ಶೋಧಕನ ಕೊನೆಯ ಡೈರಿ

ಶೆಟ್ಟರ್‌ ಮೂಲಕ ನಾವು ಕಂಡ ಜಗತ್ತು

Team Udayavani, Mar 7, 2020, 6:12 AM IST

shodhakana

ವರ್ತಮಾನದಲ್ಲಿ ನಿಂತು, ಚರಿತ್ರೆಯೊಂದಿಗೆ ಸಂಸಾರ ಮಾಡಿಕೊಂಡಿದ್ದ ಖ್ಯಾತ ಸಂಶೋಧಕ ಷ. ಶೆಟ್ಟರ್‌, ಕನ್ನಡದ ಇತಿಹಾಸವನ್ನು ಹೇಳಿದವರು. ಸಲ್ಲೇಖನದ ಸಾವಿನ ರಹಸ್ಯ ಬಗೆದವರು. ಗೊಮ್ಮಟನ ಎತ್ತರ ಹೇಳಿದವರು. ಅಶೋಕನ ಶಾಸನವನ್ನು ವಿಶ್ಲೇಷಿಸಿದವರು. ಇತ್ತೀಚೆಗೆ ನಮ್ಮನ್ನು ಅಗಲಿದ ಈ ಚೇತನದ ಹೆಜ್ಜೆಗಳಲ್ಲಿ ಅಪಾರ ನೆನಪುಗಳಿವೆ…

ಕನ್ನಡ ನಾಡು ನುಡಿ ಕಂಡ ಬಹುದೊಡ್ಡ ಸಾಂಸ್ಕೃತಿಕ ವ್ಯಕ್ತಿತ್ವ ಷ. ಶೆಟ್ಟರ್‌. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವನ್ನು ತಂದುಕೊಟ್ಟ ಶೆಟ್ಟರ್‌ ಅವರ ಪುಸ್ತಕ “ಶಂಗಂ ತಮಿಳುಗಂ’ ಮತ್ತು ಕನ್ನಡ ನಾಡು ನುಡಿಯ ಮೂಲಕ ತಮಿಳಿಗಿಂತಲೂ ಕನ್ನಡ ಲಿಪಿ ಪುರಾತನ ಎಂದು ಸಾಧಿಸಿದ್ದೇ ಅಲ್ಲದೆ, “ಹಳಗನ್ನಡ ಲಿಪಿ, ಲಿಪಿಕಾರ ಲಿಪಿ ವ್ಯವಸಾಯ’ದ ಮೂಲಕ ಕನ್ನಡ ಲಿಪಿಯ ಚರಿತ್ರೆಯ ಮುಖೇನ ಸಾಮಾಜಿಕ ಚರಿತ್ರೆಯನ್ನು ಪುನಾರೂಪಿಸಿದರು. ಹಳಗನ್ನಡ ಕನ್ನಡ ಭಾಷೆ, ಭಾಷಾ ಬಾಂಧವ್ಯದ ಮೂಲಕ ಕನ್ನಡ ಭಾಷೆಯ ಚರಿತ್ರೆಗೆ ಹೊಸ ದಿಕ್ಕುಗಳನ್ನು ಸೂಚಿಸಿದರು. “ಶಿಲ್ಪಗಳ ಚರಿತ್ರೆ ಇತ್ತು, ಆದರೆ ಶಿಲ್ಪಿಗಳ ಚರಿತ್ರೆ ಇರಲಿಲ್ಲ’. ಅದನ್ನು ರೂವಾರಿ ಪುಸ್ತಕದಲ್ಲಿಯಲ್ಲಿ ಕಟ್ಟಿಕೊಟ್ಟರು. ವಸ್ತು ವಿಷಯಗಳ ಮೂಲಗಳ ಹುಡುಕಾಟದಲ್ಲಿ ಅವರಿಗಿದ್ದ ಶ್ರದ್ಧೆ, ನಿಜಕ್ಕೂ ಬೆರಗು ಮೂಡಿಸುತ್ತದೆ. ಅಷ್ಟೇಕೆ, ಬಳ್ಳಾರಿ ಜಿಲ್ಲೆಯ ನಿಟ್ಟೂರಿನಲ್ಲಿ ಅಶೋಕನ ಶಾಸನವನ್ನು ಮೊಟ್ಟ ಮೊದಲಿಗೆ ವಿಶ್ಲೇಷಿಸಿದವರೂ ಇವರೇ.

