ಯದ್ದಲದೊಡ್ಡಿ ಮಠದಿಂದ ಧಾರ್ಮಿಕ-ಸಾಮಾಜಿಕ ಕಾರ್ಯ
ಜನರನ್ನು ದುಶ್ಚಟದಿಂದ ಮುಕ್ತಗೊಳಿಸುತ್ತಿರುವ ಶ್ರೀ ಮಹಾಲಿಂಗ ಸ್ವಾಮೀಜಿ
Team Udayavani, Mar 7, 2020, 3:50 PM IST
ಸಿಂಧನೂರು: ತಾಲೂಕಿನ ಯದ್ದಲ ದೊಡ್ಡಿ ಗ್ರಾಮದ ಸುವರ್ಣಗಿರಿ ವಿರಕ್ತಮಠದ ಶ್ರೀ ಮಹಾಲಿಂಗ ಸ್ವಾಮೀಜಿ ಧಾರ್ಮಿಕ, ಆಧ್ಯಾತ್ಮಿಕದ ಜತೆಗೆ ಜ್ಞಾನ ದಾಸೋಹ, ಸಾಮಾಜಿಕ ಕಾರ್ಯದಲ್ಲಿ ತೊಡಗಿ ಭಕ್ತರ ಉದ್ಧಾರಕ್ಕೆ ಶ್ರಮಿಸುತ್ತಿದ್ದಾರೆ.
ಮಠದ ಹಿನ್ನೆಲೆ: ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತ ಮಠಕ್ಕೆ ತನ್ನದೇ ಆದಂತಹ ವೈಶಿಷ್ಟ್ಯತೆ, ಇತಿಹಾಸವಿದೆ. ಈ ಭಾಗದ ಸುಕ್ಷೇತ್ರ ವಳಬಳ್ಳಾರಿ ವಿರಕ್ತಮಠದ ಲಿಂ. ಶ್ರೀ ಚನ್ನಬಸವ ತಾತನವರ ಅಧಿಧೀನದಲ್ಲಿ ಒಟ್ಟು 11 ಮಠಗಳಿವೆ. ಅವುಗಳಲ್ಲಿ ಯದ್ದಲದೊಡ್ಡಿ ವಿರಕ್ತಮಠವೂ ಪ್ರಮುಖ.ಮಠಗಳ ಬೆಳವಣಿಗೆ ದೃಷ್ಟಿಕೋನದಿಂದ ವಳಬಳ್ಳಾರಿ ವಿರಕ್ತಮಠದ ಆಗಿನ ಪೀಠಾಧಿ ಪತಿಗಳಾಗಿದ್ದ ಶ್ರೀ ಚನ್ನಬಸವ ತಾತನವರು 11 ಮಠಗಳಿಗೂ ಒಬ್ಬೊಬ್ಬರನ್ನು ಪೀಠಾಧಿಪತಿಗಳನ್ನಾಗಿ ನೇಮಕ ಮಾಡಿದ್ದಾರೆ.
ಯದ್ದಲದೊಡ್ಡಿ ವಿರಕ್ತ ಮಠಕ್ಕೆ ಶ್ರೀ ಮಹಾಲಿಂಗ ಮಹಾಸ್ವಾಮಿಗಳನ್ನು 9ನೇ ವಯಸ್ಸಿನಲ್ಲೇ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಯಿತು. ಮಹಾಲಿಂಗ ಸ್ವಾಮೀಜಿ ಧಾರವಾಡದಲ್ಲಿ ವಿದ್ಯಾಭ್ಯಾಸ ಪೂರೈಸಿ 1985ರಲ್ಲಿ ಯದ್ದಲದೊಡ್ಡಿ ಮಠಕ್ಕೆ ಆಗಮಿಸುತ್ತಾರೆ. ಅವರು ಜನರೊಂದಿಗೆ ಬೆರೆಯುವ ಜತೆಗೆ ಆಧ್ಯಾತ್ಮದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದರು. 2002ರಲ್ಲಿ ಮಹಾಲಿಂಗ ಸ್ವಾಮಿಗಳು ಶ್ರೀಮಠದ ಪೀಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ನಂತರ ಶ್ರೀಮಠದಿಂದ ಜನಸಾಮಾನ್ಯರು, ಭಕ್ತರಿಗೆ ಅನುಕೂಲವಾಗುವ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮ ಮಾಡುತ್ತ ಬಂದಿದ್ದಾರೆ. ದುಶ್ಚಟಕ್ಕೆ ಒಳಗಾದವರನ್ನು ಆಧ್ಯಾತ್ಮದತ್ತ ಸೆಳೆದು ದುಶ್ಚಟ ಬಿಡಿಸುವ ಕಾರ್ಯ ಮಾಡುತ್ತಿದ್ದಾರೆ.
