ಲಿಂಗನದೊಡ್ಡಿಗೆ ಬೇಕಿದೆ ಮೂಲ ಸೌಲಭ್ಯ

ಗ್ರಾಮಕ್ಕಿಲ್ಲ ವಾಹನ ಸೌಕರ್ಯ | ನೀರಿನ ಸಮಸ್ಯೆಗಿಲ್ಲ ಪರಿಹಾರ | ಎಸ್ಟಿ ಜನಾಂಗ ವಾಸಿಸುವ ಗ್ರಾಮದತ್ತ ಕಣ್ಣು ಹಾಯಿಸದ ಶಾಸಕರು

Team Udayavani, Mar 2, 2020, 4:47 PM IST

2-March-25

ದೇವದುರ್ಗ: ತಾಲೂಕಿನ ಕೊತ್ತದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗನದೊಡ್ಡಿ ಮೂಲ ಸೌಲಭ್ಯವಂಚಿತ ಕುಗ್ರಾಮವಾಗಿದೆ. ಗ್ರಾಮಕ್ಕೆ ಬಸ್‌, ವಿದ್ಯುತ್‌ ಸೌಕರ್ಯ, ಸಮರ್ಪಕ ರಸ್ತೆ, ಚರಂಡಿ ಸೌಲಭ್ಯಗಳ ಕೊರತೆ ಮಧ್ಯೆ ಗ್ರಾಮಸ್ಥರು ಜೀವನ ದೂಡುವಂತಾಗಿದೆ.

ಲಿಂಗನದೊಡ್ಡಿ ಗ್ರಾಮದಲ್ಲಿ ಇಲ್ಲಿರುವವರೆಲ್ಲ ಮೂಲತಃ ಕೊತ್ತದೊಡ್ಡಿ ಗ್ರಾಮದವರು. ಹಿರಿಯರ ಭೂಮಿಗಳು ಇಲ್ಲಿರುವುದರಿಂದ ಲಿಂಗನದೊಡ್ಡಿಯಲ್ಲೇ 30 ಕುಟುಂಬಗಳು ವಾಸಿಸುತ್ತಿದ್ದು, ಸುಮಾರು 200 ಜನರಿದ್ದಾರೆ. ಇವರ ಮೂಲ ಕಾಯಕ ಕೃಷಿಯೇ ಆಗಿದೆ. ಆರೇಳು ಕುಟುಂಬಗಳಿಗೆ ಮಾತ್ರ ಆಸರೆ ಯೋಜನೆಯಡಿ ಮನೆ ಲಭಿಸಿವೆ. ಉಳಿದವರು ಗುಡಿಸಲಲ್ಲೇ ವಾಸಿಸುತ್ತಿದ್ದಾರೆ. ಗ್ರಾಮಸ್ಥರು ನಿತ್ಯದ ಗೃಹ ಬಳಕೆ ವಸ್ತು ಖರೀದಿಗೆ ಅರಕೇರಾ ಗ್ರಾಮದಲ್ಲಿ ನಡೆಯುವ ವಾರದ ಸಂತೆಗೆ ತೆರಳಬೇಕು. ಆದರೆ ಬಸ್‌ ಸೌಕರ್ಯ ಇಲ್ಲದ್ದರಿಂದ ಸಮಸ್ಯೆ ಎದುರಿಸುತ್ತಿದ್ದಾರೆ.