ನಿಧಿಗಳ್ಳನೋ, ಏನೋ…: 1963ರ ಸುಮಾರು. ಶೆಟ್ಟರ್‌ ಆಗ 28 ವರ್ಷಗಳ ತರುಣ. ಹೊಯ್ಸಳರ ದೇವಾಲಯಗಳನ್ನು ಕುರಿತು ಅಧ್ಯಯನ ಮಾಡಲು ಆರಂಭಿಸಿದ್ದರು. ಹೀಗೇ ಸರ್ವೆ ಮಾಡುತ್ತಾ ಶ್ರವಣಬೆಳಗೊಳಕ್ಕೆ ಬಂದರು. ಚಿಕ್ಕ ಬೆಟ್ಟದಲ್ಲಿದ್ದ ದೇಗುಲದಲ್ಲಿನ ಆದಿತೀರ್ಥಂಕರರ ಮೂರ್ತಿಗಳಿರುವ ಪೀಠದ ಕೆಳಗೆ ಕೆಲವು ಸಾಲುಗಳ ಶಾಸನವಿರುವುದನ್ನು ಶೆಟ್ಟರ್‌ ಕಂಡರು. ಆ ದೇಗುಲದ ಅರ್ಚಕರು ಯಾರನ್ನೂ ಗರ್ಭಗುಡಿಗೆ ಸೇರಿಸುತ್ತಿರಲಿಲ್ಲ. ಜೊತೆಗೆ ಅವರಿಗೆ “ಇವನು ಏನು ಅಧ್ಯಯನ ಮಾಡುತ್ತಾನೆ?’ ಎಂಬ ಉಡಾಫೆ. ಆ ಕಾಲದಲ್ಲಿ ಅತಿ ಪುರಾತನ ಮೂರ್ತಿಗಳನ್ನು ಕಳ್ಳ ಸಾಗಣೆ ಮಾಡುವ ವಿಚಾರಗಳೂ ಕೇಳಿಬರುತ್ತಿದ್ದುದರಿಂದ “ಇವನೂ ಹೀಗೆ ಬಂದಿರಬಹುದೇ?’ ಎಂಬ ಅನುಮಾನ.

ಅದಕ್ಕಿಂತ ಹೆಚ್ಚಾಗಿ, “ಇವನು ನಿಧಿ ಹುಡುಕುವ ದೊಡ್ಡ ಗುಂಪಿನ ನಾಯಕನಿರಬಹುದೇ?’ ಎಂಬ ಗುಮಾನಿ. ಆದರೆ, ಶೆಟ್ಟರ್‌ ತಮ್ಮ ನಡೆ ನುಡಿಯಿಂದ ನಿಧಾನವಾಗಿ ಅರ್ಚಕರ ವಿಶ್ವಾಸವನ್ನು ಗಳಿಸಿಕೊಂಡರು. ಅದು ಎಷ್ಟು ಗಾಢವಾಯಿತೆಂದರೆ, ಅರ್ಚಕರು ಊಟಕ್ಕೆ ಅಥವಾ ಬೇರೆ ಕಡೆ ಹೋಗುವಾಗ ಗರ್ಭಗುಡಿಯ ಕೀಲಿಯನ್ನು ಶೆಟ್ಟರ್‌ ಅವರ ಕೈಗೆ ಕೊಟ್ಟು ಹೋಗುವಷ್ಟು. ಒಂದು ರಾತ್ರಿ ಹನ್ನೊಂದರ ಸುಮಾರಿನಲ್ಲಿ ತಮಗೆ ಊಟ- ತಿಂಡಿ ತಂದುಕೊಡುತ್ತಿದ್ದ ಚಂದ್ರಪ್ಪನೆಂಬುವನ ಸಹಾಯದಿಂದ ಹಾರೆಯಕೋಲಿನಿಂದ ಆ ಮೂರ್ತಿಗಳ ಮುಂದಿದ್ದ ಬಂಡೆಗಳನ್ನು ಮೀಟಿ ಪೀಠಗಳ ಮೇಲಿನ ಶಾಸನಗಳನ್ನು ದಾಖಲಿಸಿಕೊಂಡರು.

