ಬಜೆಟ್ ಗಾತ್ರ ಹಿಗ್ಗುವುದೇ?
Team Udayavani, Mar 3, 2020, 3:10 AM IST
ಬೆಂಗಳೂರು: ಏರುಮುಖದ ತೆರಿಗೆ ಆದಾಯ, ಆರ್ಥಿಕ ಶಿಸ್ತಿನ ಪಾಲನೆ, ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ಬೆಳವಣಿಗೆ ದರ ಸರಾಸರಿ ಶೇ.10ರಷ್ಟಿದ್ದು, ಈ ಬೆಳವಣಿಗೆ ದರಕ್ಕೆ ಪೂರಕವಾಗಿ 2020-20ನೇ ಸಾಲಿನ ಬಜೆಟ್ ಗಾತ್ರ ಹಿಗ್ಗುವ ಸಾಧ್ಯತೆ ಬಹಳ ಕ್ಷೀಣ!
ಕೇಂದ್ರ ಸರ್ಕಾರದಿಂದ 2019-20ನೇ ಸಾಲಿನಲ್ಲಿ ರಾಜ್ಯ ಸರ್ಕಾರಕ್ಕೆ ಬರಬೇಕಾದ ನಾನಾ ತೆರಿಗೆ ಪಾಲಿನ ಮೊತ್ತ, ಅನುದಾನದಲ್ಲಿ ಕಡಿತ ರಾಜ್ಯದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಿದೆ. ಹಾಗಾಗಿ ರಾಜ್ಯ ಸರ್ಕಾರ ತನ್ನ ಸ್ವಂತ ತೆರಿಗೆ ಆದಾಯ ಉತ್ತಮವಾಗಿದ್ದರೂ ಹೆಚ್ಚುವರಿ ಸಾಲಕ್ಕೆ ಮೊರೆ ಹೋಗುವ ಲಕ್ಷಣ ಕಾಣುತ್ತಿದೆ. ಆ ಹಿನ್ನೆಲೆಯಲ್ಲಿ 2020- 21ನೇ ಸಾಲಿನ ಬಜೆಟ್ ಗಾತ್ರವು ನಾಮ್‌ಕೇವಾಸ್ತೆಗೆ ಎಂಬಂತೆ ಹೆಚ್ಚ ಳ ವಾಗಿ, 2019-20ರ ಬಜೆಟ್‌ನ ಗಾತ್ರಕ್ಕೆ ಹೋಲಿಸಿದರೆ ಅತ್ಯಲ್ಪ ಹೆಚ್ಚಳ ವಾಗುವ ಸಾಧ್ಯತೆಯಿದೆ.
2017-18ರಿಂದ ಈವರೆಗೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿಯವರು ತಲಾ ಎರಡು ಬಾರಿ ಬಜೆಟ್ ಮಂಡಿಸಿ ದ್ದಾರೆ. ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ಜನಪ್ರಿಯ ಕಾರ್ಯಕ್ರಮಗಳಿಗೆ ಒತ್ತು ಸಿಕ್ಕಿದ್ದರೆರೆ, ಎಚ್.ಡಿ. ಕುಮಾರಸ್ವಾಮಿಯವರ ಬಜೆಟ್‌ನಲ್ಲಿ ರೈತರ ಸಾಲ ಮನ್ನಾ, ಕೈಗಾರಿಕಾ ಕ್ಲಸ್ಟರ್ ಸ್ಥಾಪನೆ ಮಹತ್ವ ಪಡೆದುಕೊಂಡಿವೆ. ಒಂಬತ್ತು ವರ್ಷದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದು, ಕುತೂಹಲ ಮೂಡಿಸಿದೆ.
2 ಲಕ್ಷ ಕೋಟಿ ರೂ. ದಾಟಿದ ಹೆಗ್ಗಳಿಕೆ: ರಾಜ್ಯ ದಲ್ಲಿ ಅತಿ ಹೆಚ್ಚು ಬಾರಿ ಬಜೆಟ್ ಮಂಡಿ ಸಿದ ಕೀರ್ತಿಗೆ ಪಾತ್ರರಾಗಿರುವ ಸಿದ್ದರಾಮಯ್ಯ ಅವರು 2017-18ನೇ ಸಾಲಿನ ಮಂಡಿಸಿದ ಬಜೆಟ್‌ನ ಗಾತ್ರ 1.86 ಲಕ್ಷ ಕೋಟಿ ರೂ. ಇತ್ತು. ಇದರಲ್ಲಿ ಹಲವು ಜನಪ್ರಿಯ ಕಾರ್ಯಕ್ರಮಗಳ ಘೋಷಣೆ ಯಿತ್ತು. ಬಳಿಕ 2018-19ನೇ ಸಾಲಿನಲ್ಲಿ ಸಿದ್ದರಾಮಯ್ಯ 2.09 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಮಂಡಿಸುವ ಮೂಲಕ ರಾಜ್ಯ ಆಯವ್ಯಯದ ಗಾತ್ರವನ್ನು 2 ಲಕ್ಷ ಕೋಟಿ ರೂ. ಮೀರಿಸಿದ ಹಿರಿಮೆಗೆ ಪಾತ್ರರಾದರು.
