ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟು ರಾಜಕೀಯ ವಾಗ್ಯುದ್ಧ
Team Udayavani, Mar 8, 2020, 6:14 AM IST
ಹೊಸದಿಲ್ಲಿ: ಯೆಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವಂತೆಯೇ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ವಾಕ್ಸಮರ ಆರಂಭವಾಗಿದೆ. ಯುಪಿಎ ಅವಧಿಯಲ್ಲಿ ನೀಡಲಾದ ಸಾಲದಿಂದಲೇ ಯೆಸ್ ಬ್ಯಾಂಕ್ ಈ ಸ್ಥಿತಿಗೆ ತಲುಪಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಆರೋಪಿಸಿದ್ದರು.
ಅದಕ್ಕೆ ಶನಿವಾರ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ, ಬಿಜೆಪಿ ಸರಕಾರವು ಹಣಕಾಸು ಸಂಸ್ಥೆಗಳ ನಿರ್ವಹಣೆಯಲ್ಲಿ ಮಾಡಿರುವ ತಪ್ಪುಗಳೇ ಯೆಸ್ ಬ್ಯಾಂಕ್ನ ಇಂದಿನ ಸ್ಥಿತಿಗೆ ಕಾರಣ ಎಂದು ಆರೋಪಿಸಿದ್ದಾರೆ. ಜತೆಗೆ, ಈ ಕುರಿತು ಆರ್ಬಿಐ ಸೂಕ್ತ ತನಿಖೆಯನ್ನು ನಡೆಸಿ, ಅವಾಂತ ರಕ್ಕೆ ಹೊಣೆಗಾರರು ಯಾರು ಎಂಬುದನ್ನು ಬಹಿರಂಗಪಡಿಸಬೇಕು ಎಂದೂ ಒತ್ತಾಯಿಸಿದ್ದಾರೆ.
2014ರ ಮಾರ್ಚ್ನಲ್ಲಿ ಯೆಸ್ ಬ್ಯಾಂಕ್ ನೀಡಿರುವ ಸಾಲದ ಪ್ರಮಾಣ 55,633 ಕೋಟಿ ರೂ. ಇತ್ತು. 2019ರ ಮಾರ್ಚ್ ವೇಳೆಗೆ ಅದು 2.41 ಲಕ್ಷ ಕೋಟಿ ರೂ. ಆಗಿದ್ದು ಹೇಗೆ? ಈ ಅವಧಿಯಲ್ಲಿ ನಾನೇನೂ ವಿತ್ತ ಸಚಿವನಾಗಿರಲಿಲ್ಲ ತಾನೇ ಎಂದೂ ಪ್ರಶ್ನಿಸಿದ್ದಾರೆ. 2016-17 ಮತ್ತು 17-18ರಲ್ಲಿ ಅಂದರೆ ನೋಟು ಅಮಾನ್ಯಗೊಂಡ ಬೆನ್ನಲ್ಲೇ ಈ ಮೊತ್ತ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಲು ಕಾರಣವೇನು? ಇದಕ್ಕೆ ಸರಕಾರ ಅಥವಾ ಆರ್ಬಿಐನ ಯಾರೂ ಹೊಣೆಗಾರ ರಲ್ಲವೇ ಎಂದೂ ಕೇಳಿದ್ದಾರೆ. ಜತೆಗೆ, ಆರ್ಥಿ ಕತೆಯ ನಿರ್ವಹಣೆಯ ಅತ್ಯುತ್ತಮ ತೀರ್ಪುಗಾರ ಮಾರುಕಟ್ಟೆಯೇ ಹೊರತು ವಿತ್ತ ಸಚಿವರಾಗಲೀ, ಮಾಜಿ ವಿತ್ತ ಸಚಿವರಾಗಲೀ, ಪತ್ರಿಕೆಗಳಾಗಲೀ ಅಲ್ಲ ಎಂದಿದ್ದಾರೆ.
ಈ ನಡುವೆ, ಯೆಸ್ ಬ್ಯಾಂಕ್ ಸಿಇಒ ರಾಣಾ ಕಪೂರ್ರನ್ನು ಶನಿವಾರ ಜಾರಿ ನಿರ್ದೇಶನಾಲಯ ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.