ದುರ್ಗಾಪರಮೇಶ್ವರಿ ಬ್ರಹ್ಮ ರಥೋತ್ಸವ


Team Udayavani, Mar 4, 2020, 3:00 AM IST

durga-parameshvari

ಕೆ.ಆರ್‌.ನಗರ: ತಾಲೂಕಿನ ಹಂಪಾಪುರ ಗ್ರಾಮದ ಇತಿಹಾಸ ಪ್ರಸಿದ್ಧ ದುರ್ಗಾಪರಮೇಶ್ವರಿ ಬ್ರಹ್ಮ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ಮಂಗಳವಾರ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಮಂಗಳವಾರ ಮಧ್ಯಾಹ್ನ 12 ರಿಂದ 12.30ರವರೆಗೆ ನಡೆದ ಕೋಟೆ ದುರ್ಗಿ ಎಂದೇ ಪ್ರಸಿದ್ಧಿ ಪಡೆದಿರುವ ದುರ್ಗಾಪರಮೇಶ್ವರಿ ರಥೋತ್ಸವಕ್ಕೆ ಸುತ್ತ ಮುತ್ತಲ ಗಡಿ ಗ್ರಾಮಗಳಾದ ಮಂಚನಹಳ್ಳಿ, ಬಡಕನಕೊಪ್ಪಲು, ಸನ್ಯಾಸಿಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಉತ್ಸವ ಮೂರ್ತಿಗೆ ವಿಶೇಷ ಪೂಜೆ: ರಥೋತ್ಸವದ ಅಂಗವಾಗಿ ದೇವಾಲಯವನ್ನು ಪುಷ್ಪಾಲಂಕಾರ ಮತ್ತು ವಿದ್ಯುತ್‌ ದೀಪಾಲಂಕಾರಗಳಿಂದ ಶೃಂಗರಿಸಲಾಗಿತ್ತು. ಅಲ್ಲದೆ ಜಾತ್ರಾ ಮಹೋತ್ಸವದ ಪ್ರಯುಕ್ತ ಮುಂಜಾನೆಯಿಂದಲೇ ದೇವಿಗೆ ಹೋಮ, ಹವನ, ರುದ್ರಾಭಿಷೇಕ ಮತ್ತಿತರ ವಿಶೇಷ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.

ರಥೋತ್ಸವ ಆರಂಭಕ್ಕೂ ಮುನ್ನ ದೇವಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ನೆರವೇರಿಸಿ ತಮಟೆ, ಮಂಗಳ ವಾದ್ಯಗಳೊಂದಿಗೆ ದೇವಾಲಯದಿಂದ ಮೆರವಣಿಗೆಯಲ್ಲಿ ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತ ಸಮೂಹ ದೇವಿಗೆ ಜಯಕಾರ ಹಾಕಿದರು. ದೇವಾಲಯದ ಸುತ್ತ ಒಂದು ಸುತ್ತು ರಥವನ್ನು ಎಳೆದಾಗ ಹರ್ಷೋದ್ಘಾರಗೊಂಡ ಜನರು ಹಣ್ಣು-ದವನ ಎಸೆದು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಪ್ರಾರ್ಥಿಸಿದರಲ್ಲದೆ ಕಳೆದ ಬಾರಿ ಹರಕೆ ಹೊತ್ತಿದ್ದವರು ಹರಕೆಗಳನ್ನು ತೀರಿಸಿದರು.

ಹರಕೆ ತೀರಿಸಿದ ಭಕ್ತರು: ಜಾತ್ರೆಗೆ ಬಂದಿದ್ದ ಭಕ್ತ ಸಮೂಹ ಬೆಳಗ್ಗೆಯಿಂದ ರಾತ್ರಿಯವರೆಗೆ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ಹರಕೆ ಹೊತ್ತಿದ್ದ ಕೆಲವರು ದೇವಾಲಯದ ಆವರಣದಲ್ಲಿ ಮಜ್ಜಿಗೆ, ಪಾನಕ ಮತ್ತು ಆಹಾರ ಪದಾರ್ಥಗಳನ್ನು ತಯಾರಿಸಿ ಭಕ್ತರಿಗೆ ಬಡಿಸಿ ತಮ್ಮ ಹರಕೆಗಳನ್ನು ತೀರಿಸಿದರು.

