“ಲ್ಯಾಪ್‌ಟಾಪ್ ಪರದೆಯಾಚೆಗೆ’ ಸಮಕಾಲೀನ ಚರ್ಚೆ
Team Udayavani, Mar 4, 2020, 4:53 AM IST
“ಲ್ಯಾಪ್ ಟಾಪ್ ಪರದೆಯಾಚೆಗೆ’. ಸಣ್ಣ ಕೃತಿಯಲ್ಲಿ ಲೇಖಕರು ತನಗೆ ಹೇಳಬೇಕಾದದ್ದನು ಹೇಳಿ ಮುಗಿಸಿದ್ದಾರೆ. ಇಲ್ಲಿ ಬರುವ ಕೆಲ ಬರಹಗಳಲ್ಲಿ ಬರೀ ವಿಷಯಗಳು ಮಾತ್ರವಲ್ಲ ಆ ವಿಷಯಗಳ ಹಿಂದೆ ಇರುವ ವಿಶೇಷಗಳನ್ನು ಮುಂದೆ ತಂದು ಬರವಣಿಗೆಯಲ್ಲಿ ಕಟ್ಟಿದ್ದಾರೆ. ಬಾಯಿ ಪಾಠದ ಮೂಲಕ ಮಕ್ಕಳ ತಲೆಗೆ ನಾವುಗಳು ತುರುಕುತ್ತಿರುವ ರೈಮ್ ಪದಗಳ ಹುಟ್ಟಿನ ಹಿಂದಿರುವ ಗುಟ್ಟು ಇಲ್ಲಿ ಬರಹವಾಗಿದೆ.
ಘಟನೆ 1:
ಎರಡು ವ್ಯಕ್ತಿಗಳಲ್ಲಿ ನಡೆಯುವ ಮಾತುಗಳು. ಇಲ್ಲಿ ಒಂದು ಲೋಕದ ವ್ಯಥೆಯನ್ನು, ಅಲ್ಲಿಯ ಭಾವ, ನೋಟ, ವಿಚಾರ, ಆಚಾರ ಸಂಪ್ರದಾಯವನ್ನು “ಮೂರನೇ ಜಗತ್ತು’ ಬರಹ ತೆರೆದಿಡುತ್ತದೆ. ತೃತೀಯ ಲಿಂಗಿಗಳ ಜೀವನವನ್ನು ಈ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ.ಇಲ್ಲಿ ಲೇಖಕಿ ವರ್ಣಿಸುವ ವಿಚಾರಗಳು ಓದುಗರಿಗೆ ಒಂದು ವಿಷಯದಲ್ಲಿ ಹಲವು ವಿಶೇಷಗಳನ್ನು ತಿಳಿದುಕೊಳ್ಳುವಂತೆ ಮಾಡುತ್ತದೆ.
ಘಟನೆ 2:
ಕೆಲವೊಂದು ಮೌಡ್ಯವನ್ನು ಬದುಕಿನ ಮೌಲ್ಯವಾಗಿಸಿಕೊಂಡ ಸಮಾಜದ ಒಂದಿಷ್ಟು ಮುಖಗಳನ್ನು ಪರಿಚಯಿಸುವ ಕೃತಿ, ಕೊನೆಯಲ್ಲಿ ದೇವಾಲಯದ ಸುತ್ತಾಟದ ನೆನಪಿನಲ್ಲಿ ಅಲ್ಲಿರುವ ವೈಶಿಷ್ಟ್ಯವನ್ನು ಹೇಳಿಕೊಂಡು ಸಾಗುತ್ತದೆ. ದೇವಾಲಯಗಳು ಐತಿಹಾಸಿಕವಾಗಿ ನಮ್ಮನ್ನು ಕಾಡುತ್ತದೆ.ಅದರ ಹಿಂದಿನ ನಂಬಿಕೆಗಳ ಸುತ್ತ ಲೇಖಕಿ ಒಂದು ಸುತ್ತಿನ ವಿಚಾರವನ್ನು ಹೇಳಿ ಮೌಡ್ಯತೆಯ ಕುರಿತು ಹೇಳುತ್ತಾರೆ.
ಘಟನೆ 3:
ಬ್ಲೈಂಡ್ ಶಾಲೆಗೆ ಪರೀಕ್ಷೆ ಬರೆಯಲು ಹೋಗುವುದು. ನಾಲ್ಕು ಜನರೊಂದಿಗೆ ಬೆರೆಯುವುದು. ಎಳೆಯ ಅಂಧ ಜೀವದೊಟ್ಟಿಗೆ ಆಪ್ತವಾಗುವ ಭಾವವನ್ನು ಹೇಳುವಾಗ ಒಂದು ಕ್ಷಣ ಕಣ್ಣಂಚು ಒದ್ದೆಯಾಗುತ್ತದೆ.
ನೆಲ್ಸನ್ ಮಂಡೇಲಾರ ತತ್ತ್ವ ಹಾಗೂ ಮಹತ್ವದ ಸಣ್ಣ ಎಳೆ ಕೃತಿಯಲ್ಲಿ ದಾಖಲಾಗಿದೆ. ಒಟ್ಟಿನಲ್ಲಿ ಲ್ಯಾಪ್ ಟಾಪ್ ಪರದೆಯಾಚೆಗೆ ಕೃತಿ ಸಣ್ಣ ಓದಿನ ಆಯ್ಕೆಗೆ ಮೊದಲ ಆದ್ಯತೆಯ ಸ್ಥಾನದಲ್ಲಿ ನಿಲ್ಲುತ್ತದೆ.
ಬಾಲ್ಯ, ಮುಪ್ಪು ಹರೆಯದ ಹೀಗೆ ಮೂರು ಹಂತದ ಬದುಕಿನ ನಾನಾ ವ್ಯಥೆಯ ಚಿತ್ರಣ ಬಗೆ ಬಗೆಯ ರೂಪ ಪಡೆದು ಬರಹವಾಗಿದೆ.
ಸುಹಾನ್ ಶೇಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.