ಗ್ರೀಕ್ ಕತೆ: ಅವಳ ಅಸೂಯೆಯಿಂದ ಇವಳು ದೇವತೆಯಾದಳು!
Team Udayavani, Mar 8, 2020, 3:21 AM IST
ಗ್ರೀಕ್ ಪುರಾಣ ಕತೆಯಲ್ಲಿ ಬರುವ ಆಪ್ರೋಡೈಟ್ ದೇವತೆಗೆ ಪ್ರೇಮದೇವತೆ ಎಂದೇ ಹೆಸರು. ಬಹಳ ಚೆಲುವೆ ಅವಳು. ಅವಳಿಗೊಬ್ಬ ಮಗನಿದ್ದ ಇರೋಸ್ ಅಂತ. ಪ್ರೇಮಜೋಡಿಗಳನ್ನು ಮಾಡುವ ಅಮ್ಮನ ಕೆಲಸದಲ್ಲಿ ಆಕೆಗೆ ಸಹಕರಿಸುತ್ತ ಇದ್ದ. ಹೊಂಬಣ್ಣದ ಮೈಯ ಅವನು ಚೆಲುವ. ಅವನ ಕೈಯಲ್ಲಿ ಚಿನ್ನದ ಬಿಲ್ಲುಬಾಣಗಳಿದ್ದವು. ಪುಟ್ಟ ರೆಕ್ಕೆಗಳೂ ಇದ್ದವು. ಅವನು ಯಾರಿಗೆ ಬಾಣ ಬಿಡುತ್ತಾನೋ, ಅವರು ತಕ್ಷಣ ಪ್ರೇಮದಲ್ಲಿ ಮುಳುಗಿಬಿಡುತ್ತಿದ್ದರು.
ಒಂದು ದಿನ ಅಪ್ರೋಡೈಟ್‌ಗೆ ಭೂಮಿ ಮೇಲಿರುವ ಸುಂದರಿ ರಾಜಕುಮಾರಿ ಸೈಕೀ (Psyche) ಎಂಬಾಕೆಯ ರೂಪ ಲಾವಣ್ಯ ಕಂಡು ಬಹಳ ಅಸೂಯೆಯಾಯಿತು. ಈ ರಾಜಕುಮಾರಿಯು ಜಗತ್ತಿನ ಕುರೂಪಿ ಯುವಕನ ಪ್ರೇಮಪಾಶದಲ್ಲಿ ಬೀಳುವಂತೆ ಮಾಡಬೇಕು ಎಂದು ಬಗೆದು, ತನ್ನ ಮಗನಿಗೆ ಆಪ್ರೋಡೈಟ್ ಸೂಚಿಸಿದಳು. ಅಮ್ಮನ ಆಜ್ಞೆಯನ್ನು ಶಿರಸಾವಹಿಸಿ ಇರೋಸ್ ತನ್ನ ಚಿನ್ನದ ಬಿಲ್ಲುಬಾಣಗಳನ್ನು ಹಿಡಿದುಕೊಂಡು ಹೊರಟ. ಆದರೆ ಸೈಕೀಯ ಸೌಂದರ್ಯ ನೋಡಿದ ಕೂಡಲೇ ಅವನೇ ದಂಗಾಗಿಬಿಟ್ಟ. ಎಂಥ ಅದ್ಭುತ ಸುಂದರಿ ಈಕೆ…ಎನ್ನುತ್ತಾ ಮನಸೋತ. ಅವಳ ಪ್ರೇಮಪಾಶದಲ್ಲಿ ಬಿದ್ದ. ಅದಾಗಿ ಪ್ರತೀ ರಾತ್ರಿ ಅಮ್ಮನ ಕಣ್ಣುತಪ್ಪಿಸಿ ಸೈಕೀಯನ್ನು ಭೇಟಿಯಾಗಲು ಅವನು ಹೋಗುತ್ತಿದ್ದ. ಅಮ್ಮನಿಗೆ ಹೆದರುತ್ತ ಆಕೆಯ ಕಣ್ಣುತಪ್ಪಿಸಲು ಯಾವಾಗಲೂ ಕತ್ತಲೆಯಲ್ಲಿಯೇ ಇರಲು ಬಯಸುತ್ತಿದ್ದ.