ತಾಪಂ ಸದಸ್ಯೆ ಸಿದ್ದಮ್ಮದೇವರಾಜು, ಗ್ರಾಪಂ ಅಧ್ಯಕ್ಷೆ ಸುಮಲತ, ಉಪಾಧ್ಯಕ್ಷ ಸನ್ಯಾಸಿಪುರಬಾಲಕೃಷ್ಣ, ಸದಸ್ಯರಾದ ನಾಗೇಶ, ನಾಗಮಣಿ, ಸನ್ಯಾಸಿಪುರಬಸವರಾಜು, ಎಚ್‌.ಎಂ.ಯೋಗೇಂದ್ರ, ನಾಗರಾಜು, ರಾಮ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್‌.ಸಿ.ಕುಮಾರ್‌, ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಸುಬ್ಬುಕೃಷ್ಣ, ಮುಖಂಡರಾದ ಪ್ರಭಾಕರ್‌ಜೈನ್‌, ಕೆ.ಎನ್‌.ರಾಜೇಶ್‌, ಸುಕೇಂದ್ರ, ಎಚ್‌.ಎಸ್‌.ಮಹದೇವ್‌, ಸುರೇಶ್‌, ಸನ್ಯಾಸಿಪುರ ಯೋಗೇಶ್‌ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಚುನಾಯಿತ ಜನಪ್ರತಿನಿದಿಗಳು ಮತ್ತು ಮುಖಂಡರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಇತಿಹಾಸ: ಹಂಪಾಪುರ ಗ್ರಾಮವು ವಿಜಯನಗರ ಸಾಮ್ರಾಜ್ಯದ ಸೀಮಾ ಗ್ರಾಮವಾಗಿ ಹಂಪೆಯ ಕುರುಹಾಗಿದ್ದು, ನರಸಿಂಹನಾಯಕ ಎಂಬ ಪಾಳೇಗಾರ ಆಳುತ್ತಿದ್ದ ಎನ್ನಲಾಗಿದೆ. ಈ ನಡುವೆ ತಿಪ್ಪೂರು ಪಾಳೇಗಾರ ತಿಪ್ಪನಾಯಕ ಮತ್ತು ನರಸಿಂಹನಾಯಕರ ನಡುವೆ ನಡೆದ ಕಲಹ ರಾಜೀ ಮೂಲಕ ಇತ್ಯರ್ಥವಾಯಿತು. ರಾಜೀ ಸೂತ್ರದಡಿ ತಿಪ್ಪೂರಿನ ಪಾಳೇಗಾರರು ಹಂಪಾಪುರದ ದುರ್ಗಾಪರಮೇಶ್ವರಿಗೆ ಪ್ರತಿ ವರ್ಷ ದೀಪಾವಳಿಯಂದು ನಾಲ್ಕು ನರಬಲಿ ನೀಡಬೇಕೆಂದು ಕರಾರು ಮಾಡಿಕೊಂಡರೆಂದು ಇತಿಹಾಸ ಹೇಳುತ್ತದೆ.

ನಂತರ ಸಮಾಜ ಸುಧಾರಣೆಯ ಫ‌ಲವಾಗಿ ಕೋಣ ಬಲಿ ಕೊಡುವ ಪದ್ಧತಿ ಜಾರಿಗೆ ಬಂದು, ಆನಂತರ ಅದರ ಬದಲಿಗೆ ನಾಲ್ಕು ಅಡಕೆ ಮರಗಳನ್ನು ಕೊಡುವ ಪರಂಪರೆ ಆರಂಭವಾಗಿ ಅದು ಇಂದಿಗೂ ನಡೆದುಕೊಂಡು ಬರುತ್ತಿದೆ. ಹಂಪಾಪುರ ಗ್ರಾಮದ ಪಾಳೇಗಾರನಿಗೆ ಸಹವರ್ತಿಗಳಾಗಿದ್ದ ಮಂಚ-ಬಡಕ ಎಂಬ ಇಬ್ಬರು ಭಾವ-ಮೈದುನರುಗಳ ನಿಷ್ಠೆಗೆ ಸಂತಸಗೊಂಡ ಪಾಳೇಗಾರ ನಾಯಕನು ತನ್ನ ಗ್ರಾಮ ವ್ಯಾಪ್ತಿಯ ಉತ್ತರ ದಿಕ್ಕಿನೆಡೆ ಅವರಿಬ್ಬರಿಗೂ ಮುಂದಿನ ಭಾಗದಲ್ಲಿ ಒಂದೊಂದು ಪುಟ್ಟ ಬೀದಿಗಳನ್ನು ನಿರ್ಮಿಸುತ್ತಾನೆ.

