ಶತಮಾನಗಳೇ ಕಳೆದರೂ ಭರತನಾಟ್ಯ ಚಿರನೂತನ: ಪ್ರತಿಭಾ ಸಾಮಗ


Team Udayavani, Mar 5, 2020, 5:28 AM IST

ಶತಮಾನಗಳೇ ಕಳೆದರೂ ಭರತನಾಟ್ಯ ಚಿರನೂತನ: ಪ್ರತಿಭಾ ಸಾಮಗ

ಪ್ರತಿಯೊಂದು ಕಲೆಗಳನ್ನು ಅಪ್ಪಿ ಆರಾಧಿಸುವ ಈ ನಾಡಿನಲ್ಲಿ ಭರತನಾಟ್ಯವೂ ತನ್ನದೇ ಸ್ಥಾನವನ್ನು ಸಂಪಾದಿಸಿಕೊಂಡು ಈ ಮಣ್ಣಿನ ಕಲೆಯಾಗಿ ಬೆಳೆದು ಬಂದಿದೆ. ಇಂತಹ ಕಲೆಯನ್ನೇ ಜೀವವನ್ನಾಗಿಸಿಕೊಂಡವರು ಪ್ರತಿಭಾ ಎಲ್‌ ಸಾಮಗ. ಕಲಾಸಕ್ತರಿಗೆ, ಓದುಗರಿಗೆ ಇವರ ಹೆಸರು ಚಿರ ಪರಿಚಿತ. ಪ್ರತಿಭಾ ಅವರಿಗೆ ತಾಯಿಯೇ ಸಂಗೀತದ ಮೊದಲ ಗುರು. ಸಂಗೀತದಲ್ಲಿ ಸೀನಿಯರ್‌, ವಯೊಲಿನ್‌ ವಾದನದ ಕಲಿಕೆ, ಸಂಸ್ಕೃತ ಕೋವಿದ ಪದವಿ, ಬಿ.ಎಸ್ಸಿ, ಬಿ.ಎಡ್‌ ಪದವಿ ಮುಗಿಸಿ ಅಧ್ಯಾಪನ ವೃತ್ತಿಯನ್ನು ಪ್ರಾರಂಭಿಸಿ 26 ವರ್ಷ ಅಧ್ಯಾಪಿಕೆಯಾಗಿ, ನಂತರ ಮುಖ್ಯೋಪಾಧ್ಯಾಯಿನಿಯಾಗಿ ನಿವೃತ್ತಿ ಪಡೆದವರು. ಕಲೆ ಎನ್ನುವುದು ಒಂದು ಧ್ಯಾನ, ಮುಪ್ಪಿನ ಬದುಕನ್ನು ಮತ್ತಷ್ಟು ಖುಷಿಯಾಗಿ, ನೆಮ್ಮದಿಯಾಗಿ ಕಳೆಯಲು ನಮ್ಮ ಶಾಸ್ತ್ರೀಯ ಕಲೆ ಉತ್ತಮ ಜತೆಗಾರ್ತಿ ಅನ್ನುವ ಇವರು ಭರತಾಟ್ಯ ನೃತ್ಯದ ಕುರಿತು ಸುದಿನದ ” ಮಾತು ಮಂದಾರ ‘ ಅಂಕಣದೊಂದಿಗೆ ಮಾತನಾಡಿದ್ದಾರೆ

