ಕೊಕಟನೂರ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ
Team Udayavani, Mar 3, 2020, 1:00 PM IST
ಸಿಂದಗಿ: ಸಾರ್ವಜನಿಕ ಜಾಗದಲ್ಲಿ ಅತಿಕ್ರಮಣವಾಗಿ ಸಮುದಾಯ ಭವನ ಕಟ್ಟಲು ಮುಂದಾಗಿರುವುದನ್ನು ಖಂಡಿಸಿ ಗ್ರಾಮದ ಮಹಿಳೆಯರು ಗ್ರಾಪಂ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ನಡೆದಿದೆ.
ಕೊಕಟನೂರ ಗ್ರಾಮದಲ್ಲಿನ ಸರ್ವೇ ನಂ. 364 ಮತ್ತು 365 ಗ್ರಾಪಂಗೆ ಸೇರಿದ ಜಾಗದಲ್ಲಿ ಕಳೆದ 20 ವರ್ಷಗಳಿಂದಲೂ ಅಲ್ಲಿ ಮಹಿಳೆಯರು ಶೌಚಾಲಯಕ್ಕೆ ಬಳಕೆ ಮಾಡುತ್ತಿದ್ದಾರೆ. ಆದರೆ ಈಗ ಅಲ್ಲಿ ಒಂದು ಸಮುದಾಯ ಪಂಚಾಯತ್ ಅನುಮತಿ ಪಡೆಯದೇ ಜಾಗವನ್ನು ಅತಿಕ್ರಮಣ ಮಾಡಿ ಸಮುದಾಯ ಭವನ ಕಟ್ಟಡವನ್ನು ಏಕಾಏಕಿ ಪ್ರಾರಂಭಿಸಿದ್ದಾರೆ. ಅತಿಕ್ರಮಣ ಮಾಡಿ ಸಮುದಾಯ ಭವನ ಕಟ್ಟಡ ಕಾಮಗಾರಿ ನಿಲ್ಲಿಸಬೇಕು ಎಂದು ಗ್ರಾಮದ ಮಹಿಳೆಯರು ಒತ್ತಾಯಿಸಿದರು.
ಗ್ರಾಮದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಶೌಚಾಲಯ ಕಟ್ಟಿಸಿಕೊಳ್ಳಲು ಆಗಿಲ್ಲ. ಬಯಲು ಶೌಚ ಅನಿವಾರ್ಯವಾಗಿದೆ. ಗ್ರಾಪಂಗೆ ಸೇರಿದ ಗೌಂಟಾಣಿ ಜಾಗದಲ್ಲಿ ಅತಿಕ್ರಮವಾಗಿ ಸಮುದಾಯ ಭವನ ಕಟ್ಟಡ ಕಾಮಗಾರಿ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ರಾಮದ ಮಹಿಳೆಯರಾದ ಶಾಂತಾಬಾಯಿ ಗೋವಿಂದ, ಭಾಗಮ್ಮ ಮಠ, ಶಿವಗಂಗವ್ವ ಉಪ್ಪಾರ, ಯಮನವವ್ ಗೌಂಡಿ, ಗುರುಬಾಯಿ ಅಗಸರ, ಸುಮಿತ್ರಾ ಮಠಪತಿ, ಗಂಗಾಬಾಯಿ ಮಂಕಣಿಮಠ, ಷರಿಪಾ ಗುಡ್ಯಾಳ, ದಾನಮ್ಮ ಮಠಪತಿ, ಮಾದೇವಿ ಗೋವಿಂದ, ಲಕ್ಕಮ್ಮ ಹೆಗಡ್ಯಾಳ, ದುರ್ಗವ್ವ ಮಾದರ, ಪಾರ್ವತಿ ಗೌಂಡಿ, ಬಿಸ್ಮಿಲ್ಲಾ ಕನ್ನೊಳ್ಳಿ, ಮಹಾದೇವಿ ಬ್ಯಾಕೋಡ, ಲಕ್ಷ್ಮೀ ಗತ್ತರಗಿ, ಕಲ್ಯಾಣಪ್ಪ ಹಿಟ್ನಳ್ಳಿ, ರೇಣುಕಾ ತಳವಾರ, ಮುನ್ನಾಬಿ ಹಿಪ್ಪರಗಿ, ಅಂಬವ್ವ ನೆಲ್ಲಗಿ, ಶಂಕ್ರಮ್ಮ ಗೌಂಡಿ, ಷರಿಪಾ ಬಾಗವಾನ, ಅಮಿನಬಿ ಗಲಗಲಿ, ಗಂಗಾಬಾಯಿ ಕೊಡೆಕಲ್, ಶರಣಮ್ಮ ಸಾತಿಹಾಳ, ಪಾತಿಮಾ ಹಿಪ್ಪರಗಿ, ಹುಸೆನಬಿ ಬೆನಕನಳ್ಳಿ, ಸಲಿಮಾ ಕುಮಸಗಿ, ಪದ್ಮಾ ಬಾಗೇವಾಡಿ, ಮಲ್ಲಮ್ಮ ಶಿವಣಗಿ, ಶಿವಮ್ಮ ಬಂದಾಳ, ಕಮಲಾಬಾಯಿ ತಳವಾರ, ದೀಪಾ ಮಠಪತಿ, ರಯಜಾನ ಬೆನಕನಳ್ಳಿ, ಶಾಂತಾಬಾಯಿ ಗೌಂಡಿ, ಸಿದ್ದವ್ವ ಕನ್ನೂರ, ರೇಣುಕಾ ಚಿನ್ನಾಕರ, ಲಕ್ಷ್ಮೀಬಾಯಿ ಗೌಂಡಿ ಸೇರಿದಂತೆ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.