2ನೇ ದಿನವೂ ಕಲಾಪ ಬರ್ಖಾಸ್ತು : ಯತ್ನಾಳ್‌ ಹೇಳಿಕೆ ಚರ್ಚೆಗೆ ಪಟ್ಟು ಬಿಡದ ಕಾಂಗ್ರೆಸ್‌


Team Udayavani, Mar 4, 2020, 7:00 AM IST

kalapa-barkastu

ಬೆಂಗಳೂರು: ಸಂವಿಧಾನದ ಮಹತ್ವದ ಬಗ್ಗೆ ಚರ್ಚೆಗೆ ಮೀಸಲಾಗಬೇಕಿದ್ದ ಮಂಗಳವಾರದ ವಿಧಾನಮಂಡಲ ಕಲಾಪ ಧರಣಿ, ಗದ್ದಲದಲ್ಲೇ ಅಂತ್ಯಗೊಂಡಿತು.

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಹೇಳಿಕೆ ಕುರಿತು ಚರ್ಚೆಗೆ ಆಗ್ರಹಿಸಿ ವಿಪಕ್ಷ ಕಾಂಗ್ರೆಸ್‌ ಮಂಗಳ ವಾರವೂ ಧರಣಿ ನಡೆಸಿದ್ದರಿಂದ ಸತತ ಎರಡನೇ ದಿನವೂ ಕಲಾಪ ಬಲಿಯಾಯಿತು.

ಹನ್ನೊಂದು ಗಂಟೆಗೆ ನಿಗದಿಯಾಗಿದ್ದ ಕಲಾಪ ಅಪರಾಹ್ನ 1.35ಕ್ಕೆ ಪ್ರಾರಂಭಗೊಂಡಿತಾದರೂ ಚರ್ಚೆಗೆ ಅವಕಾಶ ನೀಡಲೇಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪಟ್ಟು ಹಿಡಿದರು. ಸದನದ ಬಾವಿಗೆ ಇಳಿದ ಕಾಂಗ್ರೆಸ್‌ ಶಾಸಕರು ಭಾರತ್‌ ಮಾತಾ ಕೀ ಜೈ, ಸಂವಿಧಾನ ಉಳಿಸಿ ಎಂದು ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಶಾಸಕರ ನಡುವೆ ಮಾತಿನ ಚಕಮಕಿ ನಡೆದು ಸದನದಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು. ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಿಯಮ 363ರಡಿ ಚರ್ಚೆಗೆ ಅವಕಾಶ ಕೋರಿ ಕಾಂಗ್ರೆಸ್‌ ಸಲ್ಲಿಸಿದ್ದ ನೋಟಿಸ್‌ ತಿರಸ್ಕರಿಸಿದರು.

ಸಿಎಂ ಉತ್ತರ ಮತ್ತು ಪ್ರಶ್ನೋತ್ತರ ಕಾರ್ಯಸೂಚಿಯಲ್ಲಿತ್ತಾದರೂ ಯಾವುದಕ್ಕೂ ವಿಪಕ್ಷ ಸದಸ್ಯರು ಅವಕಾಶ ನೀಡಲಿಲ್ಲ.

ಚರ್ಚೆಗೆ ಅವಕಾಶ ಕೇಳಿದ ಸಿದ್ದು
ವಿಧಾನಸಭೆಯಲ್ಲಿ ಬೆಳಗ್ಗೆ ಸದನ ಆರಂಭಗೊಂಡು ಅಗಲಿದ ಗಣ್ಯರಿಗೆ ಸಂತಾಪದ ಅನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಎದ್ದು ನಿಂತು, ಯತ್ನಾಳ್‌ ಅವರು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದರು. ಇದಕ್ಕೆ ಸಚಿವರಾದ ಜೆ.ಸಿ. ಮಾಧುಸ್ವಾಮಿ, ಕೆ.ಎಸ್‌. ಈಶ್ವರಪ್ಪ, ಬಸವರಾಜ ಬೊಮ್ಮಾಯಿ, ಸಿ.ಟಿ. ರವಿ, ಸಚಿವ ಸಿ.ಸಿ. ಪಾಟೀಲ್‌ ಮತ್ತು ಬಿಜೆಪಿ ಶಾಸಕರು ವಿರೋಧ ವ್ಯಕ್ತಪಡಿಸಿದರು.

ಅಜೆಂಡಾದಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಗೆ ಸರಕಾರದಿಂದ ಉತ್ತರ ಎಂದಿದೆ. ಸ್ಪೀಕರ್‌ಗೆ ನೋಟಿಸ್‌ ನೀಡದೆ ವಿಷಯ ಪ್ರಸ್ತಾಪ ಮಾಡುವುದು ಹೇಗೆ? ಯಾವ ನಿಯಮಗಳಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಪ್ರಶ್ನಿಸಿದರು.

ಇದಕ್ಕೆ ಸಿದ್ದರಾಮಯ್ಯ, ಸ್ಪೀಕರ್‌ಗೆ ವಿಶೇಷ ಅಧಿಕಾರ ಇದ್ದು, ನಾನು ವಿಷಯ ಪ್ರಸ್ತಾಪಿಸುತ್ತೇನೆ. ಅನಂತರ ಅವರು ತೀರ್ಮಾನ ಕೊಡಲಿ ಎಂದು ಹೇಳಿದರು.

ಸಿಎಂ ಉತ್ತರದ ಅನಂತರ ಅವಕಾಶ
ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಮೊದಲು ಮುಖ್ಯಮಂತ್ರಿಯವರ ಉತ್ತರ ಮುಗಿಯಲಿ. ಅನಂತರ ನಿಮ್ಮ ವಿಷಯದ ಬಗ್ಗೆ ಗಮನಿಸುತ್ತೇನೆ. ಅದಕ್ಕೂ ಮೊದಲು ನೀವು ಮಾತನಾಡಲಿರುವ ವಿಷಯದ ಕುರಿತು ನೋಟಿಸ್‌ ಕೊಡಿ ಎಂದರು. ಇದಕ್ಕೆ ಒಪ್ಪದ ಸಿದ್ದರಾಮಯ್ಯ, ಮಾತನಾಡಲು ಅವಕಾಶಕ್ಕಾಗಿ ಪಟ್ಟು ಹಿಡಿದರು.

“ನಿಯಮ’ದ ಸಮಸ್ಯೆ
ಯಾವ ನಿಯಮದಲ್ಲಿ ಕೇಳುತ್ತಿದ್ದೀರಿ, ಸದನ ನಡೆಸಲು ನಿಯಮ ಇಲ್ಲವೇ ಎಂದು ಜೆ.ಸಿ. ಮಾಧುಸ್ವಾಮಿ ಪ್ರಶ್ನಿಸಿದರು. ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌, ಸದನದ ನಿಯಮ ರೂಪಿಸುವಾಗ ಇಂತಹ ಸಂದರ್ಭ ಬರುತ್ತದೆ ಎಂದು ಗೊತ್ತಿರಲಿಲ್ಲ, ಇಂಥ ಮಹಾನುಭಾವರು ಈ ಸದನಕ್ಕೆ ಬರಬಹುದು ಎಂಬುದೂ ಗೊತ್ತಿರಲಿಲ್ಲ ಎಂದರು. ಅದಕ್ಕೆ ಮಾಧುಸ್ವಾಮಿ, ಯಾರು ದೊಡ್ಡವರು- ಯಾರು ಚಿಕ್ಕವರು ಎಂದು ಜನ ತೀರ್ಮಾನ ಮಾಡಿ ಕಳುಹಿಸುತ್ತಾರೆ ಎಂದು ತಿರುಗೇಟು ನೀಡಿದರು.