 ಭಾರತೀಯ ನೃತ್ಯ ಶೈಲಿಯಲ್ಲಿ ಸಮಕಾಲೀನ ಬದಲಾವಣೆಗಳ ಬಗ್ಗೆ ನಿಮ್ಮ ಅಭಿಪ್ರಾಯ?
ಕಲೆ ಎಂಬುದು ನಿಂತ ನೀರಲ್ಲ ಅಂತ ಹೇಳುತ್ತಾರೆ ಅದು ಒಪ್ಪಿಕೊಳ್ಳುವ ವಿಷಯ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ನೋಡುವುದಾದರೆ ಭರತನಾಟ್ಯ ನೃತ್ಯ ಪ್ರಕಾರದಲ್ಲಿ ವಿಕೃತವಾದ ಬದಲಾವಣೆ ಆಗಿದೆ. ಹಿಂದಿನ ಕಾಲದಲ್ಲಿ ಭಕ್ತಿ ಪ್ರಧಾನವಾಗಿ ದೇವರಿಗೆ ಸಮರ್ಪಣೆ ಎಂದು ಮಾಡುತ್ತಿದ್ದ ಕಲೆ ಇಂದು ಉದ್ಯಮ-ವ್ಯಾವಹಾರಿಕವಾಗಿ ಬೆಳೆಯುತ್ತಿದೆ. ಹಿಮೇಳ ಕಣ್ಮರೆಯಾಗುತ್ತಿದ್ದು, ರೆಕಾಂರ್ಡಿಂಗ್‌ ಸಿಡಿಗಳ ಮೊರೆ ಹೋಗುತ್ತಿದ್ದಾರೆ. ಇದು ತಪ್ಪು ಅಂತ ಹೇಳುವುದಿಲ.É ಏಕೆಂದರೆ ಬದಲಾವಣೆ ಎಂಬುದು ಜಗದ ನಿಯಮ ಆದರೆ ಶಾಸ್ತ್ರೀಯ ನೃತ್ಯ ಕಲಿತಾಗ ಅದಕ್ಕೆ ಬೇಕಾದ ಮೂಲ ಅಂಶಗಳನ್ನು ಬಿಡಲೇ ಬಾರದು.

 ಕಲೆಗಳು ವ್ಯಕ್ತಿಯ ಮನಸ್ಸು ಮತ್ತು ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಹೇಳುತ್ತಾರೆ. ಈ ಒಂದು ಅಂಶ ನಿಮ್ಮ ಬದುಕಿನಲ್ಲಿ ನಿಜವಾಗಿದೆಯೇ ?
ಖಂಡಿತವಾಗಿಯೂ ಕಲೆ ನನ್ನ ಬದುಕನ್ನು ತುಂಬಾ ಬದಲಾಯಿಸಿ ಬಿಟ್ಟಿದೆ. ಅದರಲ್ಲೂ ವಯಸ್ಸಾದ ಮೇಲಂತೂ ಕಲೆಯೇ ನನ್ನ ಸರ್ವಸ್ವವಾಗಿದೆ. ಕಲೆ ಎಂಬುದು ಧ್ಯಾನ ಇದ್ದ ಹಾಗೆ. ಒಮ್ಮೆ ನೀವು ಅದನ್ನು ನಂಬಿದರೆ ಅದು ನಿಮ್ಮನ್ನು ಎಂದೂ ಕೈ ಬಿಡುವುದಿಲ್ಲ. ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಈ ಒಂದು ಕಲೆ ನಮ್ಮ ಆಚಾರ-ವಿಚಾರಗಳ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಉತ್ತಮ ಜೀವನ ಕಟ್ಟಿಕೊಳ್ಳಲು ಬೇಕಾಗುವಂತಹ ಶಿಸ್ತು, ಸಂಸ್ಕಾರ, ಏಕಾಗ್ರತೆ ಮುಂತಾದ ಜೀವನ ಮೌಲ್ಯಗಳಿಗೆ ಭದ್ರ ಬುನಾದಿ ಹಾಕುತ್ತದೆ. ಕಲೆಯನ್ನು ಒಮ್ಮೆ ಪ್ರೀತಿಸಿದರೆ ಸಾಕು ಸಮಾಜ ನಿಮ್ಮನ್ನು ಪ್ರೀತಿಸುವಷ್ಟು ಗೌರವವನ್ನು ತಂದು ಕೊಡುತ್ತದೆ.

