ಅನ್ನದಾತನಿಗಿಂತ ಶ್ರೇಷ್ಠ ಇನ್ಯಾರಿಲ್ಲ


Team Udayavani, Mar 6, 2020, 11:56 AM IST

ಅನ್ನದಾತನಿಗಿಂತ ಶ್ರೇಷ್ಠ ಇನ್ಯಾರಿಲ್ಲ

ದೇವರಹುಬ್ಬಳ್ಳಿ: ಜಗತ್ತಿಗೆ ಜಾತಿ, ಮತ ಭೇದ ಇಲ್ಲದೆ ಅನ್ನ ನೀಡುವ ಕಾಯಕದಲ್ಲಿ ತೊಡಗಿರುವ ಒಕ್ಕಲಿಗನೇ ಈ ಜಗತ್ತಿನಲ್ಲಿ ಶ್ರೇಷ್ಠ ಎಂದು ಮಹಾರಾಷ್ಟ್ರದ ಕೊಲ್ಲಾಪುರದ ಕನೇರಿಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಇಲ್ಲಿನ ಸಿದ್ಧಾಶ್ರಮದಲ್ಲಿ ಸಿದ್ಧಾರೂಢರ ಶಿವ ಪಂಚಾಕ್ಷರಿ ಭಜನಾ ಸಪ್ತಾಹ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ “ಅನ್ನದಾತ ಸುಖೀಭವ’ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ನಮ್ಮ ರೈತರಲ್ಲಿ ತಾವು ಕನಿಷ್ಠರೆಂಬ ಕೀಳರಿಮೆ ಭೂತ ಹೊಕ್ಕಿದ್ದು, ಅದನ್ನು ರೈತರುಮೊದಲು ಒಧ್ದೋಡಿಸಬೇಕಿದೆ. ಪೂರ್ವಜರ ಕೃಷಿ ಪದ್ಧತಿ ಸಂರಕ್ಷಣೆಗೆ ಕಂಕಣತೊಡಬೇಕಿದೆ ಎಂದರು.

ಶಹರದಲ್ಲಿರುವವರು, ನೌಕರಿ ಮಾಡುವವವರು, ಇಂಗ್ಲಿಷ್‌ ಮಾತನಾಡುವವರು ಹಾಗೂ ಉದ್ಯಮದಲ್ಲಿ ತೊಡಗಿದವರನ್ನು ನೋಡಿ “ಅವರು ಸುಖವಾಗಿದ್ದಾರೆ, ನಮ್ಮ ಬದುಕಿಗೆಲ್ಲಿದೆ ಅಂತಹ ಸುಖ’ ಎಂಬ ಕೀಳರಿಮೆಗೆ ರೈತರು ಹಾಗೂ ಗ್ರಾಮೀಣ ಜನರು ಸಿಲುಕಿದ್ದಾರೆ. ಮೊದಲು ಆ ಕೀಳರಿಮೆಯಿಂದ ಹೊರಬರಬೇಕು ಎಂದು ಹೇಳಿದರು. ಹಳ್ಳಿಗರು ಯಾರೇ ಮನೆಗೆ ಬಂದರೂ ಪ್ರೀತಿಯ ಆತಿಥ್ಯ ನೀಡುತ್ತಾರೆ. ಇಂತಹ ದೊಡ್ಡ ಮನಸ್ಸು ಶಹರದಲ್ಲಿದ್ದವರಿಗೆ ಇರಲ್ಲ. ವ್ಯಕ್ತಿತ್ವದಿಂದ ವ್ಯಕ್ತಿಗಳನ್ನು ಅಳೆಯಬೇಕೇ ವಿನಃ ಹಣ-ಸ್ಥಾನ ಹಾಗೂ ಅಧಿಕಾರದಿಂದಲ್ಲ ಎಂದರು.

ಈ ದೇಶದಲ್ಲಿ ಯಾವುದಾದರೂ ಸಮಸ್ಯೆಗಳು ಸೃಷ್ಟಿಯಾಗಿವೆ ಎಂದರೆ ಅದು ಓದಿದವರಿಂದ ವಿನಃ ಅನಕ್ಷರಸ್ಥರಿಂದಲ್ಲ. ನಾವು ಅತ್ಯಂತ ಕೆಳ ಸ್ತರದಲ್ಲಿದ್ದೇವೆ ಎಂದು ಅನೇಕ ಹಳ್ಳಿಗರು ಶಹರಗಳ ವಾಸದತ್ತ ನೋಡುತ್ತಿದ್ದಾರೆ. ಇನ್ನೂ ಕೆಲವರು ಅನಿರ್ವಾಯವಾಗಿ ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಇಂತಹ ಮನೋಭಾವವನ್ನು ರೈತರು ಹಾಗೂ ಹಳ್ಳಿಗರು ಮೊದಲು ಬಿಡಬೇಕು ಎಂದರು.

