ರೈತನ ಕೈಹಿಡಿದ ತಾಳೆ ಕೃಷಿ
Team Udayavani, Mar 8, 2020, 4:46 AM IST
ಗ್ರಾಮೀಣ ಪ್ರದೇಶದ ರೈತರು ಆಧುನಿಕತೆಯೊಂದಿಗೆ ವೈಜ್ಞಾನಿಕ ಮಾದರಿ ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಅತೀ ಕಡಿಮೆ ಭೂಮಿ ಇರುವ ಕೃಷಿಕರು ದೊಡ್ಡ ಸಾಧನೆಯನ್ನು ಮಾಡುವ ಹುಮ್ಮಸ್ಸಿನಲ್ಲಿರುತ್ತಾರೆ. ಕೃಷಿಗೆ ಯೋಗ್ಯವಲ್ಲದ ಭೂಮಿ ಎಂದು ಪಾಳು ಬಿದ್ದ ಭೂಮಿಯಲ್ಲಿ ಕೃಷಿ ಮಾಡಿ ಸೈ ಎನಿಸಿಕೊಂಡವರೂ ನಮ್ಮ ನಡುವೆ ಇದ್ದಾರೆ. ಇಂಥವರ ಪೈಕಿ ಬಡಗನ್ನೂರು ಗ್ರಾಮದ ಅನಿಲೆ ನಿವಾಸಿ ಸಂಜೀವ ಮಡಿವಾಳರೂ ಒಬ್ಬರು. ಇವರು ಗುಡ್ಡದಲ್ಲಿ ಎಣ್ಣೆ ತಾಳೆ ಗಿಡವನ್ನು ಬೆಳೆಸಿ ಸೈ ಎನಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿದ್ದಾರೆ ನೂರಾರು ಕೃಷಿಕರು
ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಅಲ್ಲಲ್ಲಿ ತಾಳೆ ಗಿಡವನ್ನು ಬೆಳೆಸುತ್ತಿದ್ದಾರೆ. ತಾಳೆ ಕೃಷಿಯಿಂದ ಉತ್ತಮ ಲಾಭವಿರುವುದೇ ಇದಕ್ಕೆ ಕಾರಣವಾಗಿದೆ. ಅಡಕೆ ಕೃಷಿಗೆ ರೋಗ ಬಾಧೆ ಉಂಟಾಗುವ ವೇಳೆ ಔಷಧಿ ಸಿಂಪಡಣೆ ಮಾಡಬೇಕಾಗುತ್ತದೆ. ತಾಳೆ ಮರಕ್ಕೆ ಗೊಬ್ಬರ ನೀರು ಹಾಕಿದರೆ, ಬೇರೆ ಯಾವ ಖರ್ಚು ಇರುವುದಿಲ್ಲ. ಈ ಕಾರಣಕ್ಕೆ ಅಡಕೆ ಮರಕ್ಕೆ ಬೇಕಾಗುವಷ್ಟು ಖರ್ಚು ತಾಳೆ ಮರಕ್ಕೆ ಬೇಕಾಗಿಲ್ಲ. ಒಂದು ತಾಳೆ ಮರದಿಂದ ಒಂದು ವರ್ಷಕ್ಕೆ 2ರಿಂದ 3 ಸಾವಿರ ಆದಾಯ ಬರುತ್ತದೆ.
80 ಗಿಡಗಳ ನಾಟಿ
ಸಂಜೀವ ಮಡಿವಾಳರು ತನ್ನ ಒಂದೂವರೆ ಎಕ್ರೆ ಪಾಳು ಭೂಮಿಯಲ್ಲಿ 80 ಗಿಡಗಳನ್ನು 6 ವರ್ಷದ ಹಿಂದೆ ನಾಟಿ ಮಾಡಿದ್ದಾರೆ. ಎಲ್ಲ ಗಿಡದಲ್ಲೂ ಹತ್ತೇ ತಿಂಗಳಿಗೆ ಕಾಯಿ ಬಿಟ್ಟಿದೆ. ಆದರೆ ಗಿಡಗಳ ಬೆಳವಣಿಗೆಯ ದೃಷ್ಟಿಯಿಂದ ಮೂರು ವರ್ಷ ಕಾಯಿ ಕೀಳುವಂತಿಲ್ಲ ಎಂಬ ಕಾರಣಕ್ಕೆ ಮೂರು ವರ್ಷ ಹೂ ಬಿಟ್ಟಾಗಲೇ ಅದನ್ನು ಕೀಳುತ್ತಿದ್ದರು. ಬಳಿಕ ಮೂರು ವರ್ಷಗಳ ಅನಂತರ ಮೊದಲ ಬೆಳೆಯಲ್ಲಿ 5 ಟನ್ ಕಾಯಿ ಪಡೆದು 60 ಸಾವಿರ ರೂ. ಆದಾಯ ಪಡೆದುಕೊಂಡಿದ್ದಾರೆ. ಒಂದು ಗಿಡದಿಂದ ಒಂದು ಸಾವಿರ ಆದಾಯ ಪಡೆದುಕೊಳ್ಳುವ ಮೂಲಕ ತಾಳೆ ಕೃಷಿಯಲ್ಲಿ ತೃಪ್ತಿಯನ್ನು ಕಂಡುಕೊಂಡಿದ್ದಾರೆ.
