ಕಾಮಣ್ಣನ ಹಬ್ಬ; ವೈಭವ ಮರೆಯಾಗಿದೆ, ಆತಂಕ ಜೊತೆಯಾಗಿದೆ
Team Udayavani, Mar 4, 2020, 5:52 AM IST
ಬಹುಶಃ ಈಗಿನ ಕಾಲದವರಿಗೆ ಕಾಮಣ್ಣನ ಹಬ್ಬ ಎಂದರೆ ಏನೆಂದು ತಿಳಿದಿರಲಿಕ್ಕಿಲ್ಲ. ನಮ್ಮ ಕಾಲದಲ್ಲಿ ಅದಕ್ಕೆ ಬಹಳ ಮಹತ್ವವಿತ್ತು. ಹುಡುಗರಂತೂ ಆ ಹಬ್ಬಕ್ಕಾಗಿ ಆತುರದಿಂದ ಕಾಯುತ್ತಿದ್ದರು!
ಹಬ್ಬದ ದಿನ ಗುಂಪುಗುಂಪಾಗಿ ಮನೆಮನೆಗೂ ಹೋಗಿ- “ಈ ರಾತ್ರಿ ಕಾಮಣ್ಣನನ್ನು ಸುಡಬೇಕು, ಕಟ್ಟಿಗೆ ಕೊಡಿ’ ಎಂದು ಕೇಳುತ್ತಿದ್ದರು. ಅದು ಪದ್ಧತಿ, “ಇಲ್ಲ’ ಎನ್ನುವ ಹಾಗಿಲ್ಲ. ಮನೆಯವರು ಬೈದುಕೊಂಡೇ ಕೊಡುತ್ತಿದ್ದರು. ಒಂದೆರಡು ಕಟ್ಟಿಗೆ ತುಂಡು ಕೊಟ್ಟು ಸಾಗಹಾಕಲು ನೋಡಿದರೆ ಒಪ್ಪುತ್ತಾರೆಯೇ ಆ ಫಟಿಂಗರು? “ಕಾಮಣ್ಣ ಕಟ್ಟಿಗೆ, ಭೀಮಣ್ಣ ಭರಣಿ’ ಎಂದು ರಾಗವಾಗಿ ಕೂಗಿಕೊಂಡು, ಮೆತ್ತಗೆ ಹಿಂದುಗಡೆ ನುಸುಳಿ, ಅಲ್ಲಿದ್ದ ಸೌದೆಗಳೊಂದಿಗೆ ಪರಾರಿ!
ಹುಡುಗರು ಇಂಥ ವರ್ತನೆಯಿಂದ ಸಿಟ್ಟಾದ ಆ ಜನರೂ ರಾತ್ರಿ ಕಾಮದಹನಕ್ಕೆ ಹಾಜರ್! ಅದಲ್ಲವೇ ತಮಾಶೆ? ಎಲ್ಲರೂ ದನಿಗೂಡಿಸುತ್ತಿದ್ದರು-“ಕಾಮಣ್ಣ ಕಟ್ಟಿಗೆ, ಭೀಮಣ್ಣ ಭರಣಿ’ ಎಂದು. ಆಕಾಶದವರೆಗೂ ಏರುತ್ತಿದ್ದ ಬೆಂಕಿಯು ಕಟ್ಟಿಗೆಗಳ ನಡುವೆ ನಿಲ್ಲಿಸಿದ್ದ ಕಾಮದೇವನನ್ನು ನುಂಗುತ್ತಿದ್ದರೆ, ಹುಡುಗರು ಚಪ್ಪಾಳೆ ತಟ್ಟುತ್ತಾ, ಹಾಡುತ್ತಾ, ಅದರ ಸುತ್ತ ಕುಣಿದದ್ದೂ ಕುಣಿದದ್ದೇ! ಒಂದೊಂದು ಸಲ, ರಾವಣನನ್ನೂ ಮಾಡಿ, ಅಗ್ನಿದೇವನಿಗೆ ಅರ್ಪಿಸಿಬಿಡುತ್ತಿದ್ದರು! ಬೆಳಗಿನ ಆಕ್ರೋಶವನ್ನು ಮರೆತು, ಹಿರಿಯರೂ ಸಂಭ್ರಮಿಸುತ್ತಿದ್ದರು.
