ಎಸಿಪಿಗಳ ಸಹಿತ 29 ಪೊಲೀಸರಿಂದ ಸಾಕ್ಷ್ಯ
ಮಂಗಳೂರು ಗೋಲಿಬಾರ್ ಪ್ರಕರಣ: ಮ್ಯಾಜಿಸ್ಟೀರಿಯಲ್ ತನಿಖೆ
Team Udayavani, Mar 5, 2020, 1:19 AM IST
ಮಂಗಳೂರು: ಗೋಲಿಬಾರ್ ಮತ್ತು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಮ್ಯಾಜಿಸ್ಟೀರಿಯಲ್ ವಿಚಾರಣೆ ಬುಧವಾರ ಎಸಿ ಕೋರ್ಟ್ನಲ್ಲಿ ನಡೆದಿದ್ದು, ಎಸಿಪಿಗಳಾದ ಕೋದಂಡರಾಮ, ಬೆಳ್ಳಿಯಪ್ಪ ಸಹಿತ 29 ಪೊಲೀಸರು ಸಾಕ್ಷ್ಯ ನುಡಿದರು.
ಉಡುಪಿ ಜಿಲ್ಲಾಧಿಕಾರಿಯೂ ಆಗಿರುವ ಮ್ಯಾಜಿಸ್ಟೀರಿಯಲ್ ತನಿಖಾಧಿಕಾರಿ ಜಗದೀಶ್ ವಿಚಾರಣೆ ನಡೆಸಿದರು. ಪೊಲೀಸರ ಪರವಾಗಿ ಒಟ್ಟು 176 ಮಂದಿ ಸಾಕ್ಷಿ ನುಡಿಯಬೇಕಿದ್ದು ಇನ್ನೂ 147 ಮಂದಿ ಹಾಜರಾಗಲು ಬಾಕಿ ಇದ್ದಾರೆ. ಮಾ. 9ರಂದು ಡಿಸಿಪಿ ಅರುಣಾಂಶುಗಿರಿ ಸಹಿತ 41 ಮಂದಿ ಪೊಲೀಸರು ಹಾಗೂ ಮಾ. 12ರಂದು ಪೊಲೀಸ್ ಆಯುಕ್ತ ಡಾ| ಪಿ.ಎಸ್. ಹರ್ಷ ಸಹಿತ 41 ಜನ ಪೊಲೀಸರು ವಿಚಾರಣೆಗೆ ಹಾಜ ರಾಗುವಂತೆ ಸೂಚನೆ ನೀಡಲಾಗಿದೆ.
ಮಾ. 23ರಂದು ವರದಿ ಮಾ. 23ರಂದು ತನಿಖೆಯ ವರದಿ ಯನ್ನು ಸರಕಾರಕ್ಕೆ ಸಲ್ಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಾಕ್ಷ್ಯ ಹೇಳಲು ಸಿದ್ಧರಿ ರುವ ಪೊಲೀಸ್ ಇಲಾಖೆಯ 176 ಮಂದಿಯ ವಿಚಾರಣೆ ನಡೆಸಿ ನಿಗದಿತ ದಿನಾಂಕದೊಳಗೆ ವರದಿ ಸಲ್ಲಿಸಲು ಪ್ರಯತ್ನಿಸಲಾಗುವುದು. ಕಾರಣಾಂತರದಿಂದ ಆ ದಿನದೊಳಗೆ ವರದಿ ಸಲ್ಲಿಸಲಾಗದಿದ್ದರೆ ಅವಧಿ ವಿಸ್ತರಿಸಲು ಸರಕಾರಕ್ಕೆ ಕೋರಿಕೆ ಸಲ್ಲಿಸಲಾಗುವುದು ಎಂದು ತನಿಖಾಧಿಕಾರಿ ಜಗದೀಶ್ ಅವರು ಸುದ್ದಿಗಾರರಿಗೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train: ಮುರುಡೇಶ್ವರ ಎಕ್ಸ್ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.