ಜಿಲ್ಲೆಗೆ ಬೇಕು ಅರವಳಿಕೆ ತಜ್ಞರು


Team Udayavani, Mar 3, 2020, 3:00 AM IST

nkiil-beku

ಕಲ್ಪತರು ನಾಡಿನಲ್ಲಿ ಕಾಡು ಪ್ರಾಣಿಗಳ ಉಪಟಳ ಹೆಚ್ಚುತ್ತಿದೆ. ಕಳೆದ 10 ವರ್ಷಗಳಿಂದ ವಿವಿಧ ಪ್ರಾಣಿಗಳ ದಾಳಿಯಿಂದ 25ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಆನೆಗಳ ಉಪಟಳ ಇತ್ತು, ಈಗ ಆನೆ ಕಾಟ ಕಡಿಮೆಯಾಗಿ, ಚಿರತೆ ದಾಳಿ ನಿರಂತರವಾಗಿ ನಡೆಯುತ್ತಿದ್ದು, ಈ ಕಾಡು ಪ್ರಾಣಿಗಳನ್ನು ನಿಯಂತ್ರಿಸಲು ಜಿಲ್ಲೆಗೆ ಅರವಳಿಕೆ ತಜ್ಞರ ಅವಶ್ಯಕತೆ ಇದೆ.

ತುಮಕೂರು: ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ನಿರಂತರ ಕಾಡು ಪ್ರಾಣಿಗಳ ದಾಳಿ ನಡೆಯುತ್ತಿದೆ. ಒಂದು ವರ್ಷಕ್ಕೆ ಎರಡು ಮೂರು ಬಾರಿ ಕಾಡಾನೆಗಳ ಇಂಡು ಜಿಲ್ಲೆಗೆ ಬಂದು ಜನರಲ್ಲಿ ಆತಂಕ ಉಂಟು ಮಾಡುತ್ತಲೇ ಇರುತ್ತವೆ. ಆನೆಗಳು ಹಲವು ಬಾರಿ ನಗರದ ಹೃದಯ ಭಾಗದಲ್ಲಿಯೇ ಬಂದು ಹೋಗಿವೆ. ಈಗ ಚಿರತೆಗಳು ಹಗಲು-ರಾತ್ರಿ ಎನ್ನದೇ ಮನುಷ್ಯರ ಮೇಲೂ ದಾಳಿ ನಡೆಸಿ, ನಾಲ್ಕು ತಿಂಗಳಲ್ಲಿ ನಾಲ್ವರನ್ನು ಬಲಿ ಪಡೆದಿವೆ.

9 ಗಂಟೆ ಸಮಯ ವ್ಯತ್ಯ: ಕಳೆದ 2009ರಲ್ಲಿ ನಗರದ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯಕ್ಕೆ ಚಿರತೆ ಬಂದಾಗ ಅದನ್ನು ಸೆರೆಹಿಡಿಯಲು ಅರವಳಿಕೆ ತಜ್ಞರು ಬನ್ನೇರುಘಟ್ಟ ಮತ್ತು ಹಾಸನದಿಂದ ಬರುವುದಕ್ಕೆ ಒಂದು ದಿನವಾಗಿತ್ತು. ರಾತ್ರಿ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿತ್ತು. ಅದೇ ರೀತಿ ನಗರಕ್ಕೆ ಬಂದಿದ್ದ ಚಿರತೆ ಸೆರೆಹಿಡಿಯಲು ಜಿಲ್ಲೆಗೆ ಬನ್ನೇರುಘಟ್ಟದಿಂದ ಅರವಳಿಕೆ ತಜ್ಞರಾದ ಡಾ.ಸೃಜನ್‌ ಮತ್ತು ಡಾ.ನಿಖೀತಾ ಹಾಗೂ ಹಾಸನದಿಂದ ಬಂದಿದ್ದ ಡಾ.ಮುರುಳಿ ಅವರು, ಅರಣ್ಯ ಇಲಾಖೆ ಸಿಬ್ಬಂದಿ ಸಹಾಯದಿಂದ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲು 9 ಗಂಟೆ ಸಮಯ ವ್ಯಯವಾಗಿತ್ತು.