ಮೈತ್ರಿ ಸರ್ಕಾರದಲ್ಲಿ ಎಚ್.ಡಿ.ಕುಮಾರ ಸ್ವಾಮಿ 2018ರ ಜುಲೈ 5ರಂದು ಬಜೆಟ್ ಮಂಡಿಸಿದರು. ಅದರ ಗಾತ್ರ 2.18 ಲಕ್ಷ ಕೋಟಿ ರೂ.ನಷ್ಟಿತ್ತು. ಸಾಲ ಮನ್ನಾ ಸೇರಿ ಕೆಲ ಜನಪ್ರಿಯ ಯೋಜನೆಗಳ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಗಾತ್ರಕ್ಕಿಂತ ಸುಮಾರು 9000 ಕೋಟಿ ರೂ. ಹೆಚ್ಚು ಗಾತ್ರದ ಬಜೆಟ್ ಮಂಡಿಸಿದರು. ಅಂತಿಮವಾಗಿ 2.17 ಲಕ್ಷ ಕೋಟಿ ರೂ. ಪರಿಷ್ಕರಿಸಲಾಗಿತ್ತು.
ಪ್ರಸಕ್ತ 2019-20ನೇ ಸಾಲಿನ ಆಯವ್ಯಯವನ್ನೂ ಎಚ್.ಡಿ.ಕುಮಾರಸ್ವಾಮಿ ಮಂಡಿ ಸಿದ್ದರು. ಬರೋಬ್ಬರಿ 2.34 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಮಂಡನೆಯಾಗಿತ್ತು. ಬದಲಾದ ರಾಜಕೀಯ ಬೆಳ ವಣಿಗೆಯಲ್ಲಿ ಬಿಜೆಪಿ ಸರ್ಕಾರ ರಚನೆ ಬಳಿಕ ಸಿಎಂ ಬಿ.ಎಸ್. ಯಡಿಯೂರಪ್ಪ ಹೊಸ ಬಜೆಟ್ ಮಂಡಿಸುವ ಗೋಜಿಗೆ ಹೋಗದೆ ಕೆಲ ಮಾರ್ಪಾಡು ಮಾಡಿ ಕೊಂಡು ಅನುಷ್ಠಾನಕ್ಕೆ ಮುಂದಾದರು. ಕಳೆದ ಮೂರು ವರ್ಷಗಳಲ್ಲಿ ಬಜೆಟ್ ಗಾತ್ರ 44,000 ಕೋಟಿ ರೂ.ನಷ್ಟು ಹೆಚ್ಚಳವಾಗಿದೆ.
ಸಾಲ ಏರುಮುಖ: ರಾಜ್ಯ ಸರ್ಕಾರ ನಾನಾ ತೆರಿಗೆ, ಆದಾಯ ಮೂಲದಿಂದ ಸಂಗ್ರಹಿಸುವ ಮೊತ್ತ ಮೀರಿ ವೆಚ್ಚದ ಬಾಬ್ತುಗಳಿದ್ದಾಗ ಅನಿ ವಾರ್ಯವಾಗಿ ಹಣಕಾಸು ಸಂಸ್ಥೆಗಳಿಂದ ಸಾಲ ಎತ್ತುವಳಿ ಮೂಲಕ ಆರ್ಥಿಕತೆ ನಿಭಾಯಿಸು ವುದು ವಾಡಿಕೆ. ಅದರಂತೆ ವರ್ಷಗಳು ಕಳೆದಂತೆ ಜಿಎಸ್‌ಡಿಪಿ ಹೆಚ್ಚಾಗುತ್ತಿದ್ದರೂ ಖರ್ಚಿನ ಬಾಬ್ತು ವಿಸ್ತರಿಸುತ್ತಿರುವುದರಿಂದ ಸಾಲವೂ ಏರುಮುಖವಾಗಿದೆ.
