನಲ್ಲಿ ತಾಲೂಕು ಮಟ್ಟದಲ್ಲಿ ಉತ್ತಮ ಗುಣಮಟ್ಟದ ಹಾಲು ಪೂರೈಕೆ ಮಾಡುವ ಸಂಸ್ಥೆ ಪ್ರಶಸ್ತಿ ದೊರೆತಿದೆ. ಜಿಲ್ಲಾ ಮಟ್ಟದ ಜಾನುವಾರು ಮೇಳಗಳಲ್ಲಿ ಸಂಘದ ಹೈನುಗಾರರ ಹಸುಗಳಿಗೆ ಬಹುಮಾನ ದೊರೆತಿದೆ.
ಹೈನುಗಾರರ ಶ್ರೇಯೋಭಿವೃದ್ಧಿಯ ದೃಷ್ಟಿಯಿಂದ ಸಂಘ ಕಾರ್ಯನಿರ್ವಹಿಸುತ್ತಿದೆ ಹಾಗೂ ಗುಣಮಟ್ಟ, ಸ್ವತ್ಛತೆಯ ಹಾಲು ಉತ್ಪಾದನೆಯಲ್ಲಿ ಯಾವುದೇ ರೀತಿಯ ರಾಜಿ ಇಲ್ಲದೆ ವ್ಯವಹರಿಸುತ್ತಿದೆ. ಸಂಘದ ಅಭಿವೃದ್ಧಿಯನ್ನು ಇದೇ ರೀತಿ ಮುಂದುವರಿಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ.
ಕೆ.ಸುರೇಂದ್ರ ಶೆಟ್ಟಿ, ಅಚ್ಲಾಡಿ
ಅಧ್ಯಕ್ಷರು
ಅಧ್ಯಕ್ಷರು
ಕೆ.ಕುಶಲ ಶೆಟ್ಟಿ, ಬಿ. ಭೋಜ ಶೆಟ್ಟಿ, ಗೋಪಾಲಕೃಷ್ಣ ಹೆಗ್ಡೆ, ಎ. ಚಂದ್ರಶೇಖರ್ ಶೆಟ್ಟಿ, ಸುರೇಂದ್ರ ಶೆಟ್ಟಿ (ಹಾ)
ಕಾರ್ಯದರ್ಶಿ
ಮಂಜು ಮರಕಾಲ, ಸಂತೋಷ ಪೂಜಾರಿ (ಹಾಲಿ )
-ರಾಜೇಶ್ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.