ಬತ್ತಿದ ಬೋರ್‌: ಗ್ರಾಮದಲ್ಲಿ ಬೋರವೆಲ್‌ ಇದ್ದು, ಅಂತರ್ಜಲ ಬತ್ತಿದ್ದರಿಂದ ನಿರುಪಯುಕ್ತವಾಗಿದೆ. ಹೀಗಾಗಿ ಗ್ರಾಮಸ್ಥರು ಜಮೀನಿನಲ್ಲಿರುವ ಕೊಳವೆಬಾವಿಗಳನ್ನೇ ಆಶ್ರಯಿಸುವಂತಾಗಿದೆ. ಅದೂ ವಿದ್ಯುತ್‌ ಇದ್ದಾಗ ಮಾತ್ರ ನೀರು, ಇಲ್ಲದಿದ್ದರೆ ನೀರು ಸಿಗದೇ ಗ್ರಾಮಸ್ಥರು ಪರದಾಡುವಂತಾಗುತ್ತದೆ. ನೀರಿನ ಸಮಸ್ಯೆ ಕುರಿತು ಸರ್ಕಾರಿ ಶಾಲೆ ಶಿಕ್ಷಕಿ, ಅಂಗನವಾಡಿ ಕಾರ್ಯಕರ್ತೆಯರು ತಾಲೂಕು ಪಂಚಾಯಿತಿ ಮತ್ತು ಕೊತ್ತದೊಡ್ಡಿ ಗ್ರಾಪಂ ಗಮನಕ್ಕೆ ತಂದರೂ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಎಸ್‌ಟಿ ಮೀಸಲು ಕ್ಷೇತ್ರ: ದೇವದುರ್ಗ ವಿಧಾನಸಭಾ ಎಸ್‌ಟಿ ಮೀಸಲು ಕ್ಷೇತ್ರವಾಗಿದೆ. ಲಿಂಗನದೊಡ್ಡಿ ಗ್ರಾಮದಲ್ಲಿ ನೆಲಿಸಿದ 30 ಕುಟುಂಬಗಳು ವಾಲ್ಮೀಕಿ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಲಿಂಗನದೊಡ್ಡಿಯಲ್ಲಿನಯಿಂದ ಶಾಸಕ ಕೆ. ಶಿವನಗೌಡ ನಾಯಕ ಅವರ ಸ್ವಗ್ರಾಮ ಅರಕೇರಾ ಆರೇಳು ಕಿ.ಮೀ. ಅಂತರದಲ್ಲಿದೆ. ಆದರೆ ಶಾಸಕರು ಒಮ್ಮೆಯೂ ಈ ಗ್ರಾಮದತ್ತ ಕಣ್ಣೆತ್ತಿ ನೋಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಸೌಲಭ್ಯಗಳು ಮರೀಚಿಕೆ: ಅರಕೇರಾ ಗ್ರಾಮಕ್ಕೆ ಹೋಗುವ ಮಾರ್ಗ ಕೆ.ಹನುಮಂತ್ರಾಯ ನಗರದ ಪಕ್ಕದಿಂದಲೇ ಲಿಂಗನದೊಡ್ಡಿ ಗ್ರಾಮಕ್ಕೆ ಹೋಗಬೇಕು. ಈ ರಸ್ತೆ ಕಚ್ಚಾ ರಸ್ತೆಯಾಗಿದೆ. ಹೀಗಾಗಿ ಗ್ರಾಮಕ್ಕೆ ಬಸ್‌, ಟಂಟಂ, ಇತರೆ ವಾಹನಗಳು ಕೂಡ ಬರುತ್ತಿಲ್ಲ. ಕುಡಿವ ನೀರಿನ ಸಮಸ್ಯೆ ತೀವ್ರವಾಗಿದೆ. ಗ್ರಾಮದಲ್ಲಿ ಶೌಚಾಲಯ ಇಲ್ಲದ್ದರಿಂದ ಬಯಲನ್ನೇ ಆಶ್ರಯಿಸುವಂತಾಗಿದೆ.

ಪಡಿತರ ಆಹಾರಧಾನ್ಯಕ್ಕಾಗಿ, ಮತದಾನಕ್ಕಾಗಿ ಗ್ರಾಮಸ್ಥರು ಗ್ರಾಪಂ ಕೇಂದ್ರ ಕೊತ್ತದೊಡ್ಡಿಗೆ ಹೋಗಬೇಕು. ಯಾವುದೇ ವಾಹನಗಳ ಸೌಲಭ್ಯವಿಲ್ಲದೇ ನಡೆದುಕೊಂಡೇ ಹೋಗಬೇಕಿದೆ.

