ದುಬೈನ ಇಂಡಿಯನ್ ಸ್ಕೂಲ್ ಕ್ಯಾಂಪಸ್ ನಾಳೆಯಿಂದ ಕ್ಲೋಸ್
Team Udayavani, Mar 4, 2020, 6:44 PM IST
ದುಬೈ: ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ದುಬೈನ ಇಂಡಿಯನ್ ಹೈ ಗ್ರೂಪ್ ಆಫ್ ಸ್ಕೂಲ್ ಗುರುವಾರದಿಂದ ಮುಚ್ಚಲಾಗುತ್ತಿದೆ. ಈ ಕುರಿತಂತೆ ಇಂದು ಶಾಲಾ ಆಡಳಿತ ಮಕ್ಕಳ ಪೋಷಕರಿಗೆ ತಿಳಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಮಾರ್ಚ್ 5ರ ಗುರುವಾರದಿಂದ ಐಎಚ್‌ಎಸ್ ಗ್ರೂಪ್ ಆಫ್ ಸ್ಕೂಲ್‌ಗಳನ್ನು ಮುಚ್ಚಲಾಗುತ್ತದೆ. ಪರೀಕ್ಷೆಗಳ ಕುರಿತಾದ ಮಾಹಿತಿಗಳನ್ನು ಮಂಬರುವ ದಿನಗಳಲ್ಲಿ ತಿಳಿಸಲಾಗುತ್ತದೆ.
ಕ್ಯಾಂಪಸ್‌ನ ವಿದ್ಯಾರ್ಥಿಯೋಬ್ಬನಿಗೆ ಕೊರೊನಾ ಸೋಂಕು ತಗುಲಿರುವ ಸಂಶಯ ಇದೆ. ಈ ಕುರಿತಂತೆ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗಿದೆ. ಶಂಕಿತ ಕೊರೊನಾ ಪೀಡಿತ ವಿದ್ಯಾರ್ಥಿಯನ್ನು ತೀವ್ರ ನಿಗಾದಲ್ಲಿರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಗೆ ಶಂಕಿತ ಸೋಂಕು ಕಾಣಿಸಿಕೊಂಡ ಸಂದೇಶಗಳು ವಾಟ್ಸಾಪ್‌ನಲ್ಲಿ ಹರಿದಾಡಿದ ಬಳಿಕ ಅನೇಕ ಪೋಷಕರು ಭಯಭೀತರಾದರು.
ಶಾಲಾ ಕ್ಯಾಂಪಸ್ 3 ವಿಭಾಗಗಳನ್ನು ಒಳಗೊಂಡಿದೆ. ಜೂನಿಯರ್ ಕ್ಯಾಂಪಸ್, ಗಾರ್‌ಹೌಡ್ ಮತ್ತು ಇಂಟರ್‌ನ್ಯಾಶನಲ್ ಸ್ಕೂಲ್ ಕ್ಯಾಂಪಸ್ ಅನ್ನು ಒಳಗೊಂಡಿದೆ.
ಎರಡು ತಿಂಗಳ ಹಿಂದೆ ಚೀನದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿದ್ದ ಕೊರೋನಾ ಇದೀಗ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ವುಹಾನ್ ಪಟ್ಟಣದಲ್ಲಿ ಮಾತ್ರ ಸುಮಾರು 40 ಸಾವಿರಕ್ಕೂ ಅಧಿಕ ಜನರಲ್ಲಿ ಈ ವೈರಸ್ ಕಾಣಿಸಿಕೊಂಡಿದೆ. ಸಾವಿನ ಸಂಖ್ಯೆ ಚೀನವೊಂದರಲ್ಲೇ 3 ಸಾವಿರ ದಾಟಿದೆ.
ಜಗತ್ತಿನಾದ್ಯಂತ ಸುಮಾರು 3120ಕ್ಕೂ ಧಿಕ ಜನ ಮೃತಪಟ್ಟಿದ್ದಾರೆ. ಈ ವೈರಸ್ ಭೀತಿಗೆ ಯಾರೂ ಮನೆಯಿಂದ ಹೊರಗೆ ಬರುತ್ತಿಲ್ಲ. ಪರಿಣಾಮ 4 ಮಿಲಿಯನ್ ಜನ ವಾಸಿಸುವ ವುಹಾನ್ ಪಟ್ಟಣ ಅಕ್ಷರಶಃ ಜನರಿಲ್ಲದೆ ಬಿಕೋ ಎನ್ನುತ್ತಿದೆ.
ಚೀನ, ಭಾರತ ಸೇರಿದಂತೆ 70 ರಾಷ್ಟ್ರಗಳಿಗೆ ಕೊರೊನಾ ಹರಡಿದೆ. ಉಸಿರಾಟದ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವ ಈ ಮಾರಕ ವೈರಸ್ ಒಮ್ಮೆ ರಕ್ತದೊಂದಿಗೆ ಬೆರೆತರೆ ಜ್ವರ ವಿಪರೀತಕ್ಕೆ ಏರುತ್ತದೆ. ಕೇವಲ ಮೂರು ದಿನದಲ್ಲಿ ಸಾವನ್ನೂ ತರಬಹುದಾಗಿದೆ. ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡ ನೀಫಾ ವೈರಸ್ ಸಾವಿರಾರು ಜನರ ಪ್ರಾಣವನ್ನು ಕಸಿದಿತ್ತು.
ಇದಕ್ಕೂ ಮುನ್ನ ಚೀನದಲ್ಲೇ ಕಾಣಿಸಿಕೊಂಡಿದ್ದ ಸಾರ್ಸ್ ವೈರಸ್ ಸಹ ದೊಡ್ಡ ಮಟ್ಟದಲ್ಲಿ ಆತಂಕ ಸೃಷ್ಟಿಸಿತ್ತು. ಇವೆರಡ ಆಘಾತ ಮಾಸುವ ಮುನ್ನ ಕರೋನಾ ವೈರಸ್ ಕಾಣಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್ ಟ್ರಕ್ ಸ್ಫೋ*ಟದ ವ್ಯಕ್ತಿ!
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.