2017-18ನೇ ಸಾಲಿನಲ್ಲಿ ಒಟ್ಟು 34,716 ಕೋಟಿ ರೂ. ಸಾಲ ಪಡೆಯುವ ಅಂದಾಜು ಇದ್ದರೂ ಅಂತಿಮವಾಗಿ 34,171 ಕೋಟಿ ರೂ. ಸಾಲವನ್ನಷ್ಟೇ ಪಡೆಯಲಾಗಿತ್ತು. ನಂತರ 2018-19ರಲ್ಲಿ ಸಿದ್ದರಾಮಯ್ಯ 36,317 ಕೋಟಿ ರೂ. ಸಾಲ ಪಡೆಯುವುದಾಗಿ ಅಂದಾ ಜಿಸಿ ದ್ದರು. ಆದರೆ ಬಳಿಕ ಮುಖ್ಯಮಂತ್ರಿಯಾದ ಎಚ್.ಡಿ. ಕುಮಾರಸ್ವಾಮಿಯವರು ಸಾಲ ಮನ್ನಾ ಘೋಷಣೆ ಹಿನ್ನೆಲೆಯಲ್ಲಿ ಸಾಲದ ಮೊತ್ತ 43,731 ಕೋಟಿ ರೂ.ಗೆ ಏರಿಕೆ ಯಾಗಿತ್ತು. ಹಾಗಿದ್ದರೂ ಒಟ್ಟು ಜಿಎಸ್‌ಡಿಪಿಯ ಶೇ.3ರ ಮಿತಿಯೊಳಗೇ ಇತ್ತು.
46,127 ಕೋಟಿ ರೂ. ಸಾಲ ಅಂದಾಜು: ಪ್ರಸಕ್ತ ಹಣಕಾಸು ವರ್ಷದಲ್ಲಿ 46,127 ಕೋಟಿ ರೂ. ಸಾಲ ಪಡೆಯುವ ಅಂದಾಜು ಇದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನ ಮೊತ್ತದ ಶೇ.3ರಷ್ಟಿದೆ. 2019-20ನೇ ಸಾಲಿನಲ್ಲಿ ಜಿಎಸ್‌ಡಿಪಿಯ ಶೇ. 2.65ರಷ್ಟು ಸಾಲ ಪಡೆಯುವು ದಾಗಿ ಹೇಳಲಾಗಿತ್ತು. ಅದರಂತೆ ಮುಂದುವರಿ ದಿದ್ದರೆ 42,051 ಕೋಟಿ ರೂ.ಗಳಷ್ಟೇ ಸಾಲ ಪಡೆಯಬೇಕಿತ್ತು. ಆದರೆ ಬಜೆಟ್‌ನಲ್ಲಿ 46,127 ಕೋಟಿ ರೂ. ಸಾಲದ ಮೊರೆ ಹೋಗುವುದಾಗಿ ಉಲ್ಲೇಖವಾಗಿದೆ. ಪ್ರಸಕ್ತ ಸಾಲಿನಲ್ಲಿ ಎಷ್ಟು ಸಾಲ ಪಡೆಯಲಾಗಿದೆ ಎಂಬುದು ಗುರುವಾರದ ಆಯವ್ಯಯದಲ್ಲಿ ಸ್ಪಷ್ಟವಾಗಲಿದೆ.
ಶೇ. 3.5ರವರೆಗೆ ಸಾಲಕ್ಕೆ ಅವಕಾಶ: ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇ. 3ರವರೆಗೆ ಸಾಲ ಪಡೆಯಲು ಅವಕಾಶವಿದೆ. ಸಾಲ ಎತ್ತುವಳಿ ಹಾಗೂ ನಿರ್ವಹಣೆಯಲ್ಲಿ ಶಿಸ್ತು ಪಾಲಿಸುವ ರಾಜ್ಯಗಳು ವಿತ್ತೀಯ ಕೊರತೆ ಪ್ರಮಾಣದ ಶೇ. 0.5ರಷ್ಟು ಹೆಚ್ಚು ಸಾಲ ಪಡೆಯಲು ಅವಕಾಶವಿರುತ್ತದೆ. ಗರಿಷ್ಠ ಶೇ.3.5ರಷ್ಟು ಸಾಲ ಪಡೆಯಲು ಅವಕಾಶವಿದೆ. ಇದನ್ನು ಬಳಸಿಕೊಂಡು ಶೇ. 3ಕ್ಕಿಂತಲೂ ಹೆಚ್ಚು ಸಾಲ ಪಡೆಯಲು ರಾಜ್ಯ ಸರ್ಕಾರ ಮುಂದಾಗುವುದೇ ಕಾದು ನೋಡಬೇಕಿದೆ.
