ಸಂಪೂರ್ಣ ಯಾಂತ್ರೀಕೃತ ಆಗುವತ್ತ ಭತ್ತದ ಕೃಷಿ


Team Udayavani, Mar 8, 2020, 5:50 AM IST

peddy-corp

ಕಳೆದ 10 ವರ್ಷಗಳಿಂದ ಜಿಲ್ಲೆಯ ಹಳ್ಳಿಗಳತ್ತ ಭತ್ತದ ಕೃಷಿಗೆ ಯಂತ್ರಗಳು ದಾಪುಗಾಲಿಟ್ಟರೂ ನೇಜಿ ನಾಟಿ ಮತ್ತು ಪೈರು ಕೊಯ್ಲಿಗೆ ಯಂತ್ರ ಬಳಕೆ ಮಾಡುತ್ತಿದ್ದ ರೈತರು ಇದೀಗ ಕೊಯ್ಲಿನ ಅನಂತರ ಬೈಹುಲ್ಲು ಸಂಗ್ರಹ ವ್ಯವಸ್ಥೆಯ ತನಕವೂ ಯಂತ್ರಗಳನ್ನೇ ಬಳಕೆ ಮಾಡಲು ಮುಂದಾಗಿದ್ದಾರೆ.

ಕರಾವಳಿ ಜಿಲ್ಲೆಯ ಸಾಂಪ್ರದಾಯಿಕ ಭತ್ತದ ಕೃಷಿಯೂ ಇಂದು ಸಂಪೂರ್ಣ ಯಾಂತ್ರೀಕರಣದತ್ತ ಹೊರಳಿದೆ. ಗದ್ದೆ ಉಳುಮೆಯಿಂದ ಹಿಡಿದು ನೇಜಿ ನಾಟಿ, ಕೊಯ್ಲು, ಭತ್ತದ ಹುಲ್ಲು ಸಂಗ್ರಹದವರೆಗೂ ಯಂತ್ರದ ಬಳಕೆ ಕಾಣಿಸಿಕೊಳ್ಳುತ್ತಿದೆ ಮತ್ತು ಇದು ಅನಿವಾರ್ಯತೆ ಎನ್ನುವಂತೆ ಆಗಿದೆ.
ಕಳೆದ 10 ವರ್ಷಗಳಿಂದ ಜಿಲ್ಲೆಯ ಹಳ್ಳಿಗಳತ್ತ ಭತ್ತದ ಕೃಷಿಗೆ ಯಂತ್ರಗಳು ದಾಪುಗಾಲಿಟ್ಟರೂ ನೇಜಿ ನಾಟಿ ಮತ್ತು ಪೈರು ಕೊಯ್ಲಿಗೆ ಯಂತ್ರ ಬಳಕೆ ಮಾಡುತ್ತಿದ್ದ ರೈತರು ಇದೀಗ ಕೊಯ್ಲಿನ ಅನಂತರ ಬೈಹುಲ್ಲು ಸಂಗ್ರಹ ವ್ಯವಸ್ಥೆಯ ತನಕವೂ ಯಂತ್ರಗಳನ್ನೇ ಬಳಕೆ ಮಾಡಲು ಮುಂದಾಗಿದ್ದಾರೆ.

ಎತ್ತಿನ ಉಳುಮೆ ದೂರ
ಮನುಷ್ಯನ ಶ್ರಮ ಹಾಗೂ ಎತ್ತುಗಳ ಶ್ರಮದ ಮೂಲಕ ಭತ್ತದ ಗದ್ದೆಗಳನ್ನು ಸಾಂಪ್ರದಾಯಿಕವಾಗಿ ಇತ್ತೀಚಿಗಿನ ತನಕ ಕಾಪಾಡಿಕೊಂಡು ಬರುತ್ತಿದ್ದ ರೈತರು ಅದೇ ಮಾದರಿಯನ್ನು ಮುಂದುವರೆಸಿದ್ದರು. ಸುಗ್ಗಿ, ಏಣೇಲು ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದ ರೈತವರ್ಗದ ಕೆಲವರು ನೀರಾವರಿ ಹೆಚ್ಚಳ ಇದ್ದ ಗದ್ದೆಗಳಲ್ಲಿ ಕೊಳಕೆ ಬೆಳೆಗೂ ಆದ್ಯತೆ ನೀಡಿದ್ದರು. ಇದಕ್ಕೆ ಪೂರಕವಾಗಿ ಶ್ರಮ ವಿನಿಮಯ ವ್ಯವಸ್ಥೆಯೂ ಗ್ರಾಮೀಣ ಭಾಗಗಳಲ್ಲಿ ಪೂರಕವಾಗಿತ್ತು.