ಕೃಷಿಗೆ ಆದ್ಯತೆ: ಯದ್ದಲದೊಡ್ಡಿ ಶ್ರೀ ಮಠಕ್ಕೆ 42ಎಕರೆ ಜಮೀನಿದೆ. ಶ್ರೀಗಳು ಮಠದ ಪ್ರಗತಿಗಾಗಿ ಕೃಷಿಗೆ ಆದ್ಯತೆ ನೀಡಿದ್ದು, ಮಳೆಯಾಶ್ರಿತ ಬೆಳೆ ಜತೆಗೆ ಇತರೆ ಬೆಳೆ ಬೆಳೆಯಲಾಗುತ್ತಿದೆ.
ಶಿಕ್ಷಣ: ಮಠದಲ್ಲಿ 130ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪೂಜ್ಯರು ಬಡ ಪ್ರತಿಭಾವಂತರನ್ನು ಗುರುತಿಸುವ ಕಾರ್ಯ ಮಾಡುತ್ತಿದ್ದಾರೆ. ಮಠ ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಮಠವಾಗಿದೆ. 73ನೇ ಜಾತ್ರಾ ಮಹೋತ್ಸವ: ಮಠದಲ್ಲಿ ಈಗ 73ನೇ ಜಾತ್ರಾ ಮಹೋತ್ಸವ ಸಂಭ್ರಮ ಕಳೆಗಟ್ಟಿದೆ. ತನ್ನಿಮಿತ್ತ ಕಳೆದ ವಾರದಿಂದ ಶ್ರೀಮಠದಲ್ಲಿ ಆಧ್ಯಾತ್ಮ ಪ್ರವಚನ ನಡೆಯುತ್ತಿದೆ. ಜಾತ್ರೆ ಅಂಗವಾಗಿ ಮಾ. 7ರಂದು ನಗರದ ಸತ್ಯ ಗಾರ್ಡನ್‌ನಲ್ಲಿ ಕೆಪಿಎಸ್‌ಸಿ ಪೂರ್ವ ಪರೀಕ್ಷೆ ಹಾಗೂ ಸಹಾಯಕ ಪ್ರಾಧ್ಯಾಪಕರ ಹುದ್ದೆ ಎಫ್
ಡಿಎ, ಎಸ್‌ಡಿಎ ಪರೀಕ್ಷಾರ್ಥಿಗಳಿಗೆ ಉನ್ನತ ಅಧಿಕಾರಿಗಳಿಂದ ಉಚಿತ ಮಾಹಿತಿ ಮತ್ತು ತರಬೇತಿ ಕಾರ್ಯಾಗಾರ “ಸಾಧನೆಗೆ ಸುಧೆ’ ಆಯೋಜಿಸಲಾಗಿದೆ.
ಗೋಶಾಲೆ ಉದ್ಘಾಟನೆ: ಮಾ. 8ರಂದು ಶ್ರೀ ಚನ್ನಬಸವ ಶಿವಯೋಗೇಶ್ವರ ಗೋಶಾಲೆ ಉದ್ಘಾಟನೆ, ರೈತರ ಗೋಷ್ಠಿ ನಡೆಯಲಿದೆ. ಶ್ರೀ ಚನ್ನಬಸವ ತಾತನವರ ಆಶೀರ್ವಾದ, ಕ್ಷೇತ್ರದ ಭಕ್ತರ ಪ್ರೀತಿ ವಿಶ್ವಾಸ, ಸಹಕಾರ ಮಠದ ಬೆಳವಣಿಗೆಗೆ ಪೂರಕವಾಗಿದೆ. ಜನರನ್ನು ದುಶ್ಚಟದಿಂದ ಮುಕ್ತರನ್ನಾಗಿ ಮಾಡುವುದು, ಯುವಕರಲ್ಲಿ ಓದಿನಲ್ಲಿ ಆಸಕ್ತಿ ಮೂಡಿಸುವುದು, ರೈತರು ನಿತ್ಯ ಕೃಷಿ ಕಾಯಕದಲ್ಲಿ ತೊಡಗುವಂತೆ ಮಾಡುವುದು ಮಠದ ಪ್ರಥಮಾದ್ಯತೆ ಆಗಿದೆ.
ಶ್ರೀ ಮಹಾಲಿಂಗ ಸ್ವಾಮೀಜಿ,
ಯದ್ದಲದೊಡ್ಡಿ ವಿರಕ್ತಮಠ
ಯುವಕರನ್ನು ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹಿಸುವ ಕೆಲಸವನ್ನು ಯದ್ದಲದೊಡ್ಡಿ ಶ್ರೀ ಮಹಾಲಿಂಗ ಸ್ವಾಮೀಜಿ ಮಾಡುತ್ತಿದ್ದಾರೆ. ಯದ್ದಲದೊಡ್ಡಿ ವಿರಕ್ತ ಮಠವು ಸರ್ವಧರ್ಮಿಯರ ಮಠವಾಗಿ ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದೆ.
ಸತ್ಯನಾರಾಯಣ ಶೆಟ್ಟಿ, ಅಧ್ಯಕ್ಷರು,
ಆಕ್ಸ್‌ಫರ್ಡ್ ಕಾಲೇಜು ಸಿಂಧನೂರು
ಚಂದ್ರಶೇಖರ ಯರದಿಹಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.