ಬೆಳಗಿನ ಜಾವದ ಹೊತ್ತಿಗೆ ಮತ್ತೆ ಆ ಬಂಡೆಗಳನ್ನು ಅವುಗಳ ಸ್ಥಾನಗಳಿಗೆ ಸೇರಿಸಿ ಹಿಂದಿರುಗುವಾಗ, ಅವರ ಬಗಲಿನಲ್ಲಿ ಅಪ್ರಕಟಿತ‌ ಆ 35 ಶಾಸನಗಳು ಇದ್ದವು. ಅವು ಅವರ ವೃತ್ತಿ ಜೀವನದ ಮಹತ್ವದ ಕ್ಷಣಗಳಾಗಿದ್ದವು. ಹೀಗೆ ಹೊಯ್ಸಳರ ದೇಗುಲಗಳನ್ನು ಅಧ್ಯಯನ ಮಾಡಲು ಹೋದ ಶೆಟ್ಟರ್‌ ಅವರಿಗೆ ಶ್ರವಣಬೆಳಗೊಳದಲ್ಲಿ ದೊರೆತ 35 ಶಾಸನಗಳು ಇನ್ನೊಂದು ವಿಷಯದ ಮೇಲೆ ಆಕರ್ಷಣೆಯನ್ನು ಮೂಡಿಸಿದವು. ಅದೇ “ಸಾವು’. “ಬೌದ್ಧ, ಹಿಂದೂ, ಜೈನ ಸಂಪ್ರದಾಯವನ್ನೊಳಗೊಂಡಂತೆ ಭಾರತೀಯ ವಾಂಗ¾ಯದಲ್ಲಿ ಸಾವನ್ನು ಕುರಿತು ಚಿಂತನೆ ನಡೆದಿದ್ದರೂ, ಯಾವ ಕಾರಣಕ್ಕಾಗಿ ಈ ಬಗ್ಗೆ ಭಾರತೀಯರಿಂದ ಒಂದೂ ಗ್ರಂಥ ಬಂದಿಲ್ಲ ಎಂಬ ವಿಚಾರ ನನ್ನನ್ನು ಮತ್ತೆ ಮತ್ತೆ ಕಾಡತೊಡಗಿತು.

ಇದೇ ವಿಷಯದ ಬಗ್ಗೆ ಶಿಕಾಗೋ ವಿವಿಯಲ್ಲಿ ಉಪನ್ಯಾಸಗಳನ್ನು ಪುನರುಕ್ತಿಗೊಳಿಸಿದಾಗ ನನ್ನ ಉಪನ್ಯಾಸಗಳನ್ನು ಸಂಪಾದಿಸಿ ಪುಸ್ತಕ ರೂಪದಲ್ಲಿ ಹೊರತರುವ ಯೋಜನೆಯನ್ನು ಆ ವಿವಿಯ ಪ್ರಕಟಣಾ ವಿಭಾಗ ವ್ಯಕ್ತಪಡಿಸಿತು. ಆದರೆ, ನನಗಿದ್ದ ಆತಂಕಗಳ ಕಾರಣದಿಂದ ಅದಕ್ಕೆ ಒಪ್ಪದೆ, ಆ ಉಪನ್ಯಾಸಗಳನ್ನು ನನ್ನೊಡನೆ ಭಾರತಕ್ಕೆ ತೆಗೆದುಕೊಂಡು ಬಂದೆ’ ಎಂದಿದ್ದರು ಶೆಟ್ಟರ್‌. ಮುಂದೆ 6 ವರ್ಷಗಳ ಸತತ ಪರಿಶ್ರಮದಿಂದ “ಇನ್‌ ವೈಟಿಂಗ್‌ ಡೆತ್‌’ ಮತ್ತು “ಪರ್‌ ಸೂಯಿಂಗ್‌ ಡೆತ್‌’ ಎಂಬ ಎರಡು ಕೃತಿಗಳು ಹೊರಬಂದವು. ಈ ಕೃತಿಗಳು ಪ್ರಪಂಚದ ಎಲ್ಲ ವಿವಿಗಳ ರ್ಯಾಕ್‌ಗಳಲ್ಲಿ ಸ್ಥಾನಪಡೆದವು. ಅಷ್ಟೇ ಅಲ್ಲ, “ಸಲ್ಲೇಖನಾ’ ವ್ರತ ಕುರಿತು ಚರ್ಚೆ ನಡೆದಾಗ ಇವು ಎವಿಡೆನ್ಸ್‌ ಆದವು.

