ರಥೋತ್ಸವದ ರಾಜಮಾರ್ಗಕ್ಕೆ ಭಕ್ತರಿಂದ ಮನೆ ದಾನ


Team Udayavani, Mar 2, 2020, 3:08 AM IST

rathotsava

ಜಮಖಂಡಿ: ಬಾಗಲಕೋಟೆ ಜಿಲ್ಲೆಯ ಜಮ ಖಂಡಿ ತಾಲೂಕಿನ ಮಧುರಖಂಡಿ ಗ್ರಾಮದ ಲ್ಲೀಗ ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಶ್ರೀ ಮಹಾಲಕ್ಷ್ಮಿ ರಥೋತ್ಸವ-ಜಾತ್ರೆಯ ಸಡಗರ. ಈ ಹಿನ್ನೆಲೆಯಲ್ಲಿ ರಥ ಸಾಗಲು ರಾಜಮಾರ್ಗ ನಿರ್ಮಾಣಕ್ಕೆ ಬಾಳಿ ಬದುಕುತ್ತಿದ್ದ ಮನೆ ಹಾಗೂ ಸ್ವಂತ ಜಾಗವನ್ನೇ ಬಿಟ್ಟು ಕೊಡುವ ಮೂಲಕ ಭಕ್ತರು ವಿಶಿಷ್ಟ ಭಕ್ತಿ ಮೆರೆದಿದ್ದಾರೆ.

ಈ ಗ್ರಾಮದ ಹೃದಯ ಭಾಗದಲ್ಲಿರುವ ವಿವಿಧ ಸಮುದಾಯದ 22 ಭಕ್ತರು ಅಂದಾಜು ಎರಡು ಕೋಟಿ ಮೌಲ್ಯದ ಆಸ್ತಿಯನ್ನು ದೇವಿಯ ರಥೋತ್ಸವ ಸಂಚಾರಕ್ಕೆ ಬಿಟ್ಟುಕೊಟ್ಟು ಮಾದರಿಯಾಗಿದ್ದಾರೆ. ಭಕ್ತರು ಬಿಟ್ಟುಕೊಟ್ಟಿರುವ ಈ ಜಾಗದಲ್ಲಿ ರಥದ ಸಂಚಾರಕ್ಕೆ ಅಂದಾಜು 550 ಅಡಿ ಉದ್ದ ಹಾಗೂ 23 ಅಡಿ ಅಗಲದ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.

ಕಿರಿದಾದ ರಸ್ತೆ ಬದಲಾಗಿ ಹೊಸದಾಗಿ ನಿರ್ಮಿ ಸುವ ರಾಜಮಾರ್ಗದಲ್ಲೇ ಶ್ರೀ ಮಹಾಲಕ್ಷ್ಮಿ ರಥವನ್ನು ಎಳೆಯುವ ಬಗ್ಗೆ ಗ್ರಾಮದ ಪ್ರಮು ಖರು 22 ಭಕ್ತರ ಮನವೊಲಿಸಿ, ಅವರ ಸ್ವಂತ ಜಾಗ ಹಾಗೂ ಮನೆಗಳನ್ನು ತೆರವುಗೊಳಿಸಿದ್ದಾರೆ. ಈ ಪೈಕಿ ಸಿದರಡ್ಡಿ ಕುಟುಂಬ, ದಾನೇಶ ಜಂಗಪ್ಪನವರ, ಮಹಾದೇವ ಜಂಗಪ್ಪನವರ, ಶಂಕರ ಜಂಗಪ್ಪನವರ, ಗೋವಿಂದ ಬೆಳಗಲಿ, ತಾಯವ್ವ ಕಳಸಣ್ಣಿ, ಬಸವರಾಜ ಮಾಳೇದ, ಶ್ರೀಶೈಲ ಮಾಳೇದ, ಶಿವಮೂರ್ತಯ್ಯ ಮಠಪತಿ ಮನೆತನದವರು ಪೂರ್ಣವಾಗಿ ಮನೆ ಮತ್ತು ಜಾಗ ಬಿಟ್ಟು ಕೊಟ್ಟಿದ್ದಾರೆ.

ಇನ್ನುಳಿದಂತೆ ಲಕ್ಷ್ಮಣ ಬಡಿಗೇರ, ನಾಗಲಿಂಗ ಬಡಿಗೇರ, ರಮೇಶ ಖೀಳೆಗಾವಿ, ಶಂಕರ ಮಾಳೇದ, ಮಲ್ಲು ಹಟ್ಟಿ, ಸಿದ್ದು ಮಾಳೇದ, ನಾಗರಾಜ ಬಿರಡಿ, ರೇವಣಪ್ಪ ಸಿದರಡ್ಡಿ, ಬೀರಲಿಂಗೇಶ್ವರ ದೇವಸ್ಥಾನ ಕಮೀಟಿ, ದೇವರಾಯ ಕುಟುಂಬ, ಪೈಟನದಾರ ಕುಟುಂಬ ಸಹಿತ ಇತರರು ಅರ್ಧಕ್ಕಿಂತ ಹೆಚ್ಚು ಸ್ವಂತ ಮನೆ, ಜಾಗ ಬಿಟ್ಟು ಕೊಟ್ಟಿದ್ದಾರೆ.

