4 ವರ್ಷಗಳ ಹಿಂದೆ ಶಿಲಾನ್ಯಾಸ; ಮೊದಲ ಹಂತವಷ್ಟೇ ಪೂರ್ಣ

ಕೊಂಕಣ ರೈಲ್ವೇ ಕೌಶಲ ಕೇಂದ್ರ ಶೀಘ್ರ ಉದ್ಘಾಟನೆ

Team Udayavani, Mar 3, 2020, 5:16 AM IST

train

ಉಡುಪಿ: ಕೊಂಕಣ ರೈಲ್ವೇಯ ಸಾಕಾರಕ್ಕೆ ಯೋಗದಾನ ನೀಡಿದವರಲ್ಲಿ ಒಬ್ಬರಾದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಹೆಸರಿನಲ್ಲಿ ರೈಲ್ವೇ ಗೋಡೌನ್‌ ರಸ್ತೆ ಪಕ್ಕದಲ್ಲಿ ನಿರ್ಮಿಸಲಾದ ಕೌಶಲ ಅಭಿವೃದ್ಧಿ ಕೇಂದ್ರ ಶೀಘ್ರವೇ ಉದ್ಘಾಟನೆಗೊಳ್ಳಲಿದೆ.

2015ರ ನವೆಂಬರ್‌ 16ರಂದು ಆಗಿನ ಕೇಂದ್ರ ಸಚಿವ ಸುರೇಶ ಪ್ರಭು ಅವರು ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ತಳ ಅಂತಸ್ತು ಮತ್ತು ಎರಡು ಮಹಡಿಗಳ ಮೂಲ ಯೋಜನೆಯಲ್ಲಿ ಈಗ ತಳ ಅಂತಸ್ತು ಮಾತ್ರ ನಿರ್ಮಾಣಗೊಂಡಿದೆ. ಪೀಠೊಪಕರಣ ಸೇರಿ ಒಟ್ಟು 2.96 ಕೋ.ರೂ. ಮೊತ್ತದ ಯೋಜನೆ ಇದು.

ಈಗಾಗಲೇ ಎರಡು ವರ್ಷ ಗಳಲ್ಲಿ ಉಡುಪಿ ಆಸುಪಾಸಿನ ಕಾಲೇಜುಗಳಿಗೆ ಹೋಗಿ ಕೊಂಕಣ ರೈಲ್ವೇ ತರಬೇತಿ ಸಂಸ್ಥೆಯಿಂದ 1,400 ಮಂದಿಗೆ ಮೃದು ಕೌಶಲ ತರಬೇತಿ ಒದಗಿಸಲಾಗಿದೆ.

ಕಟ್ಟಡ ರಚನೆಯಾಗದ ಕಾರಣ ಮಡಗಾಂವ್‌ನಲ್ಲಿರುವ ಕೊಂಕಣ ರೈಲ್ವೇ ಸಿಬಂದಿಗೆ ತರಬೇತಿ ನೀಡುವ ಸಂಸ್ಥೆಯೇ ಇದನ್ನು ನಿರ್ವಹಿಸುತ್ತಿತ್ತು. ಇನ್ನು ಮುಂದೆ ಕೊಂಕಣ ರೈಲ್ವೇ ಸಿಬಂದಿ ವಿಭಾಗ ತರಬೇತಿಯನ್ನು ಮುನ್ನಡೆಸಲಿದೆ.

ವಿವಿಧ ಬಗೆಯ ತರಬೇತಿ
ನಾಯಕತ್ವ, ಸಂದರ್ಶನ ಎದುರಿ ಸುವ ಬಗೆ, ಸಮೂಹ (ತಂಡ) ಕಾರ್ಯ, ಸಂವಹನ ಕಲೆ ಮೊದಲಾದ ತರಬೇತಿಗಳಿರುತ್ತವೆ. ಮುಂದೆ ಮೆಕಟ್ರಾನಿಕ್ಸ್‌ (ಮೆಕ್ಯಾನಿಕಲ್‌ ಮತ್ತು ಮಾಹಿತಿ ತಂತ್ರಜ್ಞಾನ ಸಮ್ಮಿ ಳಿತ) ತರಬೇತಿಯನ್ನು ನೀಡುವ ಯೋಜನೆ ಇದೆ. ಅದಕ್ಕೆ ಕೆಲವೊಂದು ಯಂತ್ರೋಪಕರಣಗಳು ಅಗತ್ಯ ವಾಗಿರುವುದರಿಂದ ಆರಂಭಕ್ಕೆ ಸ್ವಲ್ಪ ಕಾಲಾವಕಾಶ ಹಿಡಿಯಬಹುದು.ಮೊದಲ ಮತ್ತು ಎರಡನೇ ಮಹಡಿ ಯನ್ನು ತಲಾ 1.28 ಕೋ.ರೂ. ವೆಚ್ಚದಲ್ಲಿ ನಿರ್ಮಿಸುವ ಪ್ರಸ್ತಾವವಿದೆ.

