ಏ.1ರಿಂದ ವಿಲೀನಗೊಂಡ ಬ್ಯಾಂಕುಗಳು ಕಾರ್ಯಾಚರಿಸಲಿವೆ : ನಿರ್ಮಲಾ ಸೀತಾರಾಮನ್
ಕೇಂದ್ರ ಸಂಪುಟ ಸಭೆಯಲ್ಲಿ ಪ್ರಸ್ತಾಪಕ್ಕೆ ಅನುಮೋದನೆ
Team Udayavani, Mar 4, 2020, 8:34 PM IST
ನವದೆಹಲಿ: ಕೇಂದ್ರ ಸರ್ಕಾರ ಈಗಾಗಲೇ ಘೋಷಣೆ ಮಾಡಿರುವ ಹತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ವಿಲೀನ ಏ.1ರಿಂದ ಅನುಷ್ಠಾನಗೊಳ್ಳಲಿದೆ.
ಅವುಗಳು ಏ.1ರ ನಂತರ ನಾಲ್ಕು ಪ್ರಮುಖ ಬ್ಯಾಂಕ್ಗಳಾಗಿ ಪರಿವರ್ತನೆಗೊಂಡು, ಕಾರ್ಯಾಚರಿಸಲಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ನವದೆಹಲಿಯಲ್ಲಿ ಪ್ರಕಟಿಸಿದ್ದಾರೆ.
ಈಗಾಗಲೇ ಪ್ರಕಟ ಮಾಡಲಾಗಿರುವ ವಿಲೀನ ಪ್ರಕ್ರಿಯೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಸಭೆಯಲ್ಲಿ ಸಮ್ಮತಿ ಸಿಕ್ಕಿದೆ. ಅದರಲ್ಲಿ ಯಾವುದೇ ಕಾನೂನಾತ್ಮಕ ತೊಡಕುಗಳಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಹೆಚ್ಚು ತಿದ್ದುಪಡಿಗೆ ಅವಕಾಶ:
ಮತ್ತೂಂದು ನಿರ್ಧಾರದಲ್ಲಿ 2013ರ ಕಂಪನಿ ಕಾಯ್ದೆಗೆ ಮತ್ತಷ್ಟು ತಿದ್ದುಪಡಿ ತರುವ ಪ್ರಸ್ತಾಪಕ್ಕೆ ಸಂಪುಟ ಅನುಮೋದನೆ ನೀಡಲಾಗಿದೆ. ಒಟ್ಟು 72 ತಿದ್ದುಪಡಿಗಳಿಗೆ ಸಮ್ಮತಿ ಸೂಚಿಸಲಾಗಿದೆ.
ಶೇ.100ರಷ್ಟು ಮಾಲೀಕತ್ವಕ್ಕೆ ಅವಕಾಶ:
ಮತ್ತೂಂದು ಮಹತ್ವದ ನಿರ್ಧಾರದಲ್ಲಿ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಮಾರಬೇಕು ಎಂಬ ಇರಾದೆಯಲ್ಲಿರುವ ಸರ್ಕಾರ ಅನಿವಾಸಿ ಭಾರತೀಯರಿಗೆ ಶೇ.100ರಷ್ಟು ಷೇರುಗಳನ್ನು ಹೊಂದುವ ಅವಕಾಶ ಕಲ್ಪಿಸಿಕೊಡಲು ನಿರ್ಧರಿಸಿದೆ. ವಿಮಾನ ಸಂಸ್ಥೆಯ ಮಾರಾಟ ಪ್ರಕ್ರಿಯೆಯ ಪೈಕಿ ಇದೊಂದು ಮೈಲುಗಲ್ಲು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಇದುವರೆಗೆ ಶೇ.49ರಷ್ಟು ಪಾಲು ಖರೀದಿಗೆ ಮಾತ್ರ ಎನ್ಆರ್ಐಗಳಿಗೆ ಅವಕಾಶ ಇತ್ತು. ಈಗ ಶೇ.100ರಷ್ಟು ಷೇರು ಹೊಂದಲು ಅವಕಾಶವಿದ್ದು, ಇದರಿಂದ ಗಣನೀಯ ಮಾಲೀಕತ್ವ ಮತ್ತು ಪ್ರಧಾನ ನಿಯಂತ್ರಣ (ಎಸ್ಒಇಸಿ) ನಿಯಮಗಳಿಗೆ ಅಡ್ಡಿಯಾಗುವುದಿಲ್ಲ ಮತ್ತು ಎನ್ಆರ್ಐ ಹೂಡಿಕೆಯನ್ನು ದೇಶಿಯ ಹೂಡಿಕೆ ಎಂದೇ ಪರಿಗಣಿಸಲಾಗುತ್ತದೆ ಎಂದಿದ್ದಾರೆ ಜಾವಡೇಕರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.