ಭಾಗ್ಯಶ್ರೀ ಮಾತಿಗೆ ಬಾಲಿವುಡ್‌ ಅಚ್ಚರಿ


Team Udayavani, Mar 6, 2020, 4:11 AM IST

ಭಾಗ್ಯಶ್ರೀ ಮಾತಿಗೆ ಬಾಲಿವುಡ್‌ ಅಚ್ಚರಿ

ಬಾಲಿವುಡ್‌ನ‌ಲ್ಲಿ 1989ರಲ್ಲಿ ತೆರೆಗೆ ಬಂದಿದ್ದ ಮೈನೇ ಪ್ಯಾರ್‌ ಕಿಯಾ ಚಿತ್ರ ಅನೇಕರಿಗೆ ನೆನಪಿರಬಹುದು. ಈ ಚಿತ್ರದಲ್ಲಿ ತೆರೆಮೇಲೆ ಒಟ್ಟಾಗಿ ಕಾಣಿಸಿಕೊಂಡಿದ್ದ ಸಲ್ಮಾನ್‌ ಖಾನ್‌ ಮತ್ತು ಭಾಗ್ಯಶ್ರೀ ಜೋಡಿಯ ಅಭಿನಯಕ್ಕೆ ಬಾಲಿವುಡ್‌ ಸಿನಿಪ್ರಿಯರು ಫಿದಾ ಆಗಿದ್ದರು. ತೆರೆಗೆ ಬಂದು ಸೂಪರ್‌ಹಿಟ್‌ ಆಗಿದ್ದ ಮೈನೇ ಪ್ಯಾರ್‌ ಕಿಯಾ ಚಿತ್ರದ ಹಾಡುಗಳು ಇಂದಿಗೂ ಅನೇಕರ ಬಾಯಲ್ಲಿ ಆಗಾಗ್ಗೆ ಗುನುಗುತ್ತಿರುತ್ತದೆ. ಈಗ ಯಾಕೆ ಮೈನೇ ಪ್ಯಾರ್‌ ಕಿಯಾ ಚಿತ್ರದ ಬಗ್ಗೆ ಮಾತು ಅಂತೀರಾ? ಅದಕ್ಕೊಂದು ಕಾರಣವಿದೆ. ಈ ಚಿತ್ರದಲ್ಲಿ ಸಲ್ಮಾನ್‌ ಖಾನ್‌ಗೆ ಜೋಡಿಯಾಗಿ ಅಭಿನಯಿಸಿದ್ದ ನಟಿ ಭಾಗ್ಯಶ್ರೀ, ಇತ್ತೀಚೆಗೆ ಈ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಆಗಿದ್ದರೆ ಪರವಾಗಿಲ್ಲ, ಬದಲಾಗಿ ಈ ಚಿತ್ರದ ಶೂಟಿಂಗ್‌ ವೇಳೆ ನಟ ಸಲ್ಮಾನ್‌ ಖಾನ್‌ ತನ್ನೊಡನೆ ಫ್ಲರ್ಟ್‌ ಮಾಡಿ, ಕಿರಿಕಿರಿ ಮಾಡುತ್ತಿದ್ದ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಹೌದು, ಇತ್ತೀಚೆಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಟಿ ಭಾಗ್ಯಶ್ರೀ, ಸುಮಾರು ಮೂವತ್ತು ವರ್ಷಗಳ‌ ಹಿಂದಿನ ಘಟನೆಗಳನ್ನು ತೆರೆದಿಟ್ಟಿದ್ದಾರೆ. “”ನಾನು ಉದ್ಯಮಿ ಹಿಮಾಲಯ ದಸಾನಿಯನ್ನು ಪ್ರೀತಿ ಮಾಡುತ್ತಿರುವ ವಿಷಯ ಮೊದಲು ಗೊತ್ತಾಗಿದ್ದೇ ಸಲ್ಮಾನ್‌ ಖಾನ್‌ಗೆ. ಅದು “ದಿಲ್‌ ದೀವಾನಾ…’ ಸಾಂಗ್‌ ಶೂಟಿಂಗ್‌ ಸಂದರ್ಭದಲ್ಲಿ. ಆ ಹಾಡಿನ ಶೂಟಿಂಗ್‌ ಸಮಯದಲ್ಲಿ ಸಲ್ಮಾನ್‌ ಖಾನ್‌ ನನ್ನ ಹಿಂದೆ ಸುತ್ತುತ್ತಿದ್ದ. ನನ್ನ ಕಿವಿ, ಮುಖದ ಸಮೀಪಕ್ಕೆ ಬಂದು ಹಾಡುಗಳನ್ನು ಹಾಡುತ್ತಿದ್ದ. “ನಮ್ಮ ಬಗ್ಗೆ ಜನ ಇಲ್ಲ ಸಲ್ಲದ ವಿಷಯ ಮಾತನಾಡುತ್ತಾರೆ, ಹೀಗೆಲ್ಲ ಮಾಡಬೇಡ’ ಅಂತ ಸಲ್ಮಾನ್‌ಗೆ ವಾರ್ನಿಂಗ್‌ ಕೊಟ್ಟಿದ್ದೆ. ಆದರೆ, ಅವರು ಕೇಳಲಿಲ್ಲ. ಆ ರೀತಿ ಎರಡು ದಿನಗಳ ಕಾಲ ನನ್ನನ್ನು ಕಾಡಿದ ಬಳಿಕ, ನಾನು ಪ್ರೀತಿಸುತ್ತಿರುವ ಸಂಗತಿ ಗೊತ್ತು ಎಂದು ಹೇಳಿದ್ದರು. ಜೊತೆಗೆ ಲೋಕೇಶನ್‌ಗೂ ಹಿಮಾಲಯ್‌ನ ಕರೆಸುವಂತೆ ಸಲ್ಮಾನ್‌ ಸೂಚಿಸಿದರು. ತನಗೆ ಕಿರಿಕಿರಿ ಮಾಡಬೇಕೆಂಬ ಉದ್ದೇಶದಿಂದ ಸಲ್ಮಾನ್‌ ಖಾನ್‌ ಅತ್ಯಂತ ಸಲುಗೆಯಿಂದ ನನ್ನ ಜೊತೆಗೆ ನಡೆದುಕೊಳ್ಳುತ್ತಿದ್ದರು” ಎಂದು ನಟಿ ಭಾಗ್ಯಶ್ರೀ ಹೇಳಿದ್ದಾರೆ.