ಇವೇ ಮುಂದೆ ಮಂಚನಹಳ್ಳಿ ಮತ್ತು ಬಡಕನಕೊಪ್ಪಲು ಗ್ರಾಮಗಳಾಗಿದ್ದು, ಇಂದಿಗೂ ಅದೇ ಹೆಸರಿನಲ್ಲಿವೆ. ಹಿಂದೆ ಕೃತ ಯುಗದಲ್ಲಿ ವ್ಯಾಘ್ರವಾದ ಋಷಿಗಳ ಶಿಷ್ಯರು ಗ್ರಾಮದಿಂದ ದಕ್ಷಿಣಕ್ಕೆ ಅನತಿ ದೂರದಲ್ಲಿ ಕಾವೇರಿ ನದಿ ತೀರದಲ್ಲಿ ತಮ್ಮ ಜಪತಪ ಅನುಷ್ಠಾನಕ್ಕೆಂದು ಆಯ್ದುಕೊಂಡ ಅರಣ್ಯ ಭಾಗವನ್ನು ಗ್ರಾಮ್ಯ ಭಾಷೆಯಲ್ಲಿ ಸನ್ಯಾಸಿಪುರ ಎಂದು ಕರೆಯಲಾಯಿತು. ಆ ಗ್ರಾಮವು ಇಂದಿಗೂ ಕಾವೇರಿ ನದಿ ತೀರದಲ್ಲಿದೆ.

ದೇವಿಗೆ ಉಯ್ಯಾಲೋತ್ಸವ: ಹಂಪಾಪುರ, ಮಂಚನಹಳ್ಳಿ, ಬಡಕನಕೊಪ್ಪಲು ಹಾಗೂ ಸನ್ಯಾಸಿಪುರ ನಾಲ್ಕು ಗ್ರಾಮಗಳ ಜನತೆ ಶ್ರದ್ಧಾ ಭಕ್ತಿಯಿಂದ ಗ್ರಾಮ ದೇವತೆಗೆ ದೀಪಾವಳಿ ಹಬ್ಬದ ದಿನ ಮಧ್ಯಾಹ್ನ ಪೂಜೆ, ಅರ್ಚನೆಯೊಂದಿಗೆ ಮಂಗಳವಾದ್ಯಗಳ ಸಮೇತ ತಿಪ್ಪೂರಿಗೆ ತೆರಳಿ ಅಡಕೆ ಮರಗಳನ್ನು ನೆಲಕ್ಕೆ ಬೀಳದಂತೆ ಸುಳಿ ಸಮೇತ ಕಡಿದು ಬರಿಗಾಲಿನಲ್ಲಿ 12 ಕಿ.ಮೀ ದೂರ ಮೆರವಣಿಗೆಯಲ್ಲಿ ತರುತ್ತಾರೆ.

ಮರಗಳನ್ನು ದೇವಾಲಯದ ಮುಂಭಾಗದಲ್ಲಿ ಬೆಳಗಿನ ಜಾವ ಪ್ರತಿಷ್ಠಾಪಿಸಿ ಮರುದಿನ ಕಾರ್ತಿಕ ಶುಕ್ಲ ಬಿದಿಗೆಯ ಸಾಯಂಕಾಲ ದೇವಿಯ ಉತ್ಸವ ಮೂರ್ತಿಯನ್ನು ಇದೇ ಮರಗಳಿಗೆ ಕಟ್ಟಿದ ಉಯ್ಯಾಲೆಯಲ್ಲಿರಿಸಿ ವೈಭವದಿಂದ ಉಯ್ಯಾಲೋತ್ಸವ ನಡೆಸಲಾಗುತ್ತದೆ. ಇಂಥ ಸಂಪ್ರದಾಯ ಇಂದಿಗೂ ಮುಂದುವರೆದಿದೆ.

ಟಾಪ್ ನ್ಯೂಸ್

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

1-dharma

Dharmasthala;ಇಂದಿನಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು

Jammu-Vaishnodevi

Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

1-kateel

Yakshagana; ಕಟೀಲು ದೇಗುಲದ ಆರು ಮೇಳಗಳ ತಿರುಗಾಟ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

1-dharma

Dharmasthala;ಇಂದಿನಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು

Jammu-Vaishnodevi

Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.