ಸದನದ ಬಾವಿಗಿಳಿದ ಸದಸ್ಯರು
ಅಂತಿಮವಾಗಿ ಸ್ಪೀಕರ್‌, ಈಗ ಚರ್ಚೆಗೆ ಅವಕಾಶ ಕೊಡಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಉತ್ತರ ನೀಡಲಿದ್ದಾರೆ ಎಂದರು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಸದನದ ಬಾವಿಗೆ ಇಳಿದು ಧರಣಿ ನಡೆಸಿದರು. ಗದ್ದಲದ ನಡುವೆಯೇ ಸಿಎಂ ಯಡಿಯೂರಪ್ಪ ಭಾಷಣ ಆರಂಭಿಸಿ ಉತ್ತರ ಪೂರ್ಣಗೊಳಿಸಿದರು.

ಫ‌ಲಿಸದ ಸ್ಪೀಕರ್‌ ಸಂಧಾನ
ಸ್ಪೀಕರ್‌ ಕಾಗೇರಿ ಅವರು ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರನ್ನು ತಮ್ಮ ಕೊಠಡಿಗೆ ಕರೆದು ಸಂಧಾನ ಸಭೆ ನಡೆಸಿದರು. ಆದರೆ ಅವರು ವಿಷಯ ಚರ್ಚೆಗೆ ಅವಕಾಶ ಬೇಕೇ ಬೇಕು ಎಂದು ಪಟ್ಟು ಹಿಡಿದರು. ಅನಂತರ ಸದನ ಆರಂಭಗೊಂಡು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

ದೊರೆಸ್ವಾಮಿ ರಾಜಕಾರಣಿ: ರೇವಣ್ಣ ; ಹೌದೆಂದ ಬಿಜೆಪಿಗರು
ಗದ್ದಲ ನಡೆಯುತ್ತಿರುವಾಗಲೇ ಜೆಡಿಎಸ್‌ ಶಾಸಕ ಎಚ್‌.ಡಿ. ರೇವಣ್ಣ ಎಡವಟ್ಟು ಮಾಡಿಕೊಂಡರು. ಮಾತನಾಡಲು ನಿಂತ ಅವರು, “ಶತಾಯುಷಿ ದೊರೆಸ್ವಾಮಿಯವರು ಪ್ರಾಮಾಣಿಕ ರಾಜಕಾರಣಿ’ ಎಂದು ಹೇಳಿದರು. ತತ್‌ಕ್ಷಣವೇ ಬಿಜೆಪಿ ಸದಸ್ಯರು, “ಹೌದು ಸರಿಯಾಗಿ ಹೇಳಿದ್ದೀರಿ, ಅವರು ರಾಜಕಾರಣಿ’ ಎಂದು ಲೇವಡಿ ಮಾಡಿದರು. ಆಗ ರೇವಣ್ಣ, ನಾನು ಮಾತು ಮುಗಿಸಲು ಬಿಡುತ್ತಿಲ್ಲ, ದೊರೆಸ್ವಾಮಿ ರಾಜಕಾರಣಿಯಲ್ಲ; ಸ್ವಾತಂತ್ರ್ಯ ಹೋರಾಟಗಾರರು ಎಂದು ಹೇಳಲು ಹೋದರೆ ನೀವು ಬಿಡಲಿಲ್ಲ ಎಂದು ಸಮಜಾಯಿಷಿ ನೀಡಿದರು. ಬಳಿಕ ಗದ್ದಲಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ಮೇಲೆ ಆಕ್ರೋಶಗೊಂಡರು.

