ಕಾಡು ಕಪಿಗಿಂತ ಕೆಟ್ಟದಾಗಿ ಇದ್ದಾಳೆ…


Team Udayavani, Mar 4, 2020, 5:38 AM IST

bhaame

ನಾವು ಕಾಲೇಜಿಗೆ ನಡೆದು ಹೋಗುವಾಗ ಎದುರಾಗಿ ಕಾರೊಂದು ಬರುತ್ತಿತ್ತು. ಕಾರು ನಿಲ್ಲಿಸಿದವರೇ, ನಮ್ಮೂರ ಹೆಸರು ಹೇಳಿ ಯಾವ ಹಾದಿಯಲ್ಲಿ ಹೋಗಬೇಕು ಎಂದು ಕೇಳಿದರು.

ಹಿಂದೆಲ್ಲಾ ಹುಡುಗಿಯ ಒಪ್ಪಿಗೆ ಕೇಳಿ ಮದುವೆ ಮಾಡುತ್ತಿರಲಿಲ್ಲ. ಅವಳಿಗೆ ಗೊತ್ತೇ ಆಗದಂತೆ ವಧು ಪರೀಕ್ಷೆ ನಡೆಸುವುದೂ ಇತ್ತು. ನನ್ನ ಗೆಳತಿಗೂ ಹಾಗೇ ಆಯ್ತು. ಐದೂ ಮಂದಿ ಹೆಣ್ಣುಮಕ್ಕಳೇ ಇದ್ದ ಆಕೆಯ ಮನೆಯಲ್ಲಿ, ವಯಸ್ಸು ಹದಿನೆಂಟು ತುಂಬುವುದನ್ನೇ ಕಾದು ಲಗ್ನ ಮಾಡಿ ಕಳಿಸಿಬಿಡುತ್ತಿದ್ದರು. ಅವರಿಗೆಲ್ಲ ಆಯ್ಕೆ ಎನ್ನುವ ಪ್ರಶ್ನೆಯೇ ಇರಲಿಲ್ಲ. ಅಪ್ಪ ಹೇಳಿದ್ದೇ ಫೈನಲ….

ನನ್ನ ಸ್ನೇಹಿತೆಯ ಪಿಯುಸಿ ಕೊನೇ ಪರೀಕ್ಷೆಯಿನ್ನೂ ಮುಗಿದಿರಲಿಲ್ಲ. ಆಗಲೇ ಹುಡುಗನ ಕಡೆಯವರನ್ನು ಕರೆಸಿದ್ದರು. ಇವಳಿಗೋ ಮನಸ್ಸಿಲ್ಲ. ಅದೆಷ್ಟು ದುಸುಮುಸು ಮಾಡಿದರೂ ಅಪ್ಪ ಕಿವಿಗೇ ಹಾಕಿಕೊಳ್ಳಲಿಲ್ಲ. ಅವಳ ಒಪ್ಪಿಗೆಯಿಲ್ಲದೆಯೇ, ಹುಡುಗನ ಕಡೆಯವರು ಬರುವ ದಿನ ನಿಗದಿಯಾಗಿತ್ತು. ಸಂಜೆ ವೇಳೆಗೆ ಬರುತ್ತೇವೆ ಎನ್ನುವ ಸುದ್ದಿ ತಲುಪಿಸಿದ್ದರು.

ನಾವು ಜ್ಯೂನಿಯರ್‌ ಕಾಲೇಜಿನಲ್ಲಿ ಓದುತ್ತಿದ್ದುದು. ಹಳ್ಳಿಯಿಂದ ಕಾಲೇಜಿಗೆ ಮೂರು ಕಿ.ಮೀ. ನಡೆಯಬೇಕು. (ಬಸ್‌ ಸೌಕರ್ಯವಿತ್ತಾದರೂ, ಅದಕ್ಕೆ ಕೊಡುವ ದುಡ್ಡನ್ನು ಉಳಿತಾಯ ಮಾಡಿ, ಊರಿನ ಜಾತ್ರೆಯಲ್ಲಿ ಖರ್ಚು ಮಾಡುವ ಸದುದ್ದೇಶದಿಂದ ಹತ್ತಾರು ಹುಡುಗಿಯರು ಒಟ್ಟು ಸೇರಿ ನಡೆದೇ ಹೋಗುತ್ತಿದ್ದೆವು.) ಹುಡುಗನ ಮನೆಯವರು ಬರುವ ಆ ದಿನ ಅರ್ಧ ದಿನ ಕ್ಲಾಸ್‌ ಇತ್ತು. ಪಾಪ, ಆಕೆ ಬೆಳಗಿನ ತರಗತಿಗೆ ಹೋಗಿ ಬರುತ್ತೇನೆ ಎಂದು ಗೋಳಾಡಿ ಒಪ್ಪಿಸಿದ್ದಳು. ಅತ್ತತ್ತು ಊದಿದ ಕಣ್ಣು, ಕೆಂಪೇರಿದ ಮುಖ ಕಾಣುವಾಗ ಅಯ್ಯೋ ಎನ್ನಿಸಿತ್ತು ನಮಗೆ.

