ವಾಡಿ: ಆಶ್ರಯ ಮನೆಗಾಗಿ 4 ಲಕ್ಷ ವಂತಿಗೆ ಪಾವತಿಸಿ
Team Udayavani, Mar 4, 2020, 10:52 AM IST
ವಾಡಿ: ಪಟ್ಟಣದ ಹೊರ ವಲಯದಲ್ಲಿ ಪುರಸಭೆ ವತಿಯಿಂದ ನಿರ್ಮಿಸಲಾಗುತ್ತಿರುವ ಆಶ್ರಯ ಮನೆಗಳ ಸೌಲಭ್ಯ ಪಡೆದುಕೊಳ್ಳಲು ಆಸಕ್ತ ಅರ್ಹ ಫಲಾನುಭವಿಗಳು 4 ಲಕ್ಷ ರೂ. ಪಾವತಿಸಬೇಕು ಎಂದು ಪುರಸಭೆ ಆಡಳಿತ ಆದೇಶ ಹೊರಡಿಸಿದೆ.
ಈ ಕುರಿತು ಮಂಗಳವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪುರಸಭೆ ಮುಖ್ಯಾಧಿ ಕಾರಿ ವಿಠuಲ ಹಾದಿಮನಿ, ವಾಡಿ ಪಟ್ಟಣವನ್ನು ವಿಸ್ತರಿಸಲು ಹಾಗೂ ವಸತಿ ರಹಿತ ಅರ್ಹ ಫಲಾನುಭವಿಗಳಿಗೆ ಸರಕಾರದ ವತಿಯಿಂದ ಮನೆಗಳನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ. ಪಿಎಂಎವೈ ಯೋಜನೆಯಡಿ ಜಿ+1 ಮಾದರಿಯ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಒಂದು ಮನೆ ನಿರ್ಮಾಣಕ್ಕೆ 5.50 ಲಕ್ಷ ರೂ. ಮೊತ್ತ ತಗಲುತ್ತಿದೆ. ಸರಕಾರದಿಂದ 1.50 ಲಕ್ಷ ರೂ. ಭರಿಸುತ್ತಿದೆ. ಉಳಿದ 4 ಲಕ್ಷ ರೂ. ವಂತಿಗೆ ಹಣವನ್ನು ಫಲಾನುಭವಿಗಳೆ ಪಾವತಿಸಬೇಕಿದೆ. ವಂತಿಗೆ ಪಾವತಿಸುವವರನ್ನು ಮಾತ್ರ ಫಲಾನುಭವಿಯಾಗಿ ಆಯ್ಕೆ ಮಾಡಲಾಗುತ್ತದೆ. ಆಸಕ್ತರು ಪುರಸಭೆ ಕಚೇರಿ ಸಂಪರ್ಕಿಸಲು ಕೋರಿದ್ದಾರೆ.
ಅಂಬೇಡ್ಕರ್-ವಾಜಪೇಯಿ ವಸತಿ ಯೋಜನೆ ಬ್ಲಾಕ್: 2015/16 ಹಾಗೂ 17ನೇ ಸಾಲಿನ ಡಾ| ಅಂಬೇಡ್ಕರ್ ಆವಾಸ್ ಯೋಜನೆ ಮತ್ತು ವಾಜಪೇಯಿ ವಸತಿ ಯೋಜನೆಯಡಿ ಮಂಜೂರಾದ ಮನೆಗಳನ್ನು ಫಲಾನುಭವಿಗಳು ನಿರ್ಮಿಸಿಕೊಳ್ಳದ ಕಾರಣ ಅರ್ಜಿಗಳನ್ನು ಬ್ಲಾಕ್ ಮಾಡಲಾಗಿದೆ. ಈ ಮಧ್ಯೆ ರಾಜೀವಗಾಂ ಧಿ ಗ್ರಾಮೀಣ ವಸತಿ ನಿಗಮವು ಮಾರ್ಚ್ 14ರ ವರೆಗೆ ಮನೆ ನಿರ್ಮಿಸಿಕೊಂಡು ಫೋಟೋ ಅಪ್ಲೋಡ್ ಮಾಡುವಂತೆ ಆದೇಶಿಸಿದೆ.
ನಿಗದಿತ ದಿನಾಂಕದೊಳಗೆ ಮನೆ ಕಟ್ಟಡ ಆರಂಭಿಸದಿದ್ದರೆ ಈ ಮನೆಗಳ ಅರ್ಜಿಗಳನ್ನೂ ಬ್ಲಾಕ್ ಮಾಡಲಾಗುತ್ತದೆ ಎಂದು ಮುಖ್ಯಾಧಿಕಾರಿಗಳು ಫಲಾನುಭವಿಗಳಿಗೆ ನೋಟಿಸ್ ಜಾರಿ ಮಾಡುವ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ
ಕ್ಷುಲ್ಲಕ ವಿಚಾರಕ್ಕೆ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ತಾಯಿ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.