ಜಿಎಸ್‌ಡಿಪಿ ವರ್ಷದಿಂದ ವರ್ಷಕ್ಕೆ ಹೆಚ್ಚು ತ್ತಲೇ ಇದ್ದು, ಆರ್ಥಿಕ ಪ್ರಗತಿಯನ್ನು ದೃಢೀ ಕರಿ ಸುತ್ತಿದೆ. ವಾರ್ಷಿಕವಾಗಿ ಸರಾಸರಿ ಶೇ. 10ರಷ್ಟು ಪ್ರಗತಿಯಾಗುತ್ತಿದೆ. ತೆರಿಗೆ ಆದಾ ಯವು ಆಶಾದಾಯಕವಾಗಿಯೇ ಇದೆ. ಆದರೂ ಕೇಂದ್ರದಿಂದ ರಾಜ್ಯಕ್ಕೆ ಬರ ಬೇಕಾದ ತೆರಿಗೆ ಪಾಲು, ಕೇಂದ್ರ ಪ್ರಾಯೋ ಜಿತ ಕಾರ್ಯಕ್ರಮ ಗಳಿಗೆ ಕೇಂದ್ರದ ಪಾಲಿನ ಮೊತ್ತ, ಅನುದಾನ, ವಿಶೇಷ ಅನುದಾನದಲ್ಲಿ ಕಡಿತ ವಾಗಿರುವುದು ಆರ್ಥಿಕ ಲೆಕ್ಕಾಚಾರಕ್ಕೆ ತೊಡಕಾಗಿದೆ.
ಗಾತ್ರದಲ್ಲಿ ಕೊಂಚ ಏರಿಕೆ!: ವಾಸ್ತವಿಕ ಆದಾಯ, ವೆಚ್ಚದ ಲೆಕ್ಕಾಚಾರ ಪರಿಶೀಲಿಸಿ ದರೆ ಬಜೆಟ್ ಗಾತ್ರ 2019-20ಕ್ಕಿಂತ ಕಡಿಮೆಯಾಗುವಂತಹ ಪರಿಸ್ಥಿತಿ ಇದಂತಿದೆ. ಆರ್ಥಿಕ ಪ್ರಗತಿ ಏರುಮುಖ ವಾಗ ದಿದ್ದರೆ ಹಲವು ಅನುಮಾನ ಕಾರಣ ವಾಗುವ ಸಾಧ್ಯತೆಗಳಿರುತ್ತದೆ. 2019-2 0ನೇ ಸಾಲಿನ ಬಜೆಟ್ ಗಾತ್ರದ ಶೇ. 10ಕ್ಕಿಂತಲೂ ಕಡಿಮೆ ಪ್ರಮಾಣದ ಹೆಚ್ಚು ವರಿ ಮೊತ್ತದ ಹಾಗೂ ಸಾಲವನ್ನು ಪ್ರಧಾನವಾಗಿ ಅವಲಂಬಿಸಿರುವ ಬಜೆಟ್ ಮಂಡನೆಯಾಗುವ ಲಕ್ಷಣ ಕಾಣುತ್ತಿದೆ ಎಂದು ಮೂಲಗಳು ಹೇಳಿವೆ.
ಬಜೆಟ್ ಗಾತ್ರ (ಕೋಟಿ ರೂ.ಗಳಲ್ಲಿ)
ವರ್ಷ ಅಂದಾಜು ವೆಚ್ಚ ಪರಿಷ್ಕೃತ ವೆಚ್ಚ
2017-18 1,86,561 1,89,679
2018-19 (ಸಿದ್ದರಾಮಯ್ಯ) 2,09,181 –
2018-19 (ಎಚ್.ಡಿ. ಕುಮಾರಸ್ವಾಮಿ) 2,18,488 2,17,451
2019-20 (ಎಚ್.ಡಿ.ಕುಮಾರಸ್ವಾಮಿ) 2,34,153 –
ಬಾಹ್ಯ ಸಾಲ (ಕೋಟಿ ರೂ.ಗಳಲ್ಲಿ)
ವರ್ಷ ಅಂದಾಜು ಸಾಲ ಪರಿಷ್ಕೃತ ಸಾಲ
2017-18 34,716 34,171
2018-19 (ಸಿದ್ದರಾಮಯ್ಯ) 36,317 –
2018-19 (ಎಚ್.ಡಿ.ಕುಮಾರಸ್ವಾಮಿ) 43,731 43,731
2019-20 (ಎಚ್.ಡಿ.ಕುಮಾರಸ್ವಾಮಿ) 46,127
* ಎಂ. ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.