ನಾವು ಕಾಲೇಜಿಗೆ ನಡೆದು ಹೋಗುವಾಗ ಎದುರಾಗಿ ಕಾರೊಂದು ಬರುತ್ತಿತ್ತು. ಕಾರು ನಿಲ್ಲಿಸಿದವರೇ, ನಮ್ಮೂರ ಹೆಸರು ಹೇಳಿ ಯಾವ ಹಾದಿಯಲ್ಲಿ ಹೋಗಬೇಕು ಎಂದು ಕೇಳಿದರು. ಇಬ್ಬರು ಧೋತಿ, ಶಲ್ಯದ ಹಿರಿಯರು. ಒಬ್ಟಾಕೆ ಮಧ್ಯವಯಸ್ಸಿನ ಮಹಿಳೆ, ಹದಿನಾರು ಹದಿನೇಳರ ಹುಡುಗಿ ಇನ್ನೊಬ್ಟಾಕೆ. ಅವರೆಲ್ಲರ ನಡುವೆ ಟ್ರಿಮ್ಮಾಗಿ ಅಲಂಕರಿಸಿಕೊಂಡು ಕೂತಿದ್ದ ಯುವಕನೊಬ್ಬ. ಮನೆಯ ಯಜಮಾನರ ಹೆಸರು ಹೇಳಿದ ತಕ್ಷಣ ಸ್ನೇಹಿತೆಗೆ ಅರ್ಥವಾಯಿತು.

ಮೊದಲೇ ಮೂಡ್‌ ಕೆಟ್ಟಿದ್ದ ಆಕೆ, ಊರಿಗೆ ವಿರುದ್ಧ ದಿಕ್ಕಿನ ಕಾಲು ಹಾದಿಯತ್ತ ಕೈ ತೋರಿಸಿ “ಅದೇ ದಾರಿ. ಅಲ್ಲಿಗೆ ಕಾರು ಹೋಗುವುದಿಲ್ಲ. ಇಲ್ಲೇ ನಿಲ್ಲಿಸಿ ನಡೆಯಬಹುದು; ಹತ್ತೇ ನಿಮಿಷದಲ್ಲಿ ಮನೆ ಸಿಗುತ್ತೆ’ ಎಂದಳು. ಅಷ್ಟೇ ಅಲ್ಲ, “ನೀವು ನೋಡಬೇಕು ಎಂದಿರುವ ಕನ್ಯೆಯ ಸ್ವಭಾವ ಚೆನ್ನಾಗಿಲ್ಲ. ಕೆಟ್ಟ ಗುಣ ಮತ್ತು ಉಗ್ರ ಕೋಪಿಷ್ಟೆ. ರೂಪಾನೂ ಸಾಲದು. ಕಾಡು ಕಪಿಯ ಹಾಗಿದ್ದಾಳೆ. ಅವಳನ್ನು ಈ ತನಕ ಒಬ್ರೇ ಒಬ್ರೂ ಒಪ್ಪಿಲ್ಲ’ ಎಂದಳು ಮುಗ್ಧವಾಗಿ. ಮುಖ ಮುಖ ನೋಡಿದ ಕಾರಿನ ಜನರು, ಏನು ಮಾಡುವುದು ಎಂದು ಯೋಚಿಸತೊಡಗಿದರು. ಸ್ವಲ್ಪ ದೂರದಲ್ಲಿ ನಿಂತಿದ್ದ ನಮಗೆ ವಿಷಯ ಏನೆಂದು ಸ್ಪಷ್ಟವಾಗಿ ತಿಳಿಯಲಿಲ್ಲ. ನಮ್ಮ ಪಾಡಿಗೆ ನಾವು ಮುಂದೆ ಹೋದೆವು. ಮಧ್ಯಾಹ್ನ ಕಾಲೇಜು ಮುಗಿಸಿ, ಬಿಸಿಲಿನಲ್ಲೇ ನಡೆದು ಬಂದೆವು.