 ಭಾರತೀಯ ನೃತ್ಯ ಪರಂಪರೆಯಲ್ಲಿ ಭರತನಾಟ್ಯಕ್ಕೆ ಯಾವ ಸ್ಥಾನಮಾನ ಇದೆ ?
ಪ್ರತಿಯೊಂದು ನೃತ್ಯ ಪ್ರಕಾರಕ್ಕೂ ಅದರದೇ ಆದ ಪ್ರಾಮುಖ್ಯತೆ ಇದೆ. ಆದರೆ ಅವೆಲ್ಲವನ್ನೂ ಒಂದು ತಕ್ಕಡಿಯಲ್ಲಿಟ್ಟು ತೂಗುವುದಾದರೆ ನಮ್ಮ ಶಾಸ್ತ್ರೀಯ ನೃತ್ಯವಾದ ಭರನಾಟ್ಯ ಶ್ರೀಮಂತವಾದ ಕಲೆ. ತನ್ನ ಸಾತ್ವಿಕ ಗುಣದಿಂದಲೇ ಜನರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇದಕ್ಕಿದೆ. ಮನೋಧರ್ಮಕ್ಕೆ ವಿಪುಲ ಅವಕಾಶವನ್ನು ಕಟ್ಟಿ ಕೊಡುವ, ಪ್ರತಿನಿಧಿಸುವ ಈ ಕಲೆ ಅಭಿನಯ, ಭಾವ, ರಾಗ ಸರಳತೆಯನ್ನು ಎತ್ತಿ ಹಿಡಿಯುತ್ತದೆ. ದಶಕಗಳು ಅಲ್ಲ ಶತಮಾನ ಕಳೆದರೂ ಭಾರತೀಯ ನೃತ್ಯ ಪರಂಪರೆಯಲ್ಲಿ ಭರತನಾಟ್ಯಕ್ಕೆ ಇರುವ ಪೂಜನೀಯ ಸ್ಥಾನ-ಮಾನ ಎಂದಿಗೂ ಬದಲಾಗುವುದಿಲ್ಲ.

 ಕಲಾನುಭೂತಿ ಎಂದರೇನು ?
ನೋಡಿ ಈ ಒಂದು ಅಂಶ ಪ್ರೇಕ್ಷಕ ಮತ್ತು ಕಲಾವಿದ ಇಬ್ಬರಿಗೂ ಅನ್ವಯವಾಗುತ್ತದೆ. ಕಲಾವಿದ ತನ್ನ ಕಲೆಯನ್ನು ಅನುಭವಿಸಿಕೊಂಡು ಪ್ರೇಕ್ಷಕನ ಮುಂದೆ ಪ್ರಸ್ತುತ ಪಡಿಸಿದಾಗ ಮಾತ್ರ ಅದರ ಅನುಭವ ಅನುಭಾವ ಪ್ರೇಕ್ಷಕನಿಗೆ ಸಿಗುತ್ತದೆ. ಅಂತೆಯೇ ಪ್ರೇಕ್ಷ ಕನಲ್ಲೂ ಕಲೆ ಯನ್ನು ಅನು ಭ ವಿ ಸುವ ಮನೋ ಧರ್ಮ ಇರ ಬೇಕು.

 ಕಲಾ ಪ್ರೇಕ್ಷಕ ತನ್ನಲ್ಲಿನ ಸೌಂದರ್ಯ ಪ್ರಜ್ಞೆಯನ್ನು ಮತ್ತಷ್ಟು ಉತ್ತಮಗೊಳಿಸಿಕೊಳ್ಳು ವುದು ಹೇಗೆ?
ಮೊದಲು ಆತನಿಗೆ ಯಾವ ಕಲೆಯ ಬಗ್ಗೆ ಅಪಾರ ಆಸಕ್ತಿ ಇದೆ ಎಂಬುದನ್ನು ಮೊದಲು ತಿಳಿ ದುಕೊಳ್ಳಬೇಕು. ಉದಾ : ಒಬ್ಬ ಕಲಾವಿದನಿಗೆ ಭರನಾಟ್ಯ ಇಷ್ಟ ಅಂತಾದರೆ ಅವನು ಮೊದಲು ಆ ಕಲೆಯ ಬಗ್ಗೆ ಕಿಂಚಿತ್ತಾದರೂ ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು. ಆಗ ಮಾತ್ರ ಆತ ಕಲೆಯ ಸತ್ವವನ್ನು , ಚಂದವನ್ನು ಆನಂದಿಸಲು ಸಾಧ್ಯವಾಗುತ್ತದೆ. ಇಲ್ಲವಾದರೆ ತಿರುಳೇ ಗೊತ್ತಿಲ್ಲದೇ ಕಲೆಯ ಆಳವನ್ನು ಆಸ್ವಾದಿಸುವ ಪ್ರಜ್ಞೆಯನ್ನು ಉತ್ಕೃಷ್ಟಗೊಳಿಸಿ ಕೊಳ್ಳಲಾಗುವುದಿಲ್ಲ.

