ಇಂದಿನಿಂದ “ಹೋಳಿ’ ಹಬ್ಬ ಆಚರಣೆ


Team Udayavani, Mar 5, 2020, 5:50 AM IST

ಇಂದಿನಿಂದ “ಹೋಳಿ’ ಹಬ್ಬ ಆಚರಣೆ

ಕುಂದಾಪುರ: ಕುಡುಬಿ,ಖಾರ್ವಿ, ಮರಾಠಿ ಸಮಾಜದವರೆಲ್ಲರೂ ವಿಶಿಷ್ಟ ರೀತಿಯಲ್ಲಿ ಆಚರಿಸುವ “ಹೋಳಿ‘ ಹಬ್ಬದ ಸಂಭ್ರಮ ಈಗ ಕುಂದಾಪುರ, ಉಡುಪಿ ಸಹಿತ ಕರಾವಳಿಯಾದ್ಯಂತ ಮನೆ ಮಾಡಿದೆ. ಗುರುವಾರದಿಂದ ಐದು ದಿನಗಳ ಕಾಲ ತನ್ನದೇ ಆದ ರೀತಿಯಲ್ಲಿ ವಿಶಿಷ್ಟ ರೀತಿಯಲ್ಲಿ ಹೋಳಿ ಹಬ್ಬವನ್ನು ಆಚರಿಸುತ್ತಾರೆ.

ತಲೆ – ತಲಾಂತರಗಳಿಂದ ಆಚರಿಸಿಕೊಂಡು ಬರುತ್ತಿರುವ ಹೋಳಿ ಹಬ್ಬದ ಆಚರಣೆಗೆ ವಿಶೇಷವಾದ ಮಹತ್ವವಿದೆ. ಫಾಲ್ಗುಣ ಮಾಸದ ಏಕಾದಶಿಯಿಂದ ಆರಂಭ ವಾಗಿ ಹುಣ್ಣಿಮೆಯವರೆಗೆ ವಿವಿಧ ಸಮುದಾಯದವರು ಹೋಳಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಫಾಲ್ಗುಣ ಮಾಸದ ಏಕಾದಶಿಯಿಂದ ಹುಣ್ಣಿಮೆಯವರೆಗೆ (ಅಂದರೆ ಈ ವರ್ಷ ಮಾ. 5 ರಿಂದ ಮಾ. 9 ರವರೆಗೆ) ಕುಡುಬಿ ಜನಾಂಗದವರು ಹೋಳಿ ಹಬ್ಬವನ್ನು ಆಚರಿಸುತ್ತಾರೆ.

ಸಿದ್ಧತೆ ಆರಂಭ
ಮುನ್ನ ದಿನವೇ ಹಬ್ಬದ ಸಿದ್ಧತೆಗಳು ಆರಂಭಗೊಂಡಿದ್ದು, ಏಕಾದಶಿಯ ದಿನ ಬೆಳಗಿನ ಜಾವಕ್ಕೂ ಮುನ್ನವೇ ಎಲ್ಲ ಕೂಡು ಕಟ್ಟುಗಳ ಸದಸ್ಯರೆಲ್ಲ ಆಯಾಯ ಭಾಗದ ಗುರಿಕಾರರ ಮನೆಗೆ ಬಂದು ಸೇರುತ್ತಾರೆ. ಅಲ್ಲಿ ದೇವರ ಪ್ರತಿಷ್ಠಾಪನೆ, ಹಾಡುಗಳ ಮೂಲಕವೇ ವಿಧಿ – ವಿಧಾನ ಪೂರೈಸಿ, ಕೋಲಾಟ, ಗುಮ್ಮಟೆ ನೃತ್ಯ ಮಾಡಿ, ಬಳಿಕ ಗ್ರಾಮ ದೇವಸ್ಥಾನದಲ್ಲಿ ಕೋಲಾಟ, ಗುಮ್ಮಟೆ ನೃತ್ಯ ಮಾಡಲಾಗುತ್ತದೆ. ಬಳಿಕ ಮೊದಲೆರಡು ದಿನ ಹೊರ ಗ್ರಾಮಗಳ ಕುಡುಬಿ ಸಮುದಾಯದವರ ಮನೆ – ಮನೆಗೆ ಹೋಗಿ, 3ನೇ ದಿನ ಅವರದೇ ಗ್ರಾಮಕ್ಕೆ ಬಂದು ಅಲ್ಲಿನ ಎಲ್ಲರ ಮನೆಗೂ ಹೋಗುತ್ತಾರೆ. 5ನೇ ದಿನ ಮತ್ತೆ ಅವರ ಗುರಿಕಾರರ ಮನೆಯಲ್ಲಿ ಸೇರುತ್ತಾರೆ.

