ಬಿಟ್ ಕಾಯಿನ್‌ಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ
Team Udayavani, Mar 5, 2020, 6:45 AM IST
ಹೊಸದಿಲ್ಲಿ: ಬಿಟ್ ಕಾಯಿನ್ ಸಹಿತ ವರ್ಚುವಲ್ ಕರೆನ್ಸಿ ವಹಿವಾಟುಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ 2018ರಲ್ಲಿ ಹೇರಿದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ಬುಧವಾರ ರದ್ದುಗೊಳಿಸಿದೆ. ಈ ಮೂಲಕ ಅವುಗಳ ಬಳಕೆಗೆ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಹಸಿರು ನಿಶಾನೆ ಸಿಕ್ಕಿದಂತಾಗಿದೆ.
ನ್ಯಾ| ಆರ್.ಎಸ್. ನಾರಿಮನ್ ನೇತೃತ್ವದ ನ್ಯಾಯಪೀಠ ಆರ್‌ಬಿಐ ಸುತ್ತೋಲೆಯಲ್ಲಿ ನೀಡಿದ್ದ ಆದೇಶ ಕೇವಲ ಆಂಶಿಕವಾಗಿದೆ. ಹೀಗಾಗಿ ಅದನ್ನು ಒಪ್ಪಲಾಗದು ಎಂದಿತು. ಆರ್‌ಬಿಐ ವರ್ಚುವಲ್ ಕರೆನ್ಸಿ ಮೇಲೆ ನಿಷೇಧ ಹೇರಿಲ್ಲ ಎಂದು ಹೇಳುತ್ತಾ ಬಂದಿದೆ ಮತ್ತು ಕೇಂದ್ರ ಸರಕಾರ ಕೂಡ ಹಲವು ಸಮಿತಿಗಳನ್ನು ರಚಿಸಿ ಅವುಗಳ ಶಿಫಾರಸಿನ ಆಧಾರದಲ್ಲಿ ಅದರಲ್ಲಿ ಎರಡು ಕರಡು ಮಸೂದೆಗಳು ಸೇರಿ ಈ ಕ್ಷೇತ್ರದ ನಿಟ್ಟಿನಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲೂ ವಿಫಲವಾಗಿದೆ. ಹೀಗಾಗಿ ನ್ಯಾಯಪೀಠ ಆಂಶಿಕವಾಗಿರುವ ನಿಯಮದ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು 180 ಪುಟಗಳ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.
2018ರಲ್ಲಿ ಹೊರಡಿಸಲಾಗಿದ್ದ ಸುತ್ತೋಲೆ ಪ್ರಶ್ನೆ ಮಾಡಿ ಇಂಟರ್‌ನೆಟ್ ಆ್ಯಂಡ್ ಮೊಬೈಲ್ ಅಸೋಸಿಯೇಶನ್ ಆಫ್ ಇಂಡಿಯಾ (ಐಎಂಎಐ) ಮೇಲ್ಮನವಿ ಸಲ್ಲಿಸಿತ್ತು.
ತೀರ್ಪಿನಿಂದ ಆಗುವ ಪರಿಣಾಮಗಳೇನು?
- ಸಮಾನ ಅವಕಾಶ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವ ಸಂದೇಶ ರವಾನೆಯಾಗಿದೆ.
- 2018ರಲ್ಲಿ ಆರ್‌ಬಿಐ ನಿರ್ಧಾರದಿಂದ ಹೊಸ ತನ ಮತ್ತು ನಾವೀನ್ಯ ರೀತಿಯ ಕೈಗಾರಿಕೆಯ ಮೇಲೆ ನಿಬಂಧನೆ ಹೇರಿದಂತೆ ಆಗಿತ್ತು. ಅದಕ್ಕೆ ಸರಿಯಾದ ಸಮಾನ ಅವಕಾಶ ಸಿಕ್ಕಿರಲಿಲ್ಲ.
- ವ್ಯವಸ್ಥೆಯ ನಿಯಂತ್ರಕರು (ಆರ್‌ಬಿಐ) ಹೊಸ ವ್ಯವಸ್ಥೆಗಳನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಬೇಕು, ಯಾವ ರೀತಿ ಅವುಗಳನ್ನು ನಿಯಂತ್ರಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
- ನಿಯಂತ್ರಣ ಎನ್ನುವುದು ಒಂದು ಸಂಸ್ಥೆಯ ಪರಮಾಧಿಕಾರವಲ್ಲ; ಅದು ಕರ್ತವ್ಯ. ಸದ್ಯ ಭಾರತದಲ್ಲಿ ಒಂದೇ ನಿಯಂತ್ರಣ ವ್ಯವಸ್ಥೆ ಇದೆ. ಅದಕ್ಕೆ ಹೊಸ ವ್ಯವಸ್ಥೆ ಬೆಳವಣಿಗೆ ಸಾಧಿಸಬಾರದು ಎಂಬಂಥ ನಿಯಮ ತರುವಂತಾಗ ಬಾರದು. ನಿಯಂತ್ರಣಕ್ಕೆ ಸಮಸ್ಯೆ ಎಂಬ ನೆಪಕ್ಕಾಗಿ ಹೊಸ ವ್ಯವಸ್ಥೆ ಅಭಿವೃದ್ಧಿಗೆ ಮುಳ್ಳಾಗಬಾರದು.
