ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶ
Team Udayavani, Mar 2, 2020, 7:00 AM IST
ಸಿಡ್ನಿ: ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳು “ಬಿ’ ವಿಭಾಗದಿಂದ ವನಿತಾ ಟಿ20 ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲಿಗೆ ಲಗ್ಗೆ ಹಾಕಿವೆ.
ರವಿವಾರ ಸಿಡ್ನಿಯಲ್ಲಿ ನಡೆದ ಪಂದ್ಯಗಳಲ್ಲಿ ಇವು ಕ್ರಮವಾಗಿ ಪಾಕಿಸ್ಥಾನ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಮಣಿಸಿ ನಾಕೌಟ್ ಪ್ರವೇಶಿಸಿದವು. ಪರಾಜಿತ ತಂಡಗಳೆರಡೂ ಕೂಟದಿಂದ ಹೊರಬಿದ್ದವು.
ಮೊದಲು ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 17 ರನ್ನುಗಳಿಂದ ಪಾಕಿಸ್ಥಾನವನ್ನು ಪರಾಭವಗೊಳಿಸಿತು. ಅನಂತರದ ಮುಖಾಮುಖೀಯಲ್ಲಿ ಇಂಗ್ಲೆಂಡ್ 46 ರನ್ನುಗಳಿಂದ ವೆಸ್ಟ್ ಇಂಡೀಸಿಗೆ ಬಿಸಿ ಮುಟ್ಟಿಸಿತು.
ಅಗ್ರಸ್ಥಾನದ ಗೌರವ ಯಾರಿಗೆ ಲಭಿಸುತ್ತದೆಂಬುದಷ್ಟೇ “ಬಿ’ ವಿಭಾಗದ ಕುತೂಹಲ. ಇಂಗ್ಲೆಂಡ್ ನಾಲ್ಕೂ ಲೀಗ್ ಪಂದ್ಯಗಳನ್ನು ಮುಗಿಸಿದ್ದು, ಮೂರನ್ನು ಗೆದ್ದು 6 ಅಂಕ ಹೊಂದಿದೆ. ದಕ್ಷಿಣ ಆಫ್ರಿಕಾ ಮೂರನ್ನೂ ಗೆದ್ದು 6 ಅಂಕ ಗಳಿಸಿದೆ. ಕೊನೆಯ ಪಂದ್ಯದಲ್ಲಿ ಅದು ವೆಸ್ಟ್ ಇಂಡೀಸ್ ವಿರುದ್ಧ ಆಡಬೇಕಿದೆ. ಗೆದ್ದರೆ ಅಗ್ರಸ್ಥಾನ ಅಲಂಕರಿಸಲಿದೆ.
ಪಾಕಿಸ್ಥಾನ ಮತ್ತು ವೆಸ್ಟ್ ಇಂಡೀಸ್ 3 ಪಂದ್ಯಗಳಲ್ಲಿ ಒಂದನ್ನಷ್ಟೇ ಗೆದ್ದಿವೆ. ಕೊನೆಯ ಮುಖಾಮುಖೀಯನ್ನು ಗೆದ್ದರೂ ಯಾವುದೇ ಲಾಭವಿಲ್ಲ. ಇದೇ ಮೊದಲ ಸಲ ವಿಶ್ವಕಪ್ ಆಡಲಿಳಿದ ಥಾಯ್ಲೆಂಡ್ ಮೂರನ್ನೂ ಸೋತಿದೆ.
ಆಫ್ರಿಕಾ ಅಜೇಯ ಓಟ
ಡೇನ್ ವಾನ್ ನೀಕರ್ಕ್ ನೇತೃತ್ವದ ದಕ್ಷಿಣ ಆಫ್ರಿಕಾ ರವಿವಾರ ಪಾಕಿಸ್ಥಾನವನ್ನು ಮಣಿಸಿ ಗೆಲುವಿನ ಹ್ಯಾಟ್ರಿಕ್ ಸಾಧಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಹರಿಣಗಳ ಪಡೆ 6 ವಿಕೆಟಿಗೆ 136 ರನ್ ಗಳಿಸಿದರೆ, ಪಾಕಿಸ್ಥಾನ 5 ವಿಕೆಟ್ ಉಳಿಸಿಕೊಂಡೂ 119 ರನ್ ಮಾಡಲಷ್ಟೇ ಶಕ್ತವಾಯಿತು.
ಶಬಿ°ಮ್ ಇಸ್ಮಾಯಿಲ್ (4-1-17-1), ಡೇನ್ ವಾನ್ ನೀಕರ್ಕ್ (4-0-17-1) ಬಿಗಿಯಾದ ದಾಳಿ ನಡೆಸಿ ಪಾಕ್ ವನಿತೆಯರನ್ನು ಕಟ್ಟಿಹಾಕಿದರು.