5ನೇ ದಿನ ಅಂದರೆ ಹೋಳಿ ಹುಣ್ಣಿಮೆಯ ದಿನ ಕೂಡುಕಟ್ಟಿನ ಮುಖ್ಯ ಮನೆಯಲ್ಲಿ ಎಲ್ಲರೂ ಸೇರಿ, ಆ ವರ್ಷದ ಕೊನೆಯ ಹೋಳಿ ಕುಣಿತವನ್ನು ಮಾಡುತ್ತಾರೆ. ಗೆಜ್ಜೆ, ವೇಷ ಭೂಷಣ ಕಳಚಿ, ಎಲ್ಲರೂ ಸಾಮೂಹಿಕವಾಗಿ ಸ್ನಾನ ಮಾಡುತ್ತಾರೆ. ಆ ಬಳಿಕ ಪರಿಕರಗಳಿಗೆಲ್ಲ ಗುರಿಕಾರರು ಪೂಜೆ ಮಾಡಿದ ಅನಂತರ ಬೆಂಕಿ (ಕಾಮದಹನ ಮಾಡುವುದು) ಹಾಯುತ್ತಾರೆ. ಬಳಿಕ ಸಾಮೂಹಿಕವಾಗಿ ಊಟ ಮಾಡಿದ ಅನಂತರ ಯುವಕರು, ಮಕ್ಕಳೆಲ್ಲ ಸೇರಿ ಗ್ರಾಮದಲ್ಲಿರುವ ಮನೆ- ಮನೆಗೆ ಹೋಗಿ ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬ ಮುಗಿಯಿತು ಎನ್ನುವ ಸಂದೇಶ ಸಾರುತ್ತಾರೆ.

ಹೋಳಿ ಹಬ್ಬದ ಕುಣಿತಕ್ಕೆ ವೇಷ ಹಾಕುವವರು ಅಂದರೆ ಕೋಲು ಹಿಡಿದವರು ಚಪ್ಪಲಿ ಹಾಕಬಾರದು, ಭಾರ ಹೊರಬಾರದು, ಬೇರೆಯವರ ಮನೆಯಲ್ಲಿ ಊಟ ಮಾಡಬಾರದು, ಮದಿರೆ-ಮಾನಿನಿ ಸಹವಾಸ ಮಾಡಬಾರದು, ಮಾಂಸ ಸೇವಿಸಬಾರದು. ಇಲ್ಲಿ ಮಾ. 5 ರಿಂದ ಆರಂಭಗೊಂಡು, ಮಾ. 9ರವರೆಗೆ ನಡೆದರೆ, ಗೋವಾದಲ್ಲಿ ಮಾ. 12ರವರೆಗೆ ನಡೆಯುತ್ತದೆ. ಇಲ್ಲಿ ಹೋಳಿ ಆಚರಣೆ ಮುಗಿಸಿ, ಅನೇಕ ಮಂದಿ ಅಲ್ಲಿನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆಯುವ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಹೋಳಿ ಆಚರಣೆ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದ್ದು, ಎಲ್ಲರೂ ಇದರಲ್ಲಿ ಸಂತೋಷದಿಂದ ಭಾಗವಹಿಸುತ್ತಾರೆ ಎನ್ನುವುದಾಗಿ ರಾಜ್ಯ ಕುಡುಬಿ ಸಂಘದ ಜತೆ ಕಾರ್ಯದರ್ಶಿ ನರಸಿಂಹ ನಾಯ್ಕ ಮಂದಾರ್ತಿ ತಿಳಿಸಿದ್ದಾರೆ.

ಮರಾಠಿ ಹೋಳಿ ಆಚರಣೆ
ಮಹರಾಷ್ಟ್ರ, ಗೋವಾದಿಂದ ವಲಸೆ ಬಂದವರು ಮರಾಠಿ ನಾಯ್ಕ ಸಮುದಾಯದವರು. ಇವರ ಹೋಳಿ ಹಬ್ಬ ಏಕಾದಶಿಯಂದು ಆರಂಭಗೊಂಡು, ಹುಣ್ಣಿಮೆಯ ಒಂದು ದಿನ ಮೊದಲು ಮುಕ್ತಾಯಗೊಳ್ಳುತ್ತದೆ. 20-30 ಜನರ ತಂಡಗಳನ್ನು ರಚಿಸಿಕೊಂಡು, ಒಂದು ಕಡೆ ಸೇರಿ ಚಪ್ಪರ ಎಲ್ಲ ಹಾಕಿ, ಅಲ್ಲಿಯೇ ವೇಷವನ್ನು ಧರಿಸಿ, ಅಲ್ಲಿಂದ ಹೋಳಿ ಕುಣಿತವನ್ನು ಆರಂಭಿಸುತ್ತಾರೆ. ಎರಡು ದಿನ ತಿರುಗಾಟ ನಡೆಸಿ, 3ನೇ ದಿನ ಸಂಜೆ ಮತ್ತೆ ಅಲ್ಲಿ ಬಂದು ಸೇರುತ್ತಾರೆ. ಹುಣ್ಣಿಮೆಯ ಮುನ್ನ ದಿನ ಸ್ನಾನ ಮಾಡಿ, ಆ ದಿನ ವೇಷ ಕಳಚುವುದರೊಂದಿಗೆ ಆಚರಣೆ ಮುಗಿಯುತ್ತದೆ. ಮರು ದಿನ ಪೂಜೆ ನೆರವೇರಿಸುತ್ತಾರೆ ಎನ್ನುವುದಾಗಿ ಮರಾಠಿ ನಾಯ್ಕ ಸಮುದಾಯದ ಚಿತ್ತೂರಿನ ಗೋಪಾಲ್‌ ತಿಳಿಸಿದ್ದಾರೆ.