ಶ್ರಮ ವಿನಿಮಯ
ಆಧುನಿಕತೆಯ ಗಾಳಿ ಕಡಿಮೆ ಇದ್ದ ದಿನಗಳಲ್ಲಿ ಮುಂಜಾನೆ 4 ಗಂಟೆಗೆ ಎದ್ದು, ತಮ್ಮ ಎತ್ತುಗಳನ್ನು ಬಳಸಿಕೊಂಡು ಉಳಮೆ ನಡೆಸುತ್ತಿದ್ದರು. ಉಳುಮೆ ಮಾಡಿದ ಗದ್ದೆಯ ಒಂದು ಭಾಗದಲ್ಲಿ ನೇಜಿ ತಯಾರು ಮಾಡಿಕೊಳ್ಳುತ್ತಿದ್ದರು. ಒಂದೊಂದು ಗದ್ದೆಯನ್ನು ಕನಿಷ್ಠ 15-20 ದಿನಗಳಲ್ಲಿ 4ರಿಂದ 5 ಸಾಲು ಉಳುಮೆ ಮಾಡಿದ ಅನಂತರ ನೇಜಿ ನಾಟಿ ಮಾಡಲಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಸಹಕಾರ ತಣ್ತೀವೇ ಪ್ರಮುಖವಾಗಿತ್ತು. ಹಳ್ಳಿಯಲ್ಲಿ ಬಹುತೇಕ ಕುಟುಂಬಗಳಲ್ಲಿ ಭತ್ತದ ಗದ್ದೆಗಳಿದ್ದ ಕಾರಣ ಪ್ರತಿಯೊಂದು ಕುಟುಂಬವೂ ಪರಸ್ಪರ ಸಹಕಾರದೊಂದಿಗೆ ಕೃಷಿ ಕೆಲಸಗಳಿಗೆ ಮುಂದಾಗುತ್ತಿದ್ದವು. ಈ ಭತ್ತದ ಕೃಷಿಗೆ ಹಳ್ಳಿಗಳಲ್ಲಿ ಕಾರ್ಮಿಕರ ಕೊರತೆಯೇ ಕಾಣದ ದಿನಗಳವು ಅದಾಗಿದ್ದವು.

ಶ್ರಮವಲ್ಲ, ಖುಷಿ: ಭತ್ತದ ನೇಜಿ ನಾಟಿ ಹಾಗೂ ನೇಜಿ ತೆಗೆಯುವಾಗ ಹಳ್ಳಿಯ ಜನ ಹಾಡುತ್ತಿದ್ದ ಅದ್ಭುತ ಸಾರವುಳ್ಳ ಪಾಡªನಗಳು ಶ್ರಮ ಅರಿದಂತೆ ಜನರನ್ನು ಕಟ್ಟಿ ಹಾಕುತ್ತಿದ್ದವು. ಅದೊಂದು ಕೆಲಸವೆನ್ನಿಸದೆ ಮನೋರಂಜನೆ ಎಂಬಂತೆ ಕೃಷಿ ಕೆಲಸ ಮುಗಿಯುತ್ತಿತ್ತು. ಉಳಮೆ ಮಾಡುತ್ತಿದ್ದ ರೈತರು ಕೊಡುತ್ತಿದ್ದ ಉರಲ್‌ ಕೇವಲ ಎತ್ತುಗಳಿಗೆ ಮಾತ್ರವಲ್ಲ, ಕೇಳುಗರ ಕಿವಿಗೂ ಇಂಪು ನೀಡುತ್ತಿತ್ತು.