ಅಲಿಯಾ ರಿಯಾಜ್ (39) ಮತ್ತು ಇರಮ್ ಜಾವೇದ್ (17) 5.3 ಓವರ್ ನಿಭಾಯಿಸಿ ಮುರಿಯದ 6ನೇ ವಿಕೆಟಿಗೆ 47 ರನ್ ಮಾಡಿದರೂ ತಂಡವನ್ನು ದಡ ಮುಟ್ಟಿಸುವಲ್ಲಿ ವಿಫಲರಾದರು.
ದಕ್ಷಿಣ ಆಫ್ರಿಕಾ 17ಕ್ಕೆ 2 ವಿಕೆಟ್ ಕಳೆದುಕೊಂಡ ಬಳಿಕ ಚೇತರಿಸಿಕೊಂಡಿತು. ಲಾರಾ ವೋಲ್ವಾರ್ಡ್ ಅಜೇಯ 53 ರನ್ ಹೊಡೆದು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ವಿಂಡೀಸ್ 97 ಆಲೌಟ್
ದ್ವಿತೀಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ಅಮೋಘ ಪರಾಕ್ರಮ ಮೆರೆಯಿತು. ಮೊದಲು ಬ್ಯಾಟಿಂಗ್ ನಡೆಸಿದ ಹೀತರ್ ನೈಟ್ ಬಳಗ 5 ವಿಕೆಟಿಗೆ 143 ರನ್ ಗಳಿಸಿದರೆ, ವಿಂಡೀಸ್ 17.1 ಓವರ್‌ಗಳಲ್ಲಿ 97ಕ್ಕೆ ಕುಸಿದು 46 ರನ್ನುಗಳ ಸೋಲಿಗೆ ತುತ್ತಾಯಿತು.
ಸೋಫಿ ಎಕ್Éಸ್ಟೋನ್ 7 ರನ್ನಿಗೆ 3 ವಿಕೆಟ್ ಉಡಾಯಿಸಿ ಕೆರಿಬಿಯನ್ನರಿಗೆ ಏಳYತಿ ಇಲ್ಲದಂತೆ ಮಾಡಿದರು. ಸಾರಾ ಗ್ಲೆನ್ 16 ರನ್ ನೀಡಿ 2 ವಿಕೆಟ್ ಕಿತ್ತರು. 20 ರನ್ ಮಾಡಿದ ಲೀ ಆ್ಯನ್ ಕಿರ್ಬಿ ಅವರದೇ ವಿಂಡೀಸ್ ಸರದಿಯ ಗರಿಷ್ಠ ಗಳಿಕೆ.
ಇಂಗ್ಲೆಂಡ್ ಪರ 57 ರನ್ ಬಾರಿಸಿದ ನಥಾಲಿ ಶೀವರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಡೇನಿಯಲ್ ವ್ಯಾಟ್ 29, ಆ್ಯಮಿ ಎಲೆನ್ ಜೋನ್ಸ್ ಅಜೇಯ 23 ರನ್ ಮಾಡಿದರು.
ಆಸೀಸ್-ಕಿವೀಸ್: ಸೆಮಿಫೈನಲ್ ಲಕ್ ಯಾರಿಗೆ?
“ಎ’ ವಿಭಾಗದಲ್ಲಿ ನಾಲ್ಕೂ ಪಂದ್ಯಗಳನ್ನು ಗೆದ್ದ ಭಾರತ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. ಇನ್ನೊಂದು ಸ್ಥಾನಕ್ಕಾಗಿ ಆತಿಥೇಯ ಆಸ್ಟ್ರೇಲಿಯ ಹಾಗೂ ನ್ಯೂಜಿಲ್ಯಾಂಡ್ ನಡುವೆ ಪೈಪೋಟಿ ಇದೆ. ಎರಡೂ ತಂಡಗಳು 3 ಪಂದ್ಯಗಳಲ್ಲಿ ಎರಡನ್ನು ಗೆದ್ದು 6 ಅಂಕ ಗಳಿಸಿವೆ. ರನ್‌ರೇಟ್‌ನಲ್ಲಿ ಆಸೀಸ್ ಮುಂದಿದೆ.
ಸೋಮವಾರ ಈ ತಂಡಗಳು ಮೆಲ್ಬರ್ನ್ನಲ್ಲಿ ಮುಖಾಮುಖೀ ಆಗಲಿವೆ. ಗೆದ್ದ ತಂಡ “ಎ’ ವಿಭಾಗದ ದ್ವಿತೀಯ ಸ್ಥಾನಿಯಾಗಿ ಉಪಾಂತ್ಯ ತಲುಪಲಿದೆ. ಈ ಅದೃಷ್ಟ ಯಾರಿಗಿದೆ ಎಂಬುದೊಂದು ಕುತೂಹಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.