ಸಾಮಾನ್ಯವಾಗಿ ವಿವಾಹವಾಗಿ, ಚಿತ್ರರಂಗದಿಂದ ದೂರವುಳಿದ ಬಳಿಕ ನಟಿಯರು ತಮ್ಮ ಹಿಂದಿನ ಜೀವನದ ಘಟನೆಗಳ ಬಗ್ಗೆ ಮಾತನಾಡುವುದು ಅಪರೂಪ. ಈಗ ಭಾಗ್ಯಶ್ರೀ ತನಗೆ ಸಂಬಂಧಿಸಿದ ಹಳೆ ಘಟನೆಯೊಂದನ್ನು ಬಹಿರಂಗಪಡಿಸಿ, ಅದಕ್ಕೆ ಸಂಬಂಧಿಸಿದಂತೆ ಸಲ್ಮಾನ್‌ ಖಾನ್‌ ಹೆಸರನ್ನು ಹೊರತಂದಿರುವುದು ಬಾಲಿವುಡ್‌ ಮಂದಿಯ ಹುಬ್ಬೇರುವಂತೆ ಮಾಡಿದೆ.

ಮೈನೇ ಪ್ಯಾರ್‌ ಕಿಯಾ ಬಾಲಿವುಡ್‌ನ‌ಲ್ಲಿ ಸಲ್ಮಾನ್‌ ಖಾನ್‌ ಹೀರೋ ಆಗಿ ನಟಿಸಿದ ಮೊದಲ ಚಿತ್ರ. ಈ ಚಿತ್ರಕ್ಕೆ ಸೂರಜ್‌ ಭಾರ್ಜಾತ್ಯ ಆಕ್ಷನ್‌- ಕಟ್‌ ಹೇಳಿದ್ದಾರೆ. ಈ ಚಿತ್ರದ ಬಳಿಕ ಸಲ್ಮಾನ್‌ ಖಾನ್‌ ಸ್ಟಾರ್‌ ನಟನ ಪಟ್ಟಕ್ಕೇರಿದರೆ, ಭಾಗ್ಯಶ್ರೀ ತಾನು ಪ್ರೀತಿಸುತ್ತಿದ್ದ ಹಿಮಾಲಯ್‌ ದಾಸನ್‌ ಅವರನ್ನು ಮದುವೆಯಾಗಿ ಬಾಲಿವುಡ್‌ಗೆ ಗುಡ್‌ಬೈ ಹೇಳಿದ್ದರು. ಸದ್ಯ ಭಾಗ್ಯಶ್ರೀ ದಂಪತಿಗೆ ಓರ್ವ ಪುತ್ರ ಮತ್ತು ಪುತ್ರಿ ಇದ್ದಾರೆ. ಪುತ್ರ ಅಭಿಮನ್ಯು ಮರ್ದ್ ಕೊ ದರ್ದ್ ನಹೀ ಹೋತಾ ಚಿತ್ರದ ಮೂಲಕ ಬಾಲಿವುಡ್‌ಗೆ ಇತ್ತೀಚೆಗೆ ಅಡಿಯಿಟ್ಟಿದ್ದಾರೆ.

ಟಾಪ್ ನ್ಯೂಸ್

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.