ದೇಗುಲಗಳಲ್ಲಿ ದಿನರಾತ್ರಿ: ಸೋಮನಾಥಪುರ ದೇಗುಲದ ಒಂದು ಶಿಖರದಲ್ಲಿರುವ ಯಕ್ಷರ ಶಿಲ್ಪಗಳನ್ನು ಮೊದಲ ಬಾರಿಗೆ ಪತ್ತೆ ಹಚ್ಚಿ ಅವುಗಳ ಹಿನ್ನೆಲೆಯನ್ನು ಮೊದಲು ಪರಿಚಯಿಸಿದ್ದು ಶೆಟ್ಟರ್‌. ಇದು ಅವರ ಸಾಧನೆಯ ಮತ್ತೂಂದು ಮೈಲುಗಲ್ಲು. ಆಗ ಎಲ್ಲ ಕಡೆ‌ ಹೋಟೆಲ್‌ಗ‌ಳು, ಲಾಡ್ಜ್ಗಳು ಇರಲಿಲ್ಲ. ಯಾರನ್ನಾದರೂ ಪರಿಚಯಿಸಿಕೊಂಡು ಅವರು ತಂದುಕೊಟ್ಟಿದ್ದನ್ನೇ ತಿಂದು ದೇಗುಲದಲ್ಲಿಯೇ ಮಲಗಬೇಕಾಗುತ್ತಿತ್ತು. ಹೀಗೆ ಶೆಟ್ಟರ್‌ 6 ತಿಂಗಳುಗಳ ಕಾಲ ತಮ್ಮ ಜೀವನಾನುಭವವನ್ನೆಲ್ಲ ಸುರಿದು ಅಧ್ಯಯನಿಸಿದ್ದರು. ಒಮ್ಮೆ ಹೀಗೇ ಸೋಮನಾಥಪುರ ದೇವಾಲಯದ ಶಿಖರವನ್ನು ಹತ್ತಿ, ತುಟ್ಟ ತುದಿಯಲ್ಲಿದ್ದ ಮೂರ್ತಿಗಳನ್ನು ಪರಿಶೀಲಿಸುತ್ತಿರುವಾಗ ಆರೇಳು ಅಡಿ ಉದ್ದದ ಕಾಳಿಂಗ ಸರ್ಪ ಮಧ್ಯದಲ್ಲಿ ಮಲಗಿರುವುದನ್ನು ಕಂಡರು. ಕೆಳಗೆ ನೋಡಿದರೆ ತಲೆ ತಿರುಗುವಷ್ಟು ಆಳ. ಅಷ್ಟು ಎತ್ತರದಿಂದ ನೆಲಕ್ಕೆ ಜಿಗಿದರೆ ಪ್ರಾಣ ಹೋಗುವುದು ಗ್ಯಾರಂಟಿ.

