ಸಾರಿಗೆ ತೆರಿಗೆ ವಂಚಕರಿಗೆ ದಂಡದ ಬಿಸಿ!
ಜಿಲ್ಲೆಯಲ್ಲಿ 139.98 ಕೋ.ರೂ.ವಾರ್ಷಿಕ ಗುರಿ
Team Udayavani, Mar 7, 2020, 6:31 AM IST
ಸಾಂದರ್ಭಿಕ ಚಿತ್ರ
ಉಡುಪಿ: ಸಾರಿಗೆ ಇಲಾಖೆಯಲ್ಲಿ ತೆರಿಗೆ ವಂಚನೆ ಪ್ರಕರಣಗಳು ಹೆಚ್ಚಳವಾಗುತ್ತಿವೆ. ತೆರಿಗೆ ವಂಚಕರಿಗೆ ಬಿಸಿ ಮುಟ್ಟಿಸಲು ಸಾರಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 2019ರ ಎ.1 ರಿಂದ 2020ರ ಜ.31ರ ವರೆಗೆ 103.90 ಕೋ.ರೂ.ತೆರಿಗೆ (ರಾಜಸ್ವ) ಸಂಗ್ರಹ ಮಾಡಲಾಗಿದೆ.
2018-19ನೇ ಆರ್ಥಿಕ ವರ್ಷಕ್ಕೆ ಒಟ್ಟು 140.21 ಕೋ.ರೂ. ರಾಜಸ್ವ ಸಂಗ್ರಹವಾಗಿತ್ತು. 2017-18ನೇ ಆರ್ಥಿಕ ವರ್ಷದಲ್ಲಿ ಕಳೆದ ವರ್ಷ 136.5 ಕೋ.ರೂ. ರಾಜಸ್ವ ಸಂಗ್ರಹ ಮಾಡಲಾಗಿತ್ತು. ಈ ಬಾರಿ ಒಟ್ಟು 139.98 ಕೋ.ರೂ.ವಾರ್ಷಿಕ ಗುರಿ ಹೊಂದಲಾಗಿದೆ. ಮಾರ್ಚ್ ಅಂತ್ಯದ ವೇಳೆಗೆ 36.08 ಕೋ.ರೂ.ಮೊತ್ತ ಸಂಗ್ರಹವಾಗುವ ನಿರೀಕ್ಷೆಯನ್ನು ಹೊಂದಲಾಗಿದೆ.
ಕಾನೂನು ಉಲ್ಲಂಘಿಸಿದರೆ ಕ್ರಮ
ಪರವಾನಿಗೆ ನಿಬಂಧನೆ ಉಲ್ಲಂಘಿಸಿ ಸಂಚರಿಸುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ ದಂಡ ಮತ್ತು ತೆರಿಗೆ ವಸೂಲಿ ಮಾಡಲಾಗುತ್ತಿದೆ. ಮೋಟಾರು ವಾಹನ ಕಾಯಿದೆ ಮತ್ತು ನಿಯಮಗಳ ಪ್ರಕಾರ ಇತರ ಕಠಿನ ಕ್ರಮಗಳನ್ನು ಕೂಡ ತೆಗೆದುಕೊಳ್ಳಲಾಗುತ್ತಿದೆ. ಈ ಮೂಲಕ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಒತ್ತು ನೀಡಲಾಗುತ್ತಿದೆ.
211 ವಾಹನಗಳು ಜಪ್ತಿ
ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ ಸಾರಿಗೆ ನಿಯಮ ಉಲ್ಲಂಘನೆಯ 1,103 ಪ್ರಕರಣಗಳು ದಾಖಲಾಗಿದ್ದು, 211 ವಾಹನಗಳನ್ನು ಈಗಾಗಲೇ ಜಪ್ತಿಮಾಡಲಾಗಿದೆ. ಕಳೆದ ಬಾರಿ 181 ಪ್ರಕರ ಣಗಳು ದಾಖಲಾಗಿದ್ದು, 250 ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.