ಶಾಲೆ, ಅಂಗನವಾಡಿ: ಲಿಂಗನದೊಡ್ಡಿ ಗ್ರಾಮದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇದ್ದು, 1ರಿಂದ 5ನೇ ತರಗತಿವರೆಗೆ 47 ಮಕ್ಕಳಿದ್ದಾರೆ. ಅಂಗನವಾಡಿ ಕೇಂದ್ರವಿದೆ. ಲಿಂಗನದೊಡ್ಡಿ ಶಾಲೆಗೆ ಸಮೀಪದ ಮಲ್ಲೇದೇವರಗುಡ್ಡ ಗ್ರಾಮದಿಂದ 20ಕ್ಕೂ ಹೆಚ್ಚು ಮಕ್ಕಳು ಬರುತ್ತಾರೆ. ಇವರು ಗುಡ್ಡಗಾಡಿನಲ್ಲಿ ಕಚ್ಚಾ ರಸ್ತೆಯಲ್ಲೇ ಒಂದೂವರೆ ಕಿ.ಮೀ. ನಡೆದುಕೊಂಡು ಶಾಲೆಗೆ ಬರಬೇಕಿದೆ. ಕ್ಷೇತ್ರದ ಶಾಸಕರು ಇನ್ನಾದರೂ ಲಿಂಗದೊಡ್ಡಿ ಗ್ರಾಮದಲ್ಲಿ ಸೌಲಭ್ಯ ಕಲ್ಪಿಸಲು ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬೋರ್‌ವೆಲ್‌ ಕೆಟ್ಟು ಹೋಗಿದ್ದು, ಶಾಲೆಗೆ, ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲು ತಾಲೂಕು ಪಂಚಾಯಿತಿ ಹಾಗೂ ಕೊತ್ತದೊಡ್ಡಿ ಗ್ರಾಮ ಪಂಚಾಯಿತಿಗೆ ಎರಡು ಬಾರಿ ಮನವಿ ಸಲ್ಲಿಸಲಾಗಿದೆ. ಈವರೆಗೆ ಸ್ಪಂದಿಸಿಲ್ಲ.
ಗಿರಿಜಮ್ಮ,
ಶಾಲಾ ಮುಖ್ಯ ಶಿಕ್ಷಕಿ

ಬೋರ್‌ವೆಲ್‌ ಕೆಟ್ಟಿದ್ದು, ದುರಸ್ತಿ ಮಾಡಿಸಲು ಯಾರಿಗೆ ಕೇಳಬೇಕು ಎನ್ನುವುದೇ ಗೊತ್ತಿಲ್ಲ. ವಿದ್ಯುತ್‌ ಇಲ್ಲದಾಗ ಕತ್ತಲಲ್ಲೇ ಜೀವನ ನಡೆಸಬೇಕು. ಆರೋಗ್ಯದಲ್ಲಿ ಸಮಸ್ಯೆ ಆದಾಗ ನಡೆದುಕೊಂಡು ಅರಕೇರಾ ಆಸ್ಪತ್ರೆಗೆ ಹೋಗಬೇಕು.
ಹನುಮಂತ್ರಾಯ, ಗ್ರಾಮಸ್ಥ

ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದೇನೆ. ಲಿಂಗನದೊಡ್ಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಸೌಲಭ್ಯ ಒದಗಿಸಲು ಸೂಚನೆ ನೀಡುತ್ತೇನೆ.
ವೆಂಕಟೇಶ ಗಲಗ,
ಪ್ರಭಾರಿ ತಾಪಂ ಇಒ

ನಾಗರಾಜ ತೇಲ್ಕರ್‌

ಟಾಪ್ ನ್ಯೂಸ್

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

Essar Group: ಎಸ್ಸಾರ್ ಗ್ರೂಪ್ ನಿ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-raichur

Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ

1-wewqewq

Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು

Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ

Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ

ಮಂತ್ರಾಲಯ ಶ್ರೀಗಳಿಂದ ತುಂಗಭದ್ರ ನದಿಯಲ್ಲಿ ದಂಡೋದಕ ಸ್ನಾನ

Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ

5-raichur

Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

7

Mangaluru: ಪಿ.ಎಂ. ರಾವ್‌ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

6(1

Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ

Essar Group: ಎಸ್ಸಾರ್ ಗ್ರೂಪ್ ನಿ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.