ಫಿಟ್‌ನೆಸ್ ಪ್ರಿಯರಿಗೆ ಒಂದಿಷ್ಟು ಸಲಹೆಗಳು
Team Udayavani, Mar 3, 2020, 5:09 AM IST
ಸುಂದರವಾದ ಮೈಮಾಟ ಹೊಂದಬೇಕು ಎಂಬ ಹೆಬ್ಟಾಯಕೆ ಯಾರಿಗೆ ಇರುವುದಿಲ್ಲ . ಪ್ರತಿಯೊಬ್ಬರಿಗೂ ತಾವು ತೆಳ್ಳಗೆ ಬಳುಕುವ ಬಳ್ಳಿಯಂತೆ ಕಾಣಬೇಕೆಂಬ ಆಸೆ ಇರುತ್ತದೆ. ಅದಕ್ಕಾಗಿ ಹಲವು ತಿಂಗಳು ಜಿಮ್‌ನಲ್ಲಿ ದೇಹವನ್ನು ದಂಡಿಸಿ ತಕ್ಕ ಮಟ್ಟಿಗೆ ಹುರಿಗಟ್ಟಿಸಿ ಆಕರ್ಷಕವಾದ ದೇಹದಾಡ್ಯìವನ್ನು ಪಡೆಯುತ್ತಾರೆ. ಆದರೆ ಸ್ವಲ್ಪ ಬೊಜ್ಜು ಕರಗುತ್ತಿದಂತೆ ಫಿಟ್ ಆಗಿದ್ದೇವೆ ಅಂತ ಹೇಳಿಯೋ ಅಥವಾ ಜಿಮ್‌ನಲ್ಲಿ ದೇಹ ದಂಡಿಸುವುದು ತುಸು ಕಷ್ಟ ಎನಿಸಿಯೋ ಒಮ್ಮಿಂದೊಮ್ಮೆಲೇ ವ್ಯಾಯಾಮಕ್ಕೆ ಕೊನೆ ಹಾಡುತ್ತಾರೆ. ಮಾತ್ರವಲ್ಲದೆ ಪುನಃ ಎಗ್ಗಿಲ್ಲದ ಆಹಾರ ಪದ್ಧತಿ ಅಳವಡಿಸಿಕೊಂಡು ಮತ್ತೆ ಸ್ಥೂಲಕಾಯಿಗಳಾಗುತ್ತಾರೆ!
ಆದರೆ ಜಿಮ್ ಬಿಟ್ಟ ಅನಂತರ ತೆಗೆದುಕೊಳ್ಳುವ ಆಹಾರ ಪ್ರಮಾಣ ದೇಹದ ತೂಕವನ್ನು ನಿರ್ಧರಿಸುತ್ತದೆ. ಆಹಾರ ಪ್ರಮಾಣ ಹೆಚ್ಚಿದ್ದು, ಜತೆಗೆ ವ್ಯಾಯಾಮವನ್ನು ಮಾಡದಿರುವುದರಿಂದ ಸಹಜವಾಗಿಯೇ ದೇಹದ ತೂಕ ಹೆಚ್ಚಾಗುತ್ತದೆ. ಯಾವುದೋ ಕಾರಣದಿಂದ ಜಿಮ್ ಬಿಟ್ಟವರು ಆಹಾರ ಮತ್ತು ವ್ಯಾಯಾಮದಲ್ಲಿ ಸಮತೋಲನ ತಪ್ಪಿಸಲೇಬಾರದು. ಸರಳ ವ್ಯಾಯಾಮಗಳನ್ನು ಮಾಡುವತ್ತ ಗಮನ ಹರಿಸಿ ಫಿಟ್‌ನೆಸ್ ಕಾಯ್ದುಕೊಳ್ಳಬೇಕು. ಹಾಗಾಗಿ ಜಿಮ್ ಸೇರುವ ಮುನ್ನ ಮತ್ತು ಬಿಟ್ಟ ಬಳಿಕ ನೆನಪಿನಲ್ಲಿಡಬೇಕಾದ ಅಂಶಗಳು ಇಲ್ಲಿವೆ.
ಮಿತ ಆಹಾರ ಸೇವನೆ
ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗಲು, ದೇಹವನ್ನು ಫಿಟ್ ಆಗಿ ಇರಿಸಲು ವ್ಯಾಯಾಮಗಳು ಸಹಕರಿಸುತ್ತವೆ. ಜಿಮ್ ತರಗತಿಗಳಿಗೆ ಹೋಗುತ್ತಿರುವಾಗ ದೇಹವನ್ನು ಚೆನ್ನಾಗಿ ದಂಡಿಸುತ್ತಿರುತ್ತೇವೆ. ಹೀಗಾಗಿ ಹೆಚ್ಚು ಹಸಿವು ಆಗುತ್ತದೆ. ಆ ಸಮಯದಲ್ಲಿ ಫಿಟ್‌ನೆಸ್ ತಜ್ಞರು ಸೂಚಿಸಿದ ಆಹಾರ ಪದ್ಧತಿಯನ್ನು ಅನುಸರಿಸಬೇಕಾಗುತ್ತದೆ. ನಿಯಮಿತವಾಗಿ ನಮ್ಮ ಸ್ನಾಯುಗಳನ್ನು ಹುರಿಗಟ್ಟಿಸುವಷ್ಟು ಆಹಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಜಿಮ್ ಬಿಟ್ಟ ಮೇಲೆ ಆಹಾರದ ಪ್ರಮಾಣವನ್ನು ಸಾಧ್ಯವಾದಷ್ಟು ಮಿತಗೊಳಿಸಬೇಕು. ಹೀಗಾದಾಗ ತೂಕ ಹೆಚ್ಚಳ ತಪ್ಪಿಸಬಹುದು.