ಹಳ್ಳಿಯ ಬಹುತೇಕ ಭತ್ತದ ಗದ್ದೆಗಳು ಇಂದು ಅಡಕೆ ಬೆಳೆಯುವ ತಾಣಗಳಾಗಿವೆ. ಅಲ್ಲಲ್ಲಿ ಉಳಿದ ಭತ್ತದ ಗದ್ದೆಗಳಿಗೆ ಕಾರ್ಮಿಕರ ಕೊರತೆ, ಸಹಕಾರ ತಣ್ತೀ ಎಂಬುವುದು ಹಳ್ಳಿಯಲ್ಲೂ ಕಾಣುತ್ತಿಲ್ಲ. ಹಾಗಾಗಿ ಭತ್ತ ಬೆಳೆಯಲೇಬೇಕೆಂಬ ಹಟತೊಟ್ಟ ರೈತ ವರ್ಗ ಸಂಪೂರ್ಣವಾಗಿ ಯಾಂತ್ರೀಕೃತ ಬದುಕಿಗೆ ಶರಣಾಗಿದ್ದಾರೆ. ನೇಜಿಯನ್ನು ಪಾತಿಗಳಲ್ಲಿ ತಯಾರು ಮಾಡುವುದು ಮಾತ್ರ ಈಗಿನ ರೈತರ ಕೆಲಸ. ನೇಜಿ ನಾಟಿ, ಬೆಳೆ ಕೊಯ್ಲು, ಉಳಮೆ ಕೊನೆಗೆ ಬೈಹುಲ್ಲು ಸಂಗ್ರಹವೂ ಯಂತ್ರಗಳಿಂದಲೇ ಸಾಧ್ಯವಾಗುವುದರಿಂದ ರೈತರಿಗೆ ಕಾರ್ಮಿಕ ಕೊರತೆಯ ಸಮಸ್ಯೆಯಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತಿದೆ.

ಯಂತ್ರಧಾರಾ ನೆರವು
ರಾಜ್ಯ ಸರಕಾರ ನೀಡಿದ ಯಂತ್ರಧಾರಾದ ಕೊಡುಗೆ ರೈತರ ಪಾಲಿಗೆ ಆಪಾರ ಬೆಂಬಲ ನೀಡಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಯಂತ್ರಧಾರಾ ಜಿಲ್ಲೆಯ ಪ್ರತಿ ಹೋಬಳಿ ಮಟ್ಟದಲ್ಲಿ ಕೇಂದ್ರಗಳನ್ನು ಹೊಂದಿದೆ. ಸ್ಥಳೀಯ ರೈತರಿಗೆ ಬಾಡಿಗೆ ರೂಪದಲ್ಲಿ ಯಂತ್ರಗಳನ್ನು ನೀಡುತ್ತಿದ್ದು, ಭತ್ತದ ಕೃಷಿ ಉಳಿಸಿಕೊಳ್ಳುವಲ್ಲಿ ಇದು ಹೆಚ್ಚು ನೆರವು ನೀಡುತ್ತಿದೆ. ಇದರ ಜತೆ ಖಾಸಗಿಯಾಗಿ ಯಂತ್ರಗಳನ್ನು ಬಾಡಿಗೆ ನೀಡುವ ಸಾಯ ಕಂಪೆನಿಯೂ ರೈತರ ಅನುಕೂಲದಲ್ಲಿ ದೊಡ್ಡ ಪಾತ್ರ ಪಡೆಯುತ್ತಿವೆ. ಸಮರ್ಪಕವಾದ ರೀತಿಯಲ್ಲಿ ಯಂತ್ರಗಳನ್ನು ರೈತರ ಕೃಷಿ ಕೆಲಸಗಳಿಗೆ ಪೂರೈಕೆ ಮಾಡುವ ಮೂಲಕ ಸಂಸ್ಥೆಗಳು ರೈತರ ಮಿತ್ರನಾಗಿ ಕೆಲಸ ಮಾಡುತ್ತಿರುವುದು ಭತ್ತದ ಕೃಷಿ ಉಳಿಸುವಲ್ಲಿ ನಮಗೆ ಸಹಕಾರಿಯಾಗುತ್ತಿದೆ ಎನ್ನುತ್ತಾರೆ ಬಜತ್ತೂರಿನ ಭತ್ತದ ಕೃಷಿಕ ರಾಮಣ್ಣ ಗೌಡ.

ರಾಜೇಶ್‌ ಪಟ್ಟೆ, ಪುತ್ತೂರು

ಟಾಪ್ ನ್ಯೂಸ್

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

KSG-Terrorist

Kasaragodu: ಸ್ಲೀಪರ್‌ ಸೆಲ್‌ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್‌

Ram Ayodhya

Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ

Joshi

ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.