“ನಮ್ಮನ್ಯಾಕೆ ಅಣ್ಣತಮ್ಮಂದಿರ ಜೊತೆ ಕಳಿಸೊಲ್ಲ? ನಾವು ಬರೀ ಹೋಳಿಗೆ ಮಾಡೋದಿಕ್ಕೆ ಮಾತ್ರ ಲಾಯಕ್ಕಾ?’ ಎಂದು ಬುಸುಗುಡುತ್ತಿದ್ದ, ಹೆಣ್ಣುಮಕ್ಕಳು ಹಿರಿಯರ ಮೇಲೆ ಪ್ರತೀಕಾರ ಎನ್ನುವಂತೆ ಗುಟ್ಟಾಗಿ ಆದಷ್ಟು ಕಟ್ಟಿಗೆಗಳನ್ನು ಸಾಗಿಸಿಬಿಡುತ್ತಿದ್ದರು!
ಈ ಕಾಮಣ್ಣ ದಹನದ ಹಿಂದೆ ಇರುವ ಕಥೆ ಇಷ್ಟೇ-ಪರಶಿವ ಅದೊಮ್ಮೆ ಉಗ್ರ ತಪಸ್ಸನ್ನು ಕೈಗೊಂಡಿದ್ದ. ಅದಕ್ಕೆ ಭಂಗ ತರಲು ನಿರ್ಧರಿಸಿದ ದೇವತೆಗಳು, ಮನ್ಮಥನ ಮೊರೆ ಹೋದರು. ಮನ್ಮಥನು, ಅಪ್ಸರೆಯರ ಸಹಾಯದಿಂದ ಶಿವನ ತಪಸ್ಸನ್ನೇನೋ ಭಂಗ ಮಾಡಿದ. ಆದರೆ, ಶಿವನ ಮೂರನೇ ಕಣ್ಣಿನ ಜ್ವಾಲೆಗೆ ಬೂದಿಯಾದ! ಆಗ ಮನ್ಮಥನ ಪತ್ನಿ ರತಿ ಬಹಳವಾಗಿ ಬೇಡಿಕೊಳ್ಳಲು, “ನಿನ್ನ ಪತಿ ಜೀವಿಸಲಿ. ಆದರೆ, ನಿನಗೆ ಮಾತ್ರ ಅವನು ಕಾಣುವಂತಾಗಲಿ’ ಎಂದು ಶಿವ ವರ ಕೊಟ್ಟ. ಅದಕ್ಕೇ ಮನ್ಮಥನಿಗೆ ಅನಂಗ (ಆಕೃತಿ ಇಲ್ಲದವನು) ಎಂಬ ಹೆಸರು ಬಂತು.
ಕಾಮನೆಗಳ ಪ್ರತೀಕವಾದ ಮನ್ಮಥ ಇಂದಿಗೂ ಎಲ್ಲರನ್ನೂ ತನ್ನ ಆಕರ್ಷಣಾ ಶಕ್ತಿಯಿಂದ ಆವರಿಸುತ್ತಾನೆ. ಆದರೆ, ನಾವು ಮನೋಬಲದಿಂದ ಆ ಕಾಮನೆಗಳೆಲ್ಲವನ್ನೂ ಭಸ್ಮಮಾಡಬೇಕೆಂಬುದೇ ಆ ದಿನದ ಸಂಕೇತ. ಅದುವೇ ಕಾಮಣ್ಣನ ಹಬ್ಬ/ ಹೋಳಿ ಹಬ್ಬದ ಹಿಂದಿನ ಕತೆ.
ಆದರೆ, ಈಗ ಹಬ್ಬದ ಹಿಂದಿನ ಮಹತ್ವವನ್ನು ಅರಿತು, ಅರ್ಥಪೂರ್ಣವಾಗಿ ಆಚರಿಸುವವರೇ ಇಲ್ಲ. ಒಬ್ಬರಿಗೊಬ್ಬರು ಬಣ್ಣ ಎರಚಿ, ಸಿಹಿತಿಂಡಿ ಹಂಚಿ ಖುಷಿ ಪಡುವ ಹಬ್ಬದ ಮೂಲ ಆಚರಣೆ ಮರೆಯಾಗಿ, ಆ ದಿನ ಹೊರಗೆ ಹೋಗುವುದೇ ಕಷ್ಟ ಎಂಬಂತಾಗಿದೆ. ಬಣ್ಣ ತುಂಬಿದ ಪಿಚಕಾರಿ ಹಿಡಿದು, ಕಂಡಕಂಡವರ ಮೇಲೆಲ್ಲಾ ಬಣ್ಣವೆರಚಿ, ನೀರು ಪೋಲು ಮಾಡಿ, ತಲೆ ಮೇಲೆ ಮೊಟ್ಟೆ ಒಡೆಯುವುದೇ ಹಬ್ಬ ಎಂಬಂತಾಗಿರುವುದು ವಿಷಾದನೀಯ.
-ನುಗ್ಗೆಹಳ್ಳಿಪಂಕಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’
Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.