ಆತ್ಮಾವಲೋಕನ ಅವಶ್ಯ: ರೈತ ಎಂದೂ ಉಚಿತ ಇಲ್ಲವೆ ಕಡಿಮೆ ದರದಲ್ಲಿ ಅಕ್ಕಿ ಕೊಡಿ ಎಂದು ಕೇಳಿಲ್ಲ. ಬದಲಾಗಿ ಸಮರ್ಪಕ ನೀರು, ಬೆಳೆದ ಬೆಲೆಗೆ ಉತ್ತಮ ಬೆಲೆ ನೀಡಿದರೆ ಸಾಕು. ರೈತ ಬಂಗಾರದ ಬದುಕು ಬದುಕಬಲ್ಲ. ಇದರೆ ಜತೆಗೆ ನಾವು ಎಲ್ಲಿ ತಪ್ಪಿದ್ದೇವೆ ಎಂಬುದರ ಬಗ್ಗೆ ರೈತರು ಸಹ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು. ಮಹಿಳೆಯರನ್ನು ಕೃಷಿಯಿಂದ ದೂರ ಇರಿಸಿದ್ದೇ ಇಂದಿನ ಕೃಷಿ ದಾರಿದ್ರ್ಯಕ್ಕೆ ಪ್ರಮುಖ ಕಾರಣ. ಈ ಹಿಂದೆ ಬೀಜಗಳ ಸಂರಕ್ಷಣೆ, ಹೊಲದ ಯಾವ ಭಾಗದಲ್ಲಿ ಯಾವ ಬೀಜ ಹಾಕಬೇಕೆಂಬುದನ್ನು ನಮ್ಮ ತಾಯಂದಿರು ಹೇಳುತ್ತಿದ್ದರು. ರೈತರೀಗ ಅಂಗಡಿಯವರು ನೀಡುವ ಬೀಜಕ್ಕೆ ಕೈ ಚಾಚಿ ನಿಲ್ಲುತ್ತಿದ್ದು, ಬೀಜ ಸ್ವಾವಲಂಬನೆ ಕಳೆದುಕೊಂಡಿದ್ದಾರೆ ಎಂದರು.

ರಸಗೊಬ್ಬರ, ಕ್ರಿಮಿನಾಶಕ ಗೊಬ್ಬರ ಆಧಾರಿತ ಕೃಷಿಯ ಬೆನ್ನು ಬಿದ್ದು ಭೂಮಿಯ ಆರೋಗ್ಯ ಹಾಳು ಮಾಡಿದ್ದೇವಷ್ಟೇ ಅಲ್ಲ. ವಿಷಯುಕ್ತ ಆಹಾರ, ತರಕಾರಿ ತಿಂದು ನಮ್ಮ ಆರೋಗ್ಯ ಹಾಳು ಮಾಡಿಕೊಂಡಿದ್ದೇವೆ. ವಿಶ್ವಕ್ಕೂ ವಿಷವನ್ನೇ ನೀಡುತ್ತಿದ್ದೇವೆ ಎಂಬ ಬಗ್ಗೆ ರೈತರು ಆತ್ಮಾವಲೋಕನಕ್ಕೆ ಇಳಿಯಬೇಕಿದೆ. ಕೃಷಿ ದಾರಿದ್ರ್ಯ ತೊಲಗಿಸಲು ಪೂರ್ವಜರ ಕೃಷಿ ಪರಂಪರೆಗೆ ನಾವು ಮರಳಬೇಕಿದೆ. ಮುಖ್ಯವಾಗಿ ದೇಸಿ ಹಸುಗಳ ಸಾಕಣೆಗೆ ಮುಂದಾಗಬೇಕಿದೆ ಎಂದು ಹೇಳಿದರು.

ಕೃಷಿ ಉತ್ಪನ್ನಗಳ ಮೌಲವರ್ಧನೆಗೆ ರೈತರು ಚಿಂತನೆ ನಡೆಸಬೇಕಾಗಿದೆ. ದೇಸಿ ಹಸುಗಳ ಹಾಲು, ಮೂತ್ರ, ಸಗಣಿ ಎಲ್ಲವೂ ಉಪಯುಕ್ತವಾಗಿದೆ. ಇವುಗಳ ಮೌಲ್ಯವರ್ಧನೆ ಮಾಡಿದರೆ ಆರೋಗ್ಯಕ್ಕೂ, ಆದಾಯಕ್ಕೂ ಉತ್ತಮ ಪ್ರಯೋಜನವಾಗಲಿದೆ. ದೇಶದ ಪ್ರಕೃತಿ ತಿದ್ದಬೇಕಾದರೆ, ಮೊದಲು ರೈತರಲ್ಲಿ ಪರಿವರ್ತನೆ ಆಗಬೇಕಿದೆ. ಉತ್ತಮ ಕೃಷಿಗೆ ಪೂರಕವಾಗಿ ಶ್ರೀಮಠ ಕಲ್ಚರ್‌ವೊಂದನ್ನು ಅಭಿವೃದ್ಧಿಪಡಿಸಿದ್ದು, ಅದನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತಿದೆ. ರೈತರು ಇದನ್ನು ಅಭಿವೃದ್ಧಿಪಡಿಸುವ ಮೂಲಕ ಪರಸ್ಪರ ಹಂಚಿಕೆ ಮಾಡಬೇಕು ಎಂದರು.

ಸಿದ್ಧಾಶ್ರಮದ ಶ್ರೀ ಸಿದ್ಧ ಶಿವಯೋಗಿ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ವಿಷಮುಕ್ತ ಕೃಷಿ, ದೇಸಿ ಹಸುಗಳ ಸಾಕಣೆ ವಿಷಯಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು. ನಮ್ಮೆಲ್ಲ ರೈತರು ಅದನ್ನು ಮಾಡಲಿದ್ದಾರೆ ಎಂದು ಕನೇರಿ ಶ್ರೀಗಳಿಗೆ ಭರವಸೆ ನೀಡಿದರು. ಸಿಂದೋಗಿ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಜೋಡಳ್ಳಿ ಸ್ವಾಗತಿಸಿದರು. ಪತ್ರಕರ್ತ ಬಸವರಾಜ ಹೊಂಗಲ ನಿರೂಪಿಸಿದರು. ಕಲ್ಲನಗೌಡ ಪಾಟೀಲ ವಂದಿಸಿದರು. ನೂರಾರು ರೈತರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

13-

Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ

AV-Bellad

Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್‌

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kaup town: ಟ್ರಾಫಿಕ್‌ ಒತ್ತಡ, ಪಾರ್ಕಿಂಗ್‌ ಕಿರಿಕಿರಿ

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

7(1

Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.