ನಗರದ ಬೀದಿ ದೀಪದ ಸಮಸ್ಯೆ: ಪರಿಹಾರ ಶೂನ್ಯ


Team Udayavani, Mar 7, 2020, 4:03 AM IST

ನಗರದ ಬೀದಿ ದೀಪದ ಸಮಸ್ಯೆ: ಪರಿಹಾರ ಶೂನ್ಯ

ಉಡುಪಿ: ಕಳೆದ ಫೆಬ್ರವರಿಯಲ್ಲಿ ಕಲ್ಸಂಕ- ಅಂಬಾಗಿಲು ಸೇರಿದಂತೆ ರಾ.ಹೆದ್ದಾರಿಗಳ (ಕಿನ್ನಿಮೂಲ್ಕಿಯಿಂದ- ಅಂಬಲಪಾಡಿ) ಬೀದಿ ದೀಪಗಳ ಸಮಸ್ಯೆಯ ಬಗ್ಗೆ ಉದಯವಾಣಿ ಸುದಿನದಲ್ಲಿ ಸವಿವರವಾಗಿ ವರದಿ ಬಿತ್ತರಿಸಲಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳಿಂದ ಭರವಸೆಯೂ ವ್ಯಕ್ತವಾಗಿತ್ತು. ಆದರೆ ಪ್ರತಿಫ‌ಲ ಮಾತ್ರ ಶೂನ್ಯವಾಗಿದೆ.

ಕಲ್ಸಂಕವಾಗಿ ಅಂಬಾಗಿಲಿನ ಕಡೆ ಹಾದು ಹೋಗುವ ರಸ್ತೆಯ ದಾರಿ ದೀಪಗಳು ಪರ್ಯಾಯ ಸಮಯದಲ್ಲಿ ನಿರ್ವಹಣೆ ಆಗಬೇಕಿತ್ತು. ಆದರೆ ಇಲ್ಲಿಯವರೆಗೂ ಯಾವುದೇ ಕೆಲಸಗಳು ಕಂಡಿಲ್ಲ. ಕಲ್ಸಂಕ-ಅಂಬಾಗಿಲಿನ ಭಾಗದಲ್ಲಿ ದಿನನಿತ್ಯ ರಾತ್ರಿ ಹೊತ್ತು ಕತ್ತಲಿನಿಂದಲೇ ಜನರು ಸಂಚರಿಸುವಂತಾಗಿದೆ. ಈ ಸಮಸ್ಯೆಗೆ ಪರಿಹಾರ ಇಂದಲ್ಲ ನಾಳೆ ಆಗಬಹುದೆಂಬ ನಿರೀಕ್ಷೆಯಲ್ಲೆ ಜನ ಕಾಲ ಕಳೆಯುವಂತಾಗಿದ್ದು ಆದರೆ ಇಲ್ಲಿಯವರೆಗೆ ಯಾವುದೇ ಕ್ರಮಗಳು ಕೈಗೊಳ್ಳದಿರುವುದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಂತಾಗಿದೆ.

ಬ್ರಹ್ಮಗಿರಿ- ಜೋಡುಕಟ್ಟೆ
ನಗರ ಸಭೆಯ ವ್ಯಾಪ್ತಿಯಲ್ಲಿ ಒಟ್ಟು 17 ಸಾವಿರಕ್ಕೂ ಮಿಕ್ಕ ಬೀದಿ ದೀಪಗಳಿದ್ದು ಈಗ ಒಂದೊಂದೇ ದೀಪಗಳು ನಿರ್ವಹಣೆ ಇಲ್ಲದೆ ನಿಷ್ಕ್ರಿಯಗೊಳ್ಳುತ್ತಿದೆ. ಜೋಡುಕಟ್ಟೆಯಿಂದ ಬ್ರಹ್ಮಗಿರಿ ಮಾರ್ಗದಲ್ಲಿರುವ ಕೆಲ ದೀಪಗಳು ಈಗಾಗಲೇ ನಿಷ್ಕ್ರಿಯಗೊಂಡಿವೆ. ಇಲ್ಲಿ ಅಜ್ಜರಕಾಡು ಪಾರ್ಕ್‌, ಟೌನ್‌ಹಾಲ್‌, ಸರಕಾರಿ ಕ್ರೀಡಾಂಗಣ ಸೇರಿದಂತೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡುವ ಮಂದಿಗೆ ಇದರಿಂದ ಸಮಸ್ಯೆ ಉಂಟಾಗಿದೆ.

ಜಿಲ್ಲಾಸ್ಪತ್ರೆ ಸೇರಿದಂತೆ ಸುತ್ತಲ ಪ್ರದೇಶದ ಜನರಿಗೆ ಸಮಸ್ಯೆ ಬ್ರಹ್ಮಗಿರಿ- ಜೋಡುಕಟ್ಟೆ ಮಾರ್ಗದಲ್ಲಿ ಜಿಲ್ಲಾಸ್ಪತ್ರೆ, ಅಜ್ಜರಕಾಡು ಸಾರ್ವಜನಿಕ ಪಾರ್ಕ್‌ಗಳಿಗೆ ದಿನನಿತ್ಯ ಸಹಸ್ರಾರು ಮಂದಿ ಭೇಟಿ ಕೊಡುತ್ತಾರೆ ಕಳೆದ 2 ರಿಂದ 3 ತಿಂಗಳು ಇಲ್ಲಿನ ಕೆಲವು ದಾರಿ ದೀಪಗಳು ಉರಿಯದೆ ಜನರಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಲಿಖೀತ ರೂಪದಲ್ಲೂ ದೂರು ನೀಡಿದ್ದು ಪ್ರಯೋಜ ಮಾತ್ರ ಇಲ್ಲಿಯವರೆಗೆ ಕಂಡಿಲ್ಲ.
-ರಶ್ಮಿ ಚಿತ್ತರಂಜನ್‌ ಭಟ್‌, 33ನೇ ಅಜ್ಜರಕಾಡು ನಗರಸಭೆ ಸದಸ್ಯೆ

ವಾರದೊಳಗೆ ಸರಿಪಡಿಸುವ ಭರವಸೆ
ಉಡುಪಿ ಪರ್ಯಾಯ ಸಮಯದಿಂದಲೂ ಈ ಭಾಗದಲ್ಲಿ ಬೀದಿ ದೀಪದ ಸಮಸ್ಯೆ ಇದ್ದು, ಜನರಿಂದಲೂ ಅನೇಕ ದೂರುಗಳು ಸಲ್ಲಿಕೆ ಆಗಿವೆ. ಅಧಿಕಾರಿಗಳ ಗಮನಕ್ಕೂ ತರಲಾಗಿದ್ದು ವಾರದೊಳಗೆ ಸರಿಪಡಿಸುವ ಭರವಸೆ ನೀಡಿದ್ದಾರೆ.
-ಪ್ರಭಾಕರ್‌ ಪೂಜಾರಿ, ಗುಂಡಿಬೈಲು
27ನೇ ಗುಂಡಿಬೈಲು ನಗರಸಭೆ ಸದಸ್ಯ

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

accident2

Padubidri: ಅಪರಿಚಿತ ವಾಹನ ಢಿಕ್ಕಿ;‌ ಪಾದಚಾರಿಗೆ ತೀವ್ರ ಗಾಯ

de

Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.