ಗ್ರಾಮದ ಆರಾಧ್ಯ ದೇವತೆ, ಶ್ರೀ ಮಹಾಲಕ್ಷ್ಮಿ ಜಾತ್ರೆ ವಿಶೇಷವಾಗಿದ್ದು, ಪ್ರತಿವರ್ಷ ಬನದ ಹುಣ್ಣಿಮೆ ನಂತರ ಬರುವ ಮಂಗಳವಾರ ಕಾರ್ತಿಕೋತ್ಸವ, ದೇವಿಗೆ ಉಡಿ ತುಂಬುವುದು, ಬುಧವಾರ ದೇವಿಯ ಪಲ್ಲಕ್ಕಿ ಉತ್ಸವ ಜರುಗುತ್ತದೆ. ಪೂರ್ವಜರಿಂದ ಆಚರಣೆಗೆ ಬಂದಂತೆ ಪ್ರತಿ 12 ವರ್ಷಕ್ಕೊಮ್ಮೆ ಬೃಹತ್‌ ರಥೋತ್ಸವ ನಡೆಯುತ್ತಿದ್ದು, ಯಾವುದೇ ಜಾತಿ, ಧರ್ಮ ಭೇದ-ಭಾವವಿಲ್ಲದೇ ನಿರಂತರವಾಗಿ ಒಂಬತ್ತು ದಿನಗಳವರೆಗೆ ಜಾತ್ರೆ ನಡೆಯುತ್ತಿದೆ.

ಪೂರ್ವಜರ ಕಾಲದಿಂದ ಐತಿಹಾಸಿಕ ಮಹಾಲಕ್ಷ್ಮಿ ಜಾತ್ರೆ ವೇಳೆ ರಥೋತ್ಸವಕ್ಕೆ ಕಿರಿದಾದ ರಸ್ತೆಯಿಂದ ತೊಂದರೆಯಾಗಿತ್ತು. ದೈವ ಮಂಡಳಿ ಕೂಡಿಕೊಂಡು ದೇವಸ್ಥಾನಕ್ಕೆ ರಾಜಮಾರ್ಗ ರಸ್ತೆ ನಿರ್ಮಾಣಕ್ಕೆ ಮನೆ, ಜಾಗ ತೆರವುಗೊಳಿಸಲು ತಿಳಿಸಿದರು. ದೇವಿಯ ರಥೋತ್ಸವಕ್ಕೆ ನಮ್ಮ ಪೂರ್ಣ ಮನೆ-ಜಾಗ ಬಿಟ್ಟುಕೊಟ್ಟಿದ್ದೇವೆ. ಸದ್ಯ ತೋಟದ ಮನೆಯಲ್ಲಿ ವಾಸವಾಗಿದ್ದೇವೆ. ಗ್ರಾಮದಲ್ಲಿ ಬೇರೆಡೆ ಸ್ಥಳ ನೀಡುವುದಾಗಿ ದೈವ ಮಂಡಳಿ ತಿಳಿಸಿದ್ದು, ರಥೋತ್ಸವ ರಾಜಮಾರ್ಗದಲ್ಲಿ ಸಾಗಲಿ ಎಂಬುದೇ ನಮ್ಮ ಆಶಯ.
-ಬಸವರಾಜ ಸಿದರಡ್ಡಿ, ಮನೆ ಬಿಟ್ಟುಕೊಟ್ಟ ಮಧುರಖಂಡಿ ಗ್ರಾಮಸ್ಥ

ಪೂರ್ವಜರ ಕಾಲದಿಂದಲೂ ಪ್ರತಿ 12 ವರ್ಷಕ್ಕೊಮ್ಮೆ ಮಹಾಲಕ್ಷ್ಮಿ ರಥೋತ್ಸವ ನಡೆಯುತ್ತಿದೆ. 1958ರಲ್ಲಿ ಲಭಿಸಿದ ಕಾಗದ ಪತ್ರದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ದೇವಿ ಜಾತ್ರೆಯ ಆಚರಣೆ ಬಗ್ಗೆ ದಾಖಲೆಗಳು ಲಭಿಸಿವೆ. ಯಾವುದೇ ಭೇದ-ಭಾವ ಇಲ್ಲದೇ ಗ್ರಾಮಸ್ಥರು ವಿಜೃಂಭಣೆಯಿಂದ ರಥೋತ್ಸವ ಆಚರಿಸಲಿದ್ದು, ರಥ ಸಾಗುವ ಕಿರಿದಾದ ಮಾರ್ಗವೀಗ ರಾಜಮಾರ್ಗವಾಗಿ ಬದಲಾಗುತ್ತಿದೆ.
-ಭಾಸ್ಕರ ಬಡಿಗೇರ, ಮಧುರಖಂಡಿ ಗ್ರಾಮದ ಪ್ರಮುಖರು

* ಮಲ್ಲೇಶ ಆಳಗಿ

ಟಾಪ್ ನ್ಯೂಸ್

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನು ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

19

New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.