ರಣಜಿ: ಸತತ 2ನೇ ಫೈನಲ್‌ನಲ್ಲಿ ಸೌರಾಷ್ಟ್ರ
Team Udayavani, Mar 5, 2020, 6:50 AM IST
ರಾಜ್‌ಕೋಟ್: ಸೌರಾಷ್ಟ್ರ ಸತತ 2ನೇ ಸಲ ರಣಜಿ ಟ್ರೋಫಿ ಪ್ರಶಸ್ತಿ ಸುತ್ತು ಪ್ರವೇಶಿಸಿದೆ. ರಾಜ್‌ಕೋಟ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಅದು ಗುಜರಾತ್‌ಗೆ 92 ರನ್ ಸೋಲುಣಿಸಿ ಮುನ್ನಡೆಯಿತು. ನಾಯಕ, ಪ್ರಧಾನ ಪೇಸ್ ಬೌಲರ್ ಜೈದೇವ್ ಉನಾದ್ಕತ್ 56 ರನ್ನಿಗೆ 7 ವಿಕೆಟ್ ಉಡಾಯಿಸಿ ಸೌರಾಷ್ಟ್ರ ಗೆಲುವಿನ ರೂವಾರಿಯಾಗಿ ಮೂಡಿಬಂದರು.
ಗೆಲುವಿಗೆ 327 ರನ್ನುಗಳ ಗುರಿ ಪಡೆದ ಗುಜರಾತ್, 4ನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟಿಗೆ 7 ರನ್ ಮಾಡಿತ್ತು. ಬುಧವಾರ ಬ್ಯಾಟಿಂಗ್ ಮುಂದುವರಿಸಿ 234 ರನ್ನಿಗೆ ಸರ್ವಪತನ ಕಂಡಿತು.
ಒಂದು ಹಂತದಲ್ಲಿ ಗುಜರಾತ್ 63 ರನ್ನಿಗೆ 5 ವಿಕೆಟ್ ಕಳೆದುಕೊಂಡು ದೊಡ್ಡ ಸೋಲಿನತ್ತ ಮುಖ ಮಾಡಿತ್ತು. ಆದರೆ ಪಾರ್ಥಿವ್ ಪಟೇಲ್ (93) ಮತ್ತು ಚಿರಾಗ್ ಗಾಂಧಿ (96) 158 ರನ್ ಜತೆಯಾಟ ನಡೆಸಿ ಭರವಸೆ ಮೂಡಿಸಿದರು. ಆದರೆ ಈ ಜೋಡಿ ಬೇರ್ಪಟ್ಟ ಕೂಡಲೇ ಗುಜರಾತ್ ಪತನ ತೀವ್ರಗೊಂಡಿತು. ಇವರಿಬ್ಬರ ವಿಕೆಟ್‌ಗಳನ್ನು ಉನಾದ್ಕತ್ ಉರುಳಿಸಿದರು. ಅಂತಿಮ 5 ವಿಕೆಟ್‌ಗಳು ಬರೀ 13 ರನ್ ಅಂತರದಲ್ಲಿ ಉದುರಿದವು!
ರಾಜ್‌ಕೋಟ್‌ನಲ್ಲಿ ಫೈನಲ್
ಸೌರಾಷ್ಟ್ರ-ಬಂಗಾಲ ನಡುವಿನ ರಣಜಿ ಫೈನಲ್ ಮಾ. 9ರಿಂದ 13ರ ತನಕ ರಾಜ್‌ಕೋಟ್ ಅಂಗಳದಲ್ಲೇ ನಡೆಯಲಿದೆ. ಇದು ಸೌರಾಷ್ಟ್ರ ಕಾಣುತ್ತಿರುವ ಸತತ 2ನೇ ರಣಜಿ ಫೈನಲ್. ಕಳೆದ ಸಲ ಅದು ವಿದರ್ಭ ವಿರುದ್ಧ ಎಡವಿತ್ತು.
ಸಂಕ್ಷಿಪ್ತ ಸ್ಕೋರ್: ಸೌರಾಷ್ಟ್ರ-304 ಮತ್ತು 274. ಗುಜರಾತ್-242 ಮತ್ತು 234 (ಪಾರ್ಥಿವ್ ಪಟೇಲ್ 93, ಚಿರಾಗ್ ಗಾಂಧಿ 96, ಉನಾದ್ಕತ್ 56ಕ್ಕೆ 7).
ಪಂದ್ಯಶ್ರೇಷ್ಠ: ಅರ್ಪಿತ್ ವಸವಾಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.