 ಶಾಸ್ತ್ರೀಯ ನೃತ್ಯ ಪರಂಪರೆಯನ್ನು ಜನಪ್ರಿಯಗೊಳಿಸಲು ಸಾಮಾಜಿಕ ಮಾಧ್ಯಮವನ್ನು ಹೇಗೆ ಬಳಸಿಕೊಳ್ಳಬಹುದು?
ನನ್ನ ಪ್ರಕಾರ ಇದರ ಹೊಣೆಗಾರಿಕೆ ಮಾಧ್ಯಮದವರಾದ ನಿಮ್ಮ ಮೇಲಿದೆ. ಈ ಯೂಟ್ಯೂಬ್‌, ಫೇಸ್‌ಬುಕ್‌, ವಾಟ್ಸಪ್‌ ಅಂತಹ ಸಾಮಾಜಿಕ ಜಾಲತಾಣಗಳಲ್ಲಿ ಕಲೆ ಕುರಿತು ಎಷ್ಟೇ ಮಾಹಿತಿಯನ್ನು ಪಸರಿಸಿದರು ಅದರ ಮೂಲ ತತ್ವ- ಸತ್ವ, ಗುಣ ಯಾವುದು ಸಮಾಜಕ್ಕೆ ತಲುಪುವುದಿಲ್ಲ. ಅದೇ ಇದರ ಬದಲಾಗಿ ದೈನಿಕಗಳ ಮೂಲ ಕ ಕಲೆ ಕುರಿತು, ನೃತ್ಯ ಪ್ರಕಾರಗಳ ಮಾಹಿತಿ ಒಳಗೊಂಡ ಪ್ರಶ್ನೆ ಟಿಪ್ಪಣಿಗಳನ್ನು ಬಿತ್ತರಿಸಿದರೆ ಸಮಾಜದ ಎಲ್ಲೆಡೆಗೂ ಅದರ ಪರಿಪೂರ್ಣತೆಯ ವಿಚಾರ ತಲುಪುತ್ತದೆ. ಆ ಮೂಲಕ ನಮ್ಮ ಭಾರತೀಯ ನೃತ್ಯ ಪರಂಪರೆಯನ್ನು ಉಳಿಸಬಹುದು.

1980ರಲ್ಲಿ ಉಡುಪಿಯಲ್ಲಿ ನೃತ್ಯ ತರಗತಿಗಳನ್ನು ಆರಂಭಿಸಿ ಆಸಕ್ತರಿಗೆ ತನ್ನ ವಿದ್ಯೆಯನ್ನು ಧಾರೆಯೆರೆದಿದ್ದಾರೆ. ಇವಲ್ಲದೆ, ನೃತ್ಯ ಕಮ್ಮಟ, ಪ್ರಾತ್ಯಕ್ಷಿಕೆಗಳ ನಿರ್ವಹಣೆ, ನೃತ್ಯ ಪರೀಕ್ಷೆಗಳ ಪರೀಕ್ಷಕಿ, ಸಂಗೀತ – ನೃತ್ಯ ಸ್ಪರ್ಧೆಗಳಿಗೆ ತೀರ್ಪುಗಾರಿಕೆ ಮೊದಲಾದ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಪ್ರತಿಭಾರವರ ಸಂಗೀತ, ನೃತ್ಯ, ಯಕ್ಷಗಾನ ಕುರಿತಾದ ಆಳವಾದ ಅವಲೋಕನ, ವಿಮರ್ಶೆ, ಮುಂತಾದ ಬರವಣಿಗೆಗಳು ಪ್ರಕಟಗೊಂಡಿವೆ.

ಸುಶ್ಮಿತಾ ಜೈನ್‌

ಟಾಪ್ ನ್ಯೂಸ್

12-sirsi

Sirsi: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-uv-fusion

Nature: ಪ್ರಕೃತಿ ಮಡಿಲಲ್ಲಿ ಒಂದು ಕ್ಷಣ

9-uv-fusion

Grandfather: ಬಡ ತಾತನ ಹೃದಯ ಶ್ರೀಮಂತಿಕೆ

8-uv-fusion

Kannada: ಕನ್ನಡ ನಾಡಲ್ಲಿ ಪ್ರತಿದಿನವೂ ನಿತ್ಯೋತ್ಸವವಿರಲಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

5-uv-fusion

UV Fusion: ಕರ್ನಾಟಕ: ನಮ್ಮೆಲ್ಲರ ಉಸಿರಾಗಲಿ ಕನ್ನಡ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

12-sirsi

Sirsi: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.