ಸಾಹಸದಿಂದ ಕರಡಿ ಸೆರೆ: ಈ ಹಿಂದೆ ನಗರದ ಹೃದಯ ಭಾಗವಾಗಿರುವ ಪುರಸ್‌ ಕಾಲೋನಿಗೆ ಕರಡಿ ದಾಳಿ ಮಾಡಿದ್ದಾಗ ಕರಡಿ ಹಿಡಿಯಲು ಭಾರಿ ಸಾಹಸಪಟ್ಟರು. ಕೊನೆಗೆ ಇಡೀ ದಿನ ಎಲ್ಲಿ ಜನರ ಮೇಲೆ ಕರಡಿ ಎರಗುತ್ತೋ ಎನ್ನುವ ಆತಂಕ ಪಟ್ಟು ಕೊನೆಗೆ ಅರವಳಿಕೆ ತಜ್ಞರ ಸಹಾಯದಿಂದ ಸೆರೆಹಿಡಿಯಲಾಗಿತ್ತು. ಇದಲ್ಲದೇ ಜಿಲ್ಲೆಯ ವಿವಿಧ ಕಡೆಗಳಲ್ಲಿಯೂ ಕಾಡು ಪ್ರಾಣಿಗಳ ಹಾವಳಿಯಿಂದ ಜನ ತೊಂದರೆ ಪಡುತ್ತಿದ್ದಾರೆ. ನಗರ ಗ್ರಾಮಗಳಿಗೆ ಕಾಡು ಪ್ರಾಣಿಗಳು ದಾಳಿ ಮಾಡಿದಾಗ ಅವುಗಳನ್ನು ಸೆರೆಹಿಡಿಯಲು ಅರವಳಿಕೆ ಚುಚ್ಚು ಮದ್ದು ನೀಡುವುದು ಸರ್ವೆ ಸಾಮಾನ್ಯವಾಗಿದೆ.

ಜನರಲ್ಲಿ ಆತಂಕ: ಆದರೆ, ಜಿಲ್ಲೆಯಲ್ಲಿ ನಿರಂತರವಾಗಿ ಕಾಡು ಪ್ರಾಣಿಗಳ ದಾಳಿ ಇದ್ದೇ ಇರುತ್ತದೆ. ಯಾವಾಗ ಕಾಡು ಪ್ರಾಣಿಗಳು ದಾಳಿ ಮಾಡಿದರು ಅರವಳಿಕೆ ಚುಚುಮದ್ದು ನೀಡಲು ಬನೇರುಘಟ್ಟ, ಹಾಸನದಿಂದ ಅರವಳಿಕೆ ತಜ್ಞರನ್ನು ಕರೆಸಬೇಕು, ಅವರು ಅಲ್ಲಿಂದ ತುಮಕೂರಿಗೆ ಬರುವ ವೇಳೆಗೆ ಸಂಜೆಯಾಗುತ್ತದೆ ಅಷ್ಟರೊಳಗೆ ಏನು ಬೇಕಾದರು ಅನಾಹುತ ಆಗುವ ಸಾಧ್ಯತೆಗಳು ಇರುತ್ತದೆ.