ಕೆಳಗಿಳಿಯಲು ಒಂದು ಕಾಲಿಟ್ಟರೆ ಕಾಳಿಂಗ ಸರ್ಪ ಕಚ್ಚಿ ಸಾಯುವುದು ಖಂಡಿತ. ಶೆಟ್ಟರ್‌ ಅಸಾಧಾರಣ ಧೈರ್ಯದಿಂದ ದೇವಸ್ಥಾನದ ಕಾವಲುಗಾರನನ್ನು ಕರೆದು ಅವನಿಗೆ ವಿಷಯ ತಿಳಿಸಿದರು. ಅವನು ತನ್ನ ಭುಜದ ಮೇಲಕ್ಕೆ ಅಲ್ಲಿಂದಲೇ ಹಾರುವಂತೆ ಸೂಚಿಸಿದ. ಶೆಟ್ಟರ್‌ ಹಾರಿದಾಗ ಅವನು ತನ್ನ ಭುಜವನ್ನೊಡ್ಡಿ ಆನಂತರ ಕೆಳಕ್ಕೆ ಇಳಿಸಿದ. ಅವರು ಈ ಘಟನೆಯನ್ನು ಹೇಳುವಾಗ ಆ ಹೊತ್ತಿನ ರೋಮಾಂಚನವನ್ನೇ ಮೈತುಂಬಿದವರಂತೆ ವಿವರಿಸಿದ್ದರು. ಮುಂದಿನ ಇಪ್ಪತ್ತು ವರ್ಷಗಳಿಗೆ ಕನ್ನಡಕ್ಕೆ ಏನು ಬೇಕು ಎಂಬ ಮುಂಗಾಣೆಯಿಂದ ಕೆಲಸ ಮಾಡಿದ ಶೆಟ್ಟರ್‌ ಹಾಸ್ಯಪ್ರಜ್ಞೆಯು ವಿದ್ವತ್ತಿನಷ್ಟೇ ಪ್ರಖರವಾಗಿತ್ತು. ತಾನು ಮಂಡಿಸಿದ ಥೀಸಿಸ್ಸೇ ಅಂತಿಮ ಎಂದು ಅವರು ಯಾವತ್ತೂ ಭಾವಿಸಿರಲಿಲ್ಲ. “ನನ್ನ ಕೊನೆಯ ಉಸಿರಿನವರೆಗೂ ಕೆಲಸ ಮಾಡುತ್ತಲೇ ಇರುತ್ತೇನೆ’ ಎಂದಿದ್ದ ಶೆಟ್ಟರ್‌ ಹಾಗೆಯೇ ಬಾಳಿದವರು. ಅವರು, ನಮ್ಮ ಜೊತೆಗಿಲ್ಲ. ಆದರೂ ತಾತ್ವಿಕವಾಗಿ ಕನ್ನಡದ ಮನಸ್ಸುಗಳ ಜೊತೆ, ಜಗತ್ತಿನ ಮುಖ್ಯ ವಾಗ್ವಾದಗಳ ಜೊತೆ ಉಸಿರಾಡುತ್ತಲೇ ಇರುತ್ತಾರೆ.

ಟ್ರಕ್‌ನಲ್ಲಿ ಬಂದ ಪುಸ್ತಕಗಳು: 60ರ ದಶಕದ ದಿನಗಳವು. ಶೆಟ್ಟರ್‌ ಕೇಂಬ್ರಿಡ್ಜ್ನಲ್ಲಿ ಅಭ್ಯಾಸ ಮಾಡುತ್ತಿದ್ದರು. ಆ ದಿನಗಳಲ್ಲಿ ಶೆಟ್ಟರ್‌ ಆನಂದ ಕುಮಾರಸ್ವಾಮಿಯವರ ವಿಚಾರಗಳಿಂದ ಆಕರ್ಷಿತರಾಗಿ ಆ ಕಾಲದಲ್ಲಿ ಪ್ರಕಟವಾದ ಚೂರುಪಾರು ಲೇಖನಗಳನ್ನೂ ಹುಡುಕಿಕೊಂಡು ಮನೆಗೆ ತರುತ್ತಿದ್ದರು. ಆಗ ಜೆರಾಕ್ಸ್‌ ಇರುತ್ತಿರಲಿಲ್ಲವಾದ್ದರಿಂದ ಶೆೆಟ್ಟರ್‌ರ ಪತ್ನಿ ಆ ಲೇಖನಗಳನ್ನು ಟೈಪ್‌ ಮಾಡುತ್ತಿದ್ದರು. ಭಾರತಕ್ಕೆ ಮರಳುವಾಗ ಶೆಟ್ಟರ್‌ ಸುಮಾರು ಒಂದು ಟ್ರಕ್‌ನಲ್ಲಿ ಈ ಸಂಗ್ರಹವನ್ನು (ಸುಮಾರು 5000-6000 ಪುಟಗಳ ಬೆರಳಚ್ಚು ಪ್ರತಿಗಳ ಸಾಮಗ್ರಿ) ಅವುಗಳನ್ನು ಯಾವತ್ತಾದರೂ ಒಂದು ದಿನ ಪ್ರಕಟಿಸಬೇಕು ಎನ್ನುವ ಆಸೆಯಿಂದ ಮನೆಗೆ ತಂದರು.

* ಪಿ. ಚಂದ್ರಿಕಾ

ಟಾಪ್ ನ್ಯೂಸ್

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

Allegation against Amit Shah: Canadian diplomats summoned

Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.