ಒಂದು ರಾತ್ರಿ ಸೈಕೀಯಗೆ ತನ್ನ ಇನಿಯನ ಮುಖ ನೋಡಬೇಕು ಎಂದು ಬಹಳ ಆಸೆಯಾಯಿತು. ಒಂದು ಹಣತೆ ಹೊತ್ತಿಸಿ ಅವನ ಹೊಂಬಣ್ಣದ ಮುಖವನ್ನು ನೋಡಲು ಪ್ರಯತ್ನಿಸಿದಳು. ಆದರೆ ಅವಳ ಕೈ ಯಾಕೋ ನಡುಗಿ, ಹಣತೆಯ ಬಿಸಿ ಎಣ್ಣೆ ಇರೋಸ್ ಮೇಲೆ ಬಿತ್ತು. ಅವನಿಗೆ ಎಚ್ಚರವಾದಾಗ ಬಹಳ ಸಿಟ್ಟುಬಂತು. ಹೆದರಿಕೆಯೂ ಆಯಿತು. ಆದರೇನು, ಅವನು ದೇವತೆ ತಾನೇ. ತಕ್ಷಣ ಮಾಯವಾಗಿ ಅಲ್ಲಿಂದ ಹೊರಟೇ ಹೋದ.
ಆದರೆ, ಇಬ್ಬರ ಎದೆಯಲ್ಲಿಯೂ ಪ್ರೇಮದೀಪ ಉರಿಯುತ್ತಿತ್ತಲ್ಲ. ದೇವತೆಗಳ ಮುಖಂಡ ಝೀಯಸ್‌ಗೆ ಈ ಪ್ರೇಮದ ವಿಷಯ ಗೊತ್ತಾಯಿತು. ಅವರಿಬ್ಬರನ್ನೂ ಒಂದು ಮಾಡುವ ಉದ್ದೇಶದಿಂದ ಸೈಕೀಯನ್ನು ಕರೆದುಕೊಂಡು ಅವನು ಗ್ರೀಕ್ ದೇವತೆಗಳ ಆವಾಸಸ್ಥಾನವಾದ ಒಲಿಂಪಸ್ ಪರ್ವತಕ್ಕೆ ಹೋದನು. ಮನುಷ್ಯರ ಆತ್ಮದ ಪ್ರತೀಕ ಎಂಬ ಪಟ್ಟವನ್ನು ಆಕೆಗೆ ಕಟ್ಟಿದನು. ಹೀಗೆ ಆಕೆ ದೇವತೆಯಾದಳು.
ರೋಮನ್ನರು ಗ್ರೀಕ್ ದೇವರನ್ನು ಸ್ವೀಕರಿಸುವಾಗ ಇರೋಸ್‌ನನ್ನು ಕ್ಯುಪಿಡ್ ಎಂಬ ಹೆಸರಿನಿಂದ ಆರಾಧಿಸುತ್ತಾರೆ. ಗ್ರೀಕರು ನೀಡಿದಷ್ಟು ಮಹತ್ವವನ್ನು ರೋಮನ್ನರು ಕ್ಯುಪಿಡ್ ದೇವತೆಗೆ ನೀಡುವುದಿಲ್ಲ. ಪ್ರೇಮವು ಕುರುಡು ಎಂಬ ಕಾರಣಕ್ಕೋ ಏನೋ, ಕ್ಯುಪಿಡ್ ದೇವತೆಯು ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ರೀತಿಯಲ್ಲಿ ಇರುತ್ತಾನೆ ಹಾಗೂ ಪುಟ್ಟ ಎರಡು ರೆಕ್ಕೆಗಳಿರುವ ದುಂಡಾದ ಮಗುವಿನ ರೂಪ ಆತನಿಗೆ ಇದೆ ಎಂದು ನಂಬುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.