ಸ್ಪೀಕರ್‌ ಕಚೇರಿಯಲ್ಲಿ ನಡೆದ ಮಾತುಕತೆ ಪ್ರಕಾರ ಚರ್ಚೆಗೆ ಅವಕಾಶ ಕೊಡಲು ಒಪ್ಪಲಾಗಿತ್ತು. ಆದರೆ ಈಗ ಬೇರೆ ವಾದ ಮಂಡಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಮತ್ತು ಸಂಸದೀಯ ನಡಾವಳಿಗೆ ವಿರುದ್ಧವಾದುದು. ಸ್ಪೀಕರ್‌ ಅವರು ಪಕ್ಷಪಾತಿಯಾಗಬಾರದು, ಹಿಟ್ಲರ್‌ ಆಡಳಿತ ನಡೆಯುತ್ತಿದೆ.
– ಸಿದ್ದರಾಮಯ್ಯ, ವಿಪಕ್ಷ ನಾಯಕ

ನಾನು ಚರ್ಚೆಗೆ ಅವಕಾಶ ಕೊಡುವ ಬಗ್ಗೆ ಹೇಳಿದ್ದು ಹೌದು. ಆದರೆ ವಿಧಾನಮಂಡಲ ಕಾರ್ಯಕಲಾಪ ನಿಯಮಾವಳಿ ಪುಸ್ತಕ ಮತ್ತು ಕೆಲವು ಹಿರಿಯ ಅನುಭವಿಗಳು, ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿದಾಗ ನಿಯಮ 363ರಡಿ ನಿಮ್ಮ ಪ್ರಸ್ತಾವದ ಬಗ್ಗೆ ಚರ್ಚೆಗೆ ಆವಕಾಶ ನೀಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಬಂದಿದೆ. ಹೀಗಾಗಿ ಸಾಧ್ಯವಿಲ್ಲ.
– ವಿಶ್ವೇ ಶ್ವರ ಹೆಗಡೆ ಕಾಗೇರಿ, ಸ್ಪೀಕರ್‌

ಸಂವಿಧಾನದ ಕಲಂ 51 ಎ ಮತ್ತು ಬಿಯಲ್ಲಿ ನಮ್ಮ ರಾಷ್ಟ್ರೀಯ ಸ್ವಾತಂತ್ರ್ಯ ಸಂಗ್ರಾಮದ ಉದಾತ್ತ ಆದರ್ಶ ಗೌರವಿಸುವುದು, ಅನುಸರಿಸುವುದು ನಮ್ಮ ಕರ್ತವ್ಯ ಎಂದು ಇದೆ. ಉದಾತ್ತ ಧ್ಯೇಯ ಬೇರೆ, ಉದಾತ್ತ ವ್ಯಕ್ತಿ ಬೇರೆ. ಇಲ್ಲಿ ವೈಯಕ್ತಿಕವಾಗಿ ಹೇಳಿಲ್ಲ.
– ಜೆ.ಸಿ. ಮಾಧುಸ್ವಾಮಿ, ಕಾನೂನು, ಸಂಸದೀಯ ವ್ಯವಹಾರ ಸಚಿವ

ಕಾಂಗ್ರೆಸ್‌ ಶಾಸಕರು ಸದನದ ಬಾವಿಯಲ್ಲಿ ಪ್ರತಿಭಟನೆ ಮುಂದುವರಿಸಿ ಘೋಷಣೆ ಹಾಕುತ್ತಿದ್ದರು. ಚರ್ಚೆಗೆ ಅವಕಾಶ ಇಲ್ಲ ಎಂದು ನನ್ನ ರೂಲಿಂಗ್‌ ನೀಡಿದ್ದೇನೆ. ಎಲ್ಲ ಸದಸ್ಯರಲ್ಲೂ ಮನವಿ ಮಾಡುತ್ತೇನೆ, ಸುಗಮ ಕಲಾಪಕ್ಕೆ ಸಹಕರಿಸಿ.
– ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್‌

ಟಾಪ್ ನ್ಯೂಸ್

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

ACC U-19 Asia Cup: ರಾಜ್ಯದ ಮೂವರು

ACC U-19 Asia Cup: ರಾಜ್ಯದ ಮೂವರು

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.