ಅರವಳಿಕೆ ತಜ್ಞರಿದ್ದರೇ ಹೆಚ್ಚು ಅನುಕೂಲ: ತುಮಕೂರು ಜಿಲ್ಲಾದ್ಯಂತ ಇದುವರೆಗೂ ಕಳೆದ 10 ವರ್ಷದಲ್ಲಿ ಆನೆ ತುಳಿತದಿಂದ 15ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ, ಲಕ್ಷಾಂತರ ರೂ. ಬೆಳೆ ಹಾಳಾಗಿದೆ ಪ್ರತಿವರ್ಷ ಒಬ್ಬರಲ್ಲ ಒಬ್ಬರು ಆನೆ ತುಳಿತಕ್ಕೆ ಬಲಿಯಾಗಿದ್ದಾರೆ. ಇದಲ್ಲದೆ ಜಿಲ್ಲಾದ್ಯಂತ ಕರಡಿ ಚಿರತೆಗಳಿಂದ ಜನರು ತೊಂದರೆ ಅನುಭವಿಸುತ್ತಲೇ ಇದ್ದಾರೆ ಆದರಿಂದ ಜಿಲ್ಲೆಯಲ್ಲಿಯೇ ಅರವಳಿಕೆ ತಜ್ಞರು ಇದ್ದರೆ ಹೆಚ್ಚು ಸಹಾಯವಾಗಲಿದೆ. ಈಗ ತುಮಕೂರು-ಹಾಸನ ಸೇರಿ ಡಾ.ಮುರುಳಿ ಒಬ್ಬರೇ ಅರವಳಿಕೆ ತಜ್ಞರಿದ್ದಾರೆ. ತುಮಕೂರು ಡಿವಿಜನ್‌ಗೆ ಅರವಳಿಕೆ ತಜ್ಞರಿದ್ದರೆ ಹೆಚ್ಚು ಅನುಕೂಲವಾಗಲಿದೆ. ಸರ್ಕಾರ ಈ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇಲ್ಲಿನ ಜನ ಪ್ರತಿನಿಧಿಗಳು ಈ ಬಗ್ಗೆ ಸರ್ಕಾರದ ಮೇಲೆ ಹೆಚ್ಚು ಒತ್ತಡ ಹಾಕುವುದು ಅಗತ್ಯವಾಗಿದೆ.

ಅರವಳಿಕೆ ತಜ್ಞರ ನೇಮಿಸಿ: ಕಳೆದ ನಾಲ್ಕು ತಿಂಗಳಿನಿಂದ ಚಿರತೆಯ ಉಪಟಳ ತೀವ್ರವಾಗಿದೆ. ಈ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಭಾರಿ ಶ್ರಮಿಸುತ್ತಿದೆ. ಅರವಳಿಕೆ ತಜ್ಞ ವೈದ್ಯರು ಜಿಲ್ಲೆಗೆ ಆಗಮಿಸಿದ್ದಾರೆ, ಜಿಲ್ಲೆಯಲ್ಲಿ ಅರಣ್ಯ ಪ್ರದೇಶದ ವ್ಯಾಪ್ತಿ ಹೆಚ್ಚಾಗಿದೆ, ಚಿರತೆ, ಕರಡಿಗಳ ಸಂಖ್ಯೆಯೂ ಹೆಚ್ಚುತ್ತಿದೆ, ಆನೆಗಳು ಆಗಾಗ್ಗೆ ಬರುತ್ತಿವೆ, ಇಂತಹ ವೇಳೆಯಲ್ಲಿ ಅವುಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸೆರೆ ಹಿಡಿಯಲು ಅರವಳಿಕೆ ತಜ್ಞರ ಅವಶ್ಯಕತೆ ಇದೆ, ಜಿಲ್ಲೆಗೆ ಅವರನ್ನು ನೇಮಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿ ಎನ್ನುವುದು ಜಿಲ್ಲೆಯ ಜನರ ಒತ್ತಾಯ.

ತುಮಕೂರು ತಾಲೂಕು ಆನೆಗಳ ಕಾರಿಡಾರ್‌ ಆಗಿದ್ದು, ಇಲ್ಲಿ ಆಗ್ಗಿಂದಾಗೆ ಕಾಡಾನೆಗಳು ಬರುತ್ತವೆ. ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕರಡಿ, ಚಿರತೆ ಸೇರಿದಂತೆ ಅನೇಕ ಪ್ರಾಣಿಗಳಿವೆ. ಇತ್ತೀಚೆಗೆ ಚಿರತೆಗಳು ನಗರ ಗ್ರಾಮಗಳಿಗೆ ಬರುತ್ತಿರುವುದು ಸಾಮಾನ್ಯವಾಗಿದೆ. ಈ ಪ್ರಾಣಿಗಳು ಕಾಡು ಬಿಟ್ಟು ಏಕೆ ನಗರಗಳಿಗೆ ಬರುತ್ತಿವೆ? ಚಿರತೆಗಳ ಸಂಖ್ಯೆ ಹೆಚ್ಚಿವೆ, ಕಾಡು ಪ್ರಾಣಿಗಳು ನಗರಕ್ಕೆ ಬಂದಾಗ ಅರವಳಿಕೆ ತಜ್ಞರನ್ನು ನಾವು ಹಾಸನ ಹಾಗೂ ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಕರೆಸಬೇಕು, ತುಮಕೂರು ಡಿವಿಜನ್‌ಗೆ ಅರವಳಿಕೆ ತಜ್ಞರನ್ನು ಸರ್ಕಾರ ನೀಡಿದರೆ ಸಹಕಾರಿಯಾಗುತ್ತದೆ.
-ಎಚ್‌.ಸಿ.ಗಿರೀಶ್‌, ಉಪ ವಲಯ ಅರಣ್ಯಾಧಿಕಾರಿ ತುಮಕೂರು.

