ಫ್ಯಾಷನ್ ಲೋಕ; ಸೀರೆಯಲ್ಲಿ ನಿಮ್ ಹೆಸರು…
Team Udayavani, Oct 19, 2020, 10:05 AM IST
ಶೂ, ಕಿವಿಯೋಲೆ, ಕೊರಳ ಚೈನು, ಟಿ-ಶರ್ಟ್, ವಾಚ್, ಉಂಗುರಗಳಲ್ಲಿ ತಮ್ಮ ಹೆಸರನ್ನು ಅಥವಾ ತಮ್ಮ ಪ್ರೀತಿ ಪಾತ್ರರಾದವರ ಹೆಸರನ್ನು ಬರೆಸಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ ಇದೀಗ ಸೀರೆ ಮೇಲೆ ಹೆಸರಗಳನ್ನು ಮುದ್ರಿಸುವ ಗೀಳಿಗೆ ಫ್ಯಾಷನ್ ಲೋಕ ಮುನ್ನುಡಿ ಬರೆದಿದೆ. ಹಾಗಾದರೆ ಅದೇನಪ್ಪಾ ಹೆಸರಿನ ಚಿತ್ತಾರ ಅಂತೀರಾ. ಇಲ್ಲಿದೆ ಮಾಹಿತಿ.
ಹೌದು ಫ್ಯಾಷನ್ ಲೋಕದಲ್ಲಿ ಹೀಗೊಂದು ಹೊಸ ಟ್ರೆಂಡ್ ಸದ್ಯ ಆರಂಭವಾಗಿದೆ. ಸೆರಗು ಭಾಗದಲ್ಲಿ ತಮ್ಮ ಹೆಸರು ಆತ್ಮೀಯರ ಅಥವಾ ಪ್ರೀತಿ ಪಾತ್ರರ ನಿಕ್ ನೇಮ್‌ಗಳನ್ನು ಹ್ಯಾಂಡ್‌ಪ್ರಿಂಟ್ ಮೂಲಕ ಬರೆದುಕೊಂಡಿರುವ ಸೀರೆಗಳು ಮಾರುಕಟ್ಟೆ ಟ್ರೆಂಡ್ ಆಗುತ್ತಿವೆ. ಇನ್ನೂ ಪಿಚ್ಚಿಕಾ ಎನ್ನುವ ಬ್ರಾಂಡ್ ಬಟ್ಟೆ ಈ ಒಂದು ನೂತನ ಪ್ರಯತ್ನವನ್ನು ಮಾಡಿದ್ದು, ಆಕರ್ಷಣೀಯ ಲುಕ್ ನೀಡುವ ಈ ಸೀರೆಯನ್ನು ಅನೇಕ ಮಹಿಳೆಯರು ಇಷ್ಟಪಟ್ಟಿದ್ದಾರೆ
ಸೀರೆಯಲ್ಲಿ ಮಿಂಚಿದ ಸೆಲೆಬ್ರಿಟಿಗಳು
ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಖಾಸಗಿ ಸಮಾರಂಭ ಒಂದರಲ್ಲಿ ಈ ಸೀರೆಯನ್ನು ಉಟ್ಟಿದ್ದು, ಸೆರಗಿನ ಭಾಗದಲ್ಲಿ ಬೇಬೋ ಎಂದು ಬರೆಸಿದ್ದು, “ದಿ ಬೆಸ್ಟ್ ಚಾನ್ಸ್’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಜತೆಗೆ ದಕ್ಷಿಣ ಭಾರತದ ನಟಿ ಸಮಂತಾ ಅಕ್ಕಿನೇನಿ ಕೂಡ ಈ ಹೊಸ ಟ್ರೆಂಡ್‌ನ ಮೊರೆಹೋಗಿದ್ದು, ತಮ್ಮ ಮುಂಬರುವ ಚಿತ್ರ “ಜಾನು’ ಪ್ರಮೋಶನ್ ವೇಳೆ ಈ ಸೀರೆಯನ್ನು ತೊಟ್ಟು ಮಿಂಚಿದ್ದಾರೆ.
ಪ್ರೋರಲ್ ಡಿಸೈನ್
ತಿಳಿಬಣ್ಣಗಳುಳ್ಳ ಈ ಸೀರೆ ನೋಡಲು ಸುಂದರವಾಗಿದ್ದು, ಉಟ್ಟರೆ ಅಷ್ಟೇ ಕಂಫರ್ಟ್ ನೀಡುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರೋರಲ್ ಡಿಸೈನ್ ವಿನ್ಯಾಸದಲ್ಲಿ ಸಿದ್ಧಪಡಿಸಿರುವ ಈ ಸೀರೆ ಸ್ಲಿವ್‌ಲೆಸ್ ಬ್ಲೌಸ್ ಅನ್ನು ಮ್ಯಾಚ್ ಮಾಡಿದ್ದು, ಸರಳ ಮೇಕ್‌ಪ್ ಮಾಡಿಕೊಳ್ಳುವುದು ಉತ್ತಮ.
ಗ್ರ್ಯಾಂಡ್ ಆಭರಣದ ಅಗತ್ಯ ಇಲ್ಲ
ಸೀರೆ ಅಲ್ಲಿಯೇ ಗ್ರ್ಯಾಂಡ್ ಲುಕ್ ಇರುವ ಕಾರಣ ಇದಕ್ಕೆ ಅದ್ದೂರಿಯ ಆಭರಣದ ಆವಶ್ಯಕತೆ ಇಲ್ಲ. ಸದಾಸೀದವಾಗಿ ಜಡೆ ಹೆಣೆದು, ಒಂದೆಳೆಯ ಸರ ಹಾಕಿದ್ದರೆ ಸಾಕು ಎನ್ನುತ್ತಾರೆ ಫ್ಯಾಷನ್ ವಿನ್ಯಾಸ ಕಾರರು.
ಒಟ್ಟಾರೆ ಕ್ಷಣಕ್ಕೊಂದು ಬದಲಾವಣೆ ಆಗುತ್ತಿರುವ ಫ್ಯಾಷನ್ ಲೋಕದಲ್ಲಿ ಸದ್ಯ ಹೆಂಗಳೆಯರು ಈ ಸೀರೆಯ ಅಂದಕ್ಕೆ ಮನಸೋತಿದ್ದು, ಈಗಾಗಲೇ ಹಲವಾರು ಸೆಲೆಬ್ರಿಟಿಗಳು ಈ ಸೀರೆಯುಟ್ಟು ಮಿಂಚುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.