ಕೆ.ಜಿ.ಗೆ 11 ರೂ.
ಒಂದು ಕೆ.ಜಿ. ತಾಳೆ ಕಾಯಿಗೆ 11 ರೂ. ಗಳಂತೆ ಮಾರಾಟ ಮಾಡಿದ್ದಾರೆ. ಕಾಯಿ ಕೊಯ್ದರೆ ಸಾಕು ಅದನ್ನು ಖರೀದಿಸಲು ಮನೆ ಬಾಗಿಲಿಗೆ ಬರುತ್ತಾರೆ. ಗಿಡವನ್ನು ನಾಟಿ ಮಾಡಿದ ಬಳಿಕ ಅದಕ್ಕೆ ಬೇಕಾದ ಪ್ರಮಾಣದಲ್ಲಿ ಗೊಬ್ಬರ ಮತ್ತು ನೀರನ್ನು ಹಾಕಿದರೆ ಸಾಕಾಗುತ್ತದೆ. ಮರಗಳಿಗೆ ಯಾವುದೇ ರೋಗ ತಗಲುವುದಿಲ್ಲ, ಕೀಟ ಬಾಧೆಯಿಲ್ಲ. ಬಾವಲಿಗಳಿಂದ, ಇತರೆ ಹಕ್ಕಿಗಳಿಂದ ಯಾವುದೇ ಬಾಧೆಯೂ ಇಲ್ಲ. ಗಿಡ ನೆಟ್ಟು ಆರಂಭದಲ್ಲಿ ಹಂದಿಗಳ ಕಾಟ ಇದ್ದಲ್ಲಿ ಸಮಸ್ಯೆಯಾಗುತ್ತದೆ. ಮರ ಸಿಹಿಯಾಗಿರುವ ಕಾರಣ ಹಂದಿಗಳು ಮರವನ್ನು ಕೊರೆದು ತಿನ್ನುತ್ತದೆ ಎನ್ನುತ್ತಾರೆ ಕೃಷಿಕ ಸಂಜೀವರು.
ತಾಳೆಗಿದೆ ಉತ್ತಮ ಭವಿಷ್ಯ
ಪ್ರಥಮ ಬಾರಿಗೆ ಎಣ್ಣೆ ತಾಳೆ ಕೃಷಿ ಮಾಡುತ್ತಿದ್ದೇನೆ. ಇದರಿಂದ ನಷ್ಟವಾಗಿಲ್ಲ. ಒಂದು ಬಾರಿ ಕಾಯಿಯನ್ನು ಮಾರಾಟ ಮಾಡಿದ್ದೇನೆ. 60 ಸಾವಿರ ರೂ. ಆದಾಯ ಬಂದಿದೆ. ಮುಂದಿನ ದಿನಗಳಲ್ಲಿ ತಾಳೆ ಕೃಷಿಗೆ ಒಳ್ಳೆಯ ಭವಿಷ್ಯವಿದೆ ಎಂದರೆ ತಪ್ಪಾಗಲಾರದು. ಖಾಲಿ ಗುಡ್ಡವಿರುವಲ್ಲಿ ತಾಳೆ ಕೃಷಿ ದಾರಾಳವಾಗಿ ಮಾಡಬಹುದು.
– ಸಂಜೀವ ಮಡಿವಾಳ ತಾಳೆ ಕೃಷಿಕರು
ದಿನೇಶ್ ಪೇರಾಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.