ಜಿಲ್ಲೆಯಲ್ಲಿ ನಾಲ್ವರನ್ನು ಬಲಿ ಪಡೆದಿರುವ ನರಹಂತಕ ಚಿರತೆ ಶೂಟೌಟ್‌ಗೆ ಸರ್ಕಾರದ ಯಾವುದೇ ಆದೇಶ ಬಂದಿಲ್ಲ. ಈಗ ಚಿರತೆಯನ್ನು ಸೆರೆ ಹಿಡಿಯಲು ಬೋನ್‌ಗಳನ್ನು ಹೆಚ್ಚಿಸಿದ್ದೇವೆ. 30 ಜನ ಅರಣ್ಯ ರಕ್ಷಕರು, ಮಣಿಕುಪ್ಪೆ, ಬೈಚೇನಹಳ್ಳಿ, ಸಿ.ಎಸ್‌ ಪುರ ಗಡಿಭಾಗಗಳಲ್ಲಿ ಬೀಡು ಬಿಟ್ಟಿದ್ದಾರೆ. ಎಲ್ಲಾ ಕಡೆ ಕ್ಯಾಮೆರಾ ಅಳವಡಿಸಿದ್ದೇವೆ. ಮೂವರು ಅರವಳಿಕೆ ತಜ್ಞರು ಸ್ಥಳಕ್ಕಾಗಮಿಸಿದ್ದಾರೆ. ಚಿರತೆಯನ್ನು ಸೆರೆ ಹಿಡಿಯಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ.
-ನಟರಾಜ್‌, ವಲಯ ಅರಣ್ಯಾಧಿಕಾರಿ

ತುಮಕೂರು ನಗರಕ್ಕೆ ಕರಡಿ, ಆನೆ, ಚಿರತೆಗಳು ಬರುವುದು ಸಾಮಾನ್ಯವಾಗಿದೆ. ಇವುಗಳನ್ನು ನಿಯಂತ್ರಿಸಲು ಇಲ್ಲಿಯ ಅರಣ್ಯ ಅಧಿಕಾರಿಗಳಿಂದ ಸಾಧ್ಯವಾಗುತ್ತಿಲ್ಲ. ಅವುಗಳಿಗೆ ಅರವಳಿಕೆ ಚುಚ್ಚುಮದ್ದು ನೀಡಬೇಕು, ಅದು ತುಮಕೂರಿನಲ್ಲಿಯೇ ಲಭ್ಯವಾಗುವಂತಿರಬೇಕು ಈ ಬಗ್ಗೆ ಸರ್ಕಾರ ಗಮನಹರಿಸಿ ತುಮಕೂರು ಅರಣ್ಯ ಇಲಾಖೆಗೆ ಅರವಳಿಕೆ ತಜ್ಞರನ್ನು ನೇಮಕ ಮಾಡಲಿ.
-ಶ್ರೀನಾಥ, ತುಮಕೂರು

* ಚಿ.ನಿ. ಪುರುಷೋತ್ತಮ್‌

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Koratagere: ವೃದ್ದೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸಾವು

Hunasuru-Women

Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!

2

Kunigal: ಅಪ್ರಾಪ್ತೆಯ ಅಪಹರಣ, ಲೈಂಗಿಕ ದೌರ್ಜನ್ಯ; ಗುಜರಾತ್ ನಲ್ಲಿ ಬಂಧನ

Jeeda

Tumakuru: ದೇವರಾಯನದುರ್ಗದಲ್ಲಿ ಹೊಸ ಮಾದರಿ ಜೇಡ ಪತ್ತೆ

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.