ಸರಳ ವ್ಯಾಯಾಮಾಭ್ಯಾಸ
ಜಿಮ್‌ಗಳಿಗೆ ಹೋಗುವಾಗ ನಿಯಮಿತವಾಗಿ ವ್ಯಾಯಾಮ ಮಾಡುತ್ತೇವೆ. ಇದರಿಂದ ದೇಹ ಸಪೂರವಾಗುತ್ತದೆ. ಜಿಮ್ ಬಿಟ್ಟ ಮೇಲೆ ಸರಳ ವ್ಯಾಯಾಮಗಳನ್ನು ಮಾಡಬೇಕು. ಬೆಳಗ್ಗಿನ ಚುರುಕಿನ ನಡಿಗೆ ಮತ್ತು ಇಷ್ಟವಾದ ಒಂದು ಆಟವನ್ನು ಆಡಬೇಕು. ಈ ಮೂಲಕ ದೇಹ ಸದೃಢವಾಗಿರುವಂತೆ ನೋಡಿಕೊಳ್ಳಬೇಕು.
ಸವಾಲುಗಳ ಬಗ್ಗೆ ಯೋಚಿಸಿ
ಜಿಮ್‌ಗೆ ಹೋಗುವುದನ್ನು ನಿಲ್ಲಿಸುವ ಮುನ್ನ ಎದುರಿಸಬೇಕಾದ ಸವಾಲುಗಳ ಬಗ್ಗೆಯೂ ಫಿಟೆನೆಸ್ ಪ್ರಿಯರು ಯೋಚಿಸಬೇಕು. ಕನಿಷ್ಠ 6 ತಿಂಗಳಿಂದ ಒಂದು ವರ್ಷ ಜಿಮ್‌ಗೆ ಹೋದವರು ತತ್‌ಕ್ಷಣವೇ ಜಿಮ್ ಬಿಡಬಾರದು. ಇದರಿಂದ ದೇಹದ ಮೇಲೆ ಆಗುವ ಪ್ರತಿಕೂಲ ಪರಿಣಾಮಗಳನ್ನು ತಪ್ಪಿಸಬಹುದು. ಸರಳ ವ್ಯಾಯಾಮಗಳನ್ನು ಮಾಡುವತ್ತ ಫಿಟ್‌ನೆಸ್ ಪ್ರಿಯರು ಮುಂದಾಗಬೇಕು.
ರೋಗಗಳು ಜತೆಯಲ್ಲಿಯೇ ಬರುತ್ತವೆ
ಜಿಮ್ ಮಾಡುವಾಗ ಸ್ನಾಯುಗಳೆಲ್ಲ ಹುರಿಗಟ್ಟಿರುತ್ತವೆ. ಜಿಮ್‌ಗೆ ಹೋಗುವುದನ್ನು ನಿಲ್ಲಿಸಿದ ಮೇಲೆ ಸ್ನಾಯುಗಳು ಬಲ ಕಳೆದುಕೊಳ್ಳುತ್ತವೆ. ಪ್ರೊಟೀನ್‌ಗಳು ಸ್ನಾಯುಗಳನ್ನು ತುಂಬಿಕೊಳ್ಳುತ್ತವೆ. ಬೊಜ್ಜು ಶೇಖರಗೊಂಡಂತೆ ದೇಹದ ತೂಕ ಹೆಚ್ಚುತ್ತಾ ಹೋಗುತ್ತದೆ. ಇದರಿಂದ ಮೂಳೆ ಸವೆತ, ಹೃದಯ ಸಂಬಂಧಿ ರೋಗಗಳು ಜತೆಯಲ್ಲಿಯೇ ಬರುತ್ತವೆ.
ನಾವೇ ಹೊಣೆಗಾರರು
ಜಿಮ್ ಕೇಂದ್ರಗಳೇ ಆಗಿರಲಿ ಅಥವಾ ನಾವು ಆಡುವ ಯಾವುದೇ ಆಟವೇ ಆಗಿರಲಿ. ನಮ್ಮ ದೇಹದ ಮೇಲೆ ನಾವು ಇರಿಸಬೇಕಾದ ಪ್ರಜ್ಞೆಯನ್ನು, ಎಚ್ಚರವನ್ನು ಇವು ತಿಳಿಸಿಕೊಡುತ್ತವೆ. ದೇಹದ ಮೇಲೆ ಕಾಳಜಿಯನ್ನು ಇರಿಸಿಕೊಂಡವರಾರೂ ವ್ಯಾಯಾಮಗಳಿಂದ ವಿಮುಖರಾಗಲಾರರು. ಜಿಮ್‌ಗೆ ಸೇರುವ ಮುಂಚೆಯೇ ನಮ್ಮಲ್ಲಿ ಜಿಮ್ ಬಿಡುವ ಯೋಚನೆ ಸುಳಿದರೆ ಪರಿಪೂರ್ಣ ವ್ಯಾಯಾಮಾಭ್ಯಾಸ ಮಾಡಲು ಆಗುವುದಿಲ್ಲ. ಮುಂದೊಂದು ದಿನ ಜಿಮ್ ಬಿಟ್ಟು ದಪ್ಪಗಾದರೆ ಅದಕ್ಕೆ ನಾವೇ ಹೊಣೆ ಆಗಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.