ಮೊದಲಿಗೇ ಸಿಗುವ ಗೆಳತಿಯ ಮನೆಯಲ್ಲಿ ಮಜ್ಜಿಗೆ ಕುಡಿಯುವುದು ವಾಡಿಕೆ. ಮನೆಯಂಗಳದಲ್ಲಿ ಬೆಳಗ್ಗೆ ಕಾಣಿಸಿದ ಕಾರು ನಿಂತಿತ್ತು. ಒಳಗೆ ಕಾಲಿಟ್ಟಾಗ ಬೆಳಗ್ಗೆ ಕಂಡ ಮುಖಗಳು ಕಾಣಿಸಿದವು. ನಮ್ಮ ಜೊತೆಗಿದ್ದ ಗೆಳತಿ ಕಕ್ಕಾಬಿಕ್ಕಿ. ಮುಖದ ತುಂಬಾ ಅಪ್ಪನ ಮೇಲಿನ ಮುನಿಸು. ಆಕೆ ಅದೇ ಮನೆಯವಳು ಎಂದು ಅವರಿಗೆ ಅರ್ಥವಾಯಿತು. ಜೊತೆಯಲ್ಲಿ ತಾವು ನೋಡಬೇಕಿದ್ದ ಹುಡುಗಿ ಆಕೆಯೇ ಎನ್ನುವುದು ಕೂಡಾ. ಅವಳಮ್ಮ ಹಿಂದಿನ ಬಾಗಿಲಿನಿಂದ ಒಳಹೋಗಲು ಕೈ ಸನ್ನೆ ಮಾಡಿದರೂ ಲೆಕ್ಕಿಸದೆ ಎದುರಿನಲ್ಲೇ ಬಂದಳು. ಬೆಪ್ಪಾಗಿದ್ದ ಆಕೆಯನ್ನು ನೋಡಿ, ಬಂದವರು ತುಟಿ ಬಿಚ್ಚಲಿಲ್ಲ. ಮನೆಯ ಯಜಮಾನಿ ನಮ್ಮನ್ನು ಹೋಗಲು ತಿಳಿಸಿದ್ದರು. ಉಳಿದ ಕಥೆಯನ್ನು ಮರುದಿನ ಗೆಳತಿಯೇ ಹೇಳಿದಳು.

ಊಟ ಮಾಡದೆ, ಬೆವರಿಳಿಯುವ ಮುಖಕ್ಕೆ ನೀರೂ ಸೋಕಿಸದೆ, ಉಟ್ಟ ಬಟ್ಟೆಯಲ್ಲೇ ವಧು ಪರೀಕ್ಷೆಗೆ ಮೂತಿ ಊದಿಸಿ ಬಂದು ಕೂತಳು. ಬಂದ ಹಿರಿಯರು, “ನೋಡಮ್ಮ, ನಮ್ಮನೆಗೆ ಸೊಸೆಯಾಗಿ ಬರುವ ಹುಡುಗಿಗೆ ಪದವಿ ಆಗಿರಬೇಕು ಎಂದು ನಮ್ಮಾಸೆ. ಮದುವೆಯಾದ್ಮೇಲೂ ನೀನು ಓದಬಹುದು. ಮಗಳು ಬೇರೆಯಲ್ಲ; ಸೊಸೆ ಬೇರೆ ಅಲ್ಲ ನಮಗೆ’ ಎಂದರು. ತಲೆಯೆತ್ತಿ ನೋಡಿದಾಗ ನಗು ನಗುತ್ತಿದ್ದ ಮುಖಗಳು. ಅದರ ಮಧ್ಯೆ ತುಂಟನೋಟ ಬೀರುವ ಮದುವೆ ಗಂಡು. ನಾಚಿಕೆ ಅಂದ್ರೇನು ಅಂತ ಆಗ ಅವಳಿಗೆ ಅರ್ಥವಾಯ್ತು.

ವಿವಾಹ ಜರುಗಿತು. ವಧುವಿನ ಆಸೆ,ಆಕಾಂಕ್ಷೆಗಳನ್ನು ಅರ್ಥ ಮಾಡಿಕೊಂಡಿದ್ದ ಗಂಡನ ಮನೆಯವರು ಆಕೆ ಓದುವಷ್ಟೂ ಓದಿಸಿದರು. ಆದರೆ, ಗಂಡ ಮಾತ್ರ ಆಗಾಗ ಕಿಚಾಯಿಸುತ್ತಾರಂತೆ-“ಕಾಡು ಕಪಿಯನ್ನು ಮದುವೆಯಾದನಲ್ಲಾ ನಾನು’ ಅಂತ.

-ಕೃಷ್ಣವೇಣಿ ಎಂ. ಕಿದೂರು

ಟಾಪ್ ನ್ಯೂಸ್

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ

1-ree

Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

AUS vs IND, 1st Test: ಟಿ20 ಯುಗದಲ್ಲಿ ಭಾರತ ನೈಜ ಟೆಸ್ಟ್‌ ಆಟ!

AUS vs IND, 1st Test: ಟಿ20 ಯುಗದಲ್ಲಿ ಭಾರತ ನೈಜ ಟೆಸ್ಟ್‌ ಆಟ!

13

Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

11

Uppinangady: ಸರಣಿ ಅಪಘಾತ; 19 ಮಂದಿಗೆ ಗಾಯ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.