46 ಕೂಡು ಕಟ್ಟುಗಳು
ಉಡುಪಿ ಜಿಲ್ಲೆಯಲ್ಲಿ ಕುಡುಬಿ ಸಮುದಾಯದವರ 46 ಕೂಡು ಕಟ್ಟುಗಳಿವೆ. ಮಂದಾರ್ತಿ, ಕೊಕ್ಕರ್ಣೆ, ಹಾಲಾಡಿ, ಬೆಳ್ವೆ, ಬಾಕೂìರು, ಮುದ್ದೂರು, ಯಳಂತೂರು, ಶೇಡಿಮನೆ, ಹಿಲಿಯಾಣ, ಕಕ್ಕುಂಜೆ ಕಡೆಗಳೆಲ್ಲ ಕುಡುಬಿ ಮನೆತನಗಳಿವೆ. ಕುಡುಬಿಯವರ ಪ್ರಕಾರ ಕೂಡು ಕಟ್ಟು ಅಂದರೆ 1 ಗ್ರಾಮ ಅಂತ ಅರ್ಥ. ಗ್ರಾಮಕ್ಕೊಬ್ಬರು ಗುರಿಕಾರರಿರುತ್ತಾರೆ. 46 ಕೂಡು ಕಟ್ಟುಗಳು ಸಂಖ್ಯೆಗೆ ಅನುಗುಣವಾಗಿ 2 ಅಥವಾ ಅದಕ್ಕಿಂತ ಹೆಚ್ಚು ಪಂಗಡಗಳಾಗಿ ವಿಂಗಡಿಸಿ ಮನೆ – ಮನೆಗೆ ತೆರಳಿ ಗುಮ್ಮಟೆ ಹಾಗೂ ಕೋಲಾಟ ನೃತ್ಯವನ್ನು ಪ್ರದರ್ಶನ ಮಾಡುತ್ತಾರೆ.

ದೊಡ್ಡ ಹಬ್ಬ
5 ದಿನಗಳ ಕಾಲ ನಡೆಯುವ ಈ ಹೋಳಿ ಆಚರಣೆಯು ನಮ್ಮ ಕುಡುಬಿ ಸಮುದಾಯದ ದೊಡ್ಡ ಹಬ್ಬವಾಗಿದೆ. ಎಲ್ಲರೂ ಸೇರಿ ಒಟ್ಟಾಗಿ ಸಂತೋಷದಿಂದ ಹಬ್ಬದ ಆಚರಣೆ ಜತೆಗೆ, ಶಿವನ ಅನುಗ್ರಹವನ್ನು ಪಡೆಯುವುದು ಇದರ ಉದ್ದೇಶವಾಗಿದೆ.
-ಪ್ರಭಾಕರ್‌ ಕಲ್ಮರ್ಗಿ,
ಅಧ್ಯಕ್ಷರು, ಕುಡುಬಿ ಸಮಾಜೋದ್ಧಾರಕ ಸಂಘ ಉಡುಪಿ

ಟಾಪ್ ನ್ಯೂಸ್

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Uddhav Thackeray’s bag inspection by election commission, controversy

Maha Election; ಚು.ಆಯೋಗದಿಂದ ಉದ್ಧವ್‌ ಠಾಕ್ರೆ ಬ್ಯಾಗ್‌ ಪರಿಶೀಲನೆ, ವಿವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

ssa

Kollur: ವಿಷ ಹಾಕಿ 12 ಕೋಳಿಗಳ ಹನನ; ಪ್ರಕರಣ ದಾಖಲು

14

Thekkatte: ಹುಣ್ಸೆಮಕ್ಕಿ; ಟಿಪ್ಪರ್‌ ಲಾರಿ ಚಾಲಕನ ಓವರ್‌ ಟೇಕ್‌ ಅವಾಂತರ

POLICE-5

Siddapur: ಮುಳ್ಳು ಹಂದಿ ಮಾಂಸ ವಶಕ್ಕೆ; ಕೇಸು

11(1

Yakshadhruva Patla Foundation Trust: ನ.14ರಂದು ಉಡುಪಿ ಘಟಕದ ಮಹಿಳಾ ವಿಭಾಗ ಆರಂಭ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.