ಕೈಗಾರಿಕಾ ಹೊಗೆಯಿಂದ ಡಿಟರ್ಜಂಟ್‌!


Team Udayavani, Mar 3, 2020, 3:09 AM IST

kaigarica

ಬೆಂಗಳೂರು: ಕೈಗಾರಿಕೆಗಳು ಉಗುಳುವ ಹೊಗೆಯನ್ನು ನೀವು ವೈಜ್ಞಾನಿಕವಾಗಿ ಹಿಡಿದಿಟ್ಟರೆ, ನಿತ್ಯ ಅದರಿಂದ ಲಕ್ಷಾಂತರ ರೂಪಾಯಿ ಗಳಿಸಬಹುದು! ಇದು ನ್ಯಾನೋ ತಂತ್ರಜ್ಞಾನದ ಚಮತ್ಕಾರ ಜಾಗತಿಕ ಮಟ್ಟದಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ ಶಾಖೋತ್ಪನ್ನ ಘಟಕಗಳು, ಬೃಹತ್‌ ಕೈಗಾರಿಕೆಗಳು ಉಗುಳುವ ಹಾಗೂ ಕೃಷಿ ತ್ಯಾಜ್ಯ ಸುಡುವುದರಿಂದ ಹೊರಹೊಮ್ಮುವ ಹೊಗೆಯನ್ನು ಆದಾಯದ ಮೂಲವಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ಮೊಹಾಲಿಯ ಇನ್‌ಸ್ಟಿಟ್ಯೂಟ್‌ ಆಫ್ ನ್ಯಾನೊ ಸೈನ್ಸ್‌ ಟೆಕ್ನಾಲಜಿ (ಐಎನ್‌ಎಸ್‌ಟಿ) ಅಭಿವೃದ್ಧಿಪಡಿಸಿದ್ದು, ಈಗಾಗಲೇ ಇದರ ಪ್ರಯೋಗ ಕೂಡ ನಡೆಸಿದೆ. ಬೆಂಗಳೂರು ಇಂಡಿಯಾ ನ್ಯಾನೊದಲ್ಲಿ ಇದನ್ನು ಕಾಣಬಹುದು.

ಈ ಮೂಲಗಳಿಂದ ಬರುವ ಅನಿಲವನ್ನು ಹಿಡಿದಿಟ್ಟು, ವೈಜ್ಞಾನಿಕವಾಗಿ ಸಂಸ್ಕರಿಸಿದಾಗ ಸೋಡಿಯಂ ಕಾರ್ಬೋನೇಟ್‌ ಉತ್ಪತ್ತಿಯಾಗುತ್ತದೆ. ಸಾಮಾನ್ಯವಾಗಿ ಡಿಟರ್ಜಂಟ್‌ ಪೌಡರ್‌, ದ್ರವ ಅಥವಾ ಸೋಪು ತಯಾರಿಕೆಗೆ ಇದನ್ನು ಬಳಸಲಾಗುತ್ತದೆ. ಅಪ್ಪಟ ನ್ಯಾನೊ ಸೋಡಿಯಂ ಕಾರ್ಬೋನೇಟ್‌ಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದ್ದು, ಒಂದು ಕೆ.ಜಿಗೆ 90ರಿಂದ 95 ಸಾವಿರ ರೂ. ಆಗುತ್ತದೆ. ಆದರೆ, ಈ ಪ್ರಕ್ರಿಯೆಗೆ 15-16 ಸಾವಿರ ರೂ. ಖರ್ಚಾಗುತ್ತದೆ. ಒಂದು ವೇಳೆ ನೂರಾರು ಕೈಗಾರಿಕೆಗಳಲ್ಲಿ ಇದನ್ನು ಅಳವಡಿಸಿದರೆ, ಅನಾಯಾಸವಾಗಿ ಲಕ್ಷಾಂತರ ರೂ. ಗಳಿಸಬಹುದು ಎಂದು ಐಎನ್‌ಎಸ್‌ಟಿಯ ಡಾ.ಸುಜಿತ್‌ ವಿವರಿಸುತ್ತಾರೆ.

ಪಂಜಾಬ್‌ ಸರ್ಕಾರ, ಎನ್‌ಟಿಪಿಸಿ ಆಸಕ್ತಿ: ಪಂಜಾಬ್‌ನಲ್ಲಿ ಕೃಷಿ ತ್ಯಾಜ್ಯ ಸುಡುವುದರಿಂದ ಹೊರಹೊಮ್ಮುವ ಹೊಗೆ ಸ್ಥಳೀಯವಾಗಿ ಸಾಕಷ್ಟು ಸಮಸ್ಯೆಗೆ ಕಾರಣವಾಗುತ್ತಿದೆ. ಆದ್ದರಿಂದ ಅಲ್ಲಿನ ಸರ್ಕಾರವು ಇಂತಹದ್ದೊಂದು ಸಂಸ್ಕರಣಾ ಘಟಕ ಸ್ಥಾಪನೆಗೆ ಆಸಕ್ತಿ ತೋರಿಸಿದ್ದು, ಶೀಘ್ರದಲ್ಲೇ ಘಟಕ ತಲೆಯೆತ್ತಲಿದೆ. ಜತೆಗೆ ಉತ್ತರ ಪ್ರದೇಶದ ದಾದ್ರಿಯಲ್ಲಿನ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್‌ ನಿಗಮ (ಎನ್‌ಟಿಪಿಸಿ) ಕೂಡ ಮುಂದೆಬಂದಿದೆ ಎಂದೂ ಡಾ.ಸುಜಿತ್‌ ಮಾಹಿತಿ ನೀಡಿದರು.

