ಸ್ಚಚ್ಛತೆ ಮರೆತ ಕಾರಟಗಿ ಪುರಸಭೆ
Team Udayavani, Mar 2, 2020, 4:09 PM IST
ಕಾರಟಗಿ: ಸ್ಚಚ್ಛತೆಗೆ ಆದ್ಯತೆ ನೀಡಿ ಎಂದು ದಿನನಿತ್ಯ ಪಟ್ಟಣದ ಜನತೆಗೆ ತಿಳಿಹೇಳುವ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಕಚೇರಿಯಲ್ಲೇ ಸ್ಚಚ್ಛತೆ ಕಾಪಾಡುವುದನ್ನು ಮರೆತಿದ್ದಾರೆ.
ಹೌದು. ಪುರಸಭೆ ಕಚೇರಿ ಹಿಂಬದಿಯಲ್ಲಿ ಸಿಬ್ಬಂದಿಗಾಗಿ ನಿರ್ಮಿಸಿದ ಶೌಚಾಲಯ, ಮೂತ್ರಾಲಯದ ನೀರು ಒಳಚರಂಡಿ ಸೇರುತ್ತಿಲ್ಲ. ಶೌಚಾಲಯಗಳ ಕೊಳಚೆ ನೀರು ಕಚೇರಿ ಹಿಂಬದಿಯಲ್ಲಿ ಮಡುಗಟ್ಟಿ ನಿಂತ್ತಿದ್ದು, ಸುತ್ತಲಿನ ಪರಿಸರದಲ್ಲಿ ದುರ್ವಾಸನೆ ಬೀರುತ್ತಿದೆ. ಅಲ್ಲದೇ ಮಡುಗಟ್ಟಿ ನಿಂತ ನೀರು ತಗ್ಗು ಪ್ರದೇಶಗಳಲ್ಲಿ ಸಂಗ್ರಹವಾಗುತ್ತಿದ್ದು, ಖಾಸಗಿ ನಿವೇಶನಗಳಿಗೆ ತೆರಳುವ ರಸ್ತೆಗೆ ತಲುಪಿದೆ. ಶೌಚಾಲಯದ ಕೊಳಚೆ ನೀರು ಚರಂಡಿಗೆ ಸೇರುವಂತೆ ಅಥವಾ ಇಂಗು ಗುಂಡಿ ವ್ಯವಸ್ಥೆಯನ್ನೂ ಮಾಡಿಲ್ಲ.
ನಿತ್ಯ ಬಳಕೆ ಮಾಡಿದ ನೀರು ನೇರವಾಗಿ ನೆಲಕ್ಕೆ ಬಿದ್ದು ರಸ್ತೆಗೆ ಹರಿಯುತ್ತಿದೆ. ಕೊಳಚೆ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳು ಇವೆ. ಅಲ್ಲದೇ ದುರ್ವಾಸನೆ ಅಸಹನೀಯ ಎನಿಸಿದೆ. ಕಚೇರಿ ಹಿಂದಿರುವ ಖಾಸಗಿ ನಿವೇಶನಗಳನ್ನು ಸುತ್ತಮುತ್ತಲಿನ ಜನ ಬಯಲು ಶೌಚಾಲಯಕ್ಕೆ ಬಳಸುತ್ತಿದ್ದಾರೆ.
ಪುರಸಭೆ ಕಚೇರಿಯ ಹಿಂಬದಿಯಲ್ಲಿ ಹಲವು ಮನೆಗಳು ನಿರ್ಮಾಣವಾಗಿವೆ. ಆದರೆ ಬೆಳಗಿನ ಜಾವ ಹಾಗೂ ಸಂಜೆ ಕತ್ತಲಾದ ನಂತರ ಮಹಿಳೆಯರು ಶೌಚಕ್ಕೆ ತೆರಳುತ್ತಿದ್ದಾರೆ. ಇದೆಲ್ಲ ಪುರಸಭೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ತಿಳಿದಿದ್ದರು ಕೂಡ ಕಚೇರಿ ಸುತ್ತಲಿನ ಪರಿಸರ ಸ್ವತ್ಛತೆಗೆ ಆದ್ಯತೆ ನೀಡುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ. ಪಟ್ಟಣದ 21ನೇ ವಾರ್ಡ್ ವ್ಯಾಪ್ತಿಯಲ್ಲಿರುವ ಪುರಸಭೆ ಸದಸ್ಯರು ಕಾರಟಗಿ ಪುರಸಭೆಯ ಪ್ರಥಮ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದಾರೆ. ಆದರು ಕೂಡ ವಾರ್ಡ್ ಸ್ಚಚ್ಛತೆಯ ಬಗ್ಗೆ ಗಮನಹರಿಸಿಲ್ಲ ಎನ್ನುತ್ತಾರೆ ವಾರ್ಡ್ ಜನತೆ. ಕೊಳಚೆ ನೀರು ರಸ್ತೆಗೆ ಹರಿಬಿಡಬೇಡಿ ಎಂದು ಹೇಳುವ ಪುರಸಭೆ ಸಿಬ್ಬಂದಿ ತಮ್ಮ ಕಚೇರಿಯಲ್ಲಿ ಸ್ಚಚ್ಛತೆಗೆ ಮೊದಲ ಆದ್ಯತೆ ನೀಡಿ, ನಂತರ ಸಾರ್ವಜನಿಕರಲ್ಲಿ ಸ್ವತ್ಛತೆ ಕುರಿತು ಅರಿವು ಮೂಡಿಸಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪುರಸಭೆಗೆ ಸಂಬಂಧಿಸಿದ ಶೌಚಾಲಯಗಳ ಕೊಳಚೆ ನೀರು ಹರಿಬಿಡದಂತೆ ಅಗತ್ಯ ಕ್ರಮಕೈಗೊಳ್ಳಲು ಸಿಬ್ಬಂದಿಗೆ ಹಲವಾರು ಬಾರಿ ಸೂಚಿಸಿದ್ದೇನೆ. ಆದರೂ ಕೂಡ ಸಿಬ್ಬಂದಿ ನಿರ್ಲಕ್ಷತನದಿಂದ ಪರಿಸರ ಹಾಳಾಗುತ್ತಿದೆ. – ಅನ್ನಪೂರ್ಣಮ್ಮ ಬೂದಿ, ಪುರಸಭೆ ಮಾಜಿ ಅಧ್ಯಕ್ಷ
ಪುರಸಭೆ ಹಿಂಬದಿಯಲ್ಲಿ ನಿರ್ಮಾಣವಾದ ಕೊಳಚೆ ಪುರಸಭೆಯ ಶೌಚಾಲಯಗಳದ್ದಲ್ಲ, ಆ ಬಗ್ಗೆ ನನಗೆ ಗೊತ್ತಿಲ್ಲ. ಅಲ್ಲಿ ನೀರು ಎಲ್ಲಿಂದ ಬರುತ್ತಿದೆಯೋ ನಮಗೆ ಗೊತ್ತಿಲ್ಲ. ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಲು ಪುರಸಭೆ ಸಿಬ್ಬಂದಿಗೆ ಸೂಚಿಸುತ್ತೇನೆ. – ಅಕ್ಷತಾ, ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕಿ
-ದಿಗಂಬರ ಕುರಡೇಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್ & ಕ್ಲಬ್ ಹೊರಗೆ ಬಾಂ*ಬ್ ಸ್ಪೋ*ಟ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.