ಕೊಂಕಣ ರೈಲ್ವೇ ಸಾಕಾರಗೊಳ್ಳುವಲ್ಲಿ ಮಹತ್ತರ ಪಾತ್ರ ವಹಿಸಿದ ಜಾರ್ಜ್‌ ಫೆರ್ನಾಂಡಿಸ್‌ ಹೆಸರಿನಲ್ಲಿ ಮಡಗಾಂವ್‌ನಲ್ಲಿ ಸುರಂಗ ತಂತ್ರಜ್ಞಾನ ಸಂಸ್ಥೆಯನ್ನು ಸ್ಥಾಪಿಸ ಲಾಗಿದ್ದು, ಅಲ್ಲಿ ಎಂಜಿನಿಯರುಗಳಿಗೆ ಸುರಂಗ ತಂತ್ರಜ್ಞಾನ ತರಬೇತಿ ನೀಡಲಾಗುತ್ತಿದೆ. ಮಧು ದಂಡವತೆ ಸ್ಮರಣಾರ್ಥ ಮಹಾರಾಷ್ಟ್ರದಲ್ಲಿ ಒಂದು ಸಂಸ್ಥೆಯನ್ನು ಆರಂಭಿಸುವುದಾಗಿ ಹೇಳಲಾಗಿದ್ದರೂ ಅದಿನ್ನೂ ಆರಂಭ ವಾಗಿಲ್ಲ.

ರಾಮಕೃಷ್ಣ ಹೆಗಡೆ ಕೌಶಲ ಅಭಿವೃದ್ಧಿ ಕೇಂದ್ರದ ಕಟ್ಟಡ ಮಾರ್ಚ್‌ ಅಂತ್ಯದೊಳಗೆ ಉದ್ಘಾಟನೆಯಾಗಲಿದೆ. ಸದ್ಯ ಲಘು ಕೌಶಲ ಅಭಿವೃದ್ಧಿ ತರಬೇತಿಗಳನ್ನು ನೀಡಲಾಗುತ್ತಿದೆ. ಮುಂದಿನ ಹಂತದ ಕಟ್ಟಡ ಪೂರ್ಣಗೊಂಡ ಬಳಿಕ ವಸತಿ ಸೌಲಭ್ಯ ಸಹಿತ ತರಬೇತಿಯನ್ನು ನೀಡುವ ಇರಾದೆ ಇದೆ.
– ಬಿ.ಬಿ. ನಿಕಮ್‌, ಪ್ರಾದೇಶಿಕ ವ್ಯವಸ್ಥಾಪಕರು, ಕೊಂಕಣ ರೈಲ್ವೇ, ಕಾರವಾರ

ಟಾಪ್ ನ್ಯೂಸ್

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala ಸಿಸ್ಟರ್‌ ಡೋನಾಲ್ಡಾ ಪಾಯಸ್‌ ನಿಧನ

Karkala: ಅರುಣೋದಯ ವಿಶೇಷ ಶಾಲೆ ಮುಖ್ಯಸ್ಥೆ ಸಿಸ್ಟರ್‌ ಡೋನಾಲ್ಡಾ ಪಾಯಸ್‌ ನಿಧನ

Manipal ದಾಳಿ: 15 ಬುಟ್ಟಿ ಮರಳು ವಶಕ್ಕೆ

Manipal ದಾಳಿ: 15 ಬುಟ್ಟಿ ಮರಳು ವಶಕ್ಕೆ

Udupi: ಗೀತಾರ್ಥ ಚಿಂತನೆ-87: ಎದೆಗಾರಿಕೆಗೆ ಮಾದರಿ ಮಹಿಳೆ ಕುಂತಿ

Udupi: ಗೀತಾರ್ಥ ಚಿಂತನೆ-87: ಎದೆಗಾರಿಕೆಗೆ ಮಾದರಿ ಮಹಿಳೆ ಕುಂತಿ

sand

Kaup: ಕೈಪುಂಜಾಲು; ಅಕ್ರಮ ಮರಳು ಸಂಗ್ರಹ; ಪ್ರಕರಣ ದಾಖಲು

Karkala: ಮಾನಸಿಕ ಖಿನ್ನತೆಯಿಂದ ಮಹಿಳೆ ಆತ್ಮಹ*ತ್ಯೆ

Karkala: ಮಾನಸಿಕ ಖಿನ್ನತೆಯಿಂದ ಮಹಿಳೆ ಆತ್ಮಹ*ತ್ಯೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Dinesh-gundurao

Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.