ಅಂದಹಾಗೆ, ದೆಹಲಿ ಸುತ್ತಲಿನ ಪ್ರದೇಶಗಳಲ್ಲಿ ಈ ಕೃಷಿ ತ್ಯಾಜ್ಯ ಸುಡುವುದರಿಂದ ಆಗಾಗ್ಗೆ ವಾಯುಮಾಲಿನ್ಯ ಉಂಟಾಗುತ್ತಿದ್ದು, ಅಂತಹ ಕಡೆಗಳಲ್ಲೂ ಈ ತಂತ್ರಜ್ಞಾನ ಪ್ರಯೋಜನಕಾರಿ ಆಗಲಿದೆ. ಒಂದೆಡೆ ವಾಯುಮಾಲಿನ್ಯಕ್ಕೆ ಕಾರಣವಾದ ಹೊಗೆಗೆ ಈ ತಂತ್ರಜ್ಞಾನದಿಂದ ಮುಕ್ತಿ ಸಿಕ್ಕರೆ, ಮತ್ತೂಂದೆಡೆ ಕಡಿಮೆ ಡಿಟರ್ಜಂಟ್‌ ಬಳಕೆ ಮಾಡುವುದರಿಂದಲೂ ನೀರು ಕಲುಷಿತಗೊಳ್ಳುವುದು ಕಡಿಮೆ ಆಗುತ್ತದೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ.

ಅನಿಲದಲ್ಲಿ ಏನಿರುತ್ತೆ?: ಕಲ್ಲಿದ್ದಲು ಅಥವಾ ಕೃಷಿ ತ್ಯಾಜ್ಯವನ್ನು ಸುಟ್ಟಾಗ, ಅದರಿಂದ ಹೊರಹೊಮ್ಮುವ ಅನಿಲದಲ್ಲಿ ಸಾರಜನಕ, ಗಂಧಕ, ಇಂಗಾಲದ ಅಂಶಗಳು ಇರುತ್ತವೆ. ಇವು ವಾಯುಮಾಲಿನ್ಯಕ್ಕೆ ಮಾರಕ. ಆದರೆ, ಈ ಅನಿಲದಲ್ಲಿನ ನ್ಯಾನೋ ಕಣಗಳನ್ನು ಹೀರಿಕೊಂಡು, ಸಂಸ್ಕರಿಸಿದಾಗ ದ್ರವ ರೂಪಕ್ಕೆ ಪರಿವರ್ತನೆ ಆಗುತ್ತದೆ. ಅದೇ ನಂತರದಲ್ಲಿ ಸೋಡಿಯಂ ಕಾರ್ಬೋನೇಟ್‌ ಆಗುತ್ತದೆ. ಸಾಮಾನ್ಯ ಡಿಟರ್ಜಂಟ್‌ನಲ್ಲಿರುವ ಸೋಡಿಯಂ ಕಾರ್ಬೋನೇಟ್‌ಗಿಂತ ಇದು ಹೆಚ್ಚು ಪರಿಣಾಮಕಾರಿಯಾಗಿದೆ. ಹಾಗಾಗಿ, ಹತ್ತು ಗ್ರಾಂ ಸಾಮಾನ್ಯ ಡಿಟರ್ಜಂಟ್‌ ಬದಲಿಗೆ, ಈ ನ್ಯಾನೋ ತಂತ್ರಜ್ಞಾನದಲ್ಲಿ ಹೊರಬಂದ ಸೋಡಿಯಂ ಕಾರ್ಬೋನೇಟ್‌ ಒಂದು ಗ್ರಾಂಗಿಂತ ಕಡಿಮೆ ಬಳಸಿದರೂ ಸಾಕು ಎಂದು ಅವರು ಹೇಳಿದರು.

ಶಾಖೋತ್ಪನ್ನ ಘಟಕಗಳಿಂದ ಹೊರಹೊಮ್ಮುವ ಅನಿಲವನ್ನು ಸೋಡಿಯಂ ಕಾರ್ಬೋನೇಟ್‌ ಆಗಿ ಪರಿವರ್ತಿಸುವಲ್ಲಿ ವಿವಿಧ ಐಐಐಟಿ ಮತ್ತಿತರ ಸಂಶೋಧನಾ ಸಂಸ್ಥೆಗಳು ನಿರತವಾಗಿವೆ. ಆದರೆ, ಕೈಗಾರಿಕೆಯಲ್ಲಿ ಇದರ ಪ್ರಯೋಗ ಮೊದಲ ಬಾರಿಗೆ ಐಎನ್‌ಎಸ್‌ಟಿ ಮಾಡುತ್ತಿದೆ. ಈ ಸಂಸ್ಕರಣಾ ಪ್ರಕ್ರಿಯೆಗಾಗಿ ಪ್ರತ್ಯೇಕ ಮಾದರಿ (ಪ್ರೋಟೋಟೈಪ್‌) ಯನ್ನು ಸಿದ್ಧಪಡಿಸಲಾಗಿದೆ. ಈಗಾಗಲೇ ಸ್ಥಳೀಯ ಕುಮಾರ್‌ ಸೋಪ್‌ ಆಂಡ್‌ ಡಿಟರ್ಜಂಟ್‌ ಕಂಪೆನಿ ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇತ್ತೀಚೆಗೆ ಒಂದು ಕೆಜಿ ಸೋಡಿಯಂ ಕಾರ್ಬೋನೇಟ್‌ ಪೂರೈಸಲಾಗಿದೆ.

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

18-bng

Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್‌

17-bng

Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ

16-bng

Bengaluru: ಮರಕ್ಕೆ ಬೈಕ್‌ ಡಿಕ್ಕಿ ಹೊಡೆದು ಯುವಕ ಸಾವು

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

maharstra

Election Results: ಮಹಾರಾಷ್ಟ್ರ, ಝಾರ್ಖಂಡ್‌ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.