ನಕಲಿ ನಂಬರ್ ಪ್ಲೇಟ್‌ಗಳ ಮೇಲೆ ನಿಗಾ
ಲಕ್ಷಾಂತರ ರೂ.ಮೌಲ್ಯದ ಐಷಾರಾಮಿ ಕಾರುಗಳನ್ನು ಖರೀದಿಸಿ ಮೋಟಾರು ವಾಹನ ತೆರಿಗೆಯಿಂದ ಪಾರಾಗಲು ನಕಲಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸುವವರ ಸಂಖ್ಯೆಯೂ ತ್ತೀಚೆಗೆ ಹೆಚ್ಚಾಗುತ್ತಿದೆ. ತಾತ್ಕಾಲಿಕ ನೋಂದಣಿ ಸಂಖ್ಯೆ ಮತ್ತು ನಕಲಿ ನಂಬರ್ ಪ್ಲೇಟ್‌ಗಳನ್ನು ಹಾಕಿಕೊಂಡು ಓಡಾಡುವ ವಾಹನಗಳ ಮೇಲೂ ಸಾರಿಗೆ ಇಲಾಖೆ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.
ರಾಜ್ಯದ ವಾರ್ಷಿಕ ಗುರಿ 7100 ಕೋ.ರೂ.!
ರಾಜ್ಯದ ಸಾರಿಗೆ ಇಲಾಖೆಯಲ್ಲಿ 2019-20ನೇ ಸಾಲಿನಲ್ಲಿ 7100 ಕೋ.ರೂ.ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ. ಸಾರಿಗೆ ಇಲಾಖೆಯಿಂದ 6601.96 ಕೋ.ರೂ. ಹಾಗೂ ಸಾರಿಗೆ ಸಂಸ್ಥೆಗಳಿಂದ 498.04 ಕೋ.ರೂ.ಆದಾಯದ ಗುರಿ ಹೊಂದಲಾಗಿದೆ. 2018-19ನೇ ಸಾಲಿಗೆ ರಾಜಸ್ವ ಸಂಗ್ರಹಣೆಯ ವಾರ್ಷಿಕ ಗುರಿ 6656.42 ಕೋ. ರೂ. (ಸಾರಿಗೆ ಸಂಸ್ಥೆಗಳು ಸೇರಿದಂತೆ) ನಿಗದಿಪಡಿಸಲಾಗಿತ್ತು. ಮಾ. 2019ರ ಅಂತ್ಯಕ್ಕೆ ರೂ.6548.57 ಕೋ.ರೂ.ರಾಜಸ್ವ ಸಂಗ್ರಹಣೆ ಮಾಡಲಾಗಿದ್ದು, ಶೇ. 98.38 ಗುರಿ ಸಾಧಿಸಲಾಗಿತ್ತು.
ಕಾನೂನು ಕ್ರಮ
2019-20ನೇ ಸಾಲಿನಲ್ಲಿ ಒಟ್ಟು 139.98 ಕೋ.ರೂ.ವಾರ್ಷಿಕ ಗುರಿ ಹೊಂದಲಾಗಿದೆ. ಮಾರ್ಚ್ ಅಂತ್ಯದ ವೇಳೆಗೆ ಇನ್ನೂ 36.08ಕೋ.ರೂ.ಮೊತ್ತ ಸಂಗ್ರಹವಾಗುವ ನಿರೀಕ್ಷೆಯನ್ನು ಹೊಂದಲಾಗಿದೆ. ಶೇ.100ರಷ್ಟು ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡಲಾಗಿದೆ. ತೆರಿಗೆ ಪಾವತಿಸದವರ ವಾಹನಗಳನ್ನು ಕಾನೂನಿನಂತೆ ಮುಟ್ಟುಗೋಲು ಹಾಕಲಾಗುವುದು.
-ರಾಮಕೃಷ್ಣ ರೈ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ
- ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.