ಆರ್‌ಬಿಐ ಸುತ್ತೋಲೆಯಲ್ಲಿ ಏನಿತ್ತು?
– ಆರ್‌ಬಿಐ ವರ್ಚುವಲ್ ಕರೆನ್ಸಿ (ವಿಸಿ) ಮೂಲಕ ವಹಿವಾಟು ನಡೆಸುವುದಿಲ್ಲ. ಇದರ ಜತೆಗೆ ಇತರ ಸಂಸ್ಥೆಗಳು, ವ್ಯಕ್ತಿಗಳೂ ಕೂಡ ಅದರ ಮೂಲಕ ವಹಿವಾಟು, ಸೇವೆ ನೀಡುವ ಅಗತ್ಯವಿಲ್ಲ.
– ಅದರಲ್ಲಿ ಖಾತೆಗಳ ನಿರ್ವಹಣೆ, ನೋಂದಣಿ, ಟ್ರೇಡಿಂಗ್, ವ್ಯವಹಾರ ಇತ್ಯರ್ಥಪಡಿಸುವುದು, ವರ್ಚುವಲ್ ಟೋಕನ್‌ಗಳ ಆಧಾರದಲ್ಲಿ ಸಾಲ ನೀಡಿಕೆ, ಟೋಕನ್‌ಗಳನ್ನು ಭದ್ರತೆಯಾಗಿ ಪಡೆದುಕೊಳ್ಳುವುದು, ಖಾತೆಗಳನ್ನು ತೆರೆಯುವುದು ಬೇಡ.
– ಸಂಸ್ಥೆಯ ನಿಯಂತ್ರಣಕ್ಕೆ ಒಳಪಟ್ಟ ಸಂಸ್ಥೆ ಗಳೆಲ್ಲವೂ ಮೂರು ತಿಂಗಳ ಒಳಗಾಗಿ ವಿ.ಸಿ. ವ್ಯವಹಾರದಿಂದ ದೂರ ಸರಿಯಬೇಕು.
ಕ್ರಿಪ್ಟೋಕರೆನ್ಸಿ ಎಂದರೇನು?
– ಅತ್ಯಂತ ಸರಳ ಭಾಷೆಯಲ್ಲಿ ವಿವರಿಸುವುದಿದ್ದರೆ ಡಿಜಿಟಲ್ ಕರೆನ್ಸಿ. ಇಂಟರ್‌ನೆಟ್ ಮಾಧ್ಯಮದ ಮೂಲಕ ಅದನ್ನು ಬಳಕೆ ಮಾಡಲಾಗುತ್ತದೆ. ಅದನ್ನು ವಿನಿಮಯದ ಮಾಧ್ಯಮವಾಗಿ ಉಪಯೋಗಿಸುತ್ತಾರೆ.
– ಕಾನೂನಾತ್ಮಕವಾಗಿ ಸದ್ಯ ಅದಕ್ಕೆ ಮಾನ್ಯತೆ ಇಲ್ಲ. ಅಂದರೆ ಭಾರತದ ಮಟ್ಟಿಗೆ ಹೇಳು ವು ದಾದರೆ, ಆರ್‌ಬಿಐ ಮತ್ತು ಇತರ ಸರಕಾರಿ ಸಂಸ್ಥೆಗಳಿಂದ ಮಾನ್ಯತೆ ಇಲ್ಲ.
– ಅದನ್ನು ಕ್ರಿಪ್ಟೋಗ್ರಫಿ (Cryptography) ಮೂಲಕ ರಕ್ಷಿಸಲಾಗುತ್ತದೆ. ಕ್ರಿಪ್ಟೋಗ್ರಫಿ ಎಂದರೆ ಸಂಕೇತಗಳ ಮೂಲಕ ಮಾಹಿತಿ ಮತ್ತು ವ್ಯವಹಾರಗಳ ಮಾಹಿತಿಯನ್ನು ರಕ್ಷಿಸುವುದು. ಹೀಗಾಗಿ ಕ್ರಿಪ್ಟ್’ (Crypt) ಎಂದರೆ “ಅಡಗಿಸಿದ’, “ಗ್ರಫಿ’ (graphy) ಎಂದರೆ “ಬರೆಯುವುದು’ ಎಂಬ ಅರ್ಥ.
ಬಿಟ್ ಕಾಯಿನ್ ದರ
ಒಂದು ಬಿಟ್ ಕಾಯಿನ್ ಎಂದರೆ 6,42,656 ರೂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.