ಇಸ್ಲಾಂನಲ್ಲಿ ಅಶಾಂತಿಗೆ ಸ್ಥಾನವಿಲ್ಲ: ಸೈಯದ್ ಜೈನುಲ್ ಆಬಿದೀನ್ ಅಲಿ ಖಾನ್
Team Udayavani, Mar 2, 2020, 1:12 PM IST
ಜೈಪುರ: ಸಮಾಜದ ಶಾಂತಿಗೆ ಧಕ್ಕೆ ತರುವಂತಹ ಯಾವುದೇ ಅಂಶಗಳನ್ನು ಇಸ್ಲಾಂ ಬೋಧಿಸುವುದಿಲ್ಲ ಎಂದು ರಾಜಸ್ಥಾನದ ಅಜ್ಮೇರ್ ದರ್ಗಾದ ದಿವಾನ್ ಸೈಯದ್ ಜೈನುಲ್ ಆಬಿದೀನ್ ಅಲಿ ಖಾನ್ ಹೇಳಿದ್ದಾರೆ. ಶಾಂತಿ ಮತ್ತು ಸಕಾರಾತ್ಮಕತೆಯು ಪ್ರಗತಿಗೆ ಮೂಲಾಧಾರವಾಗಿದ್ದು, ಇಸ್ಲಾಂ ಧರ್ಮದಲ್ಲಿ ಅಶಾಂತಿಗೆ ಸ್ಥಾನವೇ ಇಲ್ಲ.
ಅಲ್ಲದೆ ಹಿಂಸೆಯಿಂದ ಯಾವುದೇ ಸಮಸ್ಯೆಯ ಪರಿಹಾರ ಸಾಧ್ಯವಿಲ್ಲ. ಹೀಗಾಗಿ ರಾಜಕೀಯ ದುರುದ್ದೇಶ ಮತ್ತು ಸ್ವಾರ್ಥಕ್ಕಾಗಿ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುವ ಮತ್ತು ಸಮುದಾಯವನ್ನು ತಪ್ಪು ದಾರಿಗೆ ಎಳೆಯುವ ದುಷ್ಟಶಕ್ತಿಗಳ ಬಗ್ಗೆ ಸಾರ್ವಜನಿಕರು ಸದಾ ಎಚ್ಚರದಿಂದ ಇರಬೇಕು ಎಂದು ಆಬಿದೀನ್ ಅವರು ಮನವಿ ಮಾಡಿದ್ದಾರೆ.
ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಹಸನ್ ಚಿಸ್ತಿ ದರ್ಗಾದ 808ನೇ ಉರೂಸ್ ಆರಂಭವಾಗಿರುವ ಹಿನ್ನೆಲೆಯಲ್ಲಿ, ಅಲ್ಲಿಗೆ ಆಗಮಿಸಿದ್ದ ಭಕ್ತರನ್ನು ಉದ್ದೇಶಿಸಿ ಅವರು ಈ ಮಾತುಗಳನ್ನಾಡಿದ್ದಾರೆ.
ಇದೇ ವೇಳೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಅಜ್ಮೇರ್ ದರ್ಗಾಗೆ ರವಿವಾರ ಚಾದರವನ್ನು ಸಮರ್ಪಿಸಿದ್ದಾರೆ. ಅವರ ಪರವಾಗಿ ಕಾಂಗ್ರೆಸ್ ಹಿರಿಯ ನಾಯಕರಾದ ಸಿಎಂ ಅಶೋಕ್ ಗೆಹ್ಲೋಟ್, ಡಿಸಿಎಂ ಸಚಿನ್ ಪೈಲಟ್ ಚಾದರ ಹಸ್ತಾಂತರಿಸಿದ್ದಾರೆ. ಇತ್ತೀಚೆಗೆ ಪ್ರಧಾನಿ ಮೋದಿ ಅವರೂ ದರ್ಗಾಗೆ ಚಾದರ ಅರ್ಪಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
Nagpur: ರಾಹುಲ್ ಕಾರ್ಯಕ್ರಮದಲ್ಲಿ ಖಾಲಿ ಸಂವಿಧಾನ ಪುಸ್ತಕ ಹಂಚಿಕೆ: ಬಿಜೆಪಿ ಆರೋಪ
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
MUST WATCH
ಹೊಸ ಸೇರ್ಪಡೆ
MUDA CASE: ಸಿಎಂ, ಪತ್ನಿಗೆ ಇ.ಡಿ. ನೋಟಿಸ್?
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
Congress Gurantee: ಗೃಹಜ್ಯೋತಿ: 3 ತಿಂಗಳಲ್ಲಿ 85 ಸಾವಿರ ಗ್ರಾಹಕರಿಂದ “ರಿ-ಲಿಂಕ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.