ಪೊಲೀಸ್ ಇಲಾಖೆಯಲ್ಲಿ ಸ್ಪಂದನೆ ಮುಖ್ಯ
ಉತ್ತಮ ಕೆಲಸ ಮಾಡಿದರೆ ನಮ್ಮನ್ನು ಗುರುತಿಸುತ್ತಾರೆ ಜನಕಾನೂನಿನಿಂದ ಎಲ್ಲವನ್ನೂ ನಿಯಂತ್ರಿಸುವುದು ಅಸಾಧ್ಯ
Team Udayavani, Mar 6, 2020, 5:12 PM IST
ಸುರಪುರ: ಸರಕಾರಿ ಸೇವೆಯಲ್ಲಿ ವರ್ಗಾವಣೆ ಮತ್ತು ನಿವೃತ್ತಿ ಸಾಮಾನ್ಯ ಅದರಲೂ ವಿಶೇಷವಾಗಿ ಪೊಲೀಸ್ ಇಲಾಖೆಯಲ್ಲಿ ರಕ್ಷಣೆಗಿಂತ ಸ್ಪಂದನೆ ಮುಖ್ಯ ಎಂದು ವರ್ಗಾವಣೆಯಾದ ಸಿಪಿಐ ಆನಂದರಾವ್ ಹೇಳಿದರು.
ನಗರದ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಎಷ್ಟು ದಿನ ಕೆಲಸ ಮಾಡಿದೆ ಎನುವುದಕ್ಕಿಂತ ಸಾರ್ವಜನಿಕರ ಸಮಸ್ಯೆಗಳಿಗೆ ನಾನೆಷ್ಟು ಸ್ಪಂದಿಸಿದೆ. ಜನಸ್ನೇಹಿಯಾಗಿ ಕೆಲಸ ಮಾಡಿದೆ ಎನ್ನುವುದು ಮುಖ್ಯ. ಈ ನಿಟ್ಟಿನಲ್ಲಿ ಇಲ್ಲಿ ಇರುವಷ್ಟು ದಿನ ಉತ್ತಮ ಸೇವೆ ನೀಡಿದ ತೃಪ್ತಿ ನನಗಿದೆ ಎಂದು ಹೇಳಿದರು.
ಇಲ್ಲಿಗೆ ವರ್ಗಾವಣೆಯಾದಾಗ ತಾಲೂಕಿನ ಬಗ್ಗೆ ಏನೇನೋ ಕೇಳಿದ್ದೆ. ದಿನಗಳೆದಂತೆ ಕಾಲ ಕ್ರಮೇಣ ನನ್ನ ತಿಳಿವಳಿಕೆ ತಪ್ಪು ಎಂಬುದು ಖಾತ್ರಿಯಾಯಿತು. ಇಲ್ಲಿಯ ಜನರ ಮಾನಸಿಕ ಸ್ಥಿತಿ, ವರ್ತನೆ ಎಲ್ಲವೂ ಅರಿವಿಗೆ ಬಂತು. ಇಲ್ಲಿಯ ಜನರು ತುಂಬಾ ಹೃದಯ ವೈಶಾಲ್ಯವಂತರು, ಜನಸ್ನೇಹಿಗಳು ಎಂದು ಹೇಳಿದರು.
ಇಲ್ಲಿಯ ಉತ್ತಮ ಸೇವೆ ನೀಡಿದ್ದೇನೆ ಎನ್ನುವುದಕ್ಕಿಂತ ಇಲ್ಲಿಂದ ಸಾಕಷ್ಟು ಕಲಿತಿದ್ದೇನೆ. ಅನುಭವ ಪಡೆದುಕೊಂಡಿದ್ದೇನೆ. ಇಲ್ಲಿ ಮುಸ್ಲಿಂ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದರು ಪರಸ್ಪರರು ನಡೆದುಕೊಳ್ಳುವ ಸೌರ್ಹಾದತೆ ಇತರರರಿಗೆ ಮಾದರಿಯಾಗಿದೆ. ನನ್ನ ಸೇವಾ ಅವ ಧಿಯಲ್ಲಿ ಎಲ್ಲಯೂ ಅಹಿತಕರ ಘಟನೆ ನಡೆಯದಿರುವುದು ಅತ್ಯಂತ ಖುಷಿ ನೀಡಿದೆ. ಇದಕ್ಕೆ ತಮ್ಮೆಲ್ಲರ ಸಹಾಯ ಸಹಕಾರವೇ ಕಾರಣ. ಇಲ್ಲಿಂದ ವರ್ಗವಾಗಿದ್ದರೂ ಬಿಟ್ಟು ಹೋಗಲು ಮನಸ್ಸಿಲ್ಲ. ನಾನೆಲ್ಲಿಯೇ ಇದ್ದರು ಸುರಪುರವನ್ನು ಯಾವತ್ತು ಮರೆಯಲಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಿವೈಎಸ್‌ಪಿ ವೆಂಕಟೇಶ ಉಗಿಬಂಡಿ ಮಾತನಾಡಿ, ಪೊಲೀಸ್ ಇಲಾಖೆ ಮೇಲೆ ಜನರ ಗೌರವ ಇದೆ. ಉತ್ತಮವಾಗಿ ಕೆಲಸ ಮಾಡಿದಲ್ಲಿ ಜನರು ನಮ್ಮನ್ನು ಗುರುತಿಸುತ್ತಾರೆ. ಇದಕ್ಕೆ ಆನಂದರಾವ ಅವರಿಗೆ ನೀಡಿರುವ ಗೌರವ
ಸನ್ಮಾನವೇ ಸಾಕ್ಷಿಯಾಗಿದೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಕಾನೂನಿಂದ ಎಲ್ಲವನ್ನು ನಿಯಂತ್ರಿಸುತ್ತೇನೆ ಎನ್ನುವುದು ಅಸಾಧ್ಯ. ಇದಕ್ಕೆ ಸಾರ್ವಜನಿಕರ ಸಹಭಾಗಿತ್ವ ಮುಖ್ಯವಾಗಿದೆ. ಕಾರಣ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಜನಸ್ನೇಹಿಯಾಗಿ ಕೆಲಸ ಮಾಡಬೇಕು ಎಂದು ಸಲಹೆ
ನೀಡಿದರು.
ನೂತನವಾಗಿ ಅಧಿಕಾರ ವಹಿಸಿಕೊಂಡ ಸಿಪಿಐ ಸಾಹೇಬಗೌಡ ಪಾಟೀಲ ಮಾತನಾಡಿ, ಉತ್ತಮವಾಗಿ ಕೆಲಸ ಮಾಡಬೇಕು. ಕಾನೂನು ಪಾಲನೆಯೊಂದಿಗೆ ಸಾರ್ವಜನಿಕರಿಗೆ ರಕ್ಷಣೆ ನೀಡಬೇಕು. ಜನಸ್ನೇಹಿ ಪೊಲೀಸ್ ಆಗಿ ಮಾಡಬೇಕು ಎಂಬ ಆಸೆ ಇಟ್ಟುಕೊಂಡಿದ್ದೇನೆ. ಆನಂದರಾವ್ ಅವರಿಗೆ ನೀಡಿದ ಸಲಹೆ ಸಹಕಾರ ನನಗೂ ನೀಡಿ ಉತ್ತಮ ಸೇವೆಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಶಹಾಪುರ ಸಿಪಿಐ ಶ್ರೀನಿವಾಸರಾವ ಅಲಾಪುರ ಮಾತನಾಡಿ ಪೊಲೀಸ್ ಸೇವೆ ಅತ್ಯಂತ ಕಠಿಣವಾಗಿದೆ. ನಿಮ್ಮಂತೆ ನಮಗೂ ಆಸೆ ಆಕಾಂಕ್ಷೆ ಇರುತ್ತವೆ. ಕಟುಂಬದೊಂದಿಗೆ ಹಬ್ಬ ಹರಿದಿನಗಳನ್ನು ಆಚರಿಸಿ ಸಂಭ್ರಮಿಸಬೇಕು ಎಂಬ ಬಯಕೆ ಇರುತ್ತದೆ. ಆದರೆ ಇದೆಲ್ಲವನ್ನು ಮರೆತು ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಸೇವೆಯಲ್ಲಿಯೇ ಸಂಭ್ರಮ, ಸಂತಸ ಕಾಣುತ್ತೇವೆ. ಆದ್ದರಿಂದ ಸಾರ್ವಜನಿಕರು ಕಾನೂನು ಪಾಲನೆಯೊಂದಿಗೆ ಶಾಂತಿ ಸೌರ್ಹಾದ ವಾತಾವರಣಕ್ಕೆ ಪೊಲೀಸರ ಜತೆ ಕೈ ಜೋಡಿಸಬೇಕು ಎಂದು ಹೇಳಿದರು.
ಭೀಮ ನಾಯಕ ಬೈರಿಮಡ್ಡಿ, ಧರ್ಮರಾಜ ಬಡಿಗೇರ, ಉಸ್ತಾದ ವಜಾಹತ್ ಹುಸೇನ್, ನಿಂಗಣ್ಣ ಗೋನಾಲ, ತಿಪ್ಪಣ್ಣ, ಮಾನಪ್ಪ, ರಾಮಣ್ಣ, ಖಾಜಾ ಖಲೀಲ್ ಅರಕೇರಿ ಇದ್ದರು. ಪಿಎಸ್‌ಐ ಶರಣಪ್ಪ ನಾಯಕ ಸ್ವಾಗತಿಸಿದರು. ಮುಖ್ಯ ಪೇದೆ ಚಂದ್ರಕಾಂತ ನಿರೂಪಿಸಿದರು